ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಇದು ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡು

ಇತ್ತೀಚೆಗೆ ಜರ್ಮನಿಯ ಹ್ಯಾಂಬರ್ಗ್‌ನಿಂದ ಆಮ್‌ಸ್ಟರ್‌ಡಾಮ್‌ಗೆ ಪ್ರಯಾಣ ಮಾಡುತ್ತಿದೆ. ತೀರಾ ಅಪರೂಪಕ್ಕೆ ಎಂಬಂತೆ, ಈ ಬಾರಿ ರೈಲು ಪ್ರಯಾಣವನ್ನು ಆರಿಸಿಕೊಂಡಿದ್ದೆ

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

ನೆದರ‍್ಲ್ಯಾಂಡ್ಸ್ ದೇಶದಲ್ಲಿ ಎಲ್ಲಿ ನೋಡಿದರೂ ಸೈಕಲ್, ಸೈಕಲ್, ಸೈಕಲ್…. ಅದರ ರಾಜಧಾನಿ ಆಮ್‌ಸ್ಟರ್‌‌ ಡಾಮ್‌ ನಲ್ಲಂತೂ ಕೇಳುವುದೇ ಬೇಡ. ಅಲ್ಲಿರುವ ಸೈಕಲ್ ಸಂಖ್ಯೆಯಷ್ಟು ಕಾರುಗಳೇನಾದರೂ ಇದ್ದಿದ್ದರೆ ದಿನಕ್ಕೆ ಒಂದು ಕಿಲೋಮೀಟರ್ ಕೂಡ ಚಲಿಸಲಾಗದಷ್ಟು ‘ಸಂಚಾರ ಸ್ತಂಭನ’ ಆಗುತ್ತಿತ್ತೇನೋ!

ಒಂದು ನಗರದಲ್ಲಿ ನೀವು ಯಾವುದೋ ಕಡೆ ಲಕ್ಷ್ಯ ಹರಿಸಿ ರಸ್ತೆಯ ಬದಿಯಲ್ಲಿ ನಡೆಯುತ್ತಿರುವಾಗ, ನಿಮ್ಮ ಹಿಂದೆಸೈಕಲ್ ಬೆಲ್‌ನ ಸದ್ದು ಕೇಳಿ ನೀವು ಹಿಂತಿರುಗಿ ನೋಡಿದಾಗ, ಆ ಸೈಕಲ್ ನಡೆಸುತ್ತಿರುವವರು ಯುವಕ-ಯುವತಿ ಅಥವಾ ಮುದುಕ- ಮುದುಕಿ ಆಗಿದ್ದರೆ, ನೀವು ನೆದರ್ಲ್ಯಾಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡಾಮ್ ನಗರದಲ್ಲಿಇದ್ದೀರಿ ಅಂದುಕೊಳ್ಳಬಹುದು. ಈ ನಗರದಲ್ಲಷ್ಟೇ ಅಲ್ಲ, ಈ ದೇಶದ ಯಾವುದೇ ನಗರದದರೂ ಅಷ್ಟೇ, ನಿಮಗೆ ವಾಹನದ ಸದ್ದಿಗಿಂತ ಸೈಕಲ್ ಬೆಲ್ ಸದ್ದೇ ಹೆಚ್ಚು ಕೇಳಿಸುತ್ತದೆ. ‌

ಇತ್ತೀಚೆಗೆ ಜರ್ಮನಿಯ ಹ್ಯಾಂಬರ್ಗ್‌ನಿಂದ ಆಮ್‌ಸ್ಟರ್‌ಡಾಮ್‌ಗೆ ಪ್ರಯಾಣ ಮಾಡುತ್ತಿದೆ. ತೀರಾ ಅಪರೂಪಕ್ಕೆ ಎಂಬಂತೆ, ಈ ಬಾರಿ ರೈಲು ಪ್ರಯಾಣವನ್ನು ಆರಿಸಿಕೊಂಡಿದ್ದೆ. ಸಾಮಾನ್ಯವಾಗಿ ವಿದೇಶಕ್ಕೆ ಹೋದಾಗ ವಿಮಾನನಿಲ್ದಾಣದಿಂದಲೇ ಕಾರು ತೆಗೆದುಕೊಂಡು, ಕೆಲಸ ಮುಗಿದ ನಂತರ ಊರು ಸುತ್ತಾಡಿ, ಹಿಂತಿರುಗಿ ಬರುವಾಗ ವಿಮಾನ ನಿಲ್ದಾಣದಲ್ಲಿ ಕಾರನ್ನು ಹಿಂತಿರುಗಿಸಿ ಬರುವುದು ವಾಡಿಕೆ. ಈ ಬಾರಿ ಕಾರು ತೆಗೆದುಕೊಳ್ಳದೇ ರೈಲು ಪ್ರಯಾಣಮಾಡಿz. ಕಾರಣ ಏನೆಂದರೆ, ನಾನು ಹೋದ ಸಂದರ್ಭದಲ್ಲಿ ಯುರೋಪ್ ತುಂಬ ಘನಘೋರ ಚಳಿ. ಜತೆಗೆ ಹಿಮಪಾತ ಬೇರೆ ಆಗುತ್ತಿತ್ತು. ಚಳಿಗಾಲವಾದು ದರಿಂದ ಸಾಯಂಕಾಲ ಮೂರೂವರೆ ನಾಲ್ಕು ಗಂಟೆಗೆಲ್ಲ ಕತ್ತಲಾಗು ತ್ತಿತ್ತು. ಆ ರೀತಿಯ ಮಬ್ಬು ವಾತಾವರಣದಲ್ಲಿ ಮೈ ಜಡ್ಡು ಹಿಡಿದಂತಾಗುವುದು, ಕಣ್ಣು ಮಂಜಾಗುವುದು, ಬೇಗ ನಿದ್ರೆ ಆವರಿಸಿಕೊಳ್ಳುವುದು ಸ್ವಾಭಾವಿಕ.

ಅಂಥ ಸಂದರ್ಭ ವಾಹನ ಚಾಲನೆಗೆ ಉತ್ತಮವಾದದ್ದಲ್ಲ. ಅಲ್ಲದೇ, ಕಾರು ಓಡಿಸಿಕೊಂಡು ಹೋಗುವ ಮೂಲಉದ್ದೇಶವೇ ಊರು ನೋಡಬೇಕು ಎನ್ನುವುದು. ಕತ್ತಲಾದ ಮೇಲೆ ಊರು ನೋಡುವುದಕ್ಕಂತೂ ಸಾಧ್ಯವಿಲ್ಲ. ಆಗ ಕಾರು ನಡೆಸುವುದೇ ಮುಖ್ಯ ಕೆಲಸವಾಗಿಬಿಡುತ್ತದೆ. ಅದೂ ಅಲ್ಲದೇ, ಯುರೋಪಿನ ರೈಲಿನ ವ್ಯವಸ್ಥೆಯ ಕುರಿತು ಸಾಕಷ್ಟು ಕೇಳಿದ್ದೆ. ಮೊದಲು ಒಂದೆರಡು ಬಾರಿ ಪ್ರಯಾಣಿಸಿದ್ದೂ ಇದೆ. ಈ ಬಾರಿ ರೈಲಿನಲ್ಲಿಯೇ ಓಡಾಡುವುದು ಸೂಕ್ತ ಎಂಬ ಸ್ನೇಹಿತರ ಸೂಚನೆಯನ್ನು ಮನ್ನಿಸಿ ರೈಲು ಹತ್ತಿದೆ.

ನನ್ನ ಬೋಗಿಯಲ್ಲಿ ಜರ್ಮನ್ ದೇಶದ ಒಬ್ಬ ಮಹಿಳೆ ಬಂದು ಕುಳಿತಳು. ಅಸಲಿಗೆ ಆ ಬೋಗಿಯಲ್ಲಿ ನಾನು ಮತ್ತು ಆ ಮಹಿಳೆಯನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಅರ್ಧ ಪ್ರಯಾಣ ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿವ್ಯಸ್ತರಾಗಿದ್ದೆವು. ನಂತರದ ಪ್ರಯಾಣದಲ್ಲಿ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಮಾತಿಗೆ ತೊಡಗಿದೆವು. ಅವರೂ ಆಮ್‌ಸ್ಟರ್ ಡಾಮ್‌ಗೇ ಹೋಗುತ್ತಿರುವುದಾಗಿ ಹೇಳಿದರು. ಆಮ್‌ಸ್ಟರ್‌ಡಾಮ್ ಎಂಬ ಹೆಸರು ಬಂದಾಕ್ಷಣಅವರು ಹೇಳಿದ್ದು ಒಂದೇ ವಿಷಯ ಏನೆಂದರೆ, “ಆ ನಗರದಲ್ಲಿ ಸೈಕಲ್‌ಗಳೇ ತುಂಬಿಹೋಗಿವೆ. ಎಲ್ಲಿ ನೋಡಿದರೂ ನಿಮಗೆ ಸೈಕಲ್ ಕಾಣುತ್ತದೆ. ಕೆಲವೊಮ್ಮೆ ಅತಿ ಎನಿಸುವಷ್ಟು ಕಾಣಿಸುತ್ತದೆ.

ನನಗೆ ವೈಯಕ್ತಿಕವಾಗಿ ಅದು ಇಷ್ಟವಾಗುವುದಿಲ್ಲ. ಏಕೆಂದರೆ ಸೈಕಲ್ ಹಿಂದುಗಡೆ ದೊಡ್ಡ ಪೆಟ್ಟಿಗೆಗಳನ್ನೂ ಇಟ್ಟುಕೊಂಡು, ಪ್ರಮುಖ ರಸ್ತೆಯ ಪಕ್ಕದ ಚಲಿಸುತ್ತಿರುತ್ತಾರೆ. ಆದರೆ ಅದು ಅಲ್ಲಿಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅವರು ಕಾರು ಅಥವಾ ಇನ್ಯಾವುದೇ ವಾಹನಕ್ಕಿಂತಲೂ ಸೈಕಲನ್ನೇ ಹೆಚ್ಚು ಇಷ್ಟಪಡುತ್ತಾರೆ" ಎಂದರು.

ಇದನ್ನೂ ಓದಿ: kiranupadhyaycolumn

ಕೆಲವೇ ಗಂಟೆಗಳಲ್ಲಿ ಅವರು ಹೇಳಿದ ಮಾತು ನನ್ನ ಅನುಭವಕ್ಕೂ ಬಂತು. ಆ ದೇಶದಲ್ಲಿ ಎಲ್ಲಿ ನೋಡಿದರೂ ಸೈಕಲ, ಸೈಕಲ, ಸೈಕಲ…. ಆಮ್‌ಸ್ಟರ್‌ಡಾಮ್‌ನಲ್ಲಂತೂ ಕೇಳುವುದೇ ಬೇಡ. ಅಲ್ಲಿರುವ ಸೈಕಲ್ ಸಂಖ್ಯೆಯಷ್ಟು ಕಾರುಗಳೇ ನಾದರೂ ಇದ್ದಿದ್ದರೆ ದಿನಕ್ಕೆ ಒಂದು ಕಿಲೋಮೀಟರ್ ಕೂಡ ಚಲಿಸಲಾಗದಷ್ಟು ‘ಸಂಚಾರ ಸ್ತಂಭನ’ ಆಗುತ್ತಿತ್ತೇನೋ! ಇನ್ನು ಪಾರ್ಕಿಂಗ್ ಅಂತೂ ಕೇಳಲೇಬೇಡಿ. ಸೈಕಲ್ ನಿಲ್ಲಿಸಲು ಜಾಗ ಇಲ್ಲದೇ ಕೆರೆಯ ಕೆಳಗೆ, 7000 ಸೈಕಲ್ ನಿಲ್ಲಿಸಲು ಅನುಕೂಲವಾಗಿರುವ ‘ಪಾರ್ಕಿಂಗ್’ ನಿರ್ಮಿಸಿದ ದೇಶದಲ್ಲಿ ಕಾರು ನಿಲ್ಲಿಸಲು ಜಾಗ ಎಲ್ಲಿಂದಸಿಗಬೇಕು? ಈ ದೇಶದಲ್ಲಿ ಇರುವ ಜನರ ಸಂಖ್ಯೆಗಿಂತಲೂ ಸೈಕಲ್ ಸಂಖ್ಯೆ ಹೆಚ್ಚು. ಅಂಕಿ-ಅಂಶಗಳ ಪ್ರಕಾರ, ನೆದರ್ಲ್ಯಾಂq ದೇಶದ ಜನಸಂಖ್ಯೆ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ. ದೇಶದಲ್ಲಿರುವ ಸೈಕಲ್ ಸಂಖ್ಯೆ ಸುಮಾರು ಎರಡು ಕೋಟಿ ನಲವತ್ತು ಲಕ್ಷ. ಪ್ರಮುಖ ನಗರದ ಗಲ್ಲಿ-ಗಲ್ಲಿ ಗಳಲ್ಲಿ ಮಾರು-ಮಾರಿಗೆ ಸೈಕಲ್ ಮಾರುವ ಅಂಗಡಿಗಳು ಅಥವಾ ಸೈಕಲ್ ಬಾಡಿಗೆಗೆ ಪಡೆಯಬಹು ದಾದ ಸ್ಥಳಗಳು, ಸೈಕಲ್ ನಿಲ್ಲಿಸುವ ಸ್ಥಳಗಳು ಇಲ್ಲಿಯ ಸೈಕಲ್ ಸಂಸ್ಕೃತಿಯನ್ನು ಬಿಂಬಿಸುತ್ತವ

ಈ ದೇಶದಲ್ಲಿ ನಿಮಗೆ ಊಟ-ತಿಂಡಿ, ಹೋಟೆಲು-ಹಾಸ್ಟೆಲು, ಸಿಗದೇ ಇರಬಹುದು, ಸೈಕಲ್‌ಗೆ ಮಾತ್ರ ಯಾವ ಕೊರತೆಯೂ ಇಲ್ಲ. ಈ ದೇಶದಲ್ಲಿ ಸಾಮಾನ್ಯ ಸೈಕಲ್ ಬೆಲೆ 260ರಿಂದ 500 ಯುರೋ ಇದ್ದರೆ, ಉಪಯೋಗಿಸಿದ,ಮರುಮಾರಾಟದ (ಸೆಕೆಂಡ್ ಹ್ಯಾಂಡ್) ಸೈಕಲ್ 50ರಿಂದ 200 ಯುರೋಕ್ಕೆ ಸಿಗುತ್ತದೆ. ಇಂದಿನ ದಿನ ಒಂದು ಯುರೋ ೮೯ ರುಪಾಯಿಗೆ ಸಮ ಎಂದರೆ, ರುಪಾಯಿ ಲೆಕ್ಕದಲ್ಲಿ ಎಷ್ಟಾಯಿತು ನೀವೇ ಲೆಕ್ಕ ಮಾಡಿಕೊಳ್ಳಿ. ಆಮ್‌ಸ್ಟರ್‌ಡಾಮ್‌ನ ಸಾಧಾರಣ ಒಂದು ದಿನದ ಹೋಟೆಲ್ ದರ ನೂರರಿಂದ ನೂರ ಐವತ್ತು ಯುರೋ, ಒಂದುಹೊತ್ತಿನ ಊಟಕ್ಕೆ ಇಪ್ಪತ್ತರಿಂದ ಮೂವತ್ತು ಯುರೋ. ಒಂದು ಕಾಫಿ ಕುಡಿದರೆ ಐದು ಯುರೋ. ಏನಿಲ್ಲ, ಸುಮ್ಮನೆ ಲೆಕ್ಕ ಹೇಳಿದೆ ಅಷ್ಟೇ.

ವಿಶ್ವದ ಅನೇಕ ಕಡೆಗಳಲ್ಲಿ ಬೈಸಿಕಲ್ ಮ್ಯೂಸಿಯಮ್, ಮೋಟರ್‌ಬೈಕ್ ಮ್ಯೂಸಿಯಮ್ ಇದ್ದದ್ದು ಎಲ್ಲರಿಗೂ ತಿಳಿದದ್ದೇ. ಆದರೆ ನೆದರ್ಲ್ಯಾಂಡ್ಸ್‌ಲ್ಲಿ ಸೈಕಲ್ ಮ್ಯೂಸಿಯಮ್ ಅಂತೂ‌ ಇದ್ದೇ ಇದೆ. ಕೆಲವು ಮ್ಯೂಸಿಯಮ್ ಒಳಗೆನೀವು ಸೈಕಲ್ ಕೊಂಡು ಹೋಗಬಹುದು, ಮ್ಯೂಸಿಯಮ್ ಒಳಗೆ ಸೈಕಲ್‌ನ ಸುತ್ತಾಡಬಹುದು ಎಂದರೆ ನಂಬು ತ್ತೀರಾ? ಆಮ್‌ಸ್ಟರ್ ಡಾಮ್ ನಗರದ ಅರ್ಧದಷ್ಟು ಜನ ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರಲು ಸೈಕಲ್ ಬಳಸುತ್ತಾರೆ, ಈ ನಗರದಲ್ಲಿ ಸೈಕಲ್ ಸವಾರಿಗೆಂದೇ ಸುಮಾರು 500 ಕಿ.ಮೀ. ಪ್ರತ್ಯೇಕ ರಸ್ತೆ ಇದೆ. ದೇಶದಲ್ಲಿ ಸುಮಾರು 35000 ಕಿ.ಮೀ. ಸೈಕಲ್ ರಸ್ತೆಯಿದೆ. ಆಮ್‌ಸ್ಟರ್‌ಡಾಮ್ ನಗರದಲ್ಲಿ ಪ್ರತಿನಿತ್ಯ ಸುಮಾರು ನಾಲ್ಕೂ ಮುಕ್ಕಾಲರಿಂದ ಐದು ಲಕ್ಷ ಜನ, ಇಪ್ಪತ್ತು ಲಕ್ಷ ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುತ್ತಾರೆ ಎಂದರೆ ಒಪ್ಪುತ್ತೀರಾ? ನಂಬದೆ, ಒಪ್ಪದೆ ಬೇರೆ ದಾರಿ ಇಲ್ಲ.

ನೆದರ್ಲ್ಯಾಂಡ್ಸ್‌ನ ಜನರು ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಸೈಕಲ್ ಸವಾರಿ ಮಾಡಲು ತರಬೇತಿ ನೀಡು ತ್ತಾರೆ. ಕೆಲವು ಕಡೆ ಇದು ಶಾಲೆಯ ಪಠ್ಯಕ್ರಮದ ಭಾಗವೂ ಹೌದು. ಮಕ್ಕಳು ಪ್ರೌಢಶಾಲೆಗೆ ಹೋಗುವ ಮೊದಲೇ ಅವರಿಗೆ ತರಬೇತಿ ನೀಡಿ, ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ನಿಜ, ಸೈಕಲ್ ಸವಾರಿ ಮಾಡುವುದಕ್ಕೂ ನೆದರ್ಲ್ಯಾಂಡ್ಸ್‌ನಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ಸುಮಾರು 12-13 ವರ್ಷ ವಯಸ್ಸಿನ ಮಕ್ಕಳಿಗೆ ಸೈಕಲ್ ಸವಾರಿಯ ತರಬೇತಿ ನೀಡಿ, ಪರೀಕ್ಷೆ ನಡೆಸಲಾಗುತ್ತದೆ.

25 ಅಂಕಗಳ ಪರೀಕ್ಷೆಯಲ್ಲಿ 15ಕ್ಕಿಂತ ಹೆಚ್ಚು ಅಂಕ ಪಡೆದರೆ ಅವರು ಉತ್ತೀರ್ಣರೆಂದು ಪರಿಗಣಿಸಿ, ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ತುಂಬಿದಂತಾಗುತ್ತದೆ. ಇದು ಏಕೆಅವಶ್ಯಕ ಎಂದರೆ, ನೆದರ್ಲ್ಯಾಂಡ್ಸ್‌ ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಶೇ.90ಕ್ಕೂ ಹೆಚ್ಚು ಜನ ಸೈಕಲ್ ಸವಾರಿ ಮಾಡಿ ಶಾಲೆಗೆ ಹೋಗುತ್ತಾರೆ. ಮುಂದೆ ಇದೇ ಮಕ್ಕಳು, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸೈಕಲ್ ಸವಾರಿಮಾಡುತ್ತಾರೆ. ಈ ದೇಶದ ಪ್ರಧಾನಿಯೂ ಸೈಕಲ್ ಸವಾರಿ ಮಾಡುವ ವಿಷಯ ನೀವು ಕೇಳಿರಬಹುದು, ನೋಡಿರ ಬಹುದು. ನಾನು ಆಮ್‌ಸ್ಟರ್‌ಡಾಮ್‌ನಲ್ಲಿದ್ದಾಗ ಮದುಮಕ್ಕಳು ಸವಾರಿ ಮಾಡಲೆಂದು ಸಿಂಗಾರಗೊಂಡಸೈಕಲ್ಲನ್ನೂ ಕಂಡಿದ್ದೇನೆ. ಇದೆಲ್ಲ ರಾತ್ರಿ ಬೆಳಗಾಗುವುದರೊಳಗೆ ಆದದ್ದಲ್ಲ. ಇದಕ್ಕೆ ಶತಮಾನದ ಇತಿಹಾಸವಿದೆ.

1880ರ ದಶಕದಲ್ಲಿ ಅಮೆರಿಕ, ಬ್ರಿಟನ್, ಡೆನ್ಮಾರ್ಕ್ ನಂತರ ನೆದರ್ಲ್ಯಾಂಡ್ಸ್‌ನಲ್ಲಿ ಸೈಕ್ಲಿಂಗ್ ಜನಪ್ರಿಯವಾಯಿತು. ಆದರೆ 1890ರ ಹೊತ್ತಿಗೆ ಡಚ್ಚರು ಸೈಕಲ್ ಸವಾರಿಗೆಂದೇ ಮಾರ್ಗವನ್ನು ನಿರ್ಮಿಸಲು ತೊಡಗಿದರು. ಪರಿಣಾಮ ವಾಗಿ, 1910ರ ಹೊತ್ತಿಗೆ ಡಚ್ಚರು ಯುರೋಪಿನ ಇತರ ದೇಶಗಳಿಗಿಂತ ಹೆಚ್ಚು ತಲವಾರು ಸೈಕಲ್ ಹೊಂದಿದ್ದರು. 1940ರ ವೇಳೆಗೆ ಜರ್ಮನ್ನರು ಡಚ್ಚರ ಮೇಲೆ ಆಕ್ರಮಣ ಮಾಡಿದಾಗ, ನೆದರ್ಲ್ಯಾಂಡ್ಸ್‌ನ ಬಹುತೇಕ ಸೈಕಲ್‌ಗಳು ಕಣ್ಮರೆಯಾದವು. ಆದರೆ ಯುದ್ಧದ ನಂತರ ಆ ದೇಶದಲ್ಲಿ ಸೈಕಲ್ ಬಳಕೆ ತ್ವರಿತವಾಗಿ ಸಾಮಾನ್ಯ ಸ್ಥಿತಿಗೆ ಮರಳಿತು. ಎರಡನೇ ಮಹಾಯುದ್ಧದ ನಂತರ, ಕಾರು ಮತ್ತು ಇತರ ವಾಹನಗಳ ಸಂಚಾರಕ್ಕೆ ಅನುಕೂಲ ವಾಗುವಂತೆ ಮಾರ್ಗಗಳನ್ನು ನಿರ್ಮಿಸುವಂತೆ ಅಲ್ಲಿಯ ಎಂಜಿನಿಯರ್ ಗಳ ತಂಡ ಸರಕಾರವನ್ನು ಒತ್ತಾಯಿಸಿತು. ದೇಶವನ್ನು ಹೆಚ್ಚು ‘ಕಾರು ಸ್ನೇಹಿ’ಯನ್ನಾಗಿಸಲು ಅವರು ಮನವಿ ಸಲ್ಲಿಸಿದರು. ಕಾಲುವೆಗಳನ್ನು ತುಂಬಿಸಿ ಅಥವಾ ಅದರೆ ಮೇಲೆ ಹೈವೇ ಮತ್ತು ಮೊನೋ ರೇಲ್ ನಿರ್ಮಿಸಲು ಸಲಹೆ ಕೊಟ್ಟರು.

ಆದರೆ ಇದಕ್ಕೆ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಏಕೆಂದರೆ ಆ ಕಾಲದಲ್ಲಿ ಕಾರಿನ ಅಪಘಾತಗಳು ಹೆಚ್ಚಾಗಿ ಆಗುತ್ತಿದ್ದವು. ಅದಲ್ಲದೆ, ಸುಮಾರು ೫೦೦ಕ್ಕೂ ಹೆಚ್ಚು ಮಕ್ಕಳು ಕಾರ್ ಅಪಘಾತದಲ್ಲಿ ಮರಣ ವನ್ನಪ್ಪಿದ್ದರು.

ಇದಕ್ಕೆ ಪರಿಹಾರವಾಗಿ ಬೈಸಿಕಲ್‌ಗಳಿಗೆ ಹೆಚ್ಚು ಉತ್ತೇಜನ ನೀಡಲು ಅಲ್ಲಿಯ ಜನರು ಒತ್ತಾಯಿಸುತ್ತಿದ್ದರು. ಅದೇ ಸಮಯದಲ್ಲಿ ತೈಲದ ಕೊರತೆ, ಇಂಧನದ ಬೆಲೆ ಏರಿಕೆ ಉಂಟಾದದ್ದರಿಂದ ಅಲ್ಲಿಯ ಸರಕಾರವು ಮೋಟಾರ್ ವಾಹನಗಳ ಬಳಕೆಯನ್ನು ನಿರ್ಬಂಧಿಸಲು ಪ್ರಾರಂಭಿಸಿತು. ನಗರ ನಿರ್ಮಾಣದ ಯೋಜನೆಯ ಪ್ರತಿ ಹಂತದಲ್ಲೂ ಸೈಕಲ್ ತುಳಿಯುವವರ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡಿತು. ಮೋಟಾರು ಸಂಚಾರಕ್ಕಿಂತ ಸೈಕಲ್ ಮತ್ತು ಪಾದಚಾರಿಗಳಿಗೆ ಆದ್ಯತೆ ನೀಡಿತು.

ಒಂದು ಶತಮಾನದ ಹಿಂದೆಯೇ, ನೆದರ್ಲ್ಯಾಂಡ್ಸ್‌ನಲ್ಲಿ ಸೈಕಲ್ ಸವಾರಿಯನ್ನು ‘ಡಚ್ಚರ ರಾಷ್ಟ್ರೀಯ ಸಂಸ್ಕೃತಿ’ಯ ಸಂಕೇತ ವೆಂದು ಪರಿಗಣಿಸಲಾಯಿತು. ಇದರ ಪರಿಣಾಮವಾಗಿ ಇಂದು ನೆದರ್ಲ್ಯಾಂಡ್ಸ್‌ನಲ್ಲಿ ಪ್ರತಿ ವರ್ಷ ಆರೂವರೆ ಸಾವಿರ ಸಾವು ಗಳು ಕಡಿಮೆಯಾಗಿವೆ. ಜತೆಗೆ ಸೈಕಲ್ ತುಳಿಯುವುದರಿಂದ ಜನರು ಹೆಚ್ಚುವರಿಯಾಗಿ ಆರು ತಿಂಗಳು ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತದೆ.

ಇತ್ತೀಚಿನ ದಿನಗಳಲ್ಲಿ ಅಪಘಾತ, ವಾಯುಮಾಲಿನ್ಯ, ಪೆಟ್ರೋಲ-ಡೀಸೆಲ್ ದರ, ವಾಹನಗಳ ನಿರ್ವಹಣಾ ವೆಚ್ಚ ಎಲ್ಲವೂ ಹೆಚ್ಚುತ್ತಿರುವುದು ಯಾರಿಗೂ ತಿಳಿಯದಿರುವುದೇನೂ ಅಲ್ಲ. ನಾವು ವಾಯುಮಾಲಿನ್ಯ, ಪರಿಸರ ಮಾಲಿನ್ಯದಿಂದ ಆಗಬಹುದಾದ ಅಪಾಯಗಳ ಕುರಿತೂ, ಸೈಕಲ್ ತುಳಿಯುವುದರಿಂದ ಆಗುವ ಲಾಭದ ಕುರಿತೂಮಾತನಾಡುತ್ತೇವೆ. ಮೈ ಕರಗಿಸಲು, ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಿ, ಅಲ್ಲಿ ಸ್ಥಿರವಾಗಿ ನಿಂತಿರುವ ಸೈಕಲ್‌ನ ಪೆಡಲ್ ತುಳಿ ಯುತ್ತೇವೆ. ಆದರೆ ಜಿಮ್‌ಗೆ ಹೋಗಿ-ಬರಲು ಕಾರು ಬಳಸುತ್ತೇವೆ! ಡಚ್ಚರು ಶತಮಾನದ ಹಿಂದೆಯೇ ಎಚ್ಚೆತ್ತುಕೊಂಡರು! ನಾವು…?