ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nandini Kashyap: ಹಿಟ್‌ ಆ್ಯಂಡ್‌ ರನ್‌ ಕೇಸ್‌; ಅಸ್ಸಾಮಿ ನಟಿ ಅರೆಸ್ಟ್‌

Hit And Run Case: ಜನಪ್ರಿಯ ಅಸ್ಸಾಂ ನಟಿ ನಂದಿನಿ ಕಶ್ಯಪ್‌ ಅವರನ್ನು ಹಿಟ್‌ ಆ್ಯಂಡ್‌ ರನ್‌ ಕೇಸ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ನಟಿ ಸಂಚರಿಸುತ್ತಿದ್ದ ಕಾರು 21 ವರ್ಷದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ನಂದಿನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಟ್‌ ಆ್ಯಂಡ್‌ ರನ್‌ ಕೇಸ್‌; ಅಸ್ಸಾಮಿ ನಟಿ ಅರೆಸ್ಟ್‌

Ramesh B Ramesh B Jul 30, 2025 3:12 PM

ದಿಸ್‌ಪುರ: ಇತ್ತೀಚೆಗೆ ರಿಲೀಸ್‌ ಆಗಿ ಯಶಸ್ವಿಯಾದ ʼರುದ್ರʼ ಚಿತ್ರದ ಮೂಲಕ ಜನಪ್ರಿಯರಾದ ಅಸ್ಸಾಂ ನಟಿ ನಂದಿನಿ ಕಶ್ಯಪ್‌ (Nandini Kashyap) ಅವರನ್ನು ಹಿಟ್‌ ಆ್ಯಂಡ್‌ ರನ್‌ ಕೇಸ್‌ನಲ್ಲಿ (Hit And Run Case) ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ನಟಿ ಸಂಚರಿಸುತ್ತಿದ್ದ ಕಾರು 21 ವರ್ಷದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ನಂದಿನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುವಾಹಟಿಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ನಂದಿನಿ ಅವರ ಕಾರು ನಿಲ್ಲದೆ ಸ್ಥಳದಿಂದ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜು. 25ರಂದು ಮುಂಜಾನೆ 3 ಗಂಟೆಗೆ ಗುವಾಹಟಿಯ ದಖಿಂಗಾವ್ ಪ್ರದೇಶದಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣ ನಡೆದಿತ್ತು. ಮೃತ ವಿದ್ಯಾರ್ಥಿಯನ್ನು ಸಮಿಯುಲ್ ಹಕ್ (Samiul Haque) ಎಂದು ಗುರುತಿಸಲಾಗಿದೆ. ನಾಲ್ಬರಿ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಯಾಗಿರುವ ಅವರು ಗುವಾಹಟಿ ಮುನ್ಸಿಪಲ್‌ ಕಾರ್ಪೋರೇಷನ್‌ (GMC)ನಲ್ಲಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದರು.



ಈ ಸುದ್ದಿಯನ್ನೂ ಓದಿ: Hit And Run: ಹಿಟ್‌ ಆಂಡ್‌ ರನ್‌ ಪ್ರಕರಣ- ನೆರೆಮನೆಯ ವ್ಯಕಿಯಿಂದಲೇ ಸಾವಿಗೀಡಾದ 2 ವರ್ಷದ ಕಂದಮ್ಮ

ಘಟನೆ ವಿವರ

ಗುವಾಹಟಿ ಮುನ್ಸಿಪಲ್‌ ಕಾರ್ಪೋರೇಷನ್‌ನ ಬೀದಿ ದೀಪಗಳ ಪ್ರಾಜೆಕ್ಟ್‌ನಲ್ಲಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ ಸಮಿಯುಲ್ ಹಕ್ ಮುಂಜಾನೆ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ನಂದಿನಿ ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಡಿಕ್ಕಿ ಹೊಡೆಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಕ್ಕಿ ಹೊಡೆದ ಬಳಿಕ ನಂದಿನಿ ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪ್ರತ್ಯಕ್ಷದರ್ಶಗಳು ತಿಳಿಸಿದ್ದಾರೆ.

ತೀವ್ರ ಗಾಯೊಂಡಿದ್ದ ಸಮಿಯುಲ್ ಹಕ್ ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಪಘಾತದ ನಂತರ ವಾಹನವನ್ನು ಬೆನ್ನಟ್ಟಿದ ಅವರ ಸಹೋದ್ಯೋಗಿಗಳು ಅದನ್ನು ಕಹಿಲಿಪಾರದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಪತ್ತೆಹಚ್ಚಿದರು. ಅಲ್ಲಿ ನಂದಿನಿ ತಮ್ಮ ಎಸ್‌ಯುವಿಯನ್ನು ಮರೆಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಮಿಯುಲ್ ಹಕ್ ಸಹೋದ್ಯೋಗಿಗಳು ಮತ್ತು ನಂದಿನಿ ಮಧ್ಯೆ ತೀವ್ರ ವಾಗ್ವಾದ ನಡೆಯಿತು.

ಬಲಿಕ ಪೊಲೀಸರು ಆಕೆಯ ವಾಹನವನ್ನು ವಶಕ್ಕೆ ಪಡೆದು ಪ್ರಕರಣದ ಕುರಿತು ವಿಚಾರಣೆ ನಡೆಸಿದರು. ಆದರೆ ಅವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದರು. "ಹಿಟ್ ಆ್ಯಂಡ್‌ ರನ್ ಪ್ರಕರಣದಲ್ಲಿ ಇಂದು ನಾವು ನಟಿ ನಂದಿನಿ ಕಶ್ಯಪ್ ಅವರನ್ನು ಬಂಧಿಸಿದ್ದೇವೆ. ಈ ಹಿಂದೆ ಪ್ರಕರಣವನ್ನು ಜಾಮೀನು ನೀಡಬಹುದಾದ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದ್ದರಿಂದ ನಾವು ಅವರನ್ನು ವಿಚಾರಣೆ ನಡೆಸಿದ್ದೆವು. ಆದರೆ ನಿನ್ನೆ ಸಂತ್ರಸ್ತ ಮೃತಪಟ್ಟಿದ್ದಾರೆ. ಆದ್ದರಿಂದ ನಾವು ಇದೀಗ ಕೊಲೆಗೆ ಸಮಾನವಾದ ಆರೋಪಗಳನ್ನು ಸೇರಿಸಿದ್ದೇವೆ. ಇದು ಜಾಮೀನು ರಹಿತವಾಗಿದ್ದು, ನಂದಿನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ" ಎಂದು ಗುವಾಹಟಿ ಪೊಲೀಸ್ ಡಿಸಿಪಿ (ಸಂಚಾರ) ಜಯಂತ ಸಾರಥಿ ಬೋರಾ ಸುದ್ದಿಗಾರರಿಗೆ ತಿಳಿಸಿದರು.

ಬಡ ಕುಟುಂಬದ ಹಕ್ ತಮ್ಮ ಶಿಕ್ಷಣಕ್ಕಾಗಿ ಜಿಎಂಸಿಯಲ್ಲಿ ಪಾರ್ಟ್‌ ಟೈಂ ಕೆಲಸ ನಿರ್ವಹಿಸುತ್ತಿದ್ದರು. ಅಪಘಾತದಿಂದ ಅವರ ತಲೆಗೆ ತೀವ್ರ ಗಾಯವಾಗಿದ್ದು, ತೊಡೆ ಮತ್ತು ತೋಳಿನ ಮೂಳೆಗಳು ಮುರಿದಿವೆ ಎಂದು ಅವರ ಕುಟುಂಬ ತಿಳಿಸಿದೆ. ಅವರನ್ನು ಮೊದಲು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಮಂಗಳವಾರ ತಡರಾತ್ರಿ ಅವರು ಐಸಿಯುನಲ್ಲಿ ನಿಧನರಾದರು. ನಂದಿನಿ ಆರಂಭದಲ್ಲಿ ಹಕ್ ಅವರ ವೈದ್ಯಕೀಯ ಚಿಕಿತ್ಸೆಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಸಹಾಯ ಮಾಡಲಿಲ್ಲ ಎಂದು ಆರೋಪಿಸಿದೆ.