ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Devi Maheshwara Hampinaidu Column: ಆಪರೇಷನ್‌ ಸಿಂದೂರ ಮತ್ತು ಗುಜರಿ ಬಾಬಾ !

ಹಿಂದೂ ಹೆಣ್ಣು ಮಕ್ಕಳ ‘ಸಿಂದೂರ ತಿಲಕ’ವನ್ನು ಅಳಿಸುವ ಏಕೈಕ ಉದ್ದೇಶದ ಜಿಹಾದಿ ಮತ್ತು ಕ್ರೈಸ್ತ ಮಿಷನರಿ ಮತಾಂತರ ದಂಧೆಗಳನ್ನು ದೇಶದೊಳಗೆ ಮೊದಲು ಮಟ್ಟಹಾಕಬೇಕಿದೆ. ಇದಕ್ಕೆ ಬೇರೆಯದೇ ತೆರನಾದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಅಗತ್ಯವಿದೆ. ಆಳುಗರು ಈ ನಿಟ್ಟಿನಲ್ಲಿ ಕಟಿಬದ್ಧರಾಗಬೇಕಷ್ಟೇ....

ಆಪರೇಷನ್‌ ಸಿಂದೂರ ಮತ್ತು ಗುಜರಿ ಬಾಬಾ !

Ashok Nayak Ashok Nayak Jul 22, 2025 8:43 AM

ಧರ್ಮಪೀಠ

ದೇವಿ ಮಹೇಶ್ವರ ಹಂಪಿನಾಯ್ಡು

ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ, ‘ದೇಶದ ರಕ್ಷಣಾ ವಿಶ್ವಾಸಾರ್ಹತೆಯನ್ನು ವಿಶ್ವಕ್ಕೇ ತೋರಿದ ಸಿಂದೂರ’ ಎಂಬುದಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಸಾಧನೆಯನ್ನು ವರ್ಣಿಸಿದ್ದಾರೆ. ಇದು ನಿಜಕ್ಕೂ ದೇಶಾಭಿಮಾನಿಗಳ ಸ್ವಾಭಿಮಾನದ ಪ್ರತೀಕ.

ಸ್ವಾತಂತ್ರ್ಯಾನಂತರದ ಆರೂವರೆ ದಶಕಗಳಲ್ಲಿ ಮಾಡಲಾಗದಂಥ ಅನೇಕ ಅನೂಹ್ಯ ಬದಲಾವಣೆ ಗಳನ್ನು ಕಳೆದ 11 ವರ್ಷಗಳಲ್ಲಿ ಮೋದಿಯವರ ನೇತೃತ್ವದ ಘನ ಸರಕಾರ ಮಾಡಿ, ‘ಇದೇ ನಿಜವಾದ ಭಾರತ’ ಎಂದು ನಿರೂಪಿಸುತ್ತಿದೆ ಮತ್ತು ಮುಂದೆಯೂ ದೇಶಕ್ಕೆ ಅನಿವಾರ್ಯವಾಗಿರುವ ಅನೇಕ ಸುಧಾರಣೆ/ ಬದಲಾವಣೆಗಳನ್ನು ಮಾಡುವ ವಿಶ್ವಾಸವನ್ನು ಅದು ಇಟ್ಟುಕೊಂಡಿದೆ, ಅಂಥ ಧ್ಯೇಯವನ್ನು ಹೊಂದಿದೆ.

ಶತ್ರುರಾಷ್ಟ್ರ ಪಾಕಿಸ್ತಾನದ ಒಳಗೆ ನುಗ್ಗಿ ಯುದ್ಧ ಮಾಡುವುದರ ಬದಲಿಗೆ, ಇಲ್ಲಿದ್ದುಕೊಂಡೇ ನೂರಾರು ಕಿ.ಮೀ. ದೂರದ ಪಾಕ್ ಉಗ್ರರ ನೆಲೆಗಳನ್ನು ನಾಶಮಾಡುವಂಥ ಆಧುನಿಕ ಯುದ್ಧನೀತಿ ಯನ್ನು ಭಾರತವು ವಿಶ್ವಕ್ಕೆ ತೋರಿದೆ. ಆದರೆ ಭಾರತದೊಳಗೇ ಇದ್ದುಕೊಂಡು ಬಾಧಿಸುತ್ತಿರುವ ‘ಮತಾಂತರ’ ಎಂಬ ಪಿಡುಗನ್ನು ಮಾತ್ರ ಕತ್ತರಿಸಿ ಬಿಸಾಡಲು ರಾಜ್ಯ ಸರಕಾರಗಳಿಗಾಗಲೀ ಕೇಂದ್ರ ಸರಕಾರಗಳಿಗಾಗಲೀ ಇದುವರೆಗೂ ಸಾಧ್ಯವಾಗದಿರುವುದು ದೇಶದ ದೊಡ್ಡ ದೌರ್ಭಾಗ್ಯ.

ಇದನ್ನೂ ಓದಿ: Vishweshwar Bhat Column: ರನ್‌ ವೇ ಮೇಲಿನ ಗುರುತುಗಳು

ಅದರಲ್ಲೂ ಇಂದಿನ ಇಂಟರ್‌ನೆಟ್/ ಸೋಷಿಯಲ್ ಮೀಡಿಯಾ ಕಾಲದಲ್ಲೂ ಉತ್ತರಪ್ರದೇಶದಲ್ಲಿ ಯಃಕಶ್ಚಿತ್ ‘ಗುಜರಿಬಾಬಾ’ ಒಬ್ಬನೇ, ಇತಿಹಾಸದ ಇಸ್ಲಾಂ ಮತಾಂತರಕಾರರನ್ನೇ ಮೀರಿಸುವಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸುತ್ತಾನೆ ಎಂದರೆ, ಅದರಲ್ಲೂ ‘ಬುಲ್ಡೋಜರ್ ಕಾರ್ಯಾಚರಣೆ’ ಖ್ಯಾತಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ‘ಉತ್ತರ ಪ್ರದೇಶ’ ಸಾಮ್ರಾಜ್ಯ ದಲ್ಲೇ ಈ ದೊಡ್ಡ ‘ಗ್ಯಾಂಗ್ರಿನ್’ ಜೀವಂತವಾಗಿದೆ ಎಂದರೆ, ಇದು ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶ ಸರಕಾರದ ದೊಡ್ಡ ವೈಫಲ್ಯವಲ್ಲದೆ ಬೇರೇನೂ ಅಲ್ಲ.

‘ಭ್ರಷ್ಟಾಚಾರ-ಗೋಹತ್ಯೆ-ಮತಾಂತರ’ ಈ ಮೂರು ಪಿಡುಗುಗಳು ನಮ್ಮ ದೇಶದ ಉದ್ದಗಲಕ್ಕೂ ಸೆಟ್‌ದೋಸೆಯಂತೆ ‘ಬಿಸಿಬಿಸಿ ವ್ಯಾಪಾರ’ವಾಗಿದ್ದರೂ, ಅದರ ವಿರುದ್ಧದ ಕ್ರಮಗಳು ‘ತಂಗಳನ್ನ’ ದಂತಾಗಿ ಹೋಗಿವೆ. ಕುತಂತ್ರಿ ಮತಾಂತರಿಗಳಿಗೆ ದೇಶದ ಯಾವುದೇ ಕಾನೂನು-ಕಾಯ್ದೆಗಳ ಭಯವಿಲ್ಲ. ಈ ಮೂರೂ ಪಿಡುಗುಗಳನ್ನು ನಿಯಂತ್ರಿಸಬೇಕಾದ ಕಾಯಿದೆಗಳು ಆಟಿಕೆ ಬಂದೂಕಿ ನಂತೆ ಆಗಿಹೋಗಿವೆ.

ಭಾರತವನ್ನು ಆಕ್ರಮಿಸಿದ್ದ ಇಸ್ಲಾಂ ಮತಾಂಧರು, ಹಿಂದೂಗಳನ್ನು ಕತ್ತಿಯ ಮೂಲಕ ಬೆದರಿಸಿ ಇಸ್ಲಾಂಗೆ ಮತಾಂತರಿಸುತ್ತಿದ್ದರು. ನಂತರ ಬಂದ ಆಂಗ್ಲರು ಆಮಿಷಗಳ ಮೂಲಕ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದರು. ಭಾರತದಲ್ಲಿ ಮೂಲತಃ ಇರದ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಗಳು ನಮ್ಮ ನಡುವೆ ಸೃಷ್ಟಿಯಾಗಿದ್ದು ಹೀಗೆ! ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಸಂವಿಧಾ ನಾತ್ಮಕ ಪ್ರಜಾಪ್ರಭುತ್ವ ಜಾರಿಯಾದರೂ, ಈ ಮತಾಂತರದ ಪಿಡುಗನ್ನು ತಡೆಯಲು ಯಾರ ಕೈಯಿಂದಲೂ ಸಾಧ್ಯವಾಗಲಿಲ್ಲ, ಈಗಲೂ ಆಗುತ್ತಿಲ್ಲ.

ಒಂದು ಕಡೆ ಭಯೋತ್ಪಾದಕರು ಗುಂಡಿಟ್ಟು ಹಿಂದೂಗಳನ್ನು ಕೊಲ್ಲುತ್ತಿದ್ದರೆ, ಮತ್ತೊಂದೆಡೆ ಕ್ರೈಸ್ತ ಮಿಷನರಿಗಳು ಹಿಂದೂ ಧರ್ಮವನ್ನೇ ಕೊಲ್ಲುತ್ತಿವೆ. ಇವರನ್ನು ಮಟ್ಟಹಾಕಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಇತ್ತೀಚಿನ ನಿದರ್ಶನವನ್ನೇ ನೋಡಿ. ಇಷ್ಟು ವರ್ಷಗಳ ಕಾಲ, ಸರಕಾರವಿರಲಿ ಯಾವ ಮಾಧ್ಯಮಗಳಿಗೂ ಗೋಚರಿಸದ ಬೃಹತ್ ಮತಾಂತರ ಜಾಲವೊಂದು ಸಿಕ್ಕಿಬಿದ್ದಿದೆ.

ಉತ್ತರಪ್ರದೇಶದ ಲಖನೌ ವ್ಯಾಪ್ತಿಯ ಬಲರಾಂಪುರದಲ್ಲಿ ಒಂದು ಕಾಲಕ್ಕೆ ಸೈಕಲ್‌ನಲ್ಲಿ ಊರೂರು ಸುತ್ತುತ್ತಾ ಉಂಗುರ-ತಾಯಿತಗಳನ್ನು ಮಾರುತ್ತಿದ್ದ ಜಲಾಲುದ್ದೀನ್ ಅಲಿಯಾಸ್ ‘ಛಾಂಗುರ್ ಬಾಬಾ’ ಎಂಬ ಗುಜರಿ ಗಿರಾಕಿಯೊಬ್ಬ ನೋಡನೋಡುತ್ತಲೇ (ಯಾರೂ ನೋಡದ ಹಾಗೆ!) ತನ್ನ ಸೈಕಲ್ ಅನ್ನು ಗುಜರಿಗೆ ನೂಕಿ, ಬರೋಬ್ಬರಿ 500 ಕೋಟಿ ರುಪಾಯಿ ಆಸ್ತಿ ಮಾಡಿ, ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರಿಸುವುದಕ್ಕೆ ಅದನ್ನು ವಿನಿಯೋಗಿಸುತ್ತಿದ್ದ ಎಂಬ ಸಂಗತಿ ಹೊರ ಬಿದ್ದಿದೆ.

ಇದಕ್ಕಾಗಿ ಆತ ಸಾವಿರಾರು ಮುಸ್ಲಿಂ ಯುವಕರನ್ನು ನೇಮಿಸಿದ್ದುದೂ ಬಹಿರಂಗವಾಗಿದೆ. ಇವನ ಆಸ್ತಿಯ ಶೇಕಡ 80ರಷ್ಟು ಭಾಗ ಸರಕಾರಿ ಜಮೀನೇ ಆಗಿರುವುದು ಮತ್ತು ಈತ ಕಾನೂನುಗಳಿಗೇ ‘ಸಾಂಬ್ರಾಣಿ ಹೊಗೆ’ ಹಾಕಿರುವುದು ಇನ್ನೂ ಅಚ್ಚರಿಯ ಸಂಗತಿ. ಈತನ ‘ಮತಾಂತರ ಭವನ’ವನ್ನು ಧ್ವಂಸಗೊಳಿಸಲು ಬರೋಬ್ಬರಿ 8 ಬುಲ್ಡೋಜರ್‌ಗಳನ್ನು ಬಳಸಲಾಯಿತೆಂದರೆ, ಈತನ ಸಾಮ್ರಾಜ್ಯ ಅದೆಷ್ಟು ಮಜಬೂತಾಗಿತ್ತು ಎಂಬುದನ್ನು ಊಹಿಸಿಕೊಳ್ಳಿ.

‘ಊರನ್ನು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು’ ಎಂಬಂತೆ, ಸ್ಥಳೀಯ ಆಡಳಿತಗಳ ಜತೆಯಲ್ಲಿ ಭಯೋತ್ಪಾದಕ ನಿಗ್ರಹದಳ, ಜಾರಿ ನಿರ್ದೇಶನಾಲಯದಂಥ ರಾಷ್ಟ್ರಮಟ್ಟದ ಸಂಸ್ಥೆಗಳು ಈಗ ಈತನ ಮತಾಂತರ ದಂಧೆಯ (ಅಥವಾ ಜಿಹಾದಿ ಸಾರ್ಥಕತೆಯ) ‘ಪೋಸ್ಟ್ ಮಾರ್ಟಮ್’ ಮಾಡಲು ಇಳಿದಿವೆ! ರಾಜ್ಯದ ಬಡವರು, ನಿರ್ಗತಿಕರು, ದುರ್ಬಲರು, ಅನಕ್ಷರಸ್ಥರು, ಅಮಾಯಕ ರನ್ನೇ ಗುರಿಯಾಗಿಸಿಕೊಂಡು, ಅದರಲ್ಲೂ ಪ್ರಥಮ ಆದ್ಯತೆಯಾಗಿ ಹಿಂದೂ ಹೆಣ್ಣು ಮಕ್ಕಳನ್ನು ಸಮ್ಮೋಹನ, ಒತ್ತಡ, ಮಾನಸಿಕ ಕಿರುಕುಳ, ಬೆದರಿಕೆಗಳಿಗೆ ಒಳಪಡಿಸಿ ಇಸ್ಲಾಂಗೆ ಮತಾಂತರಿಸಿದ್ದಾನೆ ಈ ಗುಜರಿ ಬಾಬಾ.

ಪ್ರಾಥಮಿಕ ತನಿಖೆಯ ಪ್ರಕಾರ, ಈತ 1500ಕ್ಕೂ ಹೆಚ್ಚು ಹಿಂದೂಗಳನ್ನು ಇಸ್ಲಾಂಗೆ ಮತಾಂತ ರಿಸಿರುವುದಾಗಿ ವರದಿಯಾಗಿದೆ. ಬ್ರಾಹ್ಮಣ ಮತ್ತು ಕ್ಷತ್ರಿಯ ಹೆಣ್ಣು ಮಕ್ಕಳ ಮತಾಂತರಕ್ಕೆ 15-16 ಲಕ್ಷ ರು., ಹಿಂದುಳಿದ ವರ್ಗದ ಹೆಣ್ಣು ಮಕ್ಕಳ ಮತಾಂತರಕ್ಕೆ 10-12 ಲಕ್ಷ ರು., ಉಳಿದ ಸಮುದಾಯದ ಹೆಣ್ಣು ಮಕ್ಕಳ ಮತಾಂತರಕ್ಕೆ 8-10 ಲಕ್ಷ ರು. ಹಣವನ್ನು ಈತ ನಿಗದಿಪಡಿಸಿದ್ದು ಬೆಳಕಿಗೆ ಬಂದಿದೆ.

ಅಂತಾರಾಷ್ಟ್ರೀಯ ಮಟ್ಟದ ಇಂಥ ‘ಧರ್ಮಾಂಧ ಮತಾಂತರ’ವನ್ನು ಜಿಹಾದಿಯೊಬ್ಬ ಒಂದು ಅಧಿಕೃತ ವಹಿವಾಟಿನಂತೆ, ಅದೂ ಹಿಂದೂಗಳೇ ಬಹುಸಂಖ್ಯಾತರಾಗಿರುವ ಭಾರತದೊಳಗೆ ನಡೆಸುತ್ತಾನೆಂದರೆ, ಹಿಂದೂಗಳಿಗೂ ಕಸಾಯಿಖಾನೆಗೆ ಮಾರಲಾಗುವ ಮುದಿ ಎತ್ತುಗಳಿಗೂ ಯಾವುದೇ ವ್ಯತ್ಯಾಸವಿಲ್ಲದಂತಾಯಿತು ಎಂದು ಭಾವಿಸಬೇಕೇ? ಇದು ಹಿಂದೂಗಳ ಪಾಲಿಗೆ ನಾಚಿಕೆಗೇಡಿನ ಸಂಗತಿಯಲ್ಲವೇ? ಮತಾಂತರಿಗಳು ಹಿಂದೂ ಹೆಣ್ಣು ಮಕ್ಕಳನ್ನೇ ಮೊದಲು ಮತಾಂತರಿಸುವುದೇಕೆ? ಇದು ತಲೆಯಲ್ಲಿ ಮಿದುಳಿರುವ ಪ್ರತಿಯೊಬ್ಬ ಹಿಂದು, ಹುಸಿ ಜಾತ್ಯತೀತತೆ ಯನ್ನು ತಲೆಯ ಮೇಲೆ ಟೊಪ್ಪಿಗೆಯಂತೆ ಧರಿಸಿರುವ ರಾಜಕಾರಣಿಗಳು, ಅವರ ಬಾಲಬಡುಕರು, ಢೋಂಗಿ ಹೋರಾಟಗಾರರು, ‘ಪ್ರಗತಿಪರ’ ಹಣೆಪಟ್ಟಿಯ ಅಡ್ಡಕಸುಬಿಗಳು, ಸೋಗಲಾಡಿಗಳು ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಆಲೋಚನೆ ಮಾಡಬೇಕಾದ ‘ಇಂಟರೆಸ್ಟಿಂಗ್ ಮ್ಯಾಟರ್ರು’.

ಏಕೆಂದರೆ, ಇವರ ಮನೆಯ ಹೆಣ್ಣು ಮಕ್ಕಳು ಸಿಕ್ಕರೂ ಮತಾಂತರಿಗಳಿಗೆ ‘ನೋ ಪ್ರಾಬ್ಲಮ್’! ಮತಾಂತರಿಗಳ ಲೆಕ್ಕಾಚಾರ ಹೇಗಿದೆ ನೋಡಿ- ಒಬ್ಬ ಹಿಂದೂ ಹುಟ್ಟಬೇಕಾದರೆ ಆ ಮಗುವನ್ನು ಹೆರುವ ಹಿಂದೂ ಹೆಣ್ಣು ಅವಶ್ಯಕ. ಅಂಥ ಹಿಂದೂ ಹೆಣ್ಣು ಮಕ್ಕಳನ್ನೇ ಮತಾಂತರಗೊಳಿಸುತ್ತಾ ಹೋದರೆ, ಆಕೆಗೆ ಹುಟ್ಟುವ ಮಕ್ಕಳೆಲ್ಲವೂ ಇಸ್ಲಾಂ ಅಥವಾ ಕ್ರೈಸ್ತ ಮಕ್ಕಳಾಗೇ ಹುಟ್ಟುತ್ತಾರೆ.

ಆ ಮೂಲಕ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ. ಇಂಥ ‘ಗುಜರಿ ಬಾಬಾ’ನಂಥವರು ರಾಜ್ಯಕ್ಕೆ ಒಬ್ಬೊಬ್ಬ ಹುಟ್ಟಿಕೊಂಡರೂ ಸಾಕು, ಇನ್ನು 20 ವರ್ಷಗಳಲ್ಲಿ ಹಿಂದೂ ಗಂಡುಗಳಿಗೆ ಮದುವೆಯಾಗಲು ಹೆಣ್ಣು ಸಿಗದೆ, ಒಟ್ಟಾರೆ ಹಿಂದೂಗಳು ಅಲ್ಪಸಂಖ್ಯಾತರಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಒಬ್ಬ ಹಿಂದೂ ಮತಾಂತರಗೊಂಡರೆ ಒಬ್ಬ ಶತ್ರು ಹೆಚ್ಚಾದಂತೆ ಎಂಬ ಮಾತು ಅಕ್ಷರಶಃ ಸತ್ಯ. ಆದರೆ ನಮ್ಮಲ್ಲಿ ನೋಡಿದರೆ, ಸನಾತನ ಧರ್ಮದ ಪವಿತ್ರ ಕಾವಿಯನ್ನು ತೊಟ್ಟು ಹಿಂದೂ ಧರ್ಮವನ್ನು ಉಳಿಸಬೇಕಾದ ಒಂದಷ್ಟು ಸ್ವಾಮೀಜಿಗಳು ‘ನಮ್ಮ ಪಂಗಡ, ನಮ್ಮ ಜಾತಿ/ ಒಳಜಾತಿ, ನಮ್ಮ ಮಠ, ನಮ್ಮ ಜಾತಿಯ ರಾಜಕಾರಣಿ, ನಮ್ಮ ಜಾತಿಯ ಮಂತ್ರಿ’ ಎಂದು ಅಹರ್ನಿಶಿ ಭಜನೆ ಮಾಡುತ್ತಿದ್ದಾರೆ. ಕಾವಿತೊಟ್ಟು ಸರ್ವಸಂಗ ಪರಿತ್ಯಾಗಿಯಗಿ ಕೂರಬೇಕಾದ ಇವರು, ಅರಿಷಡ್ವರ್ಗದ ಕೂಪದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ.

ಈ ಪೈಕಿ ಕೆಲವರು, ‘ಪೋಕ್ಸೋ ಸ್ವಾಮೀಜಿ’, ‘ಸಿ.ಡಿ. ಸ್ವಾಮೀಜಿ’, ‘ಪೆನ್‌ಡ್ರೈವ್ ಸ್ವಾಮೀಜಿ’ಗಳಾಗಿ ಹೊರಹೊಮ್ಮುತ್ತಿದ್ದಾರೆ. ರಾಜಕಾರಣಿಯೊಬ್ಬ ಹಿಂದೂಧರ್ಮದ ವಿರೋಧಿಯಾಗಿ ವಿಜೃಂಭಿಸಿ ದರೂ, ‘ಈತ ನಮ್ಮ ಜಾತಿಯವ’ ಎನ್ನುತ್ತಾ ಆತನ ಪಾದ ತೊಳೆಯಲೂ ಸಿದ್ಧರಾಗಿರುವ ಜ್ಞಾನ ಗೇಡಿಗಳೂ ಈ ಗುಂಪಿನಲ್ಲಿದ್ದಾರೆ.

ಮತ್ತೆ ಕೆಲವರಂತೂ ವೇದಿಕೆಯೇರಿ, ‘ಗಣೇಶ ಬೇಡ, ಸರಸ್ವತಿ ಬೇಡ’ ಎನ್ನುತ್ತಾ ತೌಡು ಕುಟ್ಟುತ್ತಿದ್ದಾರೆ. ಸನಾತನ ಧರ್ಮದವರೇ ಆದ ಇಂಥವರೆಲ್ಲಾ ಹೀಗೆ ಅಲ್ಪಮತಿಗಳಾಗಿ ಜಾತಿಗಳ ‘ಗಲ್ಲಿ ಕ್ರಿಕೆಟ್’ ಆಡುತ್ತಿದ್ದರೆ, ಮತ್ತೊಂದೆಡೆ ‘ಗುಜರಿಬಾಬಾ’ನಂಥ ಜಿಹಾದಿಗಳು ಹಿಂದೂ ಹೆಣ್ಣು ಮಕ್ಕಳ ಮತಾಂತರದಲ್ಲಿ ‘ಐಪಿಎಲ್ ಕ್ರಿಕೆಟ್’ ಆಡುತ್ತಿದ್ದಾರೆ. ಎಂಥಾ ವಿಪರ್ಯಾಸ ನೋಡಿ!

ಹಿಂದೂ ಹೆಣ್ಣು ಮಕ್ಕಳ ‘ಸಿಂದೂರ ತಿಲಕ’ವನ್ನು ಅಳಿಸುವ ಏಕೈಕ ಉದ್ದೇಶದ ಜಿಹಾದಿ ಮತ್ತು ಕ್ರೈಸ್ತ ಮಿಷನರಿ ಮತಾಂತರ ದಂಧೆಗಳನ್ನು ದೇಶದೊಳಗೆ ಮೊದಲು ಮಟ್ಟಹಾಕಬೇಕಿದೆ. ಇದಕ್ಕೆ ಬೇರೆಯದೇ ತೆರನಾದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಅಗತ್ಯವಿದೆ. ಆಳುಗರು ಈ ನಿಟ್ಟಿನಲ್ಲಿ ಕಟಿಬದ್ಧರಾಗಬೇಕಷ್ಟೇ....

(ಲೇಖಕರು ಹವ್ಯಾಸಿ ಬರಹಗಾರರು)