ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ನನ್ನನ್ನು ಕೊಲೆ ಮಾಡಿ.. ಗಂಡನನ್ನು ಬಿಟ್ಟು ಬಿಡಿ , ಅಂಗಲಾಚಿದ ಮಹಿಳೆ; ದಂಪತಿಗೆ ಗುಂಡಿಟ್ಟು ಮರ್ಯಾದಾ ಹತ್ಯೆ

ಪಾಕಿಸ್ತಾನದ (Pakistan) ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಯುವಕ ಮತ್ತು ಯುವತಿಯನ್ನು ಬರ್ಬರವಾಗಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಅವರಿಬ್ಬರೂ ತಮ್ಮ ಕುಟುಂಬದ ವಿರೋಧದ ನಡುವೆ ವಿವಾಹವಾಗಿದ್ದರು. ಇದರಿಂದಾಗಿ ದಂಪತಿನ್ನು ಬರ್ಬರವಾಗಿ ಮರ್ಯಾದಾ ಹತ್ಯೆ ಮಾಡಲಾಗಿದೆ. ಈ ಕೊಲೆಗೆ ಸಂಬಂಧಿಸಿಂದತೆ ಈ ವರೆಗೆ 13 ಜನರನ್ನು ಬಂಧಿಸಲಾಗಿದೆ.

ಚಿತ್ರಹಿಂಸೆ ನೀಡಿ ದಂಪತಿಗೆ ಗುಂಡಿಟ್ಟು ಮರ್ಯಾದಾ ಹತ್ಯೆ!

Profile Vishakha Bhat Jul 22, 2025 4:56 PM

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಯುವಕ ಮತ್ತು ಯುವತಿಯನ್ನು ಬರ್ಬರವಾಗಿ ಗುಂಡಿಕ್ಕಿ ಕೊಲೆ (Viral News) ಮಾಡಲಾಗಿದೆ. ಅವರಿಬ್ಬರೂ ತಮ್ಮ ಕುಟುಂಬದ ವಿರೋಧದ ನಡುವೆ ವಿವಾಹವಾಗಿದ್ದರು. ಇದರಿಂದಾಗಿ ದಂಪತಿನ್ನು ಬರ್ಬರವಾಗಿ ಮರ್ಯಾದಾ ಹತ್ಯೆ ಮಾಡಲಾಗಿದೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಹೊರವಲಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಎಸ್‌ಯುವಿ ಮತ್ತು ಪಿಕಪ್ ಟ್ರಕ್‌ಗಳಲ್ಲಿ ಜನರ ಗುಂಪೊಂದು ಆಗಮಿಸುತ್ತಿರುವುದನ್ನು ವೈರಲ್ ದೃಶ್ಯಗಳು ತೋರಿಸುತ್ತವೆ, ಅಲ್ಲಿ ದಂಪತಿ ಕರೆದೊಯ್ಯಲಾಗಿದೆ.

ತಲೆಗೆ ಶಾಲು ಹೊದಿಸಿದ್ದ ಆ ಮಹಿಳೆಗೆ ಕುರಾನ್ ಪ್ರತಿಯನ್ನು ನೀಡಲಾಯಿತು. ಅವಳು ಧಾರ್ಮಿಕ ಪಠ್ಯವನ್ನು ತೆಗೆದುಕೊಂಡು ಜನಸಮೂಹ ನೋಡುತ್ತಿದ್ದಂತೆ ನಿರ್ಜನ ಬೆಟ್ಟದ ಕಡೆಗೆ ನಡೆಯುತ್ತಾಳೆ. ಪ್ರಾದೇಶಿಕ ಬ್ರಹವಿ ಉಪಭಾಷೆಯಲ್ಲಿ ಮಾತನಾಡುತ್ತಾ, ಆಕೆಯ ಪತಿಗೆ ಏನೋ ಹೇಳುತ್ತಾಳೆ. ನಂತರ ನೀವು ನನ್ನನ್ನು ಗುಂಡು ಹಾರಿಸಬಹುದು ಎಂದು ಹೇಳಿದ್ದಾಳೆ. ಆ ವ್ಯಕ್ತಿ ಅವಳನ್ನು ಸ್ವಲ್ಪ ದೂರದವರೆಗೆ ಹಿಂಬಾಲಿಸುತ್ತಾನೆ, ನಂತರ ಅವಳು, "ನಿನಗೆ ನನ್ನ ಮೇಲೆ ಗುಂಡು ಹಾರಿಸಲು ಮಾತ್ರ ಅವಕಾಶವಿದೆ. ಅದಕ್ಕಿಂತ ಹೆಚ್ಚೇನೂ ಇಲ್ಲ" ಎಂದು ಹೇಳುತ್ತಾಳೆ. ನಂತರ ವ್ಯಕ್ತಿಯೊಬ್ಬ ಅವಳ ಬೆನ್ನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಅವನು ಹತ್ತಿರದಿಂದ ಅನೇಕ ಸುತ್ತು ಗುಂಡುಗಳನ್ನು ಹಾರಿಸುತ್ತಾನೆ. ಮೂರನೇ ಗುಂಡು ಕೇಳಿದ ನಂತರ, ಮಹಿಳೆ ನೆಲಕ್ಕೆ ಬೀಳುತ್ತಾಳೆ.

ನಂತರ ವೀಡಿಯೊದಲ್ಲಿ ಮಹಿಳೆಯ ಶವದ ಬಳಿ ರಕ್ತಸಿಕ್ತ ವ್ಯಕ್ತಿಯೊಬ್ಬರು ಮಲಗಿರುವುದನ್ನು ತೋರಿಸಲಾಗುತ್ತಿದೆ, ಆದರೆ ಜನಸಮೂಹವು ಹರ್ಷೋದ್ಗಾರ ಮಾಡುತ್ತಿದೆ. ಈ ಘಟನೆಯು ಮೇ ತಿಂಗಳಲ್ಲಿ 2025 ರ ಈದ್ ಅಲ್-ಅಧಾ ಹಬ್ಬಕ್ಕೆ ಮೂರು ದಿನಗಳ ಮೊದಲು ನಡೆದಿರುವುದಾಗಿ ವರದಿಯಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ದಂಪತಿಯನ್ನು ಬಾನೋ ಬೀಬಿ ಮತ್ತು ಅಹ್ಸಾನ್ ಉಲ್ಲಾ ಎಂದು ಗುರುತಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pakistani TikToker: ಪಾಕಿಸ್ತಾನಿ ಟಿಕ್‌ಟಾಕ್‌ ಸ್ಟಾರ್‌ ಶೂಟೌಟ್‌; ಮರ್ಯಾದಾ ಹತ್ಯೆ ಶಂಕೆ

ಈ ಕೊಲೆಗೆ ಸಂಬಂಧಿಸಿಂದತೆ ಈ ವರೆಗೆ 13 ಜನರನ್ನು ಬಂಧಿಸಲಾಗಿದೆ. ಮಹಿಳೆಯ ಸಹೋದರ ತನ್ನ ಒಪ್ಪಿಗೆಯಿಲ್ಲದೆ ನಡೆದ ಮದುವೆಯ ಬಗ್ಗೆ ದೂರು ನೀಡಿದ ನಂತರ ಬುಡಕಟ್ಟು ಜನಾಂಗದ ಹಿರಿಯ ಸರ್ದಾರ್ ಸತಕ್ಜೈ ದಂಪತಿಗಳ ಹತ್ಯೆಗೆ ಆದೇಶ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿಸಲಾದ 13 ಜನರಲ್ಲಿ ಬುಡಕಟ್ಟು ನಾಯಕ ಮತ್ತು ಮಹಿಳೆಯ ಸಹೋದರ ಸೇರಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ನವೀದ್ ಅಖ್ತರ್ ತಿಳಿಸಿದ್ದಾರೆ.