ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Keshava Prasad B Column: ಬೆಂಗಳೂರಿನಲ್ಲಿ ಟೆಕ್ಕಿ ಸಂಬಳಕ್ಕೆ ಸಮಾನವಾಗಿ ಗಳಿಸಬಲ್ಲ ಪ್ಲಂಬರ್!

ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಆರಂಭಿಕ ಘಟ್ಟದಲ್ಲಿ ವರ್ಷಕ್ಕೆ ಸರಾಸರಿ 4 ಲಕ್ಷದಿಂದ 7 ಲಕ್ಷ (ಅಂದರೆ ತಿಂಗಳಿಗೆ ಸುಮಾರು 35,000 ದಿಂದ 60,000 ರುಪಾಯಿ) ಗಳಿಸಿದರೆ, ಕಠಿಣ ಪರಿಶ್ರಮ ಮತ್ತು ವ್ಯಾಪಾರ ಚಾತುರ್ಯ ಇರುವ ಒಬ್ಬ ಎಲೆಕ್ಟ್ರೀಶಿಯನ್, ಪ್ಲಂಬರ್ ಅಥವಾ ಪಕೋಡಾ ಮಾರಾಟಗಾರರು ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಗಳಿಸಬಲ್ಲರು

ಬೆಂಗಳೂರಿನಲ್ಲಿ ಟೆಕ್ಕಿ ಸಂಬಳಕ್ಕೆ ಸಮಾನವಾಗಿ ಗಳಿಸಬಲ್ಲ ಪ್ಲಂಬರ್!

-

ಮನಿಮೈಂಡೆಡ್‌

ಭಾರತದಲ್ಲಿ ಗಿಗ್ ಇಕಾನಮಿ ವೇಗವಾಗಿ ಬೆಳೆಯುತ್ತಿದೆ. ದೇಶದ ಆರ್ಥಿಕತೆಯ ಚಾಲಕ ಶಕ್ತಿಯಾಗುತ್ತಿದೆ. ನೀತಿ ಆಯೋಗದ ವರದಿಗಳ ಪ್ರಕಾರ, ಇದರ ವಿಸ್ತಾರ ಮತ್ತು ಸಾಮರ್ಥ್ಯ ನಿಜಕ್ಕೂ ಬೆರಗುಗೊಳಿಸುವಂತಿದೆ. ಭಾರತದಲ್ಲಿ ಸದ್ಯಕ್ಕೆ ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ಗಿಗ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇದು ಕೇವಲ ಕಲ್ಪನೆಯಲ್ಲ, ಸಂಪೂರ್ಣ ವಾಸ್ತವ. ಸಿಲಿಕಾನ್ ಸಿಟಿಯಲ್ಲಿ ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ, ಅಷ್ಟೇ ವೇಗವಾಗಿ ಜನರ ಜೀವನಶೈಲಿ ಮತ್ತು ದಿನನಿತ್ಯದ ಅಗತ್ಯ ಸೇವೆಗಳ ಬೆಲೆಯೂ ಹೆಚ್ಚುತ್ತಿದೆ. ಗಿಗ್‌ ಇಕಾನಮಿ (Gig Economy ) ಅಥವಾ ಮುಕ್ತ ಮಾರುಕಟ್ಟೆಯ ತಾತ್ಕಾಲಿಕ ಉದ್ಯೋಗಗಳು ಸಾಂಪ್ರದಾಯಿಕ "ಕೆಲಸದ ಮೇಲು-ಕೀಳು" ಎಂಬ ಹಳೆಯ ಕಲ್ಪನೆಯನ್ನೇ ಬದಲಾಯಿಸುತ್ತಿವೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕೆಲಸವನ್ನು ಗೌರವಿಸುವ ರೀತಿ ಮತ್ತು ಮಾಡುವ ವಿಧಾನ ಎರಡೂ ಸಂಪೂರ್ಣವಾಗಿ ಬದಲಾಗಿವೆ.

ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಆರಂಭಿಕ ಘಟ್ಟದಲ್ಲಿ ವರ್ಷಕ್ಕೆ ಸರಾಸರಿ 4 ಲಕ್ಷದಿಂದ 7 ಲಕ್ಷ (ಅಂದರೆ ತಿಂಗಳಿಗೆ ಸುಮಾರು 35,000 ದಿಂದ 60,000 ರುಪಾಯಿ) ಗಳಿಸಿದರೆ, ಕಠಿಣ ಪರಿಶ್ರಮ ಮತ್ತು ವ್ಯಾಪಾರ ಚಾತುರ್ಯ ಇರುವ ಒಬ್ಬ ಎಲೆಕ್ಟ್ರೀಶಿಯನ್, ಪ್ಲಂಬರ್ ಅಥವಾ ಪಕೋಡಾ ಮಾರಾಟಗಾರರು ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಗಳಿಸಬಲ್ಲರು. ನಾನು ಟೆಕ್ಕಿಗಳ ಕೆಲಸಕ್ಕಿಂತ ಎಲೆಕ್ಟ್ರೀಶಿಯನ್-ಪ್ಲಂಬರ್-ಪಕೋಡಾ ಮಾರಾಟವೇ ಬೆಸ್ಟ್‌ ಅಂತ ಹೇಳುವುದಿಲ್ಲ.

ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಕೆಲಸಕ್ಕೆ ಸೇರಿ 5-10 ವರ್ಷಗಳ ಬಳಿಕ, ಜಾಗತಿಕ ಮಟ್ಟ ದಲ್ಲಿ ಬೆಳೆಯುವ ಮತ್ತು ಲಕ್ಷಗಟ್ಟಲೆ ಪ್ಯಾಕೇಜ್ ಪಡೆಯುವ ಅವಕಾಶವಿರುತ್ತದೆ ಎಂಬುದು ನಿಜ. ಆದರೆ, ಆರಂಭಿಕ ಹಂತದಲ್ಲಿ ಕೌಶಲ ಆಧಾರಿತ ದುಡಿಮೆ ಮತ್ತು ಸ್ವಯಂ ಉದ್ಯೋಗ ಗಳು ಆರ್ಥಿಕವಾಗಿ ಯಾವುದೇ ಐಟಿ ಕೆಲಸಕ್ಕೆ ಕಮ್ಮಿಯಿಲ್ಲ ಎಂಬುದನ್ನು ಬೆಂಗಳೂರಿನ ಇಂದಿನ ಮಾರುಕಟ್ಟೆ ಸಾಬೀತುಪಡಿಸಿದೆ. ಜತೆಗೆ ಯಾವುದೇ ವೃತ್ತಿ, ವ್ಯಾಪಾರವೂ ಮೇಲಲ್ಲ, ಕೀಳೂ ಅಲ್ಲ. ದುಡಿಮೆ ಮತ್ತು ಸಂಪಾದನೆಗೆ ದಾರಿಗಳು ನೂರಾರು ಇವೆ ಎಂಬುದೇ ಇದರ ತಾತ್ಪರ್ಯ. ಆದ್ದರಿಂದ ಯಾರೂ ನಿರುದ್ಯೋಗದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ.

ಇದನ್ನೂ ಓದಿ: Keshava Prasad B Column: ಮೋದಿಯವರ ಮುಂದಿನ ಟಾರ್ಗೆಟ್‌ ವಿಕಸಿತ ಭಾರತ

ಎಲೆಕ್ಟ್ರೀಶಿಯನ್‌ಗಳನ್ನೇ ತೆಗೆದುಕೊಳ್ಳಿ. ಹೊಸ ಅಪಾರ್ಟ್‌ಮೆಂಟ್‌ಗಳು, ಗೇಟೆಡ್ ಕಮ್ಯುನಿಟಿಗಳು ಮತ್ತು ಕಾರ್ಪೊರೇಟ್ ಆಫೀಸ್‌ಗಳು ಹೆಚ್ಚುತ್ತಿರುವುದರಿಂದ ಬೆಂಗಳೂರಿ ನಲ್ಲಿ ಎಲೆಕ್ಟ್ರೀಶಿಯನ್‌ಗಳಿಗೆ ಭಾರಿ ಬೇಡಿಕೆಯಿದೆ. ಅರ್ಬನ್ ಕಂಪನಿಯಂತಹ ಆ್ಯಪ್‌ ಗಳಲ್ಲಿ ಟಾಪ್ ರೇಟಿಂಗ್ ಹೊಂದಿರುವ ಎಲೆಕ್ಟ್ರೀಶಿಯನ್‌ಗಳು ತಿಂಗಳಿಗೆ 50,000 ರುಪಾಯಿಗಳಿಂದ 80,000 ರುಪಾಯಿಗಳ ತನಕ ಗಳಿಸಬಲ್ಲರು. ಹೊಸ ಮನೆಗಳಲ್ಲಿ ಸ್ಮಾರ್ಟ್ ಹೋಮ್ ಆಟೊಮೇಷನ್, ಇವಿ ಚಾರ್ಜರ್ ಅಳವಡಿಕೆ, ಇನ್ವರ್ಟರ್ ಮತ್ತು ಸೆಕ್ಯೂರಿಟಿ ಸಿಸ್ಟಮ್‌ಗಳಂತಹ ಹೈ-ಟೆಕ್ ಕೆಲಸಗಳಿರುತ್ತವೆ. ಇವುಗಳಿಗೆ ವಿಸಿಟಿಂಗ್‌ ಶುಲ್ಕ 300-500 ರುಪಾಯಿ ಇರುತ್ತದೆ. ಫಿಟ್ಟಿಂಗ್‌ ಚಾರ್ಜು ಬೇರೆ.

ಇನ್ನು ಪ್ಲಂಬರ್‌ಗಳನ್ನು ಗಮನಿಸಿ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಮತ್ತು ಹಾರ್ಡ್‌ ವಾಟರ್‌ ತೊಂದರೆ ಇರುವುದರಿಂದ ಪೈಪ್‌ಲೈನ್ ಮತ್ತು ವಾಟರ್ ಸಿಸ್ಟಮ್‌ಗಳ ರಿಪೇರಿ ಕೆಲಸ ಸದಾ ಇರುತ್ತದೆ. ಒಬ್ಬ ಬಿಡುವಿಲ್ಲದ ಪ್ಲಂಬರ್ ಅಥವಾ ಪ್ಲಾಟ್‌ಫಾರ್ಮ್ ಆಧಾರಿತ ಪ್ಲಂಬರ್ ತಿಂಗಳಿಗೆ 60,000 ರುಪಾಯಿಗಳಿಂದ 90,000 ರುಪಾಯಿ ತನಕ ಗಳಿಸಬಲ್ಲ. ಐಷಾರಾಮಿ ಫ್ಲಾಟ್‌ಗಳಲ್ಲಿ ಸೆನ್ಸರ್ ಆಧರಿತ ನಲ್ಲಿಗಳು, ವಾಟರ್ ಪ್ಯೂರಿಫೈಯರ್ ಮತ್ತು ಪ್ರೆಶರ್ ಪಂಪ್‌ಗಳನ್ನು ರಿಪೇರಿ ಮಾಡಲು ಕೌಶಲ ಬೇಕು. ದಿನಕ್ಕೆ ಕೇವಲ 3-4 ಪ್ರಮುಖ ಆರ್ಡರ್‌ಗಳನ್ನು ಮುಗಿಸಿದರೂ ಇವರ ದೈನಂದಿನ ಗಳಿಕೆ 3,000 ರುಪಾಯಿ ದಾಟುತ್ತದೆ.

plumber

ಪಕೋಡಾ, ಚಾಟ್ಸ್‌ ಮಾರಾಟದ ಕಥೆ ಕೇಳಿ. ಇದು ಕೌಶಲಕ್ಕಿಂತ ಹೆಚ್ಚಾಗಿ 'ಲೊಕೇಶನ್ ಮತ್ತು ರುಚಿ'ಯ ಮೇಲೆ ನಡೆಯುವ ಬ್ಯುಸಿನೆಸ್. ಬೆಂಗಳೂರಿನ ಐಟಿ ಪಾರ್ಕ್‌ಗಳ ಹೊರಗೆ, ಮೆಟ್ರೋ ನಿಲ್ದಾಣಗಳ ಬಳಿ ಅಥವಾ ಬಿಡುವಿಲ್ಲದ ಮಾರುಕಟ್ಟೆಗಳಲ್ಲಿ ಇವರ ಗಳಿಕೆ ಟೆಕ್ಕಿಗಳನ್ನು ಸುಲಭವಾಗಿ ಮೀರಿಸುತ್ತದೆ.

ಒಂದು ಸಣ್ಣ ಜನಪ್ರಿಯ ಗಾಡಿ ಅಥವಾ ಸ್ಟಾಲ್ ಹೊಂದಿರುವವರು ತಿಂಗಳಿಗೆ ಕನಿಷ್ಠ 60,000 ರುಪಾಯಿಗಳಿಂದ ದಿಂದ ಲಕ್ಷದವರೆಗೆ ಸಂಪಾದಿಸುತ್ತಾರೆ.

ಬೆಂಗಳೂರು-ಕರ್ನಾಟಕ-ಭಾರತದ ಆರ್ಥಿಕ ಬೆಳವಣಿಗೆಗೆ ಐಟಿ ಇಂಡಸ್ಟ್ರಿ ನೀಡುತ್ತಿರುವ ಕೊಡುಗೆ ಅಪಾರ. ಆದರೆ ಇದರ ಶ್ರೇಯಸ್ಸು ಲಕ್ಷಾಂತರ ಟೆಕ್ಕಿಗಳಿಗೆ ಸಲ್ಲುತ್ತದೆ. ಆದರೆ ಐಟಿ ಕಂಪನಿಯಲ್ಲಿ ಸಿಇಒ ಮತ್ತು ಸಾಮಾನ್ಯು ಉದ್ಯೋಗಿಗಳ ನಡುವಣ ವೇತನದ ಅಂತರ ಅಗಾಧ. ಜತೆಗೆ ಡೆಡ್‌ಲೈನ್‌ಗಳು, ಮ್ಯಾನೇಜರ್‌ ಕಿರಿಕಿರಿ, ಮಾನಸಿಕ ಒತ್ತಡ ಹೆಚ್ಚು. ಲೇ ಆಫ್ಸ್‌, ಆರ್ಥಿಕ ಮಂದಗತಿ, ಎಐ ಆವಿಷ್ಕಾರಗಳ ಭೀತಿ ಇರುತ್ತದೆ. ಆದರೆ ಎಐ ಎಷ್ಟೇ ಮುಂದುವರಿ ದರೂ, ಎಲೆಕ್ಟ್ರೀಶಿಯನ್‌, ಪ್ಲಂಬರ್‌, ಪಕೋಡಾ ಮಾರಾಟ ನಿಲ್ಲುವುದಿಲ್ಲ. ಇಲ್ಲಿ ದೈಹಿಕ ಶ್ರಮ ಹೆಚ್ಚು. ಗ್ಲಾಮರ್‌ ಇರುವುದಿಲ್ಲ. ಆದರೆ ಅವರಿಗೆ ಅವರೇ ಬಾಸ್.‌ ಪಕೋಡಾ ತಿನ್ನುವುದು ಅಥವಾ ನಲ್ಲಿ ರಿಪೇರಿ ಮಾಡಿಸುವುದನ್ನು ಜನ ನಿಲ್ಲಿಸುವುದಿಲ್ಲ. ಮಾರುಕಟ್ಟೆ ಸದಾ ಇರುತ್ತದೆ. ಹಾಗಾದರೆ ಮುಖ್ಯವಾದ ವ್ಯತ್ಯಾಸ ಎಲ್ಲಿ ಉಂಟಾಗುತ್ತದೆ? ಒಬ್ಬ ಸಾಫ್ಟ್‌ ವೇರ್ ಇಂಜಿನಿಯರ್ ತನ್ನ ಕೌಶಲ ಬೆಳೆಸಿಕೊಂಡು ಮ್ಯಾನೇಜರ್ ಅಥವಾ ಡೈರೆಕ್ಟರ್ ಹಂತಕ್ಕೆ ಹೋದಾಗ ಅವರ ಆದಾಯದ ಮಿತಿ ತುಂಬಾ ದೊಡ್ಡದಾಗುತ್ತದೆ. ಆದರೆ ಒಬ್ಬ ಪ್ಲಂಬರ್ ಕೇವಲ ಒಬ್ಬರೇ ಕೆಲಸ ಮಾಡುವವರೆಗೆ ಅವರ ಆದಾಯಕ್ಕೆ ಒಂದು ಮಿತಿ ಇರುತ್ತದೆ. ಹೀಗಿದ್ದರೂ, ಆ ಪ್ಲಂಬರ್ ತನ್ನದೇ ಆದ 4-5 ಜನರ ತಂಡವನ್ನು ಕಟ್ಟಿ ಒಂದು ಸಣ್ಣ 'ಪ್ಲಂಬಿಂಗ್ ಸ್ಟಾರ್ಟ್‌ಅಪ್' ಅಥವಾ ಏಜೆನ್ಸಿ ಆರಂಭಿಸಿದರೆ, ಅವರ ಆದಾಯ ಐಟಿ ಮ್ಯಾನೇಜರ್‌ಗಳನ್ನೂ ಮೀರಿಸಬಹುದು. ಸಂದೇಹವೇ ಬೇಡ. ಇದೇ ಕಾರಣಕ್ಕೆ ಇಂದಿನ ಜಮಾನಾದಲ್ಲಿ ಯಾವುದೇ ಕೆಲಸ ಸಣ್ಣದಲ್ಲ; ಕೌಶಲವೊಂದಿದ್ದರೆ ಸಾಕು, ಗೌರವ ಮತ್ತು ಹಣ ಎರಡೂ ಹುಡುಕಿಕೊಂಡು ಬರುತ್ತವೆ.

ಭಾರತದಲ್ಲಿ ಗಿಗ್ ಇಕಾನಮಿ ವೇಗವಾಗಿ ಬೆಳೆಯುತ್ತಿದೆ. ದೇಶದ ಆರ್ಥಿಕತೆಯ ಚಾಲಕ ಶಕ್ತಿಯಾಗುತ್ತಿದೆ. ನೀತಿ ಆಯೋಗದ ವರದಿಗಳ ಪ್ರಕಾರ, ಇದರ ವಿಸ್ತಾರ ಮತ್ತು ಸಾಮರ್ಥ್ಯ ನಿಜಕ್ಕೂ ಬೆರಗುಗೊಳಿಸುವಂತಿದೆ. ಭಾರತದಲ್ಲಿ ಸದ್ಯಕ್ಕೆ ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ಗಿಗ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನೀತಿ ಆಯೋಗದ ಅಂದಾಜಿನ ಪ್ರಕಾರ, 2030ರ ವೇಳೆಗೆ ಈ ಸಂಖ್ಯೆ ಬರೋಬ್ಬರಿ 2.35 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಅಂದರೆ ಭಾರತದ ಒಟ್ಟು ಕೃಷಿಯೇತರ ಉದ್ಯೋಗಿಗಳಲ್ಲಿ ಶೇಕಡಾ 6.7 ರಷ್ಟು ಜನ ಗಿಗ್ ಕಾರ್ಮಿಕ ರಾಗಲಿದ್ದಾರೆ.

ಭಾರತ ವಿಕಸಿತವಾಗುವ ನಿಟ್ಟಿನಲ್ಲಿ ಕೃಷಿಯೇತರ ಕ್ಷೇತ್ರಗಳಲ್ಲಿ ಹೇರಳ ಉದ್ಯೋಗಾವಕಾಶ ಸೃಷ್ಟಿಯಾಗಬೇಕು. ಗಿಗ್ ಇಕಾನಮಿ ಎಂದರೆ ಕೇವಲ ಡೆಲಿವರಿ ಅಥವಾ ರೈಡ್-ಷೇರಿಂಗ್ ಮಾತ್ರವಲ್ಲ, ಇದರಲ್ಲಿ ಮೂರು ಹಂತದ ಕೌಶಲದ ಕೆಲಸಗಾರರಿದ್ದಾರೆ. ಕಡಿಮೆ ಕೌಶಲ ವಿರುವ ಡೆಲಿವರಿ ಪಾರ್ಟ್‌ನರ್ಸ್‌, ಕ್ಯಾಬ್‌ ಚಾಲಕರು, ಮಧ್ಯಮ ಕೌಶಲದ ಬ್ಯುಟಿಷಿಯನ್ಸ್‌, ಪ್ಲಂಬರ್ಸ್‌, ಎಲೆಕ್ಟ್ರೀಶಿಯನ್ಸ್‌, ಹೆಚ್ಚಿನ ಕೌಶಲವಿರುವ ಫ್ರೀಲ್ಯಾನ್ಸ್‌ ಸಾಫ್ಟ್‌ವೇರ್‌ ಡೆವಲ ಪರ್ಸ್‌, ಡಿಸೈನರ್ಸ್‌, ಕನ್ಸಲ್ಟೆಂಟ್ಸ್ ಇದ್ದಾರೆ. ಭಾರತವು ಜಾಗತಿಕವಾಗಿ ಫ್ರೀಲ್ಯಾನ್ಸ್ ಕೆಲಸಗಾರರನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಇಂಟರ್‌ ನೆಟ್ ಕ್ರಾಂತಿ ಮತ್ತು ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳು ಈ ವಲಯ ಇದಕ್ಕೆ ಸಹಕರಿಸಿದೆ.

ಕಾರಣವೇನೇ ಇರಲಿ, ಹಳೆ ಕಾಲದಲ್ಲಿ ಇಂಥ ಕೆಲಸ ಮೇಲು, ಇಂಥದ್ದು ಕೀಳು ಎಂಬ ಸಾಮಾಜಿಕ ಪೂರ್ವಾಗ್ರಹಗಳಿದ್ದವು. ಆದರೆ ಗಿಗ್ ಇಕಾನಮಿಯಲ್ಲಿ ನಿಮ್ಮಲ್ಲಿರುವ 'ಕೌಶಲ' ಮತ್ತು ನೀವು ನೀಡುವ 'ಫಲಿತಾಂಶ' ಮಾತ್ರ ಮುಖ್ಯ. ನೀವು ಸಾಫ್ಟ್‌ವೇರ್ ಕೋಡಿಂಗ್ ಮಾಡಲಿ, ಕಂಟೆಂಟ್ ಬರೆಯಲಿ, ಗ್ರಾಫಿಕ್ ಡಿಸೈನ್ ಮಾಡಲಿ ಅಥವಾ ಡೆಲಿವರಿ ನೆಟ್‌ವರ್ಕ್ ನಿರ್ವಹಿಸಲಿ—ಇಲ್ಲಿ ಪ್ರತಿಯೊಬ್ಬರೂ ಸ್ವತಂತ್ರ ಉದ್ಯಮಿಗಳೇ. ಸಾಂಪ್ರದಾಯಿಕ ಕೆಲಸಗಳು ಸಿಗದಿದ್ದಾಗ ಅಥವಾ ಹೆಚ್ಚುವರಿ ಆದಾಯದ ಅಗತ್ಯವಿದ್ದಾಗ ಗಿಗ್ ಕೆಲಸಗಳು ತಕ್ಷಣ ಕೈ ಹಿಡಿಯುತ್ತಿವೆ. ಇದು ಯುವಜನರಲ್ಲಿ ಸ್ವಾಭಿಮಾನವನ್ನು ಹೆಚ್ಚಿಸಿದೆ. ಒಂದು ಆ್ಯಪ್ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್ ಯಾರ ನಡುವೆಯೂ ತಾರತಮ್ಯ ಮಾಡುವು ದಿಲ್ಲ. ಉತ್ತಮ ರೇಟಿಂಗ್ ಮತ್ತು ಕಠಿಣ ಪರಿಶ್ರಮ ಇರುವ ಯಾರೇ ಆದರೂ ಇಲ್ಲಿ ಯಶಸ್ವಿ ಯಾಗಬಹುದು. ಇದು ಎಲ್ಲರಿಗೂ ಸಮಾನ ಅವಕಾಶವನ್ನು ಸೃಷ್ಟಿಸಿದೆ. "ಕಾಯಕವೇ ಕೈಲಾಸ" ತತ್ವಕ್ಕೆ ಗಿಗ್ ಇಕಾನಮಿ ಒಂದು ಹೊಸ ಆಯಾಮವನ್ನು ಕೊಟ್ಟಿದೆ.

ಯಾವುದೇ ಒಂದು ಪರೀಕ್ಷೆ ಅಥವಾ ವೈಫಲ್ಯ ನಮ್ಮ ಜೀವನಕ್ಕಿಂತ ದೊಡ್ಡದಲ್ಲ. ನೀಟ್ (NEET) ನಂತಹ ಕಠಿಣ ಪರೀಕ್ಷೆಗಳಿಗೆ ಹಗಲಿರುಳು ಶ್ರಮಿಸಿದಾಗ, ಅಕ್ರಮಗಳು ಅಥವಾ ಪೇಪರ್ ಲೀಕ್ ಸುದ್ದಿಗಳು ಕೇಳಿಬಂದಾಗ ವಿದ್ಯಾರ್ಥಿಗಳಿಗೆ ತೀವ್ರ ನಿರಾಶೆ, ಕೋಪ ಮತ್ತು ಹತಾಶೆ ಉಂಟಾಗುವುದು ಸಹಜ. ಆದರೆ, ಅದಕ್ಕೆ ಆತ್ಮಹತ್ಯೆಯಂತಹ ನಿರ್ಧಾರ ಖಂಡಿತವಾಗಿಯೂ ಪರಿಹಾರವಲ್ಲ. ಬದುಕು ವಿಶಾಲವಾಗಿದೆ ಮತ್ತು ಇಂದಿನ ಜಗತ್ತಿನಲ್ಲಿ ಯಶಸ್ವಿಯಾಗಲು ಅಸಂಖ್ಯಾತ ಮಾರ್ಗಗಳಿವೆ.

ಸಮಕಾಲೀನ ಜಗತ್ತು ಕೇವಲ ಪದವಿ ಅಥವಾ ನಿರ್ದಿಷ್ಟ ಪರೀಕ್ಷೆಯ ಅಂಕಗಳ ಮೇಲೆ ಮಾತ್ರ ನಡೆಯುತ್ತಿಲ್ಲ. ನಿಮಗಿರುವ ಪ್ರಾಯೋಗಿಕ ಕೌಶಲ ಮತ್ತು ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಬೆಲೆಯಿದೆ. ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ ಬಯೋಟೆಕ್ನಾಲಜಿ, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್, ಫಾರ್ಮಾಸ್ಯುಟಿಕಲ್ಸ್, ಅಥವಾ ಸಂಪೂರ್ಣವಾಗಿ ಭಿನ್ನವಾದ ಕೌಶಲ್ಯ ಆಧಾರಿತ ಕ್ಷೇತ್ರಗಳಲ್ಲಿ ಲಕ್ಷಾಂತರ ಜನ ಸಾಧನೆ ಮಾಡುತ್ತಿದ್ದಾರೆ. ಒಂದು ತಪ್ಪು ವ್ಯವಸ್ಥೆ ಯು ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಬೇಡಿ. ಮನಸ್ಸಿಗೆ ಬೇಸರವಾದಾಗ ಪೋಷಕರು, ಸ್ನೇಹಿತರು ಅಥವಾ ಆಪ್ತರೊಂದಿಗೆ ಮುಕ್ತವಾಗಿ ಮಾತನಾಡುವುದು ಮುಖ್ಯ. ಸೋಲು ತಾತ್ಕಾಲಿಕ, ಆದರೆ ಜೀವನ ಶಾಶ್ವತ.

ಒಂದು ಕಾಲದ ಕಾಯಂ ಉದ್ಯೋಗ" ಎಂಬ ಪರಿಕಲ್ಪನೆ ಈಗ ಇತಿಹಾಸವಾಗುತ್ತಿದೆ. ಹಿಂದೆಲ್ಲಾ ಒಂದು ಕಂಪನಿ ಸೇರಿದರೆ ನಿವೃತ್ತಿಯವರೆಗೂ ಅಲ್ಲೇ ಇರಬಹುದು ಎಂಬ ಭರವಸೆ ಇರುತ್ತಿತ್ತು, ಆದರೆ ಇಂದು ಐಟಿ ಸೆಕ್ಟರ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾ ನದ ತೀವ್ರ ಬೆಳವಣಿಗೆಯಿಂದಾಗಿ ನಾಳೆ ಏನಾಗಬಹುದು ಎಂಬ ಅನಿಶ್ಚಿತತೆ ಸೃಷ್ಟಿ ಯಾಗಿರುವುದು ನಿಜ. ಇಂದಿನ ದಿನಗಳಲ್ಲಿ ನಮಗೆ ಭದ್ರತೆ ನೀಡುವುದು ಯಾವುದೇ ಕಂಪನಿಯ ಆಫರ್ ಲೆಟರ್ ಅಲ್ಲ, ಬದಲಿಗೆ ನಮ್ಮಲ್ಲಿರುವ ಕೌಶಲ. ತಂತ್ರಜ್ಞಾನ ಬದಲಾ ದಂತೆ ನಾವು ನಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾ ಹೋದರೆ ಮಾರುಕಟ್ಟೆಯಲ್ಲಿ ನಮಗಿರುವ ಬೇಡಿಕೆ ಎಂದಿಗೂ ಕಮ್ಮಿಯಾಗುವುದಿಲ್ಲ.

ಎಐ ತಂತ್ರಜ್ಞಾನವು ಕೋಡಿಂಗ್, ಡೇಟಾ ಎಂಟ್ರಿಯಂತಹ ಪುನರಾವರ್ತನೆಯಾಗುವ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಆದರೆ ಮನುಷ್ಯರಿಗಿರುವ ವಿವೇಚನಾ ಶಕ್ತಿ , ಸೃಜನಶೀಲತೆ, ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಸಹಾನುಭೂತಿ ಎಐಗೆ ಸಾಧ್ಯವಿಲ್ಲ. ಯಾರು ಎಐ ಅನ್ನು ಒಂದು ಸಾಧನವಾಗಿ ಬಳಸಿಕೊಂಡು ತಮ್ಮ ಉತ್ಪಾದಕ ತೆಯನ್ನು ಹೆಚ್ಚಿಸಿಕೊಳ್ಳುತ್ತಾರೋ, ಅವರಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಇರುತ್ತದೆ. ಇಂದಿನ ಜಗತ್ತಿನಲ್ಲಿ ಬದಲಾವಣೆಗೆ ತಕ್ಕಂತೆ ಯಾರು ಬೇಗ ಹೊಂದಿಕೊಳ್ಳು ತ್ತಾರೋ ಅವರೇ ಗೆಲ್ಲುತ್ತಾರೆ.