ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಮೋದಿ-ಪುಟಿನ್:‌ ಯೇ ದೋಸ್ತಿ ಹಮ್‌ ನಹೀ ತೋಡೆಂಗೇ !

ಭಾರತ ಮತ್ತು ರಷ್ಯಾದ ಸ್ನೇಹ ಎಷ್ಟು ಗಟ್ಟಿಯಾಗಿದೆ ಅಂದರೆ, ಬಾಹ್ಯಶಕ್ತಿಗಳು ಅದನ್ನು ಒಡೆಯಲು ಎಷ್ಟೇ ಪ್ರಯತ್ನ ಮಾಡಿದರೂ ಸಫಲರಾಗುವುದಿಲ್ಲ ಎಂಬುದನ್ನು ಅವರಿಬ್ಬರೂ ತೋರಿಸಿಕೊಟ್ಟಿದ್ದಾರೆ. ಭಾರತಕ್ಕೆ ಬಂದಿದ್ದ ಪುಟಿನ್ ಜೊತೆ ಮೋದಿ ಸಭೆ ನಡೆಸಿದ ಬಳಿಕ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಆ ವೇಳೆ, ಭಾರತ ಮತ್ತು ರಷ್ಯಾದ ಸ್ನೇಹವು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿವೆ ಎಂದು ನರೇಂದ್ರ ಮೋದಿ ಹೇಳಿದರು.

Dr Vijay Darda Column: ಮೋದಿ-ಪುಟಿನ್:‌ ಯೇ ದೋಸ್ತಿ ಹಮ್‌ ನಹೀ ತೋಡೆಂಗೇ !

-

ಸಂಗತ

ಇತ್ತೀಚೆಗೆ ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಂದಿದ್ದರು. ಆಗ ಮೋದಿ ಮತ್ತು ಪುಟಿನ್ ಸೇರಿಕೊಂಡು ನೇರವಾಗಿ ಸಂದೇಶ ನೀಡಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ. ಏನದು ಸಂದೇಶ? ಭಾರತ ಮತ್ತು ರಷ್ಯಾ ಹೊಸ ಸವಾಲಿಗೆ ಸಿದ್ಧವಾಗಿವೆ! ಅಮೆರಿಕದ ಬೆದರಿಕೆಗಳನ್ನು ಮೀರಿ ಬಾಂಧವ್ಯವನ್ನು ಸದೃಢಗೊಳಿಸಲು ಸಜ್ಜಾಗಿವೆ.

ಒಂದು ಹಳೆಯ ಮಾತಿದೆ. ‘ಮನೆ ಕಟ್ಟುವಾಗ ತಳಪಾಯವನ್ನು ಆಳವಾಗಿ, ಗಟ್ಟಿಯಾಗಿ ಹಾಗೂ ಮಜಬೂತಾಗಿ ಹಾಕಿದರೆ ಚಂಡಮಾರುತ ಬಂದಾಗಲೂ ನೆಮ್ಮದಿಯಿಂದ ನಿದ್ದೆ ಮಾಡಬಹುದು. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಮಗೆ ಮತ್ತೊಮ್ಮೆ ಈ ಮಾತು ನೆನಪಿಸಿದ್ದಾರೆ.

ಭಾರತ ಮತ್ತು ರಷ್ಯಾದ ಸ್ನೇಹ ಎಷ್ಟು ಗಟ್ಟಿಯಾಗಿದೆ ಅಂದರೆ, ಬಾಹ್ಯಶಕ್ತಿಗಳು ಅದನ್ನು ಒಡೆಯಲು ಎಷ್ಟೇ ಪ್ರಯತ್ನ ಮಾಡಿದರೂ ಸಫಲರಾಗುವುದಿಲ್ಲ ಎಂಬುದನ್ನು ಅವರಿಬ್ಬರೂ ತೋರಿಸಿಕೊಟ್ಟಿದ್ದಾರೆ. ಭಾರತಕ್ಕೆ ಬಂದಿದ್ದ ಪುಟಿನ್ ಜೊತೆ ಮೋದಿ ಸಭೆ ನಡೆಸಿದ ಬಳಿಕ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆ ವೇಳೆ, ಭಾರತ ಮತ್ತು ರಷ್ಯಾದ ಸ್ನೇಹವು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿವೆ ಎಂದು ನರೇಂದ್ರ ಮೋದಿ ಹೇಳಿದರು.

ನಂತರ ಪುಟಿನ್ ಅವರು, ಏನೇ ಬಂದರೂ ಭಾರತಕ್ಕೆ ರಷ್ಯಾ ನಿರಂತರವಾಗಿ ತೈಲ ಪೂರೈಕೆ ಮಾಡಲಿದೆ ಎಂದು ಹೇಳಿದರು. ಇವರಿಬ್ಬರ ಮಾತೂ ನೇರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಗುರಿಯಾಗಿಸಿಕೊಂಡಿದ್ದಾಗಿತ್ತು!

ಇದನ್ನೂ ಓದಿ: Dr Vijay Darda Column: ಶಾಂತಿಯ ಗೀತೆಗಳು ಮತ್ತು ಅಣ್ವಸ್ತ್ರ ಪರೀಕ್ಷೆ !

ಇತ್ತೀಚೆಗಷ್ಟೇ ಡೊನಾಲ್ಡ್ ಟ್ರಂಪ್ ಅವರು, ‘ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದೆ’ ಎಂದು ಹಲವಾರು ಬಾರಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಭಾರತ, ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ತೈಲ ಆಮದಿನ ವಿಷಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದಿತ್ತು. ಆಗ ಟ್ರಂಪ್, ‘ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಭಾರತಕ್ಕೆ ಸ್ವಲ್ಪ ಸಮಯ ಬೇಕಾಗಬಹುದು’ ಎಂದಿದ್ದರು!

ರಷ್ಯಾದಿಂದ ಭಾರತ ತೈಲ ಖರೀದಿಸುತ್ತದೆ ಎಂಬ ಕಾರಣಕ್ಕಾಗಿಯೇ ಭಾರತದ ಉತ್ಪನ್ನಗಳಿಗೆ ಟ್ರಂಪ್ ಅಮೆರಿಕದಲ್ಲಿ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹಾಕಿದ್ದಾರೆ. ಭಾರತ ಈ ತೆರಿಗೆಯ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆಯೇ ಎಂದು ಕೆಲವರಾದರೂ ಯೋಚಿಸುತ್ತಿದ್ದಾರೆ. ಭಾರತ ಹಾಗೆ ಮಾಡಿದರೆ ಭಾರತ ಮತ್ತು ರಷ್ಯಾ ನಡುವಿನ ಸ್ನೇಹಕ್ಕೆ ಧಕ್ಕೆಯಾಗಬಹುದೇ ಎಂದೂ ಇನ್ನು ಕೆಲವರು ಯೋಚಿಸುತ್ತಿದ್ದಾರೆ. ನನಗೂ ಕೆಲವರು ಈ ಪ್ರಶ್ನೆ ಕೇಳಿದ್ದಾರೆ.

ಅವರಿಗೆಲ್ಲ ನಾನು ಹೇಳುವುದು ಇಷ್ಟೆ: ‘ಭಾರತ ಯಾವತ್ತೂ ಯಾರಿಗೂ ತಲೆಬಾಗಿಲ್ಲ. ಈಗಲೂ ಅದು ಯಾರಿಗೂ ತಲೆಬಾಗುವುದಿಲ್ಲ ಮತ್ತು ಇನ್ನು ಮುಂದೆಯೂ ತಲೆಬಾಗುವುದಿಲ್ಲ! ನಾವು ಅಹಿಂಸೆಯಲ್ಲಿ ನಂಬಿಕೆಯಿಟ್ಟಿರುವ ಪ್ರಜೆಗಳು ಎಂಬುದು ನಿಜವೇ ಆದರೂ, ದಬ್ಬಾಳಿಕೆಯನ್ನು ಸಹಿಸಿಕೊಳ್ಳುತ್ತೇವೆ ಎಂಬುದು ಅದರರ್ಥ ಅಲ್ಲ. ಪರಸ್ಪರ ವಿಶ್ವಾಸ ಮತ್ತು ಗೌರವ ಇರುವ ಕಡೆ ಮಾತ್ರ ತಲೆಬಾಗುತ್ತೇವೆ.

Putin-Modi (2)

ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಇಂದು ನಿನ್ನೆಯದಲ್ಲ. ಸೋವಿಯತ್ ಒಕ್ಕೂಟ ಇದ್ದಾಗಲೇ ಅದರ ಜೊತೆಗೆ ಭಾರತಕ್ಕೆ ಸ್ನೇಹವಿತ್ತು. ಅದು ಕೇವಲ ಆರ್ಥಿಕ ವಿಷಯಗಳಿಗೆ ಸೀಮಿತವಾಗಿರಲಿಲ್ಲ. ಹೃದಯಗಳನ್ನು ಬೆಸೆದ ನಿಜವಾದ ಸ್ನೇಹವದು. ಪರಸ್ಪರ ನಂಬಿಕೆ, ಎರಡೂ ದೇಶಗಳ ಸಂಸ್ಕೃತಿ, ಮೌಲ್ಯಗಳು ಹಾಗೂ ಜನಜೀವನದ ನಡುವೆ ಇರುವ ಸಾಮ್ಯತೆಯ ಮೇಲೆ ಈ ಸ್ನೇಹ ಬೆಳೆದು ಬಂದಿದೆ.

ಈ ಹಿಂದೆ ಅಮೆರಿಕದ ಜೊತೆಗೆ ಸೈದ್ಧಾಂತಿಕವಾಗಿ ಸಾಮೀಪ್ಯ ಹೊಂದಿದ್ದ ಪ್ರಧಾನಿಗಳು ಭಾರತ ದಲ್ಲಿ ಆಗಿ ಹೋಗಿದ್ದಾರೆ. ಆದರೆ ಅವರೂ ಕೂಡ ಅಧಿಕೃತ ಕಡತಗಳನ್ನು ಪರಿಶೀಲಿಸಿದ ಮೇಲೆ ವಾಸ್ತವವನ್ನು ಅರಿತುಕೊಂಡು ರಷ್ಯಾದ ಜೊತೆಗೆ ಉತ್ತಮವಾದ ಸಂಬಂಧವನ್ನು ಹೋಗಿದ್ದಾರೆ.

ಮುಂದುವರಿಸಿಕೊಂಡು ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಹೇಗೆ ಈ ಎರಡು ದೇಶಗಳ ಜನರ ಹೃದಯಗಳನ್ನು ಬೆಸೆದಿದೆ ಎಂಬುದಕ್ಕೊಂದು ಉದಾಹರಣೆ ನೀಡುತ್ತೇನೆ. ನಾನು ಫಿಫಾ ವಿಶ್ವಕಪ್ ನೋಡಲು ಮಾಸ್ಕೋಗೆ ಹೋಗಿದ್ದೆ. ಆಗ ಭಾರತೀಯರ ಬಗ್ಗೆ ರಷ್ಯನ್ನರು ತೋರಿಸುವ ಪ್ರೀತಿ ನನಗೆ ಬಹಳ ಸಹಜವಾಗಿ ಮತ್ತು ಆಪ್ತವಾಗಿ ಕಾಣಿಸಿತ್ತು.

ಅವರು ನನ್ನನ್ನು ತುಂಬಾ ಗೌರವದಿಂದ ನೋಡಿಕೊಂಡರು. ನನ್ನನ್ನು ಮಾತ್ರವಲ್ಲ, ಎಲ್ಲ ಭಾರತೀಯರನ್ನೂ ಅವರು ಹಾಗೇ ಆದರಿಸುತ್ತಿದ್ದರು. ಅದಕ್ಕೂ ಮೊದಲು ನಾನು ರಷ್ಯಾದ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪುಟಿನ್‌ರನ್ನು ಭೇಟಿಯಾಗಿದ್ದೆ. ನಂತರ ಫುಟ್ಬಾಲ್ ಪಂದ್ಯ ನೋಡುವಾಗ ಭಾರತದ ತ್ರಿವರ್ಣ ಧ್ವಜ ಹಿಡಿದು ಇಂಡಿಯಾ ಮತ್ತು ರಷ್ಯಾ ನಡುವಿನ ಸಂಬಂಧಕ್ಕೆ ಜೈಕಾರ ಹಾಕುತ್ತಿದ್ದೆ. ಆಗ ಕೆಳಗೆ ಕುಳಿತಿದ್ದ ಪುಟಿನ್ ನನ್ನ ಕಡೆಗೆ ತಿರುಗಿ ನೋಡಿ ಕೈಬೀಸಿ ನಕ್ಕಿದ್ದರು.

ಸೋವಿಯತ್ ಯೂನಿಯನ್ ಇದ್ದಾಗ ಅದು ಕಮ್ಯುನಿಸ್ಟ್ ದೇಶಗಳ ಒಕ್ಕೂಟವಾಗಿತ್ತು. ರಷ್ಯಾ ಕೂಡ ಈಗ ಹೆಚ್ಚುಕಮ್ಮಿ ಅದೇ ಸಿದ್ಧಾಂತವನ್ನೇ ಹೊಂದಿದೆ. ಆದರೆ ನೀವು ಕ್ರೆಮ್ಲಿನ್ ನಲ್ಲಿರುವ ರಷ್ಯಾದ ಸಂಸತ್ತನ್ನು ನೋಡಿದರೆ ಅದು ಎಷ್ಟು ವೈಭವೋಪೇತವಾಗಿದೆ ಅಂದರೆ, ಅಮೆರಿಕ ಮತ್ತು ಚೀನಾದ ಸಂಸತ್ ಭವನಗಳನ್ನೂ ಮೀರಿಸುತ್ತದೆ. ಅಲ್ಲಿರುವ ವಸ್ತುಗಳೆಲ್ಲ ಚಿನ್ನದಿಂದ ಲೇಪಿತವಾಗಿವೆ.

ಬಹುಶಃ ಅವರು ಕಮ್ಯುನಿಸಂ ಮೂಲಕವೇ ಜನರ ಬದುಕಿಗೆ ಶ್ರೀಮಂತಿಕೆಯನ್ನು ತರಲು ಯತ್ನಿಸಿದ್ದರು. ಆದರೆ ವಾಸ್ತವದಲ್ಲಿ ಈಗ ರಷ್ಯಾದಲ್ಲಿ ಕಮ್ಯುನಿಸಂ ಎಂಬುದು ಕಾಗದದ ಮೇಲೆ ಮಾತ್ರ ಉಳಿದಿದೆ. ಹೊಸ ತಲೆಮಾರಿನ ಓದುಗರಿಗೆ ನಾನೊಂದು ಮಾಹಿತಿ ನೀಡಬೇಕು. ಭಾರತಕ್ಕೆ ಬ್ರಿಟನ್‌ನಿಂದ ಸ್ವಾತಂತ್ರ್ಯ ಲಭಿಸಿದಾಗ ಗೋವಾ, ದಮನ್ ಮತ್ತು ದಿಯುವನ್ನು ಆಳುತ್ತಿದ್ದ ಪೋರ್ಚುಗೀಸರು ತಮ್ಮ ಹಿಡಿತ ಬಿಟ್ಟುಕೊಡಲಿಲ್ಲ. ಹೀಗಾಗಿ 1961ರ ಡಿಸೆಂಬರ್‌ನಲ್ಲಿ ನಮ್ಮ ಸೇನೆ ಗೋವಾವನ್ನು ಪೋರ್ಚುಗೀಸರಿಂದ ಬಿಡಿಸಿಕೊಳ್ಳಲು ದಾಳಿ ನಡೆಸಿತು.

ಆ ಸಮಯದಲ್ಲಿ ಯುರೋಪಿಯನ್ ದೇಶಗಳು ಮತ್ತು ಅಮೆರಿಕ ನಮ್ಮ ವಿರುದ್ಧ ಇದ್ದವು. ಆದರೆ ಸೋವಿಯತ್ ಯೂನಿಯನ್ ನಮ್ಮನ್ನು ಬೆಂಬಲಿಸಿತ್ತು. ವಿಶ್ವಸಂಸ್ಥೆಯಲ್ಲಿ ಭಾರತದ ಪರವಾಗಿ ಸೋವಿಯತ್ ಒಕ್ಕೂಟ ತನ್ನ ವಿಟೋ ಚಲಾಯಿಸಿತ್ತು. ನಂತರ 1971ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೆರವಾಗಲು ಬಂಗಾಳ ಕೊಲ್ಲಿಗೆ ಅಮೆರಿಕ ತನ್ನ ಸಮರ ನೌಕೆಗಳನ್ನು ಕಳುಹಿಸಿತ್ತು. ಆದರೆ ಆ ಹಡಗುಗಳು ಬರುವುದಕ್ಕೂ ಮೊದಲೇ ರಷ್ಯಾದ ಸಬ್‌ಮರೀನ್‌ಗಳು ಅಲ್ಲಿಗೆ ಬಂದು ಭಾರತದ ಬೆನ್ನಿಗೆ ನಿಂತಿದ್ದವು.

ತನ್ನ ಜಲಾಂತರ್ಗಾಮಿಗಳನ್ನು ಕಳುಹಿಸುವ ಮೂಲಕ ಅಮೆರಿಕಕ್ಕೆ ರಷ್ಯಾ ‘ವಾಪಸ್ ಹೋಗಿ, ಇಲ್ಲವೇ ಪರಿಣಾಮ ಎದುರಿಸಿ ಎಂಬ ಸ್ಪಷ್ಟ ಸಂದೇಶವನ್ನು ನೀಡಿತ್ತು!ಇಂದು ಭಾರತದ ಬಳಿ ಜಗತ್ತಿನ ನಾಲ್ಕನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ ಇದೆ. ಭಾರತ ಈ ಹಂತವನ್ನು ತಲುಪುವಲ್ಲಿ ರಷ್ಯಾದ ನೆರವು ಬಹಳ ದೊಡ್ಡದಿದೆ. ರಷ್ಯಾ ನಮಗೆ ಸಾಕಷ್ಟು ಯುದ್ಧ ಸಲಕರಣೆಗಳನ್ನು ನೀಡಿದೆ. ಅವೆಲ್ಲವೂ ಶಕ್ತಿಶಾಲಿ ಶಸ್ತ್ರಾಸ್ತ್ರಗಳು. ಕೇವಲ ಶಸ್ತ್ರಾಸ್ತ್ರಗಳನ್ನು ಮಾತ್ರವಲ್ಲ, ಅವುಗಳ ತಂತ್ರಜ್ಞಾನ ವನ್ನೂ ರಷ್ಯಾ ನಮಗೆ ಬೇಷರತ್ತಾಗಿ ನೀಡಿದೆ.

ಹೀಗಾಗಿ ಭಾರತ ಮತ್ತು ರಷ್ಯಾ ನಡುವಿನ ಸ್ನೇಹವನ್ನು ಮುರಿಯಲು ಅಮೆರಿಕವಾಗಲೀ, ಅಮೆರಿಕದ ಜೊತೆಗೆ ಸ್ನೇಹ ಹೊಂದಿರುವ ಇನ್ನಾವುದೇ ದೇಶವಾಗಲೀ ಯತ್ನಿಸಿದರೆ ಖಂಡಿತ ಅವು ಸಫಲ ವಾಗುವುದಿಲ್ಲ.

ಇದನ್ನು ಎಲ್ಲರಿಗಿಂತ ಹೆಚ್ಚಾಗಿ ಅಮೆರಿಕವೇ ಅರ್ಥ ಮಾಡಿಕೊಳ್ಳಬೇಕು. ಅಮೆರಿಕ, ಯುರೋಪ್, ಚೀನಾ ಹೀಗೆ ಸಾಕಷ್ಟು ದೇಶಗಳಲ್ಲಿ ಮೋದಿ ಮತ್ತು ಪುಟಿನ್ ನಡುವಿನ ಭೇಟಿ ತಲ್ಲಣದ ಅಲೆಗಳನ್ನು ಎಬ್ಬಿಸಿದೆ. ಮುಂದಿನ ಜಾಗತಿಕ ವಿದ್ಯಮಾನಗಳ ಮೇಲೆ ಈ ಭೇಟಿ ಹೇಗೆ ಪ್ರಭಾವ ಬೀರಲಿದೆ ಎಂದು ಎಲ್ಲಾ ದೇಶಗಳೂ ಲೆಕ್ಕಹಾಕಲು ಆರಂಭಿಸಿವೆ.

ಮೋದಿ ಮತ್ತು ಪುಟಿನ್ ಇಬ್ಬರೂ ತಮ್ಮ ನಡುವಿನ ಸ್ನೇಹ ಇನ್ನಷ್ಟು ಗಟ್ಟಿಯಾಗಿದೆ ಎಂಬುದನ್ನು ಸಾರಿ ಹೇಳಿದ್ದಾರೆ. ಪುಟಿನ್ ಭಾರತಕ್ಕೆ ಡಿಸೆಂಬರ್ ೪ರಂದು ಭೇಟಿ ನೀಡುವುದು ನಿಗದಿಯಾಗಿತ್ತಷ್ಟೆ. ಅದಕ್ಕೂ ಮುನ್ನ ಡಿಸೆಂಬರ್ ೧ರಂದು ಭಾರತದ ಪ್ರಸಿದ್ಧ ಇಂಗ್ಲಿಷ್ ದಿನಪತ್ರಿಕೆಯೊಂದು ಭಾರತ ದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಆಕರ್ಮನ್, ಫ್ರಾನ್ಸ್ ರಾಯಭಾರಿ ಥೀರಿ ಮತ್ ಮತ್ತು ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್ ಜಂಟಿಯಾಗಿ ಬರೆದ ಲೇಖನವೊಂದನ್ನು ಪ್ರಕಟಿಸಿತ್ತು. ಅದರ ಶೀರ್ಷಿಕೆ: ‘ಜಗತ್ತು ಉಕ್ರೇನ್ ಯುದ್ಧದ ಅಂತ್ಯವನ್ನು ಬಯಸುತ್ತಿದೆ, ಆದರೆ ರಷ್ಯಾಕ್ಕೆ ಶಾಂತಿ ಬೇಕಿಲ್ಲ. ಇದು ಕಿಡಿಗೇಡಿತನವಲ್ಲದೆ ಮತ್ತೇನು? ಆದರೆ ಅರ್ಥವಾಗುತ್ತದೆ.

ಪುಟಿನ್‌ಗೆ ಆದ್ದರಿಂದಲೇ ಇದೆಲ್ಲ ಅವರು ಚೆನ್ನಾಗಿ ನರೇಂದ್ರ ಮೋದಿಯ ಜೊತೆ ಸೇರಿಕೊಂಡು ಕಿಡಿಗೇಡಿಗಳ ಮೈಮೇಲಿನ ಗಾಯಕ್ಕೆ ಉಪ್ಪು ಸವರಿದರು. ಮೋದಿ ಮತ್ತು ಪುಟಿನ್ ಭಾರತ-ರಷ್ಯಾ ನಡುವಿನ ಸ್ನೇಹವನ್ನು ಒಂದೇ ಭೇಟಿಯಲ್ಲಿ ಯಾವ ಎತ್ತರಕ್ಕೆ ಏರಿಸಿದರು ಅಂದರೆ, ಅದನ್ನು ನೋಡಿ ಜಗತ್ತೇ ನಿಬ್ಬೆರಗಾಯಿತು!

ಪರಸ್ಪರ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮಿಬ್ಬರ ಜವಾಬ್ದಾರಿ ಎಂದು ಮೋದಿ ನೇರವಾಗಿ ಹೇಳಿದರು. ಅಲ್ಲದೆ, ಎರಡೂ ದೇಶಗಳು ಆರ್ಥಿಕ ಸಹಭಾಗಿತ್ವವನ್ನು 2030 ರವರೆಗೂ ಮುಂದುವರಿಸಲು ಒಪ್ಪಂದ ಮಾಡಿಕೊಂಡವು.

ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಟ್ರಾನ್ಸ್‌ಪೋರ್ಟ್ ಕಾರಿಡಾರ್ ಮತ್ತು ಚೆನ್ನೈ-ವ್ಲಾಡಿವೊಸ್ಟೋಕ್ ಮೇರಿಟೈಮ್ ಕಾರಿಡಾರ್‌ನಂತಹ ಇಂಧನ ಯೋಜನೆಗಳನ್ನು ಮುಂದುವರಿಸಲು ನಿರ್ಧಾರ ಕೈಗೊಂಡವು. ಈ ನಡುವೆ, ಭಾರತದ ‘ಮೇಕ್ ಇನ್ ಇಂಡಿಯಾ ಯೋಜನೆಗೆ ರಷ್ಯಾ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪುಟಿನ್ ಯಾವ ಹಿಂಜರಿಕೆಯೂ ಇಲ್ಲದೆ ಹೇಳಿದರು.

ಎರಡೂ ದೇಶಗಳು ತಮ್ಮ ನಡುವಿನ ವ್ಯಾಪಾರವನ್ನು ರೂಬಲ್ ಮತ್ತು ರುಪಾಯಿಯಲ್ಲಿ ನಡೆಸು ತ್ತಿವೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಯಿತು. ತನ್ಮೂಲಕ ಅಮೆರಿಕದ ಡಾಲರ್‌ಗೆ ನೇರವಾಗಿ ಸಡ್ಡು ಹೊಡೆಯಲಾಯಿತು.

ಬಹುಶಃ ಟ್ರಂಪ್‌ರನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ಪುಟಿನ್ ಇನ್ನೂ ಒಂದು ಮಾತು ಹೇಳಿದರು: ‘ರಷ್ಯಾ ಮತ್ತು ಭಾರತ ದೇಶಗಳು ಬ್ರಿಕ್ಸ್ ದೇಶಗಳ ಜೊತೆಗೆ ಸೇರಿ ನ್ಯಾಯಯುತ ಮತ್ತು ಮಲ್ಟಿ ಪೋಲಾರ್ ಜಗತ್ತನ್ನು ನಿರ್ಮಿಸಲು ಕಟಿಬದ್ಧವಾಗಿವೆ. ಅಂದರೆ ಅಮೆರಿಕದ ಮೂಗಿನ ನೇರಕ್ಕೆ ರೂಪುಗೊಂಡಿರುವ ಈಗಿನ ಜಾಗತಿಕ ವ್ಯವಸ್ಥೆ ನ್ಯಾಯಯುತವಾಗಿಲ್ಲ ಎಂದೇ ಅರ್ಥವಲ್ಲವೆ? ಮೋದಿ ಮತ್ತು ಪುಟಿನ್ ಬಳಸಿದ ಈ ಭಾಷೆ ಖಂಡಿತ ಟ್ರಂಪ್‌ಗೆ ಆಘಾತ ತಂದಿರುತ್ತದೆ. ಆದರೆ ಅವರು ಏನೇ ತಿಪ್ಪರಲಾಗ ಹಾಕಿದರೂ ಭಾರತ ಮತ್ತು ರಷ್ಯಾದ ನಡುವಿನ ಸ್ನೇಹವನ್ನು ಮುರಿಯಲು ಸಾಧ್ಯವಿಲ್ಲ.

ಹೀಗಾಗಿ ಟ್ರಂಪ್ ಇನ್ನೊಂದಷ್ಟು ಭಾಷಣ ಮಾಡಿ ಭಾರತ ಮತ್ತು ರಷ್ಯಾಕ್ಕೆ ಮಾತಿನಲ್ಲಿ ತಿವಿಯಲು ಯತ್ನಿಸಬಹುದು. ಆದರೆ ವಾಸ್ತವದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯವನ್ನು ಒಡೆಯಲು ಅವರ ಕೈಲಿ ಸಾಧ್ಯವಿಲ್ಲ. ಏಕೆಂದರೆ.. ಯೇ ದೋಸ್ತಿ ಹಮ್ ನಹೀ ತೋಡೆಂಗೇ!ಸಲಾಮತ್ ರಹೇ ದೋಸ್ತಾನಾ ಹಮಾರಾ!