ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭೂಕಂಪದಿಂದ ಎಲ್ಲರೂ ಮನೆಬಿಟ್ಟು ಓಡುತ್ತಿದ್ದರೆ, ಈ ಹುಡುಗ ಮಾತ್ರ ತಿನ್ನುವುದರಲ್ಲಿ ಬ್ಯುಸಿ!

ಇತ್ತೀಚೆಗೆ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಕ್ವಿಂಗ್‌ಯುವಾನ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮನೆಯೊಳಗಿದ್ದವರು ಭಯಭೀತರಾಗಿ ಹೊರಗೆ ಓಡಿದ್ದಾರೆ. ಹಸಿದ ಹುಡುಗನೊಬ್ಬ ಮಾತ್ರ ಡೈನಿಂಗ್ ಟೇಬಲ್ ಮೇಲಿದ್ದ ಆಹಾರವನ್ನು ತಿನ್ನುವುದರಲ್ಲೇ ಬ್ಯುಸಿಯಾಗಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭೂಕಂಪವಾಗುತ್ತಿದ್ದರೂ ತಿನ್ನುವುದು ಮಾತ್ರ ಬಿಡದ ಹುಡುಗ; ಏನಿದು ಸ್ಟೋರಿ?

Profile pavithra Jun 26, 2025 7:09 PM

ಬೀಜಿಂಗ್: ಭೂಕಂಪವಾದಾಗ ಸಾಮಾನ್ಯವಾಗಿ ಜನರು ಜೀವ ಉಳಿಸಿಕೊಳ್ಳಲು ಎದ್ದೋ ಬಿದ್ದು ಓಡಲು ಶುರು ಮಾಡುತ್ತಾರೆ. ಅಂತಹದರಲ್ಲಿ ಚೀನಾದ ಹುಡುಗನೊಬ್ಬ ಭೂಕಂಪದ ನಡುವೆಯೂ ತನ್ನ ಜೀವಕ್ಕಿಂತ ಹೆಚ್ಚು ಊಟದ ಬಗ್ಗೆ ಒಲವು ತೋರಿಸಿದ್ದಾನೆ. ಇತ್ತೀಚೆಗೆ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಕ್ವಿಂಗ್‌ಯುವಾನ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮನೆಯವರು ಭಯಭೀತರಾಗಿ ಹೊರಗೆ ಓಡುತ್ತಿರುವಾಗ, ಹಸಿದ ಹುಡುಗ ಡೈನಿಂಗ್ ಟೇಬಲ್ ಮೇಲಿದ್ದ ಆಹಾರವನ್ನು ತಿನ್ನಲು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ತಂದೆ ಮತ್ತು ಅವನ ಇಬ್ಬರು ಮಕ್ಕಳು ಡೈನಿಂಗ್ ಟೇಬಲ್‍ ಮೇಲೆ ಊಟ ಮಾಡುವುದು ಸೆರೆಯಾಗಿದೆ. ಆ ಸಮಯದಲ್ಲಿ ಭೂಕಂಪನದ ಅನುಭವವಾಗಿದೆ. ತಂದೆ ಹಾಗೂ ಕಿರಿಯ ಮಗ ಮನೆಯಿಂದ ಹೊರಗೆ ಓಡಿದ್ದಾರೆ. ಆದರೆ ಹಿರಿಯ ಮಗ ಟೇಬಲ್‌ ಮೇಲಿದ್ದ ಆಹಾರವನ್ನು ಬಾಯಿಗೆ ತುಂಬಿಕೊಳ್ಳುತ್ತಾ ಮನೆಯಿಂದ ಹೊರಗೆ ಹೋಗಿದ್ದಾನೆ. ನಂತರ ಮತ್ತೆ ವಾಸಪಸ್‌ ಬಂದು ಡೈನಿಂಗ್ ಟೇಬಲ್‍ ಮೇಲೆ ಉಳಿದಿದ್ದ ಆಹಾರವನ್ನು ತಿನ್ನಲು ಒಳಗೆ ಬಂದಿದ್ದಾನೆ. ಆಗ ಆತನ ತಂದೆ ಕೂಗಿದ್ದಕ್ಕೆ ಬಾಯಿಗೆ ಮತ್ತಷ್ಟ ಆಹಾರ ತುಂಬಿಕೊಂಡು ಮನೆಯಿಂದ ಹೊರಗೆ ಹೋಗಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಒಬ್ಬರು, "ಭೂಕಂಪ ಆಗಿದೆಯೊ ಅಥವಾ ಇಲ್ಲವೊ, ಆದರೆ ಆ ತಿಂಡಿಗಳ ಬಯಕೆಯನ್ನು ಎಂದಿಗೂ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ. "ನೀನು ಬದುಕುತ್ತೀಯೋ ಸಾಯುತ್ತೀಯೋ ಗೊತ್ತಿಲ್ಲ, ಕನಿಷ್ಠ ನಿನ್ನ ಇಷ್ಟದ ಆಹಾರವನ್ನಾದರೂ ತಿಂದುಬಿಡು" ಎಂದು ಮತ್ತೊಬ್ಬರು ಹೇಳಿದ್ದಾರೆ. "ಈ ಜಗತ್ತಿನಲ್ಲಿ ಹಸಿವಿಗಿಂತ ಭಯಾನಕವಾದುದು ಯಾವುದಿಲ್ಲ ಎಂಬ ಸತ್ಯ ಅವನಿಗೆ ಅರಿವಾಗಿದೆʼʼ ಎಂದು ಇನ್ನೊಬ್ಬ ನೆಟ್ಟಿಗ ಹೇಳಿದ್ದಾರೆ. "ಆ ಮಗುವಿನ ಗಮನ ಅದ್ಭುತವಾಗಿದೆ. ಅವನಿಗೆ ಆಹಾರ ಒಂದೇ ಗಂಭೀರ ವಿಷಯ!"ಎಂದು ಮಗದೊಬ್ಬರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಭಾರಿ ಮಳೆಗೆ ಕುಸಿದ ಸೇತುವೆ; ಟ್ರಕ್‌ನೊಳಗಿದ್ದ ಚಾಲಕನಿಗೆ ಆಗಿದ್ದೇನು? ಶಾಕಿಂಗ್‌ ವಿಡಿಯೊ ವೈರಲ್

ಇತ್ತೀಚೆಗೆ ದಕ್ಷಿಣ ಚೀನಾದ ಕ್ವಿಂಗ್ಯುವಾನ್ ನಗರದ ಕ್ವಿಂಗ್ಚೆಂಗ್ ಜಿಲ್ಲೆಯಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಚೀನಾದ ಟಿಬೆಟ್‌ನಲ್ಲಿ ಭೂಕಂಪದ ನಂತರ ಕನಿಷ್ಠ 126 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.