Viral Video: ಪುರುಷರ ಒಳ ಉಡುಪನ್ನು ತರಕಾರಿ ಚೀಲವಾಗಿ ಪರಿವರ್ತಿಸಿದ ಮಹಿಳೆ; ಪಾಪ ಪತಿ ಎಂದ ನೆಟ್ಟಿಗರು!
Underwear into DIY Tote: ಹಳೆಯ ವಸ್ತುಗಳನ್ನು ಮರುಬಳಕೆ ಮಾಡುವಲ್ಲಿ ಭಾರತೀಯರು ಸದಾ ಮುಂದು. ಭಾರತೀಯರು ಯಾವುದೇ ಕಾರಣಕ್ಕೂ ವಸ್ತುಗಳನ್ನು ಹಾಳಾದರೂ ಎಸೆಯುವುದಿಲ್ಲ. ಇದೀಗ ಮಹಿಳೆಯೊಬ್ಬಳು ಪುರುಷರ ಒಳಉಡುಪನ್ನು ತರಕಾರಿ ಕೊಂಡೊಯ್ಯುವ ಚೀಲವಾಗಿ ಮಾರ್ಪಡಿಸಿದ್ದಾಳೆ. ಇದರ ವಿಡಿಯೊ ವೈರಲ್ ಆಗಿದೆ.

-

ನವದೆಹಲಿ: ಭಾರತೀಯರು ಸದಾ ಸೃಜನಾತ್ಮಕ ಪರಿಹಾರ ಹುಡುಕುವಲ್ಲಿ ಎತ್ತಿದಕೈ. ಹಳೆಯ ವಸ್ತುಗಳನ್ನು ಮರುಬಳಕೆ ಮಾಡುವಲ್ಲಿ ಭಾರತೀಯರು ಸದಾ ಮುಂದು. ಜಗತ್ತಿನ ಉಳಿದ ದೇಶಗಳು ಹಳೆಯ ವಸ್ತುಗಳನ್ನು ತ್ಯಜಿಸಬಹುದಾದರೂ, ಭಾರತೀಯರು ಮಾತ್ರ ಯಾವುದೇ ಕಾರಣಕ್ಕೂ ಅವುಗಳನ್ನು ಎಸೆಯುವುದಿಲ್ಲ. ಹಳೆಯ ಬಟ್ಟೆಗಳು ಸ್ವಚ್ಛಗೊಳಿಸುವ ಚಿಂದಿಗಳಾಗಿ ಬದಲಾಗುತ್ತವೆ. ಗಾಜಿನ ಬಾಟಲಿಗಳು ಹೂವಿನ ಹೂದಾನಿಗಳಾಗಿ ರೂಪಾಂತರಗೊಳ್ಳುತ್ತವೆ, ಯಾವುದಾದರೂ ಆಹಾರ ತಂದ ಡಬ್ಬಗಳು ವ್ಯರ್ಥವಾಗುವುದಿಲ್ಲ. ಒಂದೆರಡಲ್ಲ, ಹೇಳಲು ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ದೈನಂದಿನ ಹ್ಯಾಕ್‌ಗಳು ಅನೇಕರಿಗೆ ಪರಿಚಿತವಾಗಿದ್ದರೂ, ಇತ್ತೀಚೆಗೆ ಒಬ್ಬ ಮಹಿಳೆಯ (woman) ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಈ ಪರಿಹಾರವು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ.
ಮಹಿಳೆಯೊಬ್ಬಳು ಪುರುಷರ ಒಳ ಉಡುಪುನ್ನು ಸಂಪೂರ್ಣವಾಗಿ ಕ್ರಿಯಾತ್ಮಕ ಸ್ಲಿಂಗ್ ಬ್ಯಾಗ್ ಆಗಿ ಪರಿವರ್ತಿಸಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೊದಲ್ಲಿ, ಮಹಿಳೆ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸುತ್ತಿರುವುದನ್ನು ಕಾಣಬಹುದು. ಆದರೆ, ಎಲ್ಲರ ಗಮನ ಸೆಳೆದದ್ದು ಆಕೆಯ ಅಸಾಂಪ್ರದಾಯಿಕ ಆಯ್ಕೆಯ ಬ್ಯಾಗ್.
ಸಾಮಾನ್ಯವಾಗಿ ತರಕಾರಿ ಕೊಳ್ಳಲು ಟೋಟ್ ಅಥವಾ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಲಾಗುತ್ತದೆ. ಆದರೆ, ಈ ಮಹಿಳೆ ಹೊಲಿದ ಒಳ ಉಡುಪುಗಳಲ್ಲಿ ತನ್ನ ತರಕಾರಿಗಳನ್ನು ಒಯ್ದಿದ್ದಾಳೆ. ಅಂಗಡಿಯಾತ ಕೂಡ ಕಣ್ಣು ಮಿಟುಕಿಸದೆ, ತರಕಾರಿಗಳನ್ನು ನೇರವಾಗಿ ಚಡ್ಡಿ ಬ್ಯಾಗ್ ಒಳಗೆ ಹಾಕುವುದನ್ನು ವಿಡಿಯೊದಲ್ಲಿ ನೋಡಬಹುದು.
ವಿಡಿಯೊ ವೀಕ್ಷಿಸಿ:
ವಿಡಿಯೊದಲ್ಲಿ ನೋಡುವಂತೆ, ಮಹಿಳೆಯ ಒಳ ಉಡುಪುಗಳ ಗುಂಡಿಯ ಭಾಗವನ್ನು ಸೀಲ್ ಮಾಡಿ ಸೊಂಟದ ಪಟ್ಟಿಯ ಎರಡೂ ಬದಿಗಳಲ್ಲಿ ಪಟ್ಟಿಯನ್ನು ಹೊಲಿದಿದ್ದಳು. ಅದನ್ನು ಸುಲಭವಾಗಿ ಸಾಗಿಸಬಹುದಾದ ಚೀಲವನ್ನಾಗಿ ಪರಿವರ್ತಿಸಿದಳು. ಆಕೆಯ ವಿಶಿಷ್ಟ ಆವಿಷ್ಕಾರವು ಸಾಮಾಜಿಕ ಮಾಧ್ಯಮದ ಗಮನಸೆಳೆದಿದೆ. ಮಹಿಳೆಯ ಸೃಜನಶೀಲತೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹೊಗಳಿದ್ದಾರೆ.
ಇದನ್ನೂ ಓದಿ: Viral News: ಬೈಕ್‍ಗೆ ಸ್ಕೂಟರ್ ಡಿಕ್ಕಿ; ರಸ್ತೆಯಲ್ಲಿ ಮೂವರ ಜಗಳ, 11 ಕೆಜಿ ಬೆಳ್ಳಿ ಕಳವು
ಕೆಲವೇ ಕ್ಷಣಗಳಲ್ಲಿ, ಆ ಮಹಿಳೆಯ ಸೃಜನಶೀಲತೆ ನೆಟ್ಟಿಗರ ಗಮನ ಸೆಳೆಯಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ತಮಾಷೆಯಿಂದ ಹಿಡಿದು ಮೆಚ್ಚುಗೆಯವರೆಗೆ ಕಾಮೆಂಟ್ ವಿಭಾಗವನ್ನು ತುಂಬಿದರು. ಅನೇಕರು ಆಕೆಯ ನವೀನ ಚಿಂತನೆ ಮತ್ತು ಸುಸ್ಥಿರ ವಿಧಾನವನ್ನು ಶ್ಲಾಘಿಸಿದರು. ಆದರೆ ಇತರರು ಆಕೆಯ ಅಸಾಂಪ್ರದಾಯಿಕ ಬ್ಯಾಗ್ ಆಯ್ಕೆಯ ಬಗ್ಗೆ ತಮಾಷೆ ಮಾಡಿದ್ದಾರೆ. ಮಹಿಳೆ ಏನು ಬೇಕಾದರೂ ಮಾಡಬಹುದು, ಎಂಬುದನ್ನು ಇದು ಸಾಬೀತುಪಡಿಸಿದೆ ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ. ಪಾಪ ಗಂಡ, ಮನೆಯಲ್ಲಿ ತನ್ನ ಒಳ ಉಡುಪುಗಳನ್ನು ಹುಡುಕುತ್ತಿರಬೇಕು ಎಂದು ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ ಬರೆದಿದ್ದಾರೆ. ಒಟ್ಟಿನಲ್ಲಿ ಅನೇಕರು ಹಳೆಯ ಬಟ್ಟೆಗಳನ್ನು ಮರುಬಳಕೆ ಮಾಡಿದ್ದಕ್ಕಾಗಿ ಮಹಿಳೆಯನ್ನು ಹೊಗಳಿದ್ದಾರೆ.