ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಕೇಶವ ಪ್ರಸಾದ್​ ಬಿ

Columnist

[email protected]

ಕೇಶವ ಪ್ರಸಾದ್‌ ಬಿ ಅವರಿಗೆ ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಪರ ಅನುಭವ ಇದೆ. ಈ ಹಿಂದೆ ವಿಜಯ ಕರ್ನಾಟಕ ದೈನಿಕದ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ದೇಶೀಯ- ಅಂತಾರಾಷ್ಟ್ರೀಯ ವಿದ್ಯಮಾನಗಳು, ವಾಣಿಜ್ಯ- ಉದ್ದಿಮೆ, ಸಾಧಕರ ಸಂದರ್ಶನ ಹೀಗೆ ವೈವಿಧ್ಯಮಯ ಲೇಖನ, ವಿಶೇಷ ವರದಿ, ಮೇಕಿಂಗ್‌ ಇಂಡಿಯಾ ಅಂಕಣ ಬರೆದಿದ್ದಾರೆ. ವಿಸ್ತಾರ ನ್ಯೂಸ್‌ ಚಾನೆಲ್‌ನ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪರ್ಸನಲ್ ಫೈನಾನ್ಸ್‌, ಬಿಸಿನೆಸ್‌, ಕೃಷಿಗೆ ಸಂಬಂಧಿಸಿ ಹಲವಾರು ವಿಡಿಯೊ ಸಂದರ್ಶನಗಳನ್ನು ನಡೆಸಿದ್ದಾರೆ. ಪತ್ರಿಕೆ ಮತ್ತು ಡಿಜಿಟಲ್‌ ಮೀಡಿಯಾ ಎರಡರಲ್ಲೂ ಅನುಭವ ಗಳಿಸಿದ್ದಾರೆ. ಲೈಫ್‌ ಈಸ್‌ ವಂಡರ್‌ಫುಲ್‌, ಸಿರಿವಂತಿಕೆಗೆ 100% ಸೂತ್ರಗಳು ಕೃತಿಯನ್ನು ಬರೆದಿದ್ದಾರೆ.

Articles
Keshava Prasad B Column: ಯುಪಿಐ: ದೊಡ್ಡ ವರ್ತಕರಿಂದ ಅಲ್ಪ ಶುಲ್ಕ ಪಡೆದರೆ ತಪ್ಪೇನು ?

ಯುಪಿಐ: ದೊಡ್ಡ ವರ್ತಕರಿಂದ ಅಲ್ಪ ಶುಲ್ಕ ಪಡೆದರೆ ತಪ್ಪೇನು ?

ಇದು ಎಷ್ಟು ನ್ಯಾಯ? ನ್ಯಾಯಯುತವಾಗಿ ನೋಡಿದರೆ, ಸೇವೆಯನ್ನು ಬಳಸುವವರು ಅದರ ವೆಚ್ಚದ ಸ್ವಲ್ಪ ಭಾಗವನ್ನು ಭರಿಸುವುದೇ ಸರಿಯಾದ ಕ್ರಮ ಎಂಬುದು ಮತ್ತೊಂದು ವಾದ. ಇನ್ನು ಅಂಗಡಿ ಯವರು ಎಂಡಿಆರ್ ಶುಲ್ಕವನ್ನು ಗ್ರಾಹಕರ ಮೇಲೆ ಹೇರುತ್ತಾರೆ ಎಂಬ ಆತಂಕದ ಬಗ್ಗೆ ಹೇಳುವುದಾದರೆ, ‘ಇದು ಸಂಪೂರ್ಣವಾಗಿ ಹಾಗೆ ಆಗುವುದಿಲ್ಲ.

Keshava Prasad B Column: ಭಾರತದ ಚಹಾ ಅಂಗಡಿಯಿಂದ ಬ್ರಿಕ್ಸ್‌ ಯುಪಿಐ ಕ್ರಾಂತಿ !

ಭಾರತದ ಚಹಾ ಅಂಗಡಿಯಿಂದ ಬ್ರಿಕ್ಸ್‌ ಯುಪಿಐ ಕ್ರಾಂತಿ !

ಯುಪಿಐ ಹಾಗೂ ಇತರ ದೇಶಗಳ ಕ್ಷಿಪ್ರ ಪಾವತಿ ವ್ಯವಸ್ಥೆಗಳು ಪರಸ್ಪರ ಜೋಡಣೆಯಾದರೆ, ಅಂತಾ ರಾಷ್ಟ್ರೀಯ ಹಣ ವರ್ಗಾವಣೆಗೆ ತಗಲುವ ಅಧಿಕ ವೆಚ್ಚ ಮತ್ತು ಸಮಯ ಗಣನೀಯವಾಗಿ ಉಳಿಯುತ್ತದೆ. ಕೇವಲ ಅಂಕಿಅಂಶಗಳನ್ನು ನೋಡುವುದಾದರೆ, 2026ರ ಆಗ ತಿಂಗಳೊಂದರ ಯುಪಿಐ ಬರೋಬ್ಬರಿ 24.85 ಲಕ್ಷ ಕೋಟಿ ಹಣಕಾಸು ವರ್ಗಾವಣೆಗಳನ್ನು ನಡೆಸಿದ್ದು, ಇದರ ಮೌಲ್ಯ 29.8 ಲಕ್ಷ ಕೋಟಿ ರುಪಾಯಿಗಳ ಮೊತ್ತವನ್ನು ದಾಟಿದೆ!

Keshava Prasad B Column: ಭಾರತದ ಜಿಡಿಪಿ ಸತ್ಯವೇ, ಮಿಥ್ಯವೇ? ಏನಿದು ಜಟಾಪಟಿ?!

ಭಾರತದ ಜಿಡಿಪಿ ಸತ್ಯವೇ, ಮಿಥ್ಯವೇ? ಏನಿದು ಜಟಾಪಟಿ?!

2026-27ರ ಮೊದಲ ತ್ರೈಮಾಸಿಕದ ಜಿಡಿಪಿಯನ್ನು ಈ ಹೊಸ ಮೂಲ ವರ್ಷವನ್ನು ಅಧರಿಸಿ ಲೆಕ್ಕ ಹಾಕಲಾಗಿದೆ. ಇದರ ಪ್ರಕಾರ 2025-26ರ ಮೊದಲ ತ್ರೈಮಾಸಿಕದ ಜಿಡಿಪಿಯ ಮೌಲ್ಯವನ್ನು 86.05 ಲಕ್ಷ ಕೋಟಿ ರುಪಾಯಿಗಳಿಂದ 80 ಲಕ್ಷ ಕೋಟಿ ರುಪಾಯಿಗೆ ಇಳಿಸಲಾಗಿದೆ. ಆದ್ದರಿಂದ ಹಳೆಯ ಸರಣಿಯ ಅಂಕಿ ಅಂಶಗಳನ್ನು ಹೊಸ ಸರಣಿಯ ಅಂಕಿ ಅಂಶಗಳ ಜತೆಗೆ ಹೋಲಿಸುವುದು ತಪ್ಪು. ಹೋಲಿಸಿದರೆ ಆಪಲ್ ಮತ್ತು ಕಿತ್ತಳೆ ಹಣ್ಣನ್ನು ಒಂದೇ ಎಂದು ಹೋಲಿಸಿದಂತೆ ತಪ್ಪಾಗುತ್ತದೆ ಎಂದು ಸರಕಾರ ಹೇಳಿದೆ.

Keshava Prasad B Column: ಮ್ಯೂಚುಯಲ್ ಫಂಡ್‌ ಹೂಡಿಕೆದಾರರ ಹೊಸ ದಾರಿ

ಮ್ಯೂಚುಯಲ್ ಫಂಡ್‌ ಹೂಡಿಕೆದಾರರ ಹೊಸ ದಾರಿ

AMFI- Crisil Factbook 2026ರ ಇತ್ತೀಚಿನ ವರದಿಯ ಪ್ರಕಾರ, ರಿಟೇಲ್ ಹೂಡಿಕೆದಾರರ ಒಟ್ಟು ಪ್ಯಾಸಿವ್ ಅಸೆಟ್ಸ್ (AUM) ಪೈಕಿ ಇಂಡೆಕ್ಸ್ ಫಂಡ್‌ಗಳ (Index Funds) ಪಾಲು ಕೇವಲ ಶೇ. 11.5ರಿಂದ ಪ್ರಚಂಡ ಶೇ. 55ಕ್ಕೆ ಜಿಗಿದಿದೆ. ಅಂದರೆ, ಐದು ವರ್ಷಗಳ ಹಿಂದೆ ಪ್ರತಿ 100 ರೂಪಾಯಿಗಳಲ್ಲಿ ಕೇವಲ 12 ರೂ. ಇದ್ದ ಇಂಡೆಕ್ಸ್ -ಫಂಡ್ ಹೂಡಿಕೆ, ಇಂದು 55 ರೂ.ಗಳಿಗೆ ಏರಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರು ಸಾಂಪ್ರದಾಯಿಕ ಸಕ್ರಿಯ ಹೂಡಿಕೆಯಿಂದ ರೂಲ್-ಬೇ ಕಡೆಗೆ ಒಲವು ತೋರಿಸು ತ್ತಿರುವುದನ್ನು ಇದು ಬಿಂಬಿಸಿದೆ

Keshava Prasad B Column: ಸಣ್ಣ ಉಳಿತಾಯ ಯೋಜನೆಗಳು ಈಗಲೂ ಏಕೆ ಆಕರ್ಷಕ ?

ಸಣ್ಣ ಉಳಿತಾಯ ಯೋಜನೆಗಳು ಈಗಲೂ ಏಕೆ ಆಕರ್ಷಕ ?

ಸ್ಮಾರ್ಟ್ʼಫೋನ್ ನಮ್ಮ ಕೈಸೇರಿರುವುದು ಬದುಕನ್ನು ಸುಲಭಗೊಳಿಸಿದೆ ನಿಜ. ಆದರೆ ಅದೇ ಸ್ಮಾರ್ಟ್ʼ ಫೋನ್ ಲಭ್ಯವಿರುವ ಕೆಲವು ಟ್ರೇಡಿಂಗ್ ಆಪ್‌ಗಳು ಅನೇಕ ಮಂದಿಗೆ ಸಮಸ್ಯಾತ್ಮಕವಾಗಿ ಪರಿಣಮಿಸಿದೆ. ಅದರಲ್ಲಿಯೂ ಷೇರುಪೇಟೆಯ ‘ಫ್ಯೂಚರ್ಸ್ ಆಂಡ್ ಆಪ್ಷನ್ಸ್’ (Futures Options & FO) ವಿಭಾಗದ ಹುಚ್ಚು ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದ್ದು, ಮಧ್ಯಮ ವರ್ಗದವರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ.

Keshava Prasad B Column: ವ್ಯವಹಾರಗಳು ಕಂಪನಿಗಳೊಂದಿಗಲ್ಲ, ಮನುಷ್ಯರೊಂದಿಗೆ!

ವ್ಯವಹಾರಗಳು ಕಂಪನಿಗಳೊಂದಿಗಲ್ಲ, ಮನುಷ್ಯರೊಂದಿಗೆ!

‘ಬಯೋ ಏಷ್ಯಾ’ ಮತ್ತು ‘ಸೈಬರಾಬಾದ್’ ಖ್ಯಾತಿಯ ಹೈದರಾಬಾದ್‌ನಲ್ಲಿ ಜೈವಿಕ ತಂತ್ರಜ್ಞಾನ, ಔಷಧ ಕ್ಷೇತ್ರ ಮತ್ತು ಐಟಿ ಸ್ಟಾರ್ಟಪ್‌ಗಳ ಗಮನಾರ್ಹ ಪ್ರಗತಿಯನ್ನು ಕಾಣಬಹುದು. ಚೆನ್ನೆ ಮತ್ತು ಅಹಮದಾ ಬಾದ್‌ನಲ್ಲಿ ಸಾಂಪ್ರದಾಯಿಕ ಉತ್ಪಾದನೆ, ಸಾಫ್ಟ್‌ʼವೇರ್ ಸೇವೆಗಳು ಹಾಗೂ ಜವಳಿ ಉದ್ಯಮಗಳಲ್ಲಿ ಈ ನಗರಗಳಲ್ಲಿ ಸ್ವಂತ ಉದ್ಯೋಗ ಮತ್ತು ಸ್ಟಾರ್ಟಪ್‌ಗಳು ಹೆಚ್ಚುತ್ತಿವೆ.

Keshava Prasad B Column: ಬಿಲಿಯೇರ್‌ ಎಂದರೆ ಯಾರು? ಅವರೆಲ್ಲರೂ ಹುಟ್ಟುವಾಗಲೇ ಶ್ರೀಮಂತರೇ?

ಬಿಲಿಯೇರ್‌ ಎಂದರೆ ಯಾರು? ಅವರೆಲ್ಲರೂ ಹುಟ್ಟುವಾಗಲೇ ಶ್ರೀಮಂತರೇ?

ಯಾವುದೇ ವ್ಯಕ್ತಿಯ ನಿವ್ವಳ ಮೌಲ್ಯವು (Net Worth) ಪ್ರಮುಖ ಜಾಗತಿಕ ಕರೆನ್ಸಿಯಾದ ಒಂದು ಬಿಲಿಯನ್ (ನೂರು ಕೋಟಿ) ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡಾಲರ್‌ಗಳಿಗೆ ಸಮಾನ ವಾಗಿದ್ದರೆ ಅವರನ್ನು 'ಬಿಲಿಯನೇರ್‌' ಎಂದು ಕರೆಯಲಾಗುತ್ತದೆ. ಭಾರತದ ರೂಪಾಯಿಗಳ ಲೆಕ್ಕಾ ಚಾರದಲ್ಲಿ ಹೇಳುವುದಾದರೆ, ಸುಮಾರು 8,300 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯನ್ನು ಹೊಂದಿರುವ ವ್ಯಕ್ತಿ ಈ ವರ್ಗಕ್ಕೆ ಸೇರುತ್ತಾರೆ.

Keshava Prasad B Column: ಚೇತರಿಸಿದ ಉತ್ಪಾದನೆ, ಐಟಿ: ಎಐ ಆತಂಕ ದೂರ !

ಚೇತರಿಸಿದ ಉತ್ಪಾದನೆ, ಐಟಿ: ಎಐ ಆತಂಕ ದೂರ !

ಭಾರತದ 2026ರ ಜೂನ್ ತಿಂಗಳ ಉದ್ಯಮ ವಲಯದ ಉತ್ಪಾದನೆಯು ಕಳೆದ ಎರಡು ವರ್ಷಗಳ ಅತ್ಯಂತ ವೇಗವಾಗಿ ಬೆಳೆದಿದೆ. ಉತ್ಪಾದನಾ ಕ್ಷೇತ್ರದಲ್ಲಿ ಉಂಟಾಗಿರುವ ಗಣನೀಯ ಚೇತರಿಕೆಯೇ ಇದಕ್ಕೆ ಕಾರಣ ಎನ್ನುವುದು ಮತ್ತೊಂದು ವಿಶೇಷ. ಎರಡನೆಯದಾಗಿ ಐಟಿ ಸೆಕ್ಟರ್‌ನಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ಕುರಿತ ಭಯ ಕ್ರಮೇಣ ಕಡಿಮೆಯಾಗು ತ್ತಿರುವ ಲಕ್ಷಣ ಕಾಣಿಸುತ್ತಿದೆ.

Keshava Prasad B Column: ಎನ್‌ಜಿಒಗಳ ನಿಧಿಯ ಮೂಲ-ಬಳಕೆ ಮೇಲೆ ನಿಗಾ ಏಕೆ ?

ಎನ್‌ಜಿಒಗಳ ನಿಧಿಯ ಮೂಲ-ಬಳಕೆ ಮೇಲೆ ನಿಗಾ ಏಕೆ ?

ಮೇಧಾ ಪಾಟ್ಕರ್ ನೇತೃತ್ವದ ‘ನರ್ಮದಾ ಬಚಾವೊ ಆಂದೋಲನ’ ಮತ್ತು ನಾನಾ ಎನ್ʼಜಿಒಗಳು ಇದರ ವಿರುದ್ಧ ತೀವ್ರ ಹೋರಾಟ ನಡೆಸಿದವು. ಈ ಆಂದೋಲನಕ್ಕೆ ಸ್ಥಳೀಯ ನಿರಾಶ್ರಿತರ ಕಾಳಜಿ ಯ ಮುಖವಿದ್ದರೂ, ಇದರ ಹಿಂದೆ ಅಂತಾರಾಷ್ಟ್ರೀಯ ಎನ್‌ಜಿಒಗಳ ಜಾಲವಿತ್ತು. ಅಮೆರಿಕ ಮತ್ತು ಯುರೋಪ್‌ನ ಕೆಲವು ಪ್ರತಿಷ್ಠಿತ -ಫೌಂಡೇಶನ್ʼಗಳು ಹಾಗೂ ಸಂಸ್ಥೆಗಳಿಂದ ದೊಡ್ಡ ಪ್ರಮಾಣ ದಲ್ಲಿ ವಿದೇಶಿ ನಿಧಿ ಹರಿದು ಬರುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದವು.

Keshava Prasad B Column: ಬ್ರಿಟನ್‌ ಜತೆ ಭಾರತ ಒಪ್ಪಂದ, ಮೊದಲ ದಿನವೇ ರಫ್ತು ಸಾವಿರ ಟನ್!

ಬ್ರಿಟನ್‌ ಜತೆ ಭಾರತ ಒಪ್ಪಂದ, ಮೊದಲ ದಿನವೇ ರಫ್ತು ಸಾವಿರ ಟನ್!

ಉಭಯ ದೇಶಗಳು ಈ ಒಪ್ಪಂದದ ಮೂಲಕ 2030ರ ವೇಳೆಗೆ ತಮ್ಮ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌'ಗೆ ಏರಿಸುವ ಗುರಿಯನ್ನು ಹೊಂದಿವೆ. ಭಾರತೀಯ ರಫ್ತುದಾರರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಲು ಸಹಾಯ ಮಾಡುತ್ತದೆ ಮತ್ತು ಭಾರತದ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಹೆಚ್ಚಿನ ವೇಗ ನೀಡಲಿದೆ.

Keshava Prasad B Column: ಇರಾನ್ ಯುದ್ಧ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆಯೇ?

ಇರಾನ್ ಯುದ್ಧ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆಯೇ?

ಉಭಯ ದೇಶಗಳ ನಡುವಿನ ಪರಸ್ಪರ ನಂಬಿಕೆಯು ಸಂಪೂರ್ಣವಾಗಿ ನಶಿಸಿದೆ. ಇರಾನ್ ತನ್ನ ಪರಮಾಧಿಕಾರ ಮತ್ತು ತೈಲ ಮಾರಾಟದ ಮೇಲಿನ ನಿರ್ಬಂಧಗಳ ಬಗ್ಗೆ ಹಠ ಹಿಡಿದಿದೆ. ಅಮೆರಿಕ, ಇರಾನ್‌ನ ‘ಪರಮಾಣು ಮಹತ್ವಾಕಾಂಕ್ಷೆ’ ಮತ್ತು ‘ಹೊರ್ಮುಜ್ ಜಲಸಂಧಿಯ ಮೇಲೆ ಹಿಡಿತ’ ಸಾಧಿಸುವ ಪ್ರಯತ್ನವನ್ನು ತನ್ನ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು ಪರಿಗಣಿಸಿದೆ.

Keshava Prasad B Column: ಕೋಟ್ಯಧಿಪತಿಯಾಗುವುದು ತೀರಾ ಅಸಾಧ್ಯ ಮಾತೇನಲ್ಲ!

ಕೋಟ್ಯಧಿಪತಿಯಾಗುವುದು ತೀರಾ ಅಸಾಧ್ಯ ಮಾತೇನಲ್ಲ!

ಇಂದು ರೂ.1 ಕೋಟಿ ಎಂದರೆ ದೊಡ್ಡ ಮೊತ್ತವಾಗಿ ಕಾಣಬಹುದು. ಆದರೆ ಮುಂದಿನ 15-20 ವರ್ಷ ಗಳಲ್ಲಿ ಹಣದುಬ್ಬರದಿಂದಾಗಿ ಇದರ ಮೌಲ್ಯ ಕಡಿಮೆಯಾಗುತ್ತದೆ. ಆದ್ದರಿಂದ, ಕೇವಲ ರೂ.1 ಕೋಟಿ ಸಂಖ್ಯೆಯನ್ನು ಗುರಿಯಾಗಿಸದೆ, ನಿವೃತ್ತಿಯ ನಂತರವೂ ಜೀವನಶೈಲಿಯನ್ನು ಕಾಪಾಡಿಕೊಳ್ಳಬಲ್ಲಷ್ಟು ದೊಡ್ಡ ಮೊತ್ತವನ್ನು ಗುರಿಯಾಗಿಸಿಕೊಳ್ಳಬೇಕು.

Keshava Prasad B Column: ಬೆಂಗಳೂರಿನಲ್ಲಿ ಟೆಕ್ಕಿ ಸಂಬಳಕ್ಕೆ ಸಮಾನವಾಗಿ ಗಳಿಸಬಲ್ಲ ಪ್ಲಂಬರ್!

ಬೆಂಗಳೂರಿನಲ್ಲಿ ಟೆಕ್ಕಿ ಸಂಬಳಕ್ಕೆ ಸಮಾನವಾಗಿ ಗಳಿಸಬಲ್ಲ ಪ್ಲಂಬರ್!

ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಆರಂಭಿಕ ಘಟ್ಟದಲ್ಲಿ ವರ್ಷಕ್ಕೆ ಸರಾಸರಿ 4 ಲಕ್ಷದಿಂದ 7 ಲಕ್ಷ (ಅಂದರೆ ತಿಂಗಳಿಗೆ ಸುಮಾರು 35,000 ದಿಂದ 60,000 ರುಪಾಯಿ) ಗಳಿಸಿದರೆ, ಕಠಿಣ ಪರಿಶ್ರಮ ಮತ್ತು ವ್ಯಾಪಾರ ಚಾತುರ್ಯ ಇರುವ ಒಬ್ಬ ಎಲೆಕ್ಟ್ರೀಶಿಯನ್, ಪ್ಲಂಬರ್ ಅಥವಾ ಪಕೋಡಾ ಮಾರಾಟಗಾರರು ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಗಳಿಸಬಲ್ಲರು

Keshava Prasad B Column: ಮೋದಿಯವರ ಮುಂದಿನ ಟಾರ್ಗೆಟ್‌ ವಿಕಸಿತ ಭಾರತ

Keshava Prasad B Column: ಮೋದಿಯವರ ಮುಂದಿನ ಟಾರ್ಗೆಟ್‌ ವಿಕಸಿತ ಭಾರತ

ದೇಶದಲ್ಲಿ ಒಟ್ಟಾರೆ ವಿದೇಶಿ ಹೂಡಿಕೆ ಪ್ರಮಾಣವು ಸುಮಾರು 95 ಲಕ್ಷ ಕೋಟಿ ರೂಪಾಯಿಗಳನ್ನು (1 ಟ್ರಿಲಿಯನ್ ಡಾಲರ್) ದಾಟಿದ್ದು, ಜಾಗತಿಕ ಹೂಡಿಕೆದಾರರಿಗೆ ಭಾರತ ನೆಚ್ಚಿನ ತಾಣವಾಗಿದೆ. ನವೀಕರಿಸ ಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಬೆಳೆದಿದೆ. ಸೌರಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ.

Stock Market: ಇರಾನ್‌ ಯುದ್ಧ ಸಮಾಪ್ತಿ ಎಫೆಕ್ಟ್‌; ಸೆನ್ಸೆಕ್ಸ್‌ 736 ಅಂಕ ಜಿಗಿತ

ಇರಾನ್‌ ಯುದ್ಧ ಸಮಾಪ್ತಿ ಎಫೆಕ್ಟ್‌; ಸೆನ್ಸೆಕ್ಸ್‌ 736 ಅಂಕ ಜಿಗಿತ

Share Market: ಅಮೆರಿಕ- ಇರಾನ್‌ ನಡುವೆ ಶಾಂತಿ ಒಪ್ಪಂದ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಗಣನೀಯ ಚೇತರಿಕೆ ದಾಖಲಿಸಿತು. ಸೆನ್ಸೆಕ್ಸ್‌ 736 ಅಂಕ ಗಳಿಸಿ 76,264ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 231 ಅಂಕ ಗಳಿಸಿ 23,853ಕ್ಕೆ ಸ್ಥಿರವಾಯಿತು.

Keshava Prasad B Column: ನೆಹರೂ-ಮೋದಿ ಆರ್ಥಿಕ ನೀತಿ: ನಮಗೀಗ ಯಾವುದಗತ್ಯ ?

ನೆಹರೂ-ಮೋದಿ ಆರ್ಥಿಕ ನೀತಿ: ನಮಗೀಗ ಯಾವುದಗತ್ಯ ?

ಮೋದಿನಾಮಿಕ್ಸ್ ಎಂಬುದು ಆರ್ಥಿಕ ವಿವೇಚನೆ ಮತ್ತು ಕಲ್ಯಾಣ ನೀತಿಗಳ ಮಿಶ್ರಣ ವಾಗಿದೆ. ರಾಜಕೀಯವಾಗಿ ಇದರ ಮೇಲೆ ಅನೇಕ ಅಪಪ್ರಚಾರಗಳು ನಡೆದರೂ, ವಾಸ್ತವದಲ್ಲಿ ಇದು ಭಾರತದ ಮ್ಯಾಕ್ರೋ-ಎಕನಾಮಿಕ್ ಸ್ಥಿರತೆಯನ್ನು ಬಲಪಡಿಸಿದೆ. ಆದರೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಗ್ರಾಮೀಣ ಭಾಗದ ಆರ್ಥಿಕ ಒತ್ತಡ ಮತ್ತು ಯುವಕ ರಿಗೆ ಗುಣಮಟ್ಟದ ಉದ್ಯೋಗ ಸೃಷ್ಟಿಯ ಸವಾಲುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸರಕಾರ ಇನ್ನೂ ಶ್ರಮಿಸಬೇಕಾಗಿದೆ.

Keshava Prasad B Column: ಮೋದಿಯುಗದಲ್ಲಿ ಲಾಭದ ಹಳಿಗೆ ಮರಳಿದ ಸಾರ್ವಜನಿಕ ಬ್ಯಾಂಕ್‌ʼ !

ಮೋದಿಯುಗದಲ್ಲಿ ಲಾಭದ ಹಳಿಗೆ ಮರಳಿದ ಸಾರ್ವಜನಿಕ ಬ್ಯಾಂಕ್‌ʼ !

ಬ್ಯಾಂಕ್‌ಗಳಿಗೆ ಸಾಲ ವಸೂಲಾತಿ ಸಾಧ್ಯವಾಗದೆ, ಅವುಗಳ ಬ್ಯಾಲೆನ್ಸ್ ಶೀಟ್ ಹಾಳಾಗಿತ್ತು. ಇದನ್ನು ಟ್ವಿನ್ ಬ್ಯಾಲೆನ್ಸ್ ಶೀಟ್ ಸಮಸ್ಯೆ ಎನ್ನುತ್ತಾರೆ. ಇದರ ಪರಿಣಾಮವಾಗಿ ಕಂಪನಿಗಳ ಬಳಿ ಹಣವಿರಲಿಲ್ಲ. ಬ್ಯಾಂಕುಗಳ ಬಳಿ ಸಾಲ ಕೊಡಲು ಹಣವಿರಲಿಲ್ಲ. ಹೀಗಾಗಿ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಸಂಪೂರ್ಣ ನಿಂತು ಹೋಯಿತು.

Keshava Prasad B Column: ತ್ರಿವಳಿ ಸವಾಲಿನ ನಡುವೆಯೂ ಬೆಳೆಯುತ್ತಿದೆ ಭಾರತದ ಆರ್ಥಿಕತೆ !

ತ್ರಿವಳಿ ಸವಾಲಿನ ನಡುವೆಯೂ ಬೆಳೆಯುತ್ತಿದೆ ಭಾರತದ ಆರ್ಥಿಕತೆ !

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಭಾರತದ ಆರ್ಥಿಕ ಬೆಳವಣಿಗೆಗೆ ಎದುರಾಗಿರುವ ಸವಾಲುಗಳು ಮತ್ತು ಇಕಾನಮಿಯ ಬಲಾಬಲಗಳ ಬಗ್ಗೆ ಮಾತನಾಡಿದ್ದಾರೆ. ಜತೆಗೆ ‘ಆರ್ಥಿಕತೆ ಕುಸಿಯುತ್ತಿದೆ, ಎಲ್ಲವೂ ಕೈಮೀರಿ ಹೋಗುತ್ತಿದೆ’ ಎಂದು ಬಿಂಬಿಸುತ್ತಿರುವ ನಕಾರಾತ್ಮಕವಾದಿ‌ ಗಳಿಗೆ, ‘ನಿರಾಶಾದಾಯಕ ಮತ್ತು ಭೀತಿ ಹುಟ್ಟಿಸುವ ಅಂತೆ-ಕಂತೆಗಳು ಅಗತ್ಯವಿಲ್ಲ’ ಎಂದು ಖಡಕ್ ಆಗಿಯೇ ಹೇಳಿದ್ದಾರೆ.

Keshava Prasad B Column: ತೈಲದ ಮೇಲೆ ಯುದ್ಧದ ಪರಿಣಾಮ ತಡೆಯಲು ಸಾಧ್ಯವೇ ?!

ತೈಲದ ಮೇಲೆ ಯುದ್ಧದ ಪರಿಣಾಮ ತಡೆಯಲು ಸಾಧ್ಯವೇ ?!

‘ಇರಾನ್- ಅಮೆರಿಕ ಏನಾದರೂ ಮಾಡಿಕೊಂಡಿರಲಿ, ಆದ್ರೆ ನಮಗೆ ತೈಲ ದರ, ಎಲ್ಪಿಜಿ ಸಮಸ್ಯೆ ತಂದು ಹಾಕಿದ್ರ...’ ಎಂದು ಬೇಸರದ ನಿಟ್ಟುಸಿರು ಬಿಟ್ಟವರೆಷ್ಟೋ ಮಂದಿ. ಈ ಯುದ್ಧದ ಬಿಸಿನೆಸ್‌ ನಿಂದ ತೈಲದ ಆರ್ಥಿಕತೆಯನ್ನು ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವೇ? ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಆದರೆ ಅದು ಸಾಧ್ಯವಿಲ್ಲದಿದ್ದರೂ, ಹಲವಾರು ದೇಶಗಳು ಭಾಗಶಃ ಬೇರ್ಪಡಿಸಲು ನಿರಂತರ ಪ್ರಯತ್ನವನ್ನು ಮುಂದುವರಿಸಿವೆ!

Keshava Prasad B Column: ಇಂಧನ ಭದ್ರತೆಗೆ ಭಾರತದ ದಿಟ್ಟ ಸಾಹಸಗಳ ಬಲ್ಲಿರಾ ?!

ಇಂಧನ ಭದ್ರತೆಗೆ ಭಾರತದ ದಿಟ್ಟ ಸಾಹಸಗಳ ಬಲ್ಲಿರಾ ?!

ಭಾರತದಲ್ಲಿ 2026ರ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ 8.3 ಪರ್ಸೆಂಟ್‌ಗೆ ಏರಿಕೆಯಾಗಿದೆ. ಕಚ್ಚಾ ತೈಲ ದರ ಏರಿಕೆಯೇ ಇದಕ್ಕೆ ಪ್ರಮುಖ ಕಾರಣ. ಉತ್ಪಾದನೆಯ ವೆಚ್ಚ ದಿನೇದಿನೇ ಜಾಸ್ತಿಯಾಗು ತ್ತಿದೆ. ಲಾಜಿಸ್ಟಿಕ್ಸ್ ದುಬಾರಿಯಾಗುತ್ತಿದೆ. ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಬ್ರೆಂಟ್ ಕಚ್ಚಾ ತೈಲ ದರ 70‌ ಡಾಲರ್‌ನಿಂದ 105 ಡಾಲರ್‌ಗೆ ಜಿಗಿದಿದೆ.

Stock Market: ಸೆನ್ಸೆಕ್ಸ್‌ 1,500 ಅಂಕ ಭಾರಿ ಪತನ; ಐಟಿ ಸ್ಟಾಕ್ಸ್‌ ತಲ್ಲಣ: 4 ದಿನಗಳಲ್ಲಿ 17 ಲಕ್ಷ ಕೋಟಿ ರುಪಾಯಿ ನಷ್ಟ

ಸೆನ್ಸೆಕ್ಸ್‌ 1,500 ಅಂಕ ಭಾರಿ ಪತನ; ಐಟಿ ಸ್ಟಾಕ್ಸ್‌ ತಲ್ಲಣ

ಸೆನ್ಸೆಕ್ಸ್‌ ಮತ್ತು ನಿಫ್ಟಿ ಮಂಗಳವಾರ ಮತ್ತೆ ಕುಸಿತಕ್ಕೀಡಾಗಿದೆ. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ 1,500 ಅಂಕ ಕುಸಿತಕ್ಕೀಡಾಗಿ 74,559ಕ್ಕೆ ಸ್ಥಿರವಾಯಿತು. ನಿಫ್ಟಿ 381 ಅಂಕ ಕಳೆದುಕೊಂಡು 23,429ಕ್ಕೆ ಇಳಿಯಿತು. ಐಟಿ, ರಿಯಾಲ್ಟಿ ಸ್ಟಾಕ್ಸ್‌ ಗಣನೀಯ ಕುಸಿತಕ್ಕೀಡಾಯಿತು.

Keshava Prasad B Column: ಚುನಾವಣೆ ಗೆಲ್ಲಲು ಆಮಿಷಗಳ ಕಂತೆ, ಯಾರಿಗೂ ಇಲ್ಲ ಚಿಂತೆ !

ಚುನಾವಣೆ ಗೆಲ್ಲಲು ಆಮಿಷಗಳ ಕಂತೆ, ಯಾರಿಗೂ ಇಲ್ಲ ಚಿಂತೆ !

ಭಾರತದ ರಾಜಕೀಯ ರಂಗದಲ್ಲಿ ಉಚಿತ ಕೊಡುಗೆಗಳು ಮತ್ತು ಆಮಿಷಗಳನ್ನು ಘೋಷಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಸುಲಭವಾಗಿ ಹೇಗೆ ಏರಬಹುದು? ಎಂಬುದಕ್ಕೆ ಕಳೆದ ಹಲವು ದಶಕ‌ ಗಳಿಂದಲೂ ಪ್ರಯೋಗಶಾಲೆಯಂತಿರುವ ರಾಜ್ಯ ಯಾವುದಾದರೂ ಇದ್ದರೆ ಅದು ನಿಸ್ಸಂದೇಹವಾಗಿ ತಮಿಳುನಾಡು.

Keshava Prasad B Column: ಬ್ಯಾಂಕ್‌ ಸೇವೆ ಹೇಗಿರಬೇಕು ? ಜನ ಯಾವುದನ್ನು ಮರೆಯುವಂತಿಲ್ಲ?

ಬ್ಯಾಂಕ್‌ ಸೇವೆ ಹೇಗಿರಬೇಕು ? ಜನ ಯಾವುದನ್ನು ಮರೆಯುವಂತಿಲ್ಲ?

ಸಹೋದರಿಯ ಬ್ಯಾಂಕ್ ಖಾತೆಯಲ್ಲಿ ನಾಮಿನಿಯ ಹೆಸರನ್ನು ಸರಿಯಾಗಿ ನಮೂದಿಸಿರ ಲಿಲ್ಲ. ಹೀಗಾಗಿ ಬ್ಯಾಂಕ್ ವಿಳಂಬಿಸಿತ್ತು. ಮರಣ ಪ್ರಮಾಣಪತ್ರದ ಅಗತ್ಯವೂ ಇತ್ತು. ಆದರೆ, ಇದರಿಂದ ಹತಾಶೆಗೀಡಾದ ಜಿತು ಮುಂಡಾ, ಅಸ್ಥಿಪಂಜರವನ್ನೇ ತಂದಿದ್ದ.ಬ್ಯಾಂಕುಗಳು ಗ್ರಾಹಕರೊಂದಿಗೆ ವ್ಯವಹರಿಸುವಾಗ ಆಐ ರೂಪಿಸಿರುವ ‘ಗ್ರಾಹಕ ಸೇವಾ ಗುಣಮಟ್ಟ’ದ ನಿಯಮ ಗಳನ್ನು ಪಾಲಿಸಬೇಕಾಗುತ್ತದೆ.

Keshava Prasad B Column: ಭಾರತದ ಜಿಡಿಪಿ 4ರಿಂದ ಕ್ಕೆ ಕುಸಿದಿದ್ದೇಕೆ, ಆತಂಕಪಡಬೇಕೆ ?

ಭಾರತದ ಜಿಡಿಪಿ 4ರಿಂದ ಕ್ಕೆ ಕುಸಿದಿದ್ದೇಕೆ, ಆತಂಕಪಡಬೇಕೆ ?

ಐಎಂಎಫ್ ವರದಿಯನ್ನು ಕೆಲವರು ತಿರುಚಿ ಮನ‌ ಬಂದಂತೆ ವ್ಯಾಖ್ಯಾನಿಸುತ್ತಾರೆ. 2026ರಲ್ಲಿ ಬಾಂಗ್ಲಾ ದೇಶದ ತಲಾ ಆದಾಯವು ಭಾರತದ ತಲಾ ಆದಾಯಕ್ಕಿಂತ ಹೆಚ್ಚಾಗುತ್ತಿದೆ ಎಂಬುದು ಅಂಥ ಕುತ್ಸಿತ ವಾದಗಳಂದು. ಹಾಗಾದರೆ ವಾಸ್ತವವೇನು? 206ರಲ್ಲಿ ಭಾರತದ ತಲಾ ಆದಾಯ ಸುಮಾರು 2812 ಡಾಲರ್(2.64 ಲಕ್ಷ ರುಪಾಯಿ) ಹಾಗೂ ಬಾಂಗ್ಲಾದೇಶದ್ದು 2911 ಎಂದು ಅಂದಾಜಿಸಲಾಗಿದೆ.

Loading...