K Leelavathy Column: ಭಗವದ್ಗೀತೆಯು ಯುದ್ಧವನ್ನು ಪ್ರತಿಪಾದಿಸುವುದೇ ?
ನಮ್ಮ ಪಕ್ಕದ ಮನೆಯವರು ಮೊದಲನೆಯ ಅಧ್ಯಾಯದಿಂದ ಮುಂದಕ್ಕೆ ಓದಿಲ್ಲವೆಂದು. ಹೀಗೇ ನಮ್ಮ ಆಧ್ಯಾತ್ಮಿಕ ಗ್ರಂಥಗಳ ಬಗೆಗೆ, ನಮ್ಮ ಸಂಪ್ರದಾಯಗಳ ಬಗೆಗೆ ತಪ್ಪು ತಪ್ಪಾಗಿ ಹೇಳಿ ನಮ್ಮನ್ನೇ ಯಾಮಾ ರಿಸುತ್ತಾರೆ ಅಂತ ಗೊತ್ತಾಯಿತು. ಅವರು ಏಸುವಿನ ಕರುಣೆ, ಪ್ರೀತಿಗಳ ಬಗೆಗೆ ಪರಿಣಾಮಕಾರಿಯಾಗಿ ಹೇಳುತ್ತಾರೆ. ಅಲ್ಲದೆ, ನಾವೂ ಅದಕ್ಕೆ ಮರುಳಾಗಿ ಅವರ ಧರ್ಮಕ್ಕೆ ಮತಾಂತರವಾಗುವಂತೆ ಮಾಡಿ ಬಿಡುತ್ತಾರೆ.
-
Ashok Nayak
Oct 29, 2025 9:10 AM
ಧರ್ಮಸೂಕ್ಷ್ಮ
ಕೆ.ಲೀಲಾವತಿ
ಸುಮಾರು ಮೂವತ್ತು ವರ್ಷಗಳ ಹಿಂದೆ ನಮ್ಮ ಪಕ್ಕದ ಮನೆಯಲ್ಲಿ ಒಂದು ಕ್ರಿಶ್ಚಿಯನ್ ಕುಟುಂಬ ವಿತ್ತು. ಅದರ ಸದಸ್ಯರೊಬ್ಬರು, “ನಿಮ್ಮ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ’ಯುದ್ಧ ಮಾಡು, ಯುದ್ಧ ಮಾಡು’ ಎಂದೇ ಹೇಳುತ್ತಾನೆ. ಅರ್ಜುನನು ‘ಯುದ್ಧ ಮಾಡುವುದು ಹಿಂಸೆ, ಅದರಿಂದ ತುಂಬಾ ನಷ್ಟವಾಗುತ್ತದೆ’ ಎಂದರೂ ಕೇಳದೆ ನಿಮ್ಮ ಶ್ರೀಕೃಷ್ಣನು ಅರ್ಜುನನಿಂದ ಬಲವಂತವಾಗಿ ಯುದ್ಧ ಮಾಡಿಸುತ್ತಾನೆ; ನಿಮ್ಮ ಧರ್ಮಗ್ರಂಥ ಸರಿಯಾಗಿಲ್ಲ. ಹಿಂಸೆಯನ್ನು, ಯುದ್ಧವನ್ನು ಪ್ರಚೋದಿಸು ತ್ತದೆ" ಎಂದಿದ್ದರು.
ಈ ಮಾತನ್ನು ಕೇಳಿದ ನನಗೂ ಆಗ ‘ಹೌದಾ? ಹಾಗಾದರೆ ಇಡೀ ವಿಶ್ವದಲ್ಲಿ ಭಗವದ್ಗೀತೆಯನ್ನು ಒಂದು ಪರಿಣಾಮಕಾರಿ ಆಧ್ಯಾತ್ಮಿಕ ಗ್ರಂಥವನ್ನಾಗಿ ಹೇಗೆ ಸ್ವೀಕರಿಸಿದ್ದಾರೆ? ಅದೆಷ್ಟೊಂದು ಜನ ಇದಕ್ಕೆ ಹೇಗೆ ವ್ಯಾಖ್ಯಾನ ಬರೆದಿದ್ದಾರೆ! ತಿಳಿದವರು, ಶಾಸ್ತ್ರಜ್ಞರು ಇದನ್ನು ತಮ್ಮ ಮಾರ್ಗದರ್ಶಿ ಗ್ರಂಥವನ್ನಾಗಿ ಹೇಗೆ ಸ್ವೀಕರಿಸಿದರು?’ ಎಂತೆ ಯೋಚನೆಗಿಟ್ಟುಕೊಂಡಿತ್ತು. ನಂತರ ನಾನೂ ಭಗವದ್ಗೀತೆಯನ್ನು ಓದಲಾರಂಭಿಸಿದಾಗ ಗೊತ್ತಾಯಿತು, ನಮ್ಮ ಪಕ್ಕದ ಮನೆಯವರು ಮೊದಲ ನೆಯ ಅಧ್ಯಾಯದಿಂದ ಮುಂದಕ್ಕೆ ಓದಿಲ್ಲವೆಂದು.
ಹೀಗೇ ನಮ್ಮ ಆಧ್ಯಾತ್ಮಿಕ ಗ್ರಂಥಗಳ ಬಗೆಗೆ, ನಮ್ಮ ಸಂಪ್ರದಾಯಗಳ ಬಗೆಗೆ ತಪ್ಪು ತಪ್ಪಾಗಿ ಹೇಳಿ ನಮ್ಮನ್ನೇ ಯಾಮಾರಿಸುತ್ತಾರೆ ಅಂತ ಗೊತ್ತಾಯಿತು. ಅವರು ಏಸುವಿನ ಕರುಣೆ, ಪ್ರೀತಿಗಳ ಬಗೆಗೆ ಪರಿಣಾಮಕಾರಿಯಾಗಿ ಹೇಳುತ್ತಾರೆ. ಅಲ್ಲದೆ, ನಾವೂ ಅದಕ್ಕೆ ಮರುಳಾಗಿ ಅವರ ಧರ್ಮಕ್ಕೆ ಮತಾಂತರವಾಗುವಂತೆ ಮಾಡಿ ಬಿಡುತ್ತಾರೆ.
ಇದನ್ನೂ ಓದಿ: Roopa Gururaj Column: ಕಾರ್ತಿಕ ಮಾಸದಲ್ಲಿ ದೀಪ ಬೆಳಗಿಸುವುದರ ಫಲ
ನಾನೂ ಭಗವದ್ಗೀತೆಯನ್ನು ಓದಲಾರಂಭಿಸಿದ ನಂತರ ನಾನು, ‘ಇಷ್ಟು ಸುಲಭವಾದ, ಸರಳವಾದ, ನಮ್ಮನ್ನು ಸದಾಕಾಲವೂ ಸಂತೋಷವಾಗಿಡಬಲ್ಲ ಗ್ರಂಥ ಏಕೆ ಬಹಳಷ್ಟು ಜನರಿಗೆ ಅಪರಿಚಿತ ವಾಗಿದೆ. ಏಕೆ ಯಾರಿಗೂ ಭಗವದ್ಗೀತೆಯ ಶ್ಲೋಕಗಳು ಹೇಳಲು ಬರುವುದಿಲ್ಲ?’ ಅಂತೆ ಯೋಚಿಸ ಲಾರಂಭಿಸಿದೆ. ನಂತರ ನನಗನ್ನಿಸಿದ್ದು- ಮೊದಲಿಗೆ ಅದು ನಮಗೆ ಎಲ್ಲರಿಗೂ ಪರಿಚಿತವಲ್ಲದ ಭಾಷೆಯಲ್ಲಿರುವುದು, ಎರಡನೆಯದಾಗಿ ಅದರಲ್ಲಿರುವ ಅತ್ಯುನ್ನತ ಚಿಂತನೆಗಳನ್ನು ನಮಗೆ ಸರಿಯಾಗಿ ಅರ್ಥ ಮಾಡಿಸದೇ ಇರುವುದು.
ಇನ್ನು ಭಗವದ್ಗೀತೆಯು ಹಿಂಸೆಯನ್ನು ಪ್ರತಿಪಾದಿಸುವುದೇ? ಕೃಷ್ಣನು ‘ಯುದ್ಧ ಮಾಡು, ಯುದ್ಧ ಮಾಡು’ ಎಂದೇ ಆಗ್ರಹಿಸುತ್ತಾನೆ; ಹಾಗಾದರೆ ‘ಅಹಿಂಸಾ ಪರಮೋ ಧರ್ಮಃ’ ಎನ್ನುವ ತತ್ವಕ್ಕೆ ಇದು ವಿರುದ್ಧವಲ್ಲವೇ? ಅನ್ನಿಸಬಹುದು. ಆದರೆ ಒಂದು ಜನಾಂಗ ಏನೇ ಅನ್ಯಾಯವಾದರೂ ಸಹಿಸ ಬೇಕು, ದೌರ್ಜನ್ಯವಾದರೂ ಸುಮ್ಮನಿರಬೇಕು ಅಂತಲ್ಲ.
ಹಿಂಸೆಯನ್ನು ಪ್ರತಿಭಟಿಸದೆ ಸೈರಿಸುವುದು ಹೇಡಿತನವೇ ಆಗುತ್ತದೆ. ಅಹಿಂಸೆಯ ಬೋಧನೆ ಯಾಗಬೇಕಿರುವುದು ಹಿಂಸೆಯಲ್ಲಿ ತೊಡಗಿರುವವನಿಗೇ ಹೊರತು ಹಿಂಸೆಗೆ ಒಳಗಾದವನಿಗಲ್ಲ. ಹಿಂಸೆಯ ವಿರುದ್ಧ ಕ್ಷಾತ್ರತೆಯ ಅಗತ್ಯವಿದೆ. ಕ್ಷಾತ್ರತ್ವ ಇಲ್ಲದ ಒಳ್ಳೆಯವನೂ ಕೆಟ್ಟವನಿಗೇ ಸಮ. ಸಹನೆ ದೌರ್ಬಲ್ಯವಾಗಬಾರದು ಅರ್ಜುನನಿಗೆ ಜಗತ್ತಿನ ಬಾಧ್ಯತೆಯಿದೆ. ಲೋಕ ಸಂಗ್ರಹದ ಕರ್ತವ್ಯ ವನ್ನು ನಿರಾಕರಿಸುವುದನ್ನು ಕೃಷ್ಣ ತೀವ್ರವಾದ ಮಾತುಗಳಲ್ಲಿ ಖಂಡಿಸುತ್ತಾನೆ. ಇಲ್ಲಿ ಬರುವುದು ದ್ವೇಷವಿಲ್ಲದ ಮತ್ತು ಧರ್ಮ ಸಂಸ್ಥಾಪನೆಗಾಗಿ ಮಾಡಬೇಕಾಗಿರುವ ಯುದ್ಧ. ಅದು ಕೂಡ, ಬಂಧು-ಬಾಂಧವರೊಂದಿಗೆ! ವಿದ್ಯೆ ಕಲಿಸಿದ ಗುರುಗಳೊಂದಿಗೆ, ಎತ್ತಿ ಆಡಿಸಿದ ತಾತನೊಂದಿಗೆ!
ಆಗ ಗೊಂದಲಕ್ಕೊಳಗಾಗುವ ಅರ್ಜುನನು, ಭಗವಂತನ ಉಪದೇಶವನ್ನು ಕೇಳಿದ ನಂತರ ಕೊನೆಗೆ ಹೇಳಿದ್ದು: ‘ನಷ್ಟೋ ಮೋಹಃ ಸ್ಮೃತಿರ್ಲಬ್ಧಾ, ತ್ವತ್ಪ್ರಸಾದಾನ್ಮಯಾಚ್ಯುತ, ಸ್ಥಿತೋಧಿಸ್ಮಿ ಗತಸಂದೇಹಃ ಕರಿಷ್ಯೇ ವಚನಂತವ’ ಅಂದರೆ, ‘ಎಲೈ ಅಚ್ಯುತನೇ, ನಿನ್ನ ಕೃಪೆಯಿಂದ ನನ್ನ ಮೋಹ ನಾಶವಾಯಿತು, ನನಗೆ ಜ್ಞಾನೋದಯವಾಗಿದೆ, ಯಾವುದೇ ಸಂದೇಹವಿಲ್ಲದವನಾಗಿದ್ದೇನೆ. ನಿನ್ನ ಆeಯನ್ನು ಪರಿಪಾಲಿಸುತ್ತೇನೆ’ ಎಂದರ್ಥ.
ಬಂಧು-ಬಾಂಧವರ ಬಗೆಗಿನ ಮೋಹದಿಂದಾಗಿ ಯುದ್ಧ ಮಾಡುವುದಿಲ್ಲವೆಂದು ಗಾಂಡೀವವನ್ನು ಬೀಳಿಸಿಕೊಂಡಿದ್ದ ಅರ್ಜುನನು, ಶ್ರೀಕೃಷ್ಣನ ಉಪದೇಶದ ನಂತರ ಅದನ್ನು ಎತ್ತಿ ಹಿಡಿದ. ‘ಯುದ್ಧ ಅನಿವಾರ್ಯ, ಏಕೆಂದರೆ ಜನ ಶಾಂತಿಯಿಂದ ಬದುಕಬೇಕಾಗಿದೆ. ಹಿಂಸೆಗಾಗಿ ಹಿಂಸೆಯಲ್ಲ. ಜೀವ ಪೋಷಣೆ ಧರ್ಮವಾದಂತೆ, ಜೀವ ಹತ್ಯೆಯೂ ಧರ್ಮವೇ. ಧರ್ಮಕ್ಕೆ ಬದ್ಧವಾಗಿದ್ದು ಹಿಂಸೆ ಯಾದರೂ ಸರಿಯೇ ಅದನ್ನು ಯಾವ ಮುಲಾಜೂ ಇಲ್ಲದೆ ಶತ್ರುಗಳನ್ನು ಮುಗಿಸು. ಧರ್ಮಕ್ಕೆ ಹಿಂಸೆಯಾದರೆ ಯುದ್ಧ ಅನಿವಾರ್ಯ. ಅಹಿಂಸೆಯ ಸ್ಥಾಪನೆಗಾಗಿ ಯುದ್ಧ ಅನಿವಾರ್ಯ’ ಎನ್ನುತ್ತಾನೆ ಶ್ರೀಕೃಷ್ಣ.
‘ಅಹಿಂಸಾ ಪರಮೋಧರ್ಮಃ’- ಎಂಬುದು ಸರಿ. ನಮ್ಮನ್ನು ಹಿಂಸಿಸಿದವರ ವಿರುದ್ಧ ಕೈ ಎತ್ತದೆ ಇರುವುದಕ್ಕೆ, ಅವರನ್ನು ಕ್ಷಮಿಸಿ ಸುಮ್ಮನಾಗಿಬಿಡುವುದಕ್ಕೆ ಪ್ರಚಂಡ ಅಂತಃ ಶಕ್ತಿ ಬೇಕು ನಿಜ. ಆದರೆ ಅದು ಸಾಧನೆ ಎನ್ನಿಸಿಕೊಳ್ಳುವುದು ವೈಯಕ್ತಿಕ ಮಟ್ಟದಲ್ಲಿ ಮಾತ್ರ. ಒಂದಿಡೀ ಜನಾಂಗ, ಸಮು ದಾಯ ಅಥವಾ ಪೀಳಿಗೆಯು ಹರಕೆಯ ಕುರಿಗಳ ಹಾಗೆ ಕತ್ತು ಬಗ್ಗಿಸಿ ನಿಂತರೆ ಅದನ್ನು ಅಹಿಂಸೆ ಎನ್ನುವುದಿಲ್ಲ.
ಅಸಹಾಯಕತೆ ಅಥವಾ ಹೇಡಿತನ ಎನ್ನುತ್ತಾರೆ. ‘ಲೋಕ ಸಂಗ್ರಹಂ ಏವಾಪಿ ಸಂಪಶ್ಯನ್ ಕರ್ತುಂ ಅರ್ಹಸಿ’ ಎನ್ನುತ್ತಾನೆ ಶ್ರೀಕೃಷ್ಣ. ಲೋಕ ಸಂಗ್ರಹ ಎಂದರೆ ಜಗತ್ತಿನ ಹಿತ ಎಂದರ್ಥ. ‘ಮಾನವ ಸಮಾಜದ ಸ್ಥಿರತೆಯನ್ನು ಸ್ಥಾಪಿಸುವುದಕ್ಕಾಗಿ ಯಾದರೂ ನೀನು ಕರ್ಮ ಮಾಡಲೇಬೇಕು. ನಿನಗೆ ನಿನ್ನ ಸ್ವಂತ ಆಸೆಗಳೇನೂ ಇಲ್ಲದಿದ್ದಲ್ಲಿ ನೀನು ಸ್ವತಂತ್ರ, ನೀನು ಯಾವ ಕೆಲಸವನ್ನೂ ಮಾಡ ಬೇಕಾಗಿಲ್ಲ.
ಆದರೂ ನೀನು ಕರ್ಮ ಮಾಡಲೇಬೇಕು. ಏಕೆಂದರೆ ನಿನ್ನ ಸಹಾಯ ಬೇಕಾದವರಿದ್ದಾರೆ. ಮಾನವ ಸಮಾಜದ ಹಿತಕ್ಕಾಗಿ ದುಡಿಯ ಲೇಬೇಕು. ನಾವಿರುವ ಸಮಾಜದಲ್ಲಿ ಯಾರೂ ದುಃಖಿಗಳಿರ ಬಾರದು’- ಇದು ಗೀತೆಯಲ್ಲಿನ ಮಹತ್ವದ ಕಲ್ಪನೆ. ಶ್ರೀಕೃಷ್ಣನ ಮಾತುಗಳಲ್ಲಿ ಅಪೂರ್ವವಾದ ಶಕ್ತಿಯಿದೆ, ಸತ್ಯದ ಪೂರ್ಣ ಪರಿಚಯವಿದೆ. ಈ ಪೂರ್ಣ ಸತ್ಯದ ಬಗೆಗೆ ಸರಳವಾಗಿ, ಸ್ಪಷ್ಟವಾಗಿ ಶ್ರೀಕೃಷ್ಣ ಹೇಳುವನು.
ಅಲ್ಲಿ ಅನುಮಾನಕ್ಕೆ ಅವಕಾಶವಿಲ್ಲ. ಅವನ ಮಾತುಗಳು ನಮ್ಮ ಹೃದಯಕ್ಕೆ ನೇರವಾಗಿ ತಲುಪು ವುದು. ಇದನ್ನು ಎಲ್ಲರಿಗೂ ತಿಳಿಯುವ ಶೈಲಿಯಲ್ಲಿ ಅವನು ಹೇಳುವನು. ಭಗವದ್ಗೀತೆಯನ್ನು ನಿರ್ದಿಷ್ಟ ಜಾತಿಯವರಿಗಾಗಲೀ, ಕೋಮಿನವರಿಗಾಗಲೀ ಮೀಸಲಿಟ್ಟಿಲ್ಲ. ಯಾರು ಬೇಕಾದರೂ ಇದನ್ನು ಓದಿ ಉದ್ಧಾರವಾಗಬಹುದು. ಇಲ್ಲಿ ಭಗವತ್ ಸಾಕ್ಷಾತ್ಕಾರದ ಬಾಗಿಲನ್ನು ಎಲ್ಲರಿಗೂ ತೆರೆಯಲಾಗಿದೆ. ಇದು ಅನುಷ್ಠಾನ ಪ್ರಧಾನವಾದುದು.
ನಾವು ತಿಳಿದುಕೊಂಡಿರುವುದನ್ನು ಹೇಗೆ ಅನುಷ್ಠಾನಕ್ಕೆ ತರಬೇಕು ಎಂಬುದನ್ನು ಹೇಳುವುದು. ಇಲ್ಲಿ ಸಿದ್ಧಾಂತದ ಜತೆಗೆ ಸಾಧನೆಗೆ ಪ್ರಾಮುಖ್ಯವಿದೆ. ಬದುಕಿನ ಕಷ್ಟ ಕಾರ್ಪಣ್ಯಗಳ ನಡುವೆಯೂ ಸಮಾಧಾನ ಪಡೆಯಲು ಗೀತೆ ಸಹಕಾರಿ. ಭಗವದ್ಗೀತೆ ಹೇಳುವುದು ಹೀಗೆ- ‘ನಮ್ಮ ಬದುಕಿನ ಯಾವುದೇ ಕರ್ತವ್ಯವಾದರೂ ಸರಿ, ಓಡಿಹೋಗಬಾರದು. ಲೋಕ ಸಂಗ್ರಹಕ್ಕಾಗಿ ಮತ್ತು ನಮ್ಮದೇ ಏಳಿಗೆಗಾಗಿ ನಮ್ಮ ಪಾಲಿನ ಕೆಲಸವನ್ನು ಮಾಡಲೇಬೇಕು’.
ಇಲ್ಲಿ ಅರ್ಜುನನ್ನು ನಿಮಿತ್ತವಾಗಿರಿಸಿ ಸಮಸ್ತ ಕಾಲಕ್ಕೆ, ಸಮಸ್ತ ದೇಶಕ್ಕೆ, ಸಮಸ್ತ ಮನುಕುಲಕ್ಕೇ ಹೇಳಿದ ಉಪದೇಶವಿದು. ಇದನ್ನು ಹತ್ತಾರು ಬಾರಿ ಓದಿದರೂ, ವಿಮರ್ಶೆ ಮಾಡಿದರೂ ಮತ್ತೆ ಮತ್ತೆ ಹೊಸತನ್ನು ಕೊಡುತ್ತಿರುತ್ತದೆ. ಆದ್ದರಿಂದಲೇ ಭಗವದ್ಗೀತೆಯ ಬಗ್ಗೆ ಅಷ್ಟೊಂದು ವ್ಯಾಖ್ಯಾನಗಳು, ವಿಮರ್ಶೆಗಳು.
ಗೀತೆಯ ಎಲ್ಲ ಭಾಗವೂ ನಮಗೆ ಒಂದೇ ಸಮನಾಗಿ ಒಂದೇ ಬಾರಿಗೆ ಅರ್ಥವಾಗುವುದಿಲ್ಲ. ನಮ್ಮ ನಮ್ಮ ಶ್ರದ್ಧೆ, ನೈತಿಕತೆ, ಬುದ್ಧಿಶಕ್ತಿ ಯಾವ ಯಾವ ಮಟ್ಟz ಹಾಗೇ ಗೀತೆ ಅರ್ಥವಾಗುತ್ತಾ ಹೋಗು ತ್ತದೆ. ಅಂದರೆ ನಮ್ಮ ಬೆಳವಣಿಗೆಗೆ ತಕ್ಕಂತೆ ಗೀತೆ ಅರ್ಥವಾಗುತ್ತಾ ಹೋಗುತ್ತದೆ. ನಾವು ಪರಿಪಕ್ವ ಗೊಂಡಂತೆಯೇ ಭಗವಂತನ ಮಾತುಗಳು ನಮಗೆ ಅರ್ಥವಾಗುತ್ತವೆ.
ಅರ್ಥವಾಗಲಿಲ್ಲವೆಂದು ಬದಿಗಿರಿಸಿದರೆ ಅದು ನಮಗೆ ನಾವೇ ಮಾಡಿಕೊಳ್ಳು ನಷ್ಟ. ಸದ್ಯಕ್ಕೆ ಅರ್ಥವಾದಷ್ಟು ಗ್ರಹಿಸಿ ಮನನ ಮಾಡುತ್ತಿದ್ದರೆ ಕ್ರಮೇಣ ಅದರ ಆಳ ಹಾಗೂ ಅದರ ಹರಹು ಅರಿವಾಗುತ್ತಾ ಹೋಗುತ್ತದೆ. ಇದು ಮಾನವ-ಮಾನವ ಸಂಬಂಧಗಳನ್ನು ಹಸನಾಗಿಸಿ ಸುಖಮಯ ವಾಗಿಸುತ್ತದೆ.
ಭಗವದ್ಗೀತೆಯನ್ನು ಹಿಂದೂ ಧರ್ಮಗ್ರಂಥ ಎಂದೆನ್ನುತ್ತಾರೆ. ಆದರೆ, ಇದರಲ್ಲಿ ‘ಹಿಂದೂ’ ಎನ್ನುವ ಪದವೇ ಇಲ್ಲ. ವ್ಯಕ್ತಿತ್ವ ನಿರ್ಮಾಣವೇ ಭಗವದ್ಗೀತೆಯ ಉದ್ದೇಶ. ಗೀತೆಯಲ್ಲಿ ಆತ್ಮವಿಕಾಸಕ್ಕೆ ಬೇಕಾದ ಎಲ್ಲ ಹಿರಿಮೆಗಳೂ ಇವೆ. ಇದರಲ್ಲಿಯ ಸಂದೇಶವು ಪ್ರಪಂಚದ ಎಲ್ಲ ಜನರಿಗೂ ಸೇರುತ್ತದೆ. ಅರ್ಜುನ ಇಲ್ಲಿ ನಿಮಿತ್ತ ಮಾತ್ರ. ನಾವೂ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗು ತ್ತದೆ.
ನಮ್ಮನ್ನು ಧೈರ್ಯ ವಂತರನ್ನಾಗಿಸಿ, ಬಲವಂತರನ್ನಾಗಿಸಿ ಜೀವನದ ಸಮಾಲುಗಳನ್ನು ಎದುರಿಸು ವಂತೆ ಮಾಡುವುದು ಈ ಗೀತೆ. ಮಾನವ ಜೀವಿಯಾದವನು ತನ್ನ ಜೀವನದ ಒಡೆಯ ತಾನೇ ಎಂಬುದನ್ನು ತೋರಿಸಬೇಕು. ಬದಲಿಗೆ ಅವನು ಪರಿಸರದ ಒಂದು ಸೃಷ್ಟಿ ಮಾತ್ರ ಎಂದಾಗಿ ಬಿಡಬಾರದು. ಇಲ್ಲಿ ಜೀವನ ತತ್ತ್ವವಿದೆ, ಅದು ಸಂಪೂರ್ಣ ಪ್ರಾಯೋಗಿಕವಾಗಿದೆ. ಇದನ್ನು ನೋಡಿದ ಮೇಲೆ ನಮಗೆ ಗೊತ್ತಾಗುತ್ತದೆ- ಭಗವದ್ಗೀತೆಯು ಮುಪ್ಪಡರಿದ ಮೇಲೆ ಅಲ್ಲ. ಈಗಲೇ ಓದಬೇಕು ಅಂತ.
ಏಕೆಂದರೆ ನಮ್ಮೆಲ್ಲರಿಗೂ ನೆಮ್ಮದಿ, ಮನಃ ಶಾಂತಿ ಬೇಕಲ್ಲವೇ? ಭಗವದ್ಗೀತೆಯನ್ನು ಓದುವುದು ಹೇಗೆ? ಅದಿರುವುದು ಸಂಸ್ಕೃತದಲ್ಲಿ. ಎಷ್ಟು ಜನರಿಗೆ ಈ ಭಾಷೆ ಅರ್ಥವಾದೀತು? ಭಾಷೆ ಬಂದರೂ ಅದರ ಭಾವವನ್ನು ಅರ್ಥ ಮಾಡಿಕೊಂಡವರೆಷ್ಟು ಮಂದಿ? ನಮಗೆ ಸರಿಯಾಗಿ ಅರ್ಥ ಮಾಡಿಸು ವವರಾರು? ಈಗಿನ ತಂತ್ರಜ್ಞಾನದಿಂದಾಗಿ ಎಲ್ಲಾ ಜ್ಞಾನವೂ ಬೆರಳ ತುದಿಯಲ್ಲಿಯೇ ಸಿಗುತ್ತದೆ. ಆದರೂ ಅದು ಪೂರ್ಣ ಪ್ರಮಾಣದಲ್ಲಿ ತಿಳಿಯುತ್ತದೆ ಎಂದೆನ್ನಲಾಗುವುದಿಲ್ಲ.
ಯಾರಾದರೂ ತಿಳಿದವರ ಹೃದಯದಿಂದಲೇ ಭಗವದ್ಗೀತೆಯು ಮುಖತಃ ನೇರವಾಗಿ ಹರಿದುಬಂದರೆ ಒಳ್ಳೆಯದು. ಹಾಗೆ ಆಗದಿದ್ದರೂ ಸಾಕಷ್ಟು ಪುಸ್ತಕಗಳಿವೆ, ಪ್ರವಚನಗಳಿವೆ. ಅದನ್ನಾದರೂ ಕೇಳಿ ಅರ್ಥಮಾಡಿಕೊಳ್ಳೋಣ, ಚಿಂತನೆ ನಡೆಸೋಣ.
ಗೀತೆ ಇರುವುದು ಎಲ್ಲ ವಯಸ್ಸಿನವರಿಗೆ. ಅದರಲ್ಲಿಯೂ ಚಿಕ್ಕಂದಿನಲ್ಲಿ ಬಾಯಿಪಾಠ ಮಾಡಿದ್ದ ರಂತೂ ಅದರ ಫಲಿತಾಂಶ ಅತ್ಯದ್ಭುತ! ಭಗವದ್ಗೀತೆಯು ‘ಈಗಲೇ ಚಂದದ ಬದುಕು ಬೇಕು’ ಅನ್ನುವವರಿಗೆ ಇರುವಂಥದ್ದು. ನಾವು ನಮ್ಮ ಬದುಕಿನ ಯಾವುದೇ ಮೆಟ್ಟಿಲಿನಲ್ಲಿರಲಿ, ಭಗವದ್ಗೀತೆ ಅಲ್ಲಿಂದ ಮುಂದಕ್ಕೆ ನಮ್ಮನ್ನು ಕರೆದೊಯ್ಯುವುದು. ಆದ್ದರಿಂದ, ಇಂದಿನಿಂದಲೇ ಭಗವದ್ಗೀತೆ ಯನ್ನು ಓದೋಣ...
(ಲೇಖಕಿ ಹವ್ಯಾಸಿ ಬರಹಗಾರ್ತಿ)