Vishweshwar Bhat Column: ಡಾ.ಕೆ.ಪಿ.ಮಾಥುರ್ ನೆನಪು
ಡಾ.ಮಾಥುರ್ ಅವರು ದೆಹಲಿಯ ಪ್ರತಿಷ್ಠಿತ ಸಫ್ದರ್ʼಜಂಗ್ ಆಸ್ಪತ್ರೆಯಲ್ಲಿ ಹಿರಿಯ ಫಿಸಿಷಿಯನ್ ಹಾಗೂ ನಂತರದ ದಿನಗಳಲ್ಲಿ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಶ್ರೇಷ್ಠ ವೈದ್ಯಕೀಯ ಜ್ಞಾನ, ಕಟ್ಟುನಿಟ್ಟಿನ ವೃತ್ತಿಪರತೆ, ಕರ್ತವ್ಯನಿಷ್ಠೆ ಮತ್ತು ಮೃದು ಸ್ವಭಾವ ವನ್ನು ಗುರುತಿಸಿ ಅವರನ್ನು ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ವೈದ್ಯರನ್ನಾಗಿ ನೇಮಿಸಲಾಯಿತು.
-
ಡಾ.ಕೃಷ್ಣ ಪ್ರಸಾದ್ ಮಾಥುರ್ (ಡಾ.ಕೆ.ಪಿ.ಮಾಥುರ್) ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ ವೈದ್ಯರಾಗಿ (Personal Physician) ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಖ್ಯಾತ ವೈದ್ಯರು. 1966ರಲ್ಲಿ ಇಂದಿರಾ ಗಾಂಧಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನಗಳಿಂದ ಹಿಡಿದು 1984ರ ಅಕ್ಟೋಬರ್‌ನಲ್ಲಿ ಅವರು ಹತ್ಯೆಯಾಗು ವವರೆಗೂ ಅವರ ಆರೋಗ್ಯ ರಕ್ಷಣೆಯ ಹೊಣೆಯನ್ನು ಡಾ.ಮಾಥುರ್ ನಿಷ್ಠೆಯಿಂದ ನಿಭಾಯಿಸಿ ದರು.
ಡಾ.ಮಾಥುರ್ ಕೇವಲ ವೈದ್ಯರಾಗಿ ಮಾತ್ರವಲ್ಲ, ಅಧಿಕಾರದ ಉತ್ತುಂಗದಲ್ಲಿದ್ದ ಪ್ರಭಾವಿ ನಾಯಕಿ ಯೊಬ್ಬರ ವೈಯಕ್ತಿಕ ಭಾವನೆಗಳು, ಕುಟುಂಬ ಜೀವನ, ಕಷ್ಟದ ದಿನಗಳು ಹಾಗೂ ರಾಜಕೀಯ ಏಳು-ಬೀಳುಗಳನ್ನು ಅತ್ಯಂತ ಹತ್ತಿರದಿಂದ ಕಂಡ ಅಪರೂಪದ ಪ್ರತ್ಯಕ್ಷದರ್ಶಿ ಕೂಡ.
ಡಾ.ಮಾಥುರ್ ಅವರು ದೆಹಲಿಯ ಪ್ರತಿಷ್ಠಿತ ಸಫ್ದರ್ʼಜಂಗ್ ಆಸ್ಪತ್ರೆಯಲ್ಲಿ ಹಿರಿಯ ಫಿಸಿಷಿಯನ್ ಹಾಗೂ ನಂತರದ ದಿನಗಳಲ್ಲಿ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಶ್ರೇಷ್ಠ ವೈದ್ಯಕೀಯ ಜ್ಞಾನ, ಕಟ್ಟುನಿಟ್ಟಿನ ವೃತ್ತಿಪರತೆ, ಕರ್ತವ್ಯನಿಷ್ಠೆ ಮತ್ತು ಮೃದು ಸ್ವಭಾವ ವನ್ನು ಗುರುತಿಸಿ ಅವರನ್ನು ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ವೈದ್ಯರನ್ನಾಗಿ ನೇಮಿಸಲಾಯಿತು.
ಇದನ್ನೂ ಓದಿ: Vishweshwar Bhat Column: ಇದು ದೇಶವಾಸಿಗಳ ಶ್ರಮದಾನ
ಯಾವುದೇ ಸಾರ್ವಜನಿಕ ಪ್ರಚಾರದ ಹಂಬಲವಿಲ್ಲದೇ, ಗೌಪ್ಯತೆ ಮತ್ತು ವೈದ್ಯಕೀಯ ನೀತಿಶಾಸ್ತ್ರ ವನ್ನು ಚಾಚೂ ತಪ್ಪದೆ ಪಾಲಿಸಿದ ಅವರು, ಇಂದಿರಾ ಗಾಂಧಿ ಮತ್ತು ಗಾಂಧಿ-ನೆಹರು ಕುಟುಂಬದ ಅತ್ಯಂತ ನಂಬಿಕಸ್ಥ ಆಪ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಡಾ.ಮಾಥುರ್ ಅವರ ದಿನಚರಿ ಪ್ರತಿದಿನ ಬೆಳಗ್ಗೆ ನವದೆಹಲಿಯ ಸ-ರ್ ಜಂಗ್ ರಸ್ತೆಯ ಪ್ರಧಾನಿ ನಿವಾಸದಿಂದಲೇ ಆರಂಭವಾಗು ತ್ತಿತ್ತು.
ನಿಗದಿತ ಸಮಯವಾದ ಬೆಳಗ್ಗೆ ಎಂಟೂವರೆಯಿಂದ ಒಂಬತ್ತು ಗಂಟೆಯೊಳಗೆ ಪ್ರಧಾನಿ ನಿವಾಸಕ್ಕೆ ತೆರಳಿ ಇಂದಿರಾ ನಾಡಿಮಿಡಿತ, ರಕ್ತದೊತ್ತಡ ಮತ್ತು ಸಾಮಾನ್ಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸು ವುದು ಅವರ ನಿತ್ಯದ ಕಾಯಕವಾಗಿತ್ತು. ಈ ವೈದ್ಯಕೀಯ ತಪಾಸಣೆಯ ನಂತರ ಕೆಲ ನಿಮಿಷಗಳ ಕಾಲ ಕಾಫಿ ಅಥವಾ ಚಹಾದ ಜತೆ ಮುಕ್ತ ಸಂಭಾಷಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಇಂದಿರಾ ಗಾಂಧಿಯವರು ದೇಶದ ಪ್ರಚಲಿತ ವಿದ್ಯಮಾನಗಳು, ದಿನಪತ್ರಿಕೆಯ ವರದಿಗಳು, ಹವಾಮಾನ ಹಾಗೂ ಸಾಮಾನ್ಯ ವಿಷಯಗಳ ಕುರಿತು ಹರಟುತ್ತಿದ್ದರು.
ಇಂದಿರಾ ಆರೋಗ್ಯ ರಹಸ್ಯ ಮತ್ತು ಶಿಸ್ತಿನ ಜೀವನಶೈಲಿಯನ್ನು ಡಾ.ಮಾಥುರ್ ಬಹುವಾಗಿ ಪ್ರಶಂಸಿ ಸುತ್ತಿದ್ದರು. ಅವರ ಪ್ರಕಾರ, ಇಂದಿರಾ ಗಾಂಧಿಯವರು ತಮ್ಮ ಆಹಾರ ಪದ್ಧತಿಯಲ್ಲಿ ಅತ್ಯಂತ ಕಟ್ಟುನಿಟ್ಟಾದ ಮಿತಾಹಾರಿಯಾಗಿದ್ದರು. ಎಣ್ಣೆ, ಅತಿಯಾದ ಮಸಾಲೆಗಳಿಂದ ದೂರವಿದ್ದು ಹಣ್ಣು-ತರಕಾರಿ ಹಾಗೂ ಸಾತ್ವಿಕ ಆಹಾರವನ್ನು ಸೇವಿಸುತ್ತಿದ್ದರು.
ಎಷ್ಟೇ ರಾಜಕೀಯ ಒತ್ತಡಗಳಿದ್ದರೂ ಪ್ರತಿದಿನ ನಿಯಮಿತ ಯೋಗ, ಪ್ರಾಣಾಯಾಮ ಮತ್ತು ಲಘು ನಡಿಗೆಯನ್ನು ತಪ್ಪಿಸುತ್ತಿರಲಿಲ್ಲ. ಎಂಥ ಬಿಕ್ಕಟ್ಟಿನ ಸಮಯದಲ್ಲೂ ಅವರು ತೋರುತ್ತಿದ್ದ ಮಾನಸಿಕ ಸ್ಥೈರ್ಯ ಮತ್ತು ಸಮಚಿತ್ತತೆಯ ಕಾರಣದಿಂದಾಗಿ ಅವರ ರಕ್ತದೊತ್ತಡ ಹಾಗೂ ಆರೋಗ್ಯ ನಿಯತಾಂಕಗಳು ಸದಾ ಸಹಜಮಟ್ಟದ ಇರುತ್ತಿದ್ದವು ಎಂದು ಮಾಥುರ್ ಉಲ್ಲೇಖಿಸಿ ದ್ದಾರೆ.
ಪ್ರಧಾನಿಯವರ ದೇಶ-ವಿದೇಶಗಳ ಪ್ರವಾಸಗಳಲ್ಲಿ ಮತ್ತು ಕಠಿಣ ಚುನಾವಣಾ ಪ್ರಚಾರಗಳಲ್ಲಿ ಡಾ.ಮಾಥುರ್ ಅವರ ನೆರಳಿನಂತೆ ಜತೆಗಿರುತ್ತಿದ್ದರು. ಸುಡುವ ಬಿಸಿಲಿನಲ್ಲಿ ದಿನಕ್ಕೆ ಹತ್ತಾರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವಾಗ, ನಿರ್ಜಲೀಕರಣವಾಗದಂತೆ ನೋಡಿ ಕೊಳ್ಳುವುದು, ವಿಶ್ರಾಂತಿಯ ಸಮಯವನ್ನು ನಿಗದಿಪಡಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ನೀಡುವುದು ಅವರ ಕರ್ತವ್ಯವಾಗಿತ್ತು.
ಹಲವು ಬಾರಿ ಧೂಳು, ಹವಾಮಾನ ವೈಪರೀತ್ಯ ಮತ್ತು ಅತಿಯಾದ ಪ್ರಯಾಣದ ಆಯಾಸದ ನಡುವೆಯೂ ಪ್ರಧಾನಿಯವರು ಚೈತನ್ಯದಿಂದ ಕಾರ್ಯನಿರ್ವಹಿಸಲು ಡಾ.ಮಾಥುರ್ ಅವರ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಪ್ರಮುಖ ಪಾತ್ರ ವಹಿಸಿತ್ತು.
ಡಾ.ಮಾಥುರ್ ಅವರು ಇಂದಿರಾರ ಜೀವನದ ಅತ್ಯಂತ ಸಂಕಷ್ಟದ ರಾಜಕೀಯ ಮತ್ತು ವೈಯಕ್ತಿಕ ದಿನಗಳಿಗೆ ಮೂಕಸಾಕ್ಷಿಯಾಗಿದ್ದರು. 1975-77ರ ತುರ್ತುಪರಿಸ್ಥಿತಿ, ನಂತರದ ರಾಜಕೀಯ ಹಿನ್ನಡೆ ಹಾಗೂ 1977ರ ಚುನಾವಣಾ ಸೋಲಿನ ಸಂದರ್ಭದಲ್ಲೂ ಅವರು ಪ್ರಧಾನಿಯವರ ಆರೋಗ್ಯ ಸಲಹೆಗಾರರಾಗಿ ಮುಂದುವರಿದರು.
1980ರಲ್ಲಿ ಕಿರಿಯ ಪುತ್ರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಅಕಾಲಿಕ ನಿಧನ ಹೊಂದಿ ದಾಗ, ತೀವ್ರ ಆಘಾತಕ್ಕೆ ಒಳಗಾಗಿದ್ದ ಇಂದಿರಾರನ್ನು ಹತ್ತಿರದಿಂದ ಕಂಡಿದ್ದರು. ಒಬ್ಬ ತಾಯಿ ಯಾಗಿ ಅವರು ಅನುಭವಿಸಿದ ದುಃಖ ಮತ್ತು ಅದರಿಂದ ಹೊರಬಂದು ಮತ್ತೆ ದೇಶವನ್ನು ಮುನ್ನಡೆಸಿದ ಅದಮ್ಯ ಮನೋಬಲವನ್ನು ಮಾಥುರ್ ಕಣ್ಣಾರೆ ಕಂಡಿದ್ದರು.