ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಶೂನ್ಯದಿಂದ ಕೋಟಿಗಳ ಸಾಮ್ರಾಜ್ಯ: ಚೋಬಾನಿ ಮೊಸರಿನ ಯಶೋಗಾಥೆ

ಟರ್ಕಿಯ ಪರ್ವತ ಪ್ರದೇಶದ ಕುರುಬರ ಕುಟುಂಬದಲ್ಲಿ ಜನಿಸಿದ ಹಮ್ದಿಗೆ ಇಂಗ್ಲಿಷ್ ಭಾಷೆ ಬರುತ್ತಿರ ಲಿಲ್ಲ, ಆಹಾರ ಉದ್ಯಮದ ಅನುಭವವೂ ಇರಲಿಲ್ಲ. ಆದರೆ, ಅಮೆರಿಕನ್ನರು ತಿನ್ನುತ್ತಿದ್ದ ಸಕ್ಕರೆ ಮಿಶ್ರಿತ, ತೆಳುವಾದ ಮೊಸರಿಗಿಂತ ತನ್ನ ತಾಯಿ ಮಾಡುತ್ತಿದ್ದ ಸಾಂಪ್ರದಾಯಿಕ, ಗಟ್ಟಿಯಾದ ಮೊಸರು ಎಷ್ಟೋ ಮೇಲು ಎಂಬ ಆತ್ಮವಿಶ್ವಾಸ ಅವರಿಗಿತ್ತು.

ಶೂನ್ಯದಿಂದ ಕೋಟಿಗಳ ಸಾಮ್ರಾಜ್ಯ: ಚೋಬಾನಿ ಮೊಸರಿನ ಯಶೋಗಾಥೆ

-

ಒಂದೊಳ್ಳೆ ಮಾತು

ಅದು 2005ನೇ ಇಸವಿ. ನ್ಯೂಯಾರ್ಕ್‌ನ ನ್ಯೂ ಬರ್ಲಿನ್‌ನಲ್ಲಿ ಕ್ರ್ಯಾಫ್ಟ್‌ ಫುಡ್ಸ್ ಸಂಸ್ಥೆಗೆ ಸೇರಿದ ಒಂದು ಹಳೆಯ ಮೊಸರು ಕಾರ್ಖಾನೆ ಮುಚ್ಚಿ ಹೋಗಿತ್ತು. ಮೊಸರು ಮಾರಾಟ ನಮಗೆ ಲಾಭದಾ ಯಕವಲ್ಲ ಎಂದು ನಿರ್ಧರಿಸಿ ಆ ಬೃಹತ್ ಕಂಪನಿ ಆ ಕಾರ್ಖಾನೆಯನ್ನು ಕೈಬಿಟ್ಟಿತ್ತು. ಆದರೆ, 33 ವರ್ಷದ ಕುರ್ದಿಶ್ ಮೂಲದ ವಲಸಿಗ ಹಮ್ದಿ ಉಲುಕಾಯಾ (Hamdi Ulukaya) ಅವರಿಗೆ ಆ ಪಾಳುಬಿದ್ದ ಕಟ್ಟಡದಲ್ಲಿ ಒಂದು ಹೊಸ ಭವಿಷ್ಯ ಕಾಣಿಸಿತು.

ಟರ್ಕಿಯ ಪರ್ವತ ಪ್ರದೇಶದ ಕುರುಬರ ಕುಟುಂಬದಲ್ಲಿ ಜನಿಸಿದ ಹಮ್ದಿಗೆ ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ, ಆಹಾರ ಉದ್ಯಮದ ಅನುಭವವೂ ಇರಲಿಲ್ಲ. ಆದರೆ, ಅಮೆರಿಕನ್ನರು ತಿನ್ನುತ್ತಿದ್ದ ಸಕ್ಕರೆ ಮಿಶ್ರಿತ, ತೆಳುವಾದ ಮೊಸರಿಗಿಂತ ತನ್ನ ತಾಯಿ ಮಾಡುತ್ತಿದ್ದ ಸಾಂಪ್ರದಾಯಿಕ, ಗಟ್ಟಿಯಾದ ಮೊಸರು ಎಷ್ಟೋ ಮೇಲು ಎಂಬ ಆತ್ಮವಿಶ್ವಾಸ ಅವರಿಗಿತ್ತು.

ಬ್ಯಾಂಕಿನಿಂದ ಪಡೆದ 10 ಲಕ್ಷ ಡಾಲರ್ ಸಾಲದ ಹಣದಿಂದ ಅವರು ಆ ಮುಚ್ಚಿದ ಕಾರ್ಖಾನೆ ಯನ್ನು ಖರೀದಿಸಿದರು. ಕ್ರ್ಯಾಫ್ಟ್ ಸಂಸ್ಥೆಗೇ ಮಾಡಲಾಗದ್ದನ್ನು ನೀವೂ ಬರೆಯಬಹುದು ನೀನೇನು ಮಾಡಲು ಸಾಧ್ಯ? ನೀನೊಬ್ಬ ಕುರುಬ, ನಿನಗೇನು ಗೊತ್ತು? ಎಂದು ಎಲ್ಲರೂ ನಕ್ಕರು. ಆದರೆ ಹಮ್ದಿ ಯಾರ ಮಾತನ್ನೂ ಕೇಳಲಿಲ್ಲ.

ಇದನ್ನೂ ಓದಿ: Roopa Gururaj Column: ಶಾಂತಿಯಿಂದಲೇ ವರ್ಣಭೇದವನ್ನು ಮಣಿಸಿದ, ಶಿಕ್ಷಕಿ ಕ್ಲಾರಾ ಲೂಪರ್

ಕಾರ್ಖಾನೆ ಖರೀದಿಸಿದ ತಕ್ಷಣ ಹಮ್ದಿ ಮಾಡಿದ ಮೊದಲ ಕೆಲಸ- ಹಿಂದೆ ಕೆಲಸ ಕಳೆದುಕೊಂಡಿದ್ದ ಐದು ಜನ ಸ್ಥಳೀಯ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದು. ಟರ್ಕಿಯಿಂದ ಒಬ್ಬ ಮೊಸರು ತಜ್ಞರನ್ನು ಕರೆಸಿ, ಸುಮಾರು 18 ತಿಂಗಳುಗಳ ಕಾಲ ಹಗಲು ರಾತ್ರಿ ಶ್ರಮಿಸಿ, ಯಾವುದೇ ರಾಸಾಯನಿಕವಿಲ್ಲದ ಸಾಂಪ್ರದಾಯಿಕ ‘ಗ್ರೀಕ್ ಮೊಸರ’ನ್ನು (Greek Yogurt) ಸಿದ್ಧಪಡಿಸಿದರು. ಅದಕ್ಕೆ ‘ಚೋ ಬಾನಿ’ (Chobani) ಎಂದು ಹೆಸರಿಟ್ಟರು, ಅಂದರೆ ಕುರ್ದಿಶ್ ಭಾಷೆಯಲ್ಲಿ ‘ಕುರುಬ’ ಎಂದರ್ಥ.

ಅಕ್ಟೋಬರ್ 2007ರಲ್ಲಿ ಚೋಬಾನಿ ಮೊಸರಿನ ಮೊದಲ ಆರ್ಡರ್ ಮಾರುಕಟ್ಟೆಗೆ ಬಂದಿತು. ಯಾವುದೇ ದೊಡ್ಡ ಜಾಹೀರಾತು ಇಲ್ಲದಿದ್ದರೂ, ಅದರ ಅದ್ಭುತ ರುಚಿಯಿಂದಾಗಿ ಜನರ ಬಾಯಿಂದ ಬಾಯಿಗೆ ಹರಡಿ ಬೇಡಿಕೆ ಹೆಚ್ಚಾಯಿತು. ಆಗ ಮಾರುಕಟ್ಟೆಯ ದೈತ್ಯ ಕಂಪನಿಗಳಾದ ಡ್ಯಾನನ್ ಮತ್ತು ಯೋಫ್ಲೈಟ್‌ಗಳು ಚೋಬಾನಿಯನ್ನು ಹತ್ತಿಕ್ಕಲು ಕಾನೂನು ಸಮರ ಸಾರಿದವು.

ಸೂಪರ್ ಮಾರ್ಕೆಟ್‌ಗಳಲ್ಲಿ ಜಾಗ ಸಿಗದಂತೆ ಮಾಡಲು ಯತ್ನಿಸಿದವು. ಆದರೆ ಗುಣಮಟ್ಟದ ಮುಂದೆ ಅವರ ಯಾವುದೇ ತಂತ್ರಗಳು ಫಲಿಸಲಿಲ್ಲ. 2011ರ ವೇಳೆಗೆ, ಚೋಬಾನಿ ಅಮೆರಿಕಾದ ಮೊಸರು ಮಾರುಕಟ್ಟೆಯ ಶೇಕಡಾ 17ರಷ್ಟು ಪಾಲನ್ನು ವಶಪಡಿಸಿಕೊಂಡಿತು. 2012ರಲ್ಲಿ ವಾರ್ಷಿಕ ಆದಾಯ 100 ಕೋಟಿ ಡಾಲರ್ ದಾಟಿತು. ಇದು ಗೂಗಲ್ ಮತ್ತು ಫೇಸ್ಬುಕ್‌ಗಿಂತಲೂ ವೇಗವಾಗಿ ಬೆಳೆದ ಬ್ರ್ಯಾಂಡ್ ಎನಿಸಿಕೊಂಡಿತು. ಹಮ್ದಿ ಉಲುಕಾಯಾ ಅವರ ಇಂದಿನ ನಿವ್ವಳ ಆಸ್ತಿ ಸುಮಾರು 1100೦ ಕೋಟಿ ಡಾಲರ್.

ಹಣ ಗಳಿಸಿದ ಮೇಲೂ ಹಮ್ದಿ ತಮ್ಮ ಮಾನವೀಯತೆಯನ್ನು ಮರೆಯಲಿಲ್ಲ. 2016ರಲ್ಲಿ ಅವರು ತಮ್ಮ ಕಂಪನಿಯ ಶೇಕಡಾ 10ರಷ್ಟು ಪಾಲನ್ನು ತಮ್ಮ 2000 ಕಾರ್ಮಿಕರಿಗೆ ಹಂಚಿದರು. ನಿರಾಶ್ರಿತ ರಿಗೆ ಸಹಾಯ ಮಾಡಲು ‘ಟೆಂಟ್ ಮೇಲೆ ನಂಬಿಕೆಯಿದ್ದರೆ ಇಡೀ ಉದ್ಯಮವನ್ನೇ ಬದಲಾಯಿಸ ಬಹುದು ಎಂಬುದಕ್ಕೆ ಹಮ್ದಿ ಉಲುಕಾಯಾ ಅವರೇ ಜೀವಂತ ಉದಾಹರಣೆ.

ಕೆಲವೊಮ್ಮೆ ಅನೇಕರು ಕೈಲಾಗದು ಎಂದು ಬಿಟ್ಟು ಹೋದ ಸ್ಥಳದ ಮತ್ಯಾರೋ ಬಂದು ಎಲ್ಲರೂ ಮೂಗಿನ ಮೇಲೆ ಬೆರಳು ಇಡುವಂತೆ, ಸಾಮ್ರಾಜ್ಯವನ್ನು ಕಟ್ಟುತ್ತಾರೆ. ಇವೆಲ್ಲ ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಆದರೆ ಆತ್ಮವಿಶ್ವಾಸ, ಆತ್ಮಸ್ಥೆ ರ್ಯ ಮತ್ತು ಛಲ ಬಿಡದೆ ಪ್ರಯತ್ನಿಸುವ, ಮತ್ತೆ ಮತ್ತೆ ಗುರಿಯೆಡೆಗೆ ಸಾಗುವ ಮನಸ್ಥಿತಿ ಇದ್ದಾಗ ಯಾವುದೂ ಅಸಾಧ್ಯವಲ್ಲ.