ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shivaprasad A Column: ಬಿಕ್ಕಟ್ಟುಗಳ ನಿರ್ವಹಣೆಯೇ ಸದ್ಯದ ಸವಾಲು

ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ ಮತ್ತು ಸಾಲಗಳ ಬೆಳವಣಿಗೆಯಲ್ಲಿನ ಕುಸಿತವು ಕಳವಳ ಕಾರಿ ಕ್ಷೇತ್ರಗಳಾಗಿವೆ. ಖಾಸಗಿ ಮತ್ತು ಸಾರ್ವಜನಿಕ ಸಾಲದ ಹೊರೆಗಳು ಹೆಚ್ಚುತ್ತಿವೆ. ದೇಶದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುವ ಗ್ರಾಹಕ ಖರ್ಚುವೆಚ್ಚಗಳು ನಿಧಾನ ಗತಿಯಲ್ಲಿ ಸಾಗಿದೆ. ವೈಯಕ್ತಿಕ ಗೃಹ ಉಳಿತಾಯಗಳಲ್ಲಿನ ಇಳಿಕೆಯ ಹಾದಿ ಅಡೆತಡೆಯಿಲ್ಲದೆ ಮುಂದುವರೆದಿದೆ.

ಬಿಕ್ಕಟ್ಟುಗಳ ನಿರ್ವಹಣೆಯೇ ಸದ್ಯದ ಸವಾಲು

Ashok Nayak Ashok Nayak Aug 20, 2025 10:31 AM

ಸುಂಕ ಸಮರ

ಶಿವಪ್ರಸಾದ್‌ ಎ.

ಇತ್ತೀಚೆಗೆ, ಭಾರತದ ಆರ್ಥಿಕತೆಯ ಕುರಿತಾದ ಚರ್ಚೆಯು - ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರದ ಮೇಲೆ ದಂಡನಾತ್ಮಕ ಸುಂಕಗಳನ್ನು ವಿಧಿಸುತ್ತಿರುವ ನಿರ್ಧಾರದಿಂದ ಉಂಟಾ ಗುವ ಸವಾಲುಗಳ ಮೇಲೆ ಕೇಂದ್ರೀಕೃತವಾಗಿದೆ. ಭಾರತದ ಆರ್ಥಿಕತೆಗೆ - ಈ ಸುಂಕಗಳಿಂದ ಉಂಟಾ ಗುವ ಹೊಡೆತಗಳಿಂದ ಅಪಾಯವಿದೆಯಾದ್ದರೂ, ನಮ್ಮ ರಾಷ್ಟ್ರದ ಬಡವರಿಗೆ ನೆರವು ನೀಡುವಂಥ ದೇಶೀಯ ಅಗತ್ಯಗಳನ್ನು ಪೂರೈಸುವತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಲು ರಾಜಕಾರಿಣಿಗಳಿಗೆ ಪ್ರೇರಣೆ ನೀಡಬಹುದು. ‌

ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್, ಅಮೆರಿಕದ ಸುಂಕಗಳಿಂದಾಗಿ ಏರ್ಪಡುವ ಪ್ರತಿಕೂಲ ಪರಿಣಾಮಗಳು ವಾಸ್ತವವಾಗಿ ಕೇವಲ ಒಂದು ಅಥವಾ ಎರಡು ತ್ರೈಮಾಸಿಕ ಗಳವರೆಗೆ ಮಾತ್ರ ಇರುತ್ತವೆ ಎಂದು ಹಳಿದ್ದಾರೆ. ಇದು ರಫ್ತು ವಲಯದ ಮೇಲೆ ಪರಿಣಾಮ ಬೀರುತ್ತದೆ, ಆದರೆ ಭಾರತದ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಯ ಮೇಲೆ ಹೆಚ್ಚಿನ ಪ್ರಭಾವ ಆಗಲಾರದು - 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾಗೇಶ್ವರನ್ ಅವರ ಅಭಿಪ್ರಾಯದಲ್ಲಿ, ರಾಷ್ಟ್ರೀಯ ಆರ್ಥಿಕತೆಯ ಮುಂದಿರುವ ಹೆಚ್ಚು ಭೀಕರ ಬಿಕ್ಕಟ್ಟುಗಳು ಬೇರೆಡೆಯೇ ಗಮನಾರ್ಹವಾಗಿವೆ.

ಮುಖ್ಯ ಆರ್ಥಿಕ ಸಲಹೆಗಾರರ ಕಳವಳಗಳು ತಪ್ಪಾಗಿಲ್ಲ. ಆರ್ಥಿಕತೆಯಲ್ಲಿ ಮಂದಗತಿಯ ಲಕ್ಷಣ ಗಳು ಈಗಾಗಲೇ ಕಂಡುಬರುತ್ತಿವೆ. ವಾಸ್ತವವಾಗಿ, ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ 6.5% ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ, ಇದು 2023-24ರಲ್ಲಿ ಸಾಧಿಸಿದ 8.2% ಬೆಳವಣಿಗೆಗೆ ಹೋಲಿಸಿದರೆ ತೀವ್ರ ಕುಸಿತವಾಗಿದೆ.

ಇದನ್ನೂ ಓದಿ: Shivaprasad A Column: ಕೃತಕ ಬುದ್ದಿಮತ್ತೆಯಿಂದ ಕಾರ್ಮಿಕ ಮಾರುಕಟ್ಟೆಗೆ ಆತಂಕವಿದೆಯೇ ?

ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ ಮತ್ತು ಸಾಲಗಳ ಬೆಳವಣಿಗೆಯಲ್ಲಿನ ಕುಸಿತವು ಕಳವಳಕಾರಿ ಕ್ಷೇತ್ರಗಳಾಗಿವೆ. ಖಾಸಗಿ ಮತ್ತು ಸಾರ್ವಜನಿಕ ಸಾಲದ ಹೊರೆಗಳು ಹೆಚ್ಚುತ್ತಿವೆ. ದೇಶದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುವ ಗ್ರಾಹಕ ಖರ್ಚುವೆಚ್ಚಗಳು ನಿಧಾನ ಗತಿಯಲ್ಲಿ ಸಾಗಿದೆ. ವೈಯಕ್ತಿಕ ಗೃಹ ಉಳಿತಾಯಗಳಲ್ಲಿನ ಇಳಿಕೆಯ ಹಾದಿ ಅಡೆತಡೆಯಿಲ್ಲದೆ ಮುಂದುವರೆದಿದೆ.

ಇದಲ್ಲದೆ, ಕೃತಕ ಬುದ್ಧಿಮತ್ತೆಯ ಉಪಯೋಗ ವ್ಯಾಪಕವಾಗಿ ಏರಿದೆ, ಆರ್ಥಿಕ ಬೇಡಿಕೆ ಕಡಿಮೆ ಯಾಗುತ್ತಿರುವುದು ಮತ್ತು ಕೈಗಾರಿಕೆಗೆ ಅಗತ್ಯವಿರುವ ಖನಿಜಗಳ ಕೊರತೆಯು ಒಂದು ಅಭಿಪ್ರಾಯ ದ ಪ್ರಕಾರ, ಉದ್ಯೋಗ ಸೃಷ್ಟಿ, ಉತ್ಪಾದನೆ ಮತ್ತು ಇತರ ಅಂಶಗಳ ಮೇಲೆ ಹೊರೆಯಾಗುತ್ತಿದೆ.

ದೇಶೀಯ ಆರ್ಥಿಕತೆಗೆ ಇಂಬುಗೊಡಲು ಸರ್ಕಾರದ ತುರ್ತು ಹಸ್ತಕ್ಷೇಪದ ಅಗತ್ಯವಿದೆ ಎಂಬುದು ನಿರ್ವಿವಾದ. ಸಮಸ್ಯೆಗಳ ಅರಿವು ಸರ್ಕಾರಕ್ಕಿದೆ ಮತ್ತು ಅನುಗುಣವಾದ ನೀತಿ ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸಲು ಪ್ರಯತ್ನಿಸುತ್ತಿದೆ ಎಂದು ನಾಗೇಶ್ವರನ್ ಹೇಳಿದ್ದಾರೆ. ವೈಯಕ್ತಿಕ ಮೂಲಭೂತ ಆದಾಯವನ್ನು ಆರ್ಥಿಕ ಸಹಾಯವಾಗಿ ನೀಡುವ ಪರಿಕಲ್ಪನೆಯು ಎಲ್ಲರಿಗೂ ತಿಳಿದಿದೆ. ಆದರೆ ಎಲ್ಲರನ್ನೂ ಒಳಗೊಳ್ಳುವಂತೆ ಅದನ್ನು ಮಾಡುವುದು ಮತ್ತು ಹಣಕಾಸಿನ ಸುಸ್ಥಿರ ಮೂಲ ಗಳನ್ನು ಕಂಡುಹಿಡಿಯುವುದು ಕಷ್ಟಕರವಾದ ಕೆಲಸ. ಐಷಾರಾಮಿ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಈಗಷ್ಟೇ ಹೆಚ್ಚಿಸಲಾಗಿದೆ.

ಗಮನಿಸಬೇಕಾದ ವಿಷಯವೆಂದರೆ, ಭಾರತವು ಈಗಾಗಲೇ ನೇರ ನಗದು ವರ್ಗಾವಣೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸರ್ಕಾರಿ ಕಲ್ಯಾಣ ಯೋಜನೆಗಳ ದೀರ್ಘ ಪಟ್ಟಿಯನ್ನು ಹೊಂದಿದೆ, ಆದರೂ ಅವೆಲ್ಲವೂ ಪೂರ್ವನಿರ್ಧರಿತ ಉದ್ದೇಶಕ್ಕಾಗಿ ಸೀಮಿತವಾಗಿವೆ. ನೇರ ನಗದು ವರ್ಗಾವಣೆ ಯನ್ನು ಸ್ವೀಕರಿಸುವವರ ಬ್ಯಾಂಕ್ ಖಾತೆಗಳನ್ನು ತೆರೆಯುವ ಗುರಿ ಹಾಗೂ ಹಣ ವಿತರಣೆಯ ಮೂಲಸೌಕರ್ಯಗಳ ಒದಗಿಸುವಿಕೆಯ ಕಾರ್ಯಗಳು ಜಾರಿಯಲ್ಲಿವೆ.

ಅಂಥ ಕಾರ್ಯವಿಧಾನದ ಮೂಲಕ ವ್ಯರ್ಥ ಸೋರಿಕೆಗಳು ಮತ್ತು ಅಸಮರ್ಥತೆಯನ್ನು ಕಡಿಮೆ ಮಾಡುವ ಎಲ್ಲ ಪ್ರಯತ್ನಗಳೂ ಜಾರಿಯಲ್ಲಿವೆ. ಆದ್ದರಿಂದ, ಹಣಕಾಸು ಮತ್ತು ಪರಿಷ್ಕೃತ ಗುರಿ ಗುಂಪಿಗೆ ಸ೦ಬ೦ಧಿಸಿದ೦ತೆ ಅಸ್ತಿತ್ವದಲ್ಲಿರುವ ಈ ಕಲ್ಯಾಣ ಯೋಜನೆಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ.

ಉದಾಹರಣೆಗೆ, ಆದಾಯ ವಿತರಣೆಯ ಕೆಳಭಾಗದ ಅಂಚಿನಲ್ಲಿರುವ 20% ಜನರಿಗೆ ಆದ್ಯತೆ ನೀಡಬಹುದು. ಈ ಉದಾತ್ತ ಉದ್ದೇಶವನ್ನು ಸಾಧಿಸುವಲ್ಲಿ ಸಂಘರ್ಷದ ರಾಜಕೀಯ ಆದ್ಯತೆಗಳು ಅಡ್ಡಿಯಾಗಬಾರದು. ಎಂಎನ್‌ಆರ್‌ಜಿಎ ಕುರಿತು ಕೇಂದ್ರ ಮತ್ತು ಬಂಗಾಳ ಸರ್ಕಾರದ ನಡುವಿನ ಭಿನ್ನಾಭಿಪ್ರಾಯಗಳು ಇದಕ್ಕೆ ಒಂದು ಉದಾಹರಣೆ.

ಆಡಳಿತ, ಕಲ್ಯಾಣ ಮತ್ತು ರಾಷ್ಟ್ರೀಯ ಆರ್ಥಿಕತೆಯು ಮಾನವತಾವಾದದ ತತ್ವಗಳ ಆಧಾರದ ಮೇಲೆ ಅವಲಂಬಿತವಾಗಿವೆ. ಆರ್ಥಿಕ ಬೆಳವಣಿಗೆಯ ಅನ್ವೇಷಣೆಯಲ್ಲಿ ಈ ಉದ್ದೇಶವನ್ನು ಕೈಬಿಡ ರದು. ಭಾರತವು ತೀವ್ರ ಮತ್ತು ಹದಗೆಡುತ್ತಿರುವ ಆರ್ಥಿಕ ಅಸಮಾನತೆಯನ್ನು ಎದುರಿಸುತ್ತಿದೆ ಎಂಬುದನ್ನು ನಿರಾಕರಿಸಲಾಗುವುದಿಲ್ಲ.

ಒಮ್ಮೊಮ್ಮೆ, ಸರ್ಕಾರವು ಈ ವಿಷಯವನ್ನು ಸುಲಭವಾಗಿ ತಳ್ಳಿಹಾಕುತ್ತದೆ ಆದರೆ ಸ್ವತಂತ್ರ ಆರ್ಥಿಕ ಸಂಶೋಧನೆಗಳು ಪದೇ ಪದೇ ಇದರೆಡೆಗೆ ಗಮನ ಸೆಳೆದಿವೆ. ಉದಾಹರಣೆಗೆ, ಕಳೆದ ವರ್ಷ ಡಿಸೆಂಬರ್ ನಲ್ಲಿ ಥಾಮಸ್ ಪಿಕೆಟ್ಟಿ ಸೇರಿದಂತೆ ಪ್ರಮುಖ ಅರ್ಥಶಾಸ್ತ್ರಜ್ಞರು ಬರೆದ ಒಂದು ಪ್ರಬಂಧ - ಆಕ್ಸ್ಯಾಮ್ ಈ ಹಿಂದೆ ಮಾಡಿದ ಸಂಶೋಧನೆಯನ್ನು ಪುಷ್ಟೀಕರಿಸುತ್ತದೆ.

2022-23ರಲ್ಲಿ, ಭಾರತದ ಜನಸಂಖ್ಯೆಯ ಅತ್ಯಂತ ಶ್ರೀಮಂತ 1% ಜನರು ರಾಷ್ಟ್ರೀಯ ಆದಾಯದ 22.6 ಅನ್ನು ನಿಯಂತ್ರಿಸಿದರು ಮತ್ತು ದೇಶದ ಒಟ್ಟು ಸಂಪತ್ತಿನ 40.1% ಅನ್ನು ಹೊಂದಿದ್ದರು, ಆದರೆ ತೀರ ಕೆಳಗಿನ 50% ಜನಸಂಖ್ಯೆಯು ರಾಷ್ಟ್ರೀಯ ಆದಾಯದ 15% ಅನ್ನು ಮಾತ್ರ ಪಡೆದು ದೇಶದ ಸಂಪತ್ತಿನ 6.4% ಅನ್ನು ಮಾತ್ರ ಹೊಂದಿತ್ತು ಎಂದು ಸ್ಪಷ್ಟವಾಗಿದೆ. ಅಂಥ ಬಲವಾದ ಅಂಕಿ ಅಂಶಗಳ ಪುರಾವೆಗಳ ಹಿನ್ನೆಲೆಯಲ್ಲಿ, ಭಾರತವು ಸಮಾನತೆಯೆಡೆಗೆ ಸಾಗುತ್ತಿದೆ ಎಂಬ ಸರ್ಕಾರದ ಹೇಳಿಕೆಯು ವಿರುದ್ಧ ದಿಕ್ಕಿಗೆ ಹೋಗುತ್ತದೆ.

ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇನ್ನೂ ಕೊನೆಯ ಮೂರನೇ ಸ್ಥಾನಗಳ ಉಳಿದಿದೆ. ಇದರ ಮೌಲ್ಯ 0.685, ಇದು ಬಾಂಗ್ಲಾದೇಶದ ಸೂಚ್ಯಂಕಕ್ಕೆ ಸಮವಾಗಿದೆ ಮತ್ತು ಇತರ ನೆರೆಯ ರಾಷ್ಟ್ರಗಳಾದ ಲಂಕಾ ಮತ್ತು ಭೂತಾನ್‌ಗಿಂತ ಕಡಿಮೆ ಮಟ್ಟದಲ್ಲಿದೆ.

ಹೆಚ್ಚುತ್ತಿರುವ ಅಸಮಾನತೆಯು ಪ್ರಗತಿಗೆ ಮತ್ತೊಂದು ಅಡಚಣೆಯಾಗಿ ಪರಿಣಮಿಸಿದೆ. ಆದಾಯ ಮತ್ತು ಲಿಂಗ ಅಸಮಾನತೆಯು ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕದ ಶ್ರೇಯಾಂಕವನ್ನು 30.7%ರಷ್ಟು ಕಡಿಮೆ ಮಾಡಿದೆಯೆಂದು ಈ ವರದಿ ತೋರಿಸುತ್ತದೆ. ನಿಜವಾದ ಅರ್ಥದಲ್ಲಿ, ಈ ಬೃಹತ್ ನಷ್ಟದಿಂದ ಭಾರತವನ್ನು ಪ್ರಗತಿಯ ಕಡೆಗೆ ಕೊಂಡೊಯ್ಯುವ ಸರ್ಕಾರದ ಲಕ್ಷ್ಯವು ಹಳಿ ತಪ್ಪಬಹುದು.

ಸಮಾನ ಸಮಾಜಕ್ಕಾಗಿ ಶ್ರಮಿಸುವ ಕ್ರಮಗಳು, ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವು ದಲ್ಲದೆ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣದಲ್ಲಿ ಮತ್ತಷ್ಟು ಸುಧಾರಣೆಗಳೊಂದಿಗೆ ಅವರು ಕಾರ್ಯಪಡೆಯಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಲಿಂಗ- ಒಳಗೊಂಡ ನೀತಿಗಳಿಂದ ಪೂರಕವಾಗಿವೆ.

ಭಾರತ ಇತ್ತೀಚೆಗೆ ಅಮೆರಿಕ, ಚೀನಾ ಮತ್ತು ಜರ್ಮನಿಯ ನಂತರ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ಮೂಲಕ ಒಂದು ಹೊಸ ಮೈಲಿಗಲ್ಲನ್ನು ಆಚರಿಸಿತು. ಇದು ಸಾಧಾರಣ ಸಾಧನೆಯಲ್ಲ, ಆದರೂ ಜೀವನ ಗುಣಮಟ್ಟ ಮತ್ತು ವೈಯಕ್ತಿಕ ಯೋಗಕ್ಷೇಮದ ವಿಷಯದಲ್ಲಿ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಂತೆಯೇ ಮುನ್ನಡೆಯಲು ಭಾರತವು ಮೈಲಿಗಳ ದಾರಿ ಯನ್ನು ಇನ್ನೂ ಕ್ರಮಿಸಬೇಕಾಗಿದೆ.

ಭಾರತವು ಯಶಸ್ವಿಯಾಗಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಆಡಳಿತ ಪಕ್ಷದ ರಾಜಕೀಯ ಪ್ರಭಾವ ಪ್ರಬಲವಾಗಿದೆ. ಜಗತ್ತನ್ನಾಳುವ ಬಲಿಷ್ಠರ ಅಂತಾರಾಷ್ಟ್ರೀಯ ವಲಯದಲ್ಲಿ ನರೇಂದ್ರ ಮೋದಿಯವರಿಗೆ ವಿಶೇಷ ಗೌರವವಿದೆ. ನೆಹರೂ-ಗಾಂಧಿ ಯುಗದ ಉದಾರವಾದಿ ಕ್ರಮ ವನ್ನು ಬದಲಿಸಿ, ಹಿಂದುತ್ವವನ್ನು ಆಧರಿಸಿದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬಲಪಡಿಸುವ ಅವರ ವಿಶಿಷ್ಟ ಕಾರ್ಯಸೂಚಿಯು ನಮ್ಮ ರಾಷ್ಟ್ರದಲ್ಲಿ ಬಲಗೊಳ್ಳುತ್ತಿದೆ.

ಹೀಗಿದ್ದರೂ, ಜಾಗತಿಕ ಬದಲಾವಣೆಯ ಗಾಳಿ ಬೀಸುತ್ತಿದೆಯಾದ್ದರಿಂದ ಭಾರತವು ಆರ್ಥಿಕ ಮತ್ತು ರಾಜತಾಂತ್ರಿಕ ಸವಾಲುಗಳನ್ನೊಳಗೊಂಡಂತೆ ಹೊಸ ಉದಯೋನ್ಮುಖ ಸವಾಲುಗಳನ್ನು ಮರು ವಿಮರ್ಶಿಸಬೇಕು. ಅಂತಾರಾಷ್ಟ್ರೀಯ ವ್ಯಾಪಾರದ ಮಾದರಿಯು ಮುಂದಿನ ದಿನಗಳಲ್ಲಿ ಗುರುತಿಸ ಲಾಗದಷ್ಟು ಬದಲಾಗುವ ಸಾಧ್ಯತೆಯಿದೆ. ಆ ಪ್ರಕ್ರಿಯೆಯಲ್ಲಿ, ಭಾರತವು ಹೊಸ ಮತ್ತು ಇಲ್ಲಿಯ ತನಕ ಪರಿಚಿತರಲ್ಲದ ವ್ಯಾಪಾರ ಪಾಲುದಾರರನ್ನು ಹುಡುಕಿಕೊಳ್ಳಬೇಕಾಗುತ್ತದೆ.

ಅನಂತರದ ಉದಾರವಾದಿ ಜಗತ್ತು ಮಿಲಿಟರಿ ಶಕ್ತಿ ಮತ್ತು ಕಾರ್ಯತಂತ್ರದ ಮೈತ್ರಿಗಳ ಹೊಸ ಕೇಂದ್ರಗಳನ್ನು ಸಹ ರಚಿಸುತ್ತದೆ. ಭಾರತ ಇದಕ್ಕೆಲ್ಲ ಹೊಂದಿಕೊಳ್ಳುತ್ತದೆಯೇ? ಹೆಚ್ಚು ವಿಶ್ವಾಸಾರ್ಹವಲ್ಲದ ಅಮೆರಿಕದ ರೆಕ್ಕೆಗಳ ಅಡಿಯಲ್ಲಿ ಉಳಿಯುವುದು ಯೋಗ್ಯವೇ? ಆಪರೇಷನ್ ಸಿಂಧೂರ್ ನಂತರ, ಭಾರತವು ಸ್ನೇಹಿತರು ಮತ್ತು ಶತ್ರುಗಳ ಹೊಸ ಪ್ರಪಂಚದ ವ್ಯತ್ಯಾಸವನ್ನು ನೋಡಿದೆ.

ಅತಿ ವೇಗದ ತಾಂತ್ರಿಕ ಬದಲಾವಣೆಯ ಜಗತ್ತಿಗೆ, ನಾವು ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತೇವೆ? ಅಂತಿಮವಾಗಿ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯ ಪ್ರಶ್ನೆಗೆ, ಹೆಚ್ಚುತ್ತಿರುವ ಅಪಾಯಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಮತ್ತು ಹೇಗೆ ವಿಪತ್ತುಗಳು ಸಂಭವಿಸುವುದನ್ನು ತಡೆಯುತ್ತೇವೆ ಎಂಬುದಕ್ಕೆ ಸರಿಯಾದ ಉತ್ತರ ಕೊಟ್ಟಾಗಲಷ್ಟೇ ನಮ್ಮ ದೇಶ ಸರಿಯಾದ ದಾರಿ ಯಲ್ಲಿ ನಡೆಯುತ್ತದೆಯೇ ಎಂದು ನಿರ್ಧಾರವಾಗುತ್ತದೆ.