ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ವಿಶ್ವೇಶ್ವರ ಭಟ್‌

Editor in Chief, Author, Columnist

[email protected]

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಒಂದು ಗಾದೆಯ ಕುರಿತು

Vishweshwar Bhat Column: ಒಂದು ಗಾದೆಯ ಕುರಿತು

ಒಂದು ಮರ ಬೆಳೆದು ಹೆಮ್ಮರವಾಗಲು ಸಮಯ ಬೇಕು. ಹಾಗೆಯೇ ನಮ್ಮ ಯಶಸ್ಸು ಕೂಡ ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ಅದಕ್ಕೆ ತಾಳ್ಮೆ ಮತ್ತು ನಿರಂತರ ಪ್ರಯತ್ನದ ಅಗತ್ಯವಿದೆ. ಇಂದು ನೀವು ಹಾಕುವ ಒಂದು ಸಣ್ಣ ಹೆಜ್ಜೆ ಅಥವಾ ನೀವು ಬಿತ್ತುವ ಒಂದು ಬೀಜ, ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

Vishweshwar Bhat Column: ಕರಡು ತಿದ್ದುವ ಸಂತಸ

Vishweshwar Bhat Column: ಕರಡು ತಿದ್ದುವ ಸಂತಸ

ಪ್ರೂಫ್ ರೀಡರ್ ಕೇವಲ ತಪ್ಪು ತಿದ್ದುವವನಲ್ಲ, ಆತ ಭಾಷೆಯ ಘನತೆಯನ್ನು ಎತ್ತಿ ಹಿಡಿಯುವ ಕಾವಲುಗಾರ. ಲೇಖಕನು ಭಾವಾವೇಶದಲ್ಲಿ ಬರೆಯುವಾಗ ವ್ಯಾಕರಣದ ನಿಯಮಗಳನ್ನು ಮರೆತಿರಬಹುದು. ಆದರೆ, ಕರಡು ತಿದ್ದಿ ಓದುವವನು ಬಹಳ ನಿಷ್ಠುರ ಮತ್ತು ತಾಳ್ಮೆಯ ವ್ಯಕ್ತಿ. ಹ್ರಸ್ವ-ದೀರ್ಘಗಳ ಬಳಕೆ, ವಿರಾಮ ಚಿಹ್ನೆಗಳ ಸರಿಯಾದ ಸ್ಥಾನ ಇವುಗಳನ್ನು ಸರಿಪಡಿಸಿದಾಗ ಆ ಬರಹಕ್ಕೆ ಒಂದು ಶಿಸ್ತು ಬರುತ್ತದೆ. ‌

Vishweshwar Bhat Column: ಇಂಗ್ಲಿಷ್‌ ಪದಗಳ ಅನುಕೂಲ, ಸಾಧ್ಯತೆ ಮತ್ತು ಡಾಗ್-ಇಯರಿಂಗ್

ಇಂಗ್ಲಿಷ್‌ ಪದಗಳ ಅನುಕೂಲ, ಸಾಧ್ಯತೆ ಮತ್ತು ಡಾಗ್-ಇಯರಿಂಗ್

ಒಂದು ಪದವನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳಬಹುದು ಎಂಬುದಕ್ಕೆ ಇದು ನಿದರ್ಶನ. ಪುಸ್ತಕಗಳನ್ನು ಪ್ರೀತಿಸುವವರಿಗೆ ಅದರ ಪ್ರತಿಯೊಂದು ಪುಟವೂ ಅಮೂಲ್ಯ. ಆದರೆ ಓದುವ ಭರದಲ್ಲಿ ಅಥವಾ ನಿಲ್ಲಿಸಿದ ಗುರುತಿಗಾಗಿ (ಬುಕ್ ಮಾರ್ಕ್) ನಾವು ಮಾಡುವ ಒಂದು ಸಣ್ಣ ಕೆಲಸವೇ ಈ ‘ಡಾಗ್-ಇಯರಿಂಗ್’.

Vishweshwar Bhat Column: ಜಪಾನಿಯರ ಹೆಸರುಗಳು

Vishweshwar Bhat Column: ಜಪಾನಿಯರ ಹೆಸರುಗಳು

ಜಪಾನಿ ಭಾಷೆಯಲ್ಲಿ ಹೆಸರು ಬರೆಯುವಾಗ ಸಾಮಾನ್ಯವಾಗಿ ಕುಟುಂಬದ ಹೆಸರನ್ನು ಮೊದಲು ಬರೆಯುತ್ತಾರೆ ಮತ್ತು ನಂತರ ವೈಯಕ್ತಿಕ ಹೆಸರನ್ನು. ಜಪಾನಿ ಭಾಷೆಯಲ್ಲಿ ಮೂರು ಮುಖ್ಯ ಲಿಪಿಗಳನ್ನು ಬಳಸಲಾಗುತ್ತದೆ. ಚೀನಿ ಮೂಲದ ಲಿಪಿ ಕಾಂಜಿ, ಜಪಾನಿ ಮೂಲದ ಶಬ್ದಲಿಪಿ ಹಿರಾಗಾನ ಮತ್ತು ವಿದೇಶಿ ಶಬ್ದಗಳನ್ನು ಬರೆಯಲು ಬಳಸುವ ಲಿಪಿ ಕಟಕಾನ. ಹೆಸರಿನಲ್ಲಿ ಹೆಚ್ಚು ವೇಳೆ ಕಾಂಜಿ ಅಕ್ಷರಗಳನ್ನೇ ಬಳಸಲಾಗುತ್ತದೆ.

Vishweshwar Bhat Column: ಹಠಾತ್‌ ಆಕ್ಸಿಜನ್‌ ಮಾಸ್ಕ್‌ ಬಿದ್ದರೆ..

Vishweshwar Bhat Column: ಹಠಾತ್‌ ಆಕ್ಸಿಜನ್‌ ಮಾಸ್ಕ್‌ ಬಿದ್ದರೆ..

ಎತ್ತರದಲ್ಲಿ ಹಾರುವಾಗ ವಿಮಾನದೊಳಗಿನ ಗಾಳಿಯ ಒತ್ತಡ ( Cabin Pressure ) ಕಡಿಮೆ ಯಾದಾಗ ಆಮ್ಲಜನಕದ ಮುಖವಾಡಗಳು (Oxygen Masks) ತಾವಾಗಿಯೇ ಕೆಳಕ್ಕೆ ಬೀಳುತ್ತವೆ. ಇಂಥ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಮೊದಲು ಏನು ಮಾಡಬೇಕು? ಅದರ ಹಿಂದಿನ ವೈಜ್ಞಾನಿಕ ಕಾರಣಗಳೇನು? ಆಮ್ಲಜನಕದ ಮುಖವಾಡಗಳು ಕೆಳಕ್ಕೆ ಬಿದ್ದ ತಕ್ಷಣ, ಪೈಲಟ್‌ಗಳು ಅಥವಾ ಗಗನಸಖಿಯರು ನೀಡುವ ಪ್ರಮುಖ ಸೂಚನೆ ಎಂದರೆ ‘ಬೇರೆಯವರಿಗೆ ಸಹಾಯ ಮಾಡುವ ಮೊದಲು ನಿಮ್ಮ ಬಗ್ಗೆ ಯೋಚಿಸಿ.

Vishweshwar Bhat Column: ಇಂಗ್ಲಿಷ್‌ ಭಾಷೆ ಸೊರಗುತ್ತಿಲ್ಲ, ಅಸಲಿಗೆ ಅದು ಪಾರ್ಟಿ ಮಾಡುತ್ತಿದೆ !

ಇಂಗ್ಲಿಷ್‌ ಭಾಷೆ ಸೊರಗುತ್ತಿಲ್ಲ, ಅಸಲಿಗೆ ಅದು ಪಾರ್ಟಿ ಮಾಡುತ್ತಿದೆ !

‘ಇಂಗ್ಲಿಷ್ ಒಂದು ಭಾಷೆಯೋ, ಒಂದು ಕೌಶಲವೋ?’ ಎಂಬ ಪ್ರಶ್ನೆಯಿಂದ ಹಿಡಿದು, ಅದು ಪ್ರಾದೇಶಿಕ ಭಾಷೆಗಳ ಮೇಲೆ ಬೀರುತ್ತಿರುವ ಪ್ರಭಾವದವರೆಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಇಂಗ್ಲಿಷ್ ಭಾಷೆಯ ಈ ‘ಪ್ರಜಾ ಪ್ರಭುತ್ವೀಕರಣ’ ಅಥವಾ ಅದರ ರೂಪಾಂತರವು, ಅದು ಒಂದು ಕಾಲದ ಶಿಸ್ತಿನ ಬ್ರಿಟಿಷ್ ಶಾಲಾ ಮಾಸ್ತರ ನಿಂದ ಈಗ ‘ಮಾಸ್’ ಹೀರೋ ಆಗಿ ಬದಲಾದ ಕಥೆಯಂತೆ ಕೇಳಿಸುತ್ತದೆ.

Vishweshwar Bhat Column: ಇದು ʼಹಾರುವ ದತ್ತಾಂಶ ಕೇಂದ್ರʼ

Vishweshwar Bhat Column: ಇದು ʼಹಾರುವ ದತ್ತಾಂಶ ಕೇಂದ್ರʼ

ವಿಮಾನದ ಕಾಕ್‌ಪಿಟ್‌ನಿಂದ ಹಿಡಿದು ರೆಕ್ಕೆಗಳ ತುದಿಯವರೆಗೆ, ಎಂಜಿನ್ ನಿಯಂತ್ರಣ ದಿಂದ ಹಿಡಿದು ಪ್ರತಿಯೊಬ್ಬ ಪ್ರಯಾಣಿಕನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ನವರೆಗೆ ಮಾಹಿತಿ ಮತ್ತು ವಿದ್ಯುತ್ ಹರಿಯಲು ಈ ಜಾಲ ಅತ್ಯಗತ್ಯ. ಇಷ್ಟು ದೊಡ್ಡ ಪ್ರಮಾಣದ ತಾಮ್ರದ ತಂತಿಗಳು ವಿಮಾನದ ತೂಕವನ್ನು ವಿಪರೀತ ಹೆಚ್ಚಿಸುತ್ತವೆ.

Vishweshwar Bhat Column: ಸತತ ಪ್ರಯತ್ನ, ನಂಬಿಕೆಯಿದ್ದರೆ...

Vishweshwar Bhat Column: ಸತತ ಪ್ರಯತ್ನ, ನಂಬಿಕೆಯಿದ್ದರೆ...

ಮ್ಯಾರಾಥಾನ್ ಇತಿಹಾಸದಲ್ಲಿ ‘ಸಬ್-2 ಅವರ್’ (2 ಗಂಟೆಗಳಿಗಿಂತ ಕಡಿಮೆ ಅವಧಿ) ಎಂಬುದು ಕೇವಲ ಒಂದು ಅಂಕಿ-ಅಂಶವಾಗಿಲ್ಲ. ಅದು ಮಾನವ ದೇಹಕ್ಕೆ ಪ್ರಕೃತಿ ವಿಧಿಸಿದ ಅಂತಿಮ ಗೆರೆ ಎಂದು ಭಾವಿಸಲಾಗಿದೆ. ಆದರೆ, ಸಾವೆ ಅವರು 1 ಗಂಟೆ 59 ನಿಮಿಷ 30 ಸೆಕೆಂಡುಗಳಲ್ಲಿ ಹಾಗೂ ಕೆಜೆಲ್ಚಾ ಅವರು 1 ಗಂಟೆ 59 ನಿಮಿಷ 41 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ‘ಅಸಾಧ್ಯ’ ಎಂಬ ಗೋಡೆಯನ್ನು ಪುಡಿಪುಡಿ ಮಾಡಿದ್ದಾರೆ.

Vishweshwar Bhat Column: ನೆಟ್ ವರ್ಕಿಂಗ್ ಅಂದ್ರೆ ಏನು ?

Vishweshwar Bhat Column: ನೆಟ್ ವರ್ಕಿಂಗ್ ಅಂದ್ರೆ ಏನು ?

ಬಲವಾದ ನೆಟ್ ವರ್ಕಿಂಗ್ ಎಂದರೆ ಸಂಖ್ಯೆಯನ್ನು ಹೆಚ್ಚಿಸುವುದಲ್ಲ, ಬದಲಿಗೆ ಗಾಢವಾದ ಸಂಬಂಧಗಳನ್ನು ಬೆಳೆಸುವುದು. ಯಾರೋ ಒಬ್ಬರು ಇನ್ನೊಬ್ಬರ ಮುಂದೆ ನಿಮ್ಮ ಬಗ್ಗೆ ಮಾತನಾಡುವಾಗ,‘ಅವರು ಈ ಕೆಲಸಕ್ಕೆ ಅತ್ಯಂತ ಸೂಕ್ತ ವ್ಯಕ್ತಿ’ ಎಂದು ಹೇಳಿದರೆ, ಅದು ನೀವು ಗಳಿಸಿದ ಅತಿದೊಡ್ಡ ಆಸ್ತಿ. ನೀವು ಇಲ್ಲದಿದ್ದಾಗಲೂ ನಿಮ್ಮ ಪರವಾಗಿ ನಿಮ್ಮ ಕೆಲಸ ಅಥವಾ ವ್ಯಕ್ತಿತ್ವ ಮಾತನಾಡಬೇಕು.

Vishweshwar Bhat Column: ಲಗೇಜ್‌ ನಿರ್ವಹಣೆ

Vishweshwar Bhat Column: ಲಗೇಜ್‌ ನಿರ್ವಹಣೆ

ಜಪಾನಿನಲ್ಲಿ ಒಂದು ವಿಶೇಷ ಲಗೇಜ್ ಸರ್ವಿಸ್ ಇದೆ. ನಾನು ಕ್ಯೊಟೋದಲ್ಲಿ ಉಳಿದುಕೊಂಡ ಹೋಟೆಲಿನಲ್ಲಿಯೇ ನನ್ನ ಬ್ಯಾಗುಗಳನ್ನು ನೀಡಿದರೆ ಹಾಗೂ ಮುಂದೆ ನಾನು ಉಳಿಯಲಿರುವ ಟೋಕಿಯೋ ಹೋಟೆಲಿನ ವಿವರಗಳನ್ನು ಕೊಟ್ಟರೆ, ಅದೇ ದಿನ ಸಾಯಂಕಾಲ ಅಥವಾ ಮರುದಿನ ಬೆಳಗಿನ ಹೊತ್ತಿಗೆ ಬ್ಯಾಗುಗಳು ಬಂದಿರುತ್ತವೆ.

Vishweshwar Bhat Column: ಸ್ಟಾರ್‌ ಹೋಟೆಲಿನಲ್ಲಿ ಕೆಲಸ ಮಾಡಿದವರು ಸಿಕ್ಕಾಗ ಏನು ಮಾಡಬೇಕು ?

ಸ್ಟಾರ್‌ ಹೋಟೆಲಿನಲ್ಲಿ ಕೆಲಸ ಮಾಡಿದವರು ಸಿಕ್ಕಾಗ ಏನು ಮಾಡಬೇಕು ?

ಎಲ್ಲರಿಗೂ ತಾವು ಹೆಚ್ಚಿನ ಹಣವನ್ನು ತೆತ್ತು ಅಲ್ಲಿಗೆ ಬಂದಿರುತ್ತೇವೆ ಎಂಬ ಭಾವನೆ ಇರುತ್ತದೆ. ಹೀಗಾಗಿ ತಮಗೆ ವಿಶೇಷ ಸವಲತ್ತು, ಸೌಕರ್ಯ, ಗಮನ ಮತ್ತು ಮರ್ಯಾದೆ ಸಿಗಬೇಕು ಎಂದು ಅಪೇಕ್ಷಿಸುತ್ತಾರೆ. ಇವುಗಳ ಪೈಕಿ ಸ್ವಲ್ಪ ವ್ಯತ್ಯಯವಾದರೂ ಕಿರಿಕಿರಿ ಮಾಡುತ್ತಾರೆ ಅಥವಾ ಜಗಳವಾಡಲು ಹಿಂದೇಟು ಹಾಕುವುದಿಲ್ಲ.

V‌ishweshwar Bhat Column: ಭ್ರಷ್ಟಾಚಾರ ಮುಕ್ತ ಭೂತಾನ್

V‌ishweshwar Bhat Column: ಭ್ರಷ್ಟಾಚಾರ ಮುಕ್ತ ಭೂತಾನ್

ರಾಜನೇ ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಾದ ನಿಲುವನ್ನು ಹೊಂದಿರುವುದು ಅಲ್ಲಿನ ಅಧಿಕಾರಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಭಯ ಮತ್ತು ಭಕ್ತಿ ಎರಡನ್ನೂ ಹುಟ್ಟು ಹಾಕಿದೆ. ಭೂತಾನ್ನ ಸಂಸ್ಕೃತಿ ಯಲ್ಲಿ ಬೌದ್ಧ ಧರ್ಮವು ಹಾಸುಹೊಕ್ಕಾಗಿದೆ. ‘ಕರ್ಮ’ದ ಮೇಲಿನ ನಂಬಿಕೆ ಅಲ್ಲಿನ ಜನರ ದೈನಂದಿನ ಬದುಕನ್ನು ನಿಯಂತ್ರಿಸುತ್ತದೆ.

Vishweshwar Bhat Column: ಅಮೆರಿಕ ಅಧ್ಯಕ್ಷರ ಖಯಾಲಿ

Vishweshwar Bhat Column: ಅಮೆರಿಕ ಅಧ್ಯಕ್ಷರ ಖಯಾಲಿ

ಜಾನ್ಸನ್ ಅವರು ಅಧಿಕಾರಕ್ಕೆ ಬಂದ ತಕ್ಷಣ ವೈಟ್ ಹೌಸ್‌ನ ಎರಡನೇ ಮಹಡಿಯಲ್ಲಿದ್ದ ತಮ್ಮ ಸ್ನಾನದ ಕೋಣೆಯಲ್ಲಿ ಕೆಲವು ಆಮೂಲಾಗ್ರ ಬದಲಾವಣೆಗಳನ್ನು ಮಾಡಲು ಆದೇಶಿಸಿದರು. ಅವರಿಗೆ ಸಾಮಾನ್ಯ ಶವರ್‌ಗಳು ಇಷ್ಟವಾಗುತ್ತಿರಲಿಲ್ಲ. ಅವರಿಗೆ ಬೇಕಾಗಿದ್ದು ‘ಅತಿ ಹೆಚ್ಚು ಒತ್ತಡ ವಿರುವ ನೀರು ಚಿಮ್ಮುವ ಶವರ್’.

Vishweshwar Bhat Column: ಅಮೆರಿಕ ಅಧ್ಯಕ್ಷನ ಮಾತನ್ನು ವಿಶ್ವವೇ ಕೇಳುತ್ತಿತ್ತು, ಈಗ ಕಿವಿ ಮುಚ್ಚಿಕೊಳ್ಳುತ್ತದೆ !

ಅಮೆರಿಕ ಅಧ್ಯಕ್ಷನ ಮಾತನ್ನು ವಿಶ್ವವೇ ಕೇಳುತ್ತಿತ್ತು, ಈಗ..

ಅಧಿಕಾರದಲ್ಲಿದ್ದಾಗಲೂ ಮಹಿಳಾ ಸಂಸದರು ಅಥವಾ ಪತ್ರಕರ್ತೆಯರ ಬಗ್ಗೆ ಅವರು ಹೀಯಾಳಿಸುವ ರೀತಿ ಯಾವುದೇ ನಾಗರಿಕ ಸಮಾಜಕ್ಕೆ ಮುಜುಗರ ತರುವಂತಿರುತ್ತದೆ. ಎದುರಾಳಿಗಳ ರಾಜಕೀಯ ನಿಲುವುಗಳನ್ನು ವಿರೋಧಿಸುವ ಬದಲು, ಅವರ ದೈಹಿಕ ಸ್ವರೂಪ ಅಥವಾ ವಯಸ್ಸನ್ನು ಗೇಲಿ ಮಾಡುವುದು ಮಾತಿನ ವರಸೆ ಎಂದು ಅವರು ಭಾವಿಸಿದಂತಿದೆ.

Vishweshwar Bhat Column: 108 ಮತ್ತು 1008

Vishweshwar Bhat Column: 108 ಮತ್ತು 1008

ಲಿಂಗಾಯತ ಮಠಗಳ ಮತ್ತು ಪೀಠಾಧಿಪತಿಗಳ ಸಂದರ್ಭದಲ್ಲಿ ಇವುಗಳಿಗೆ ಮಹತ್ವ. ಹಾಗಾದರೆ ಸಂಖ್ಯೆಗಳ ವಿಸ್ತೃತ ರೂಪ ಮತ್ತು ಅರ್ಥವೇನು? ಧಾರ್ಮಿಕ ಪಠ್ಯಗಳ ಪ್ರಕಾರ, ಈ ಸಂಖ್ಯೆಗಳನ್ನು ಕೇವಲ ಅಂಕೆಗಳಾಗಿ ಓದುವುದಿಲ್ಲ. ಇವುಗಳನ್ನು ಬಿರುದುಗಳಾಗಿ ಬಳಸಲಾಗುತ್ತದೆ. 108ನ್ನು ‘ಅಷ್ಟೋ ತ್ತರ ಶತ’ ಎನ್ನಲಾಗುತ್ತದೆ. (8+100=108).

Vishweshwar Bhat Column: ಮ.ಘ.ಚ. ಅಂದರೇನು ?

Vishweshwar Bhat Column: ಮ.ಘ.ಚ. ಅಂದರೇನು ?

ಲಿಂಗಾಯತ ಧರ್ಮದಲ್ಲಿ ಎರಡು ಪ್ರಮುಖ ಮಠೀಯ ಪರಂಪರೆಗಳಿವೆ. ಒಂದು ಪಂಚಪೀಠಗಳ ಪರಂಪರೆ, ಇನ್ನೊಂದು ವಿರಕ್ತ ಮಠಗಳ (ಶೂನ್ಯ ಪೀಠದ) ಪರಂಪರೆ. ಈ ‘ಮ.ಘ.ಚ.’ ಎಂಬ ಬಿರುದು ಹೆಚ್ಚಾಗಿ ವಿರಕ್ತ ಪರಂಪರೆಯ ಮಠಾಧೀಶರಿಗೆ ಅನ್ವಯಿಸುತ್ತದೆ. ಹನ್ನೆರಡನೇ ಶತಮಾನದ ಅಲ್ಲಮ ಪ್ರಭುಗಳು ‘ಶೂನ್ಯ ಪೀಠ’ದ ಅಧಿದೇವತೆ.

Vishweshwar Bhat Column: ನರ್ಸಿಂಗ್ ಮತ್ತು ಮಹಿಳೆಯರು

Vishweshwar Bhat Column: ನರ್ಸಿಂಗ್ ಮತ್ತು ಮಹಿಳೆಯರು

ಒಬ್ಬ ಪುರುಷ ನರ್ಸ್ ಆದಾಗ ಸಮಾಜ ಅವನನ್ನು ನೋಡುವ ದೃಷ್ಟಿ ವಿಭಿನ್ನವಾಗಿರುತ್ತದೆ. ‘ಅವನು ಸಾಕಷ್ಟು ಬುದ್ಧಿವಂತನಲ್ಲದ ಕಾರಣ ಡಾಕ್ಟರ್ ಆಗಲು ಸಾಧ್ಯವಾಗದೇ ನರ್ಸ್ ಆಗಿದ್ದಾನೆ’ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಸಿನಿಮಾ ಮತ್ತು ಮಾಧ್ಯಮಗಳಲ್ಲಿ ಪುರುಷ ನರ್ಸ್‌ಗಳನ್ನು ಹಾಸ್ಯದ ಪಾತ್ರ ಗಳನ್ನಾಗಿ ತೋರಿಸುವುದು ಹೆಚ್ಚು. ಇದು ಯುವಕರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಹಿಂಜರಿಯುವಂತೆ ಮಾಡುತ್ತದೆ.

Vishweshwar Bhat Column: ನೂರೈವತ್ತು ವರ್ಷಗಳ ಮುಖಪುಟ

Vishweshwar Bhat Column: ನೂರೈವತ್ತು ವರ್ಷಗಳ ಮುಖಪುಟ

ಸಾಮಾನ್ಯವಾಗಿ ಇತಿಹಾಸದ ಪುಸ್ತಕಗಳನ್ನು ಇತಿಹಾಸಕಾರರು ನಂತರ ಬರೆಯುತ್ತಾರೆ. ಆದರೆ ಈ ಮುಖಪುಟಗಳ ಸಂಗ್ರಹವುರ ‘ಇತಿಹಾಸವು ಸಂಭವಿಸುತ್ತಿರುವಾಗಲೇ ದಾಖಲಾದ’ ರೂಪವಾಗಿದೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಘಟನೆ ನಡೆದ ಮರುದಿನದ ಆಘಾತ, ಆವೇಶ ಮತ್ತು ಸತ್ಯಗಳು ಇಲ್ಲಿ ಹಸಿರಾಗಿವೆ.

Vishweshwar Bhat Column: ಇನ್ನಷ್ಟು ಚೆಂದಗೊಳಿಸಲು ಸುಂದರ ಹೂವಿಗೆ ಬಣ್ಣ ಹಚ್ಚಬಾರದು !

ಇನ್ನಷ್ಟು ಚೆಂದಗೊಳಿಸಲು ಸುಂದರ ಹೂವಿಗೆ ಬಣ್ಣ ಹಚ್ಚಬಾರದು !

ಯಾವುದೇ ಒಂದು ವಿಷಯ ‘ಚೆನ್ನಾಗಿದೆ’ ಎಂದರೆ ಅದರ ಅರ್ಥ ಅಲ್ಲಿ ಒಂದು ಅದ್ಭುತವಾದ ಸಮತೋಲನ (ಬ್ಯಾಲೆನ್ಸ್) ಇದೆ ಎಂದರ್ಥ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ಅಜ್ಜಿ ಮಾಡುವ ಸಾಂಬಾರ್ ರುಚಿ ಅದ್ಭುತವಾಗಿರುತ್ತದೆ. ಅದಕ್ಕೆ ‘ಇನ್ನೂ ಚೆನ್ನಾಗಿರಲಿ’ ಎಂದು ನೀವು ವಿದೇಶಿ ಮಸಾಲೆಗಳನ್ನು ಹಾಕಿದರೆ, ಅದು ತನ್ನ ಅಸಲಿ ಸೊಬಗನ್ನು ಕಳೆದುಕೊಳ್ಳುತ್ತದೆ. ‌

V‌ishweshwar Bhat Column: ಆರೋಗ್ಯ ಅಪಹರಿಸಿದ ಇಂಟರ್‌ʼನೆಟ್

V‌ishweshwar Bhat Column: ಆರೋಗ್ಯ ಅಪಹರಿಸಿದ ಇಂಟರ್‌ʼನೆಟ್

ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಂಶೋಧನೆಗಳಿಗಿಂತ ಹೆಚ್ಚಾಗಿ ಕ್ಲಿಕ್ಬೈಟ್ ಹೆಡ್ಲೈನ್‌ಗಳು ಹೇಗೆ ವೈರಲ್ ಆಗುತ್ತವೆ ಎಂಬುದನ್ನು ವಿವರಿಸಲಾಗಿದೆ. ಕ್ಯಾನ್ಸರ್ ಗುಣಪಡಿಸುವ ಸಣ್ಣ ಮನೆಮದ್ದು ಎಂಬ ಸುಳ್ಳು ಸುದ್ದಿಗಳು ಜಾಗತಿಕ ಆರೋಗ್ಯ ವ್ಯವಸ್ಥೆಗೆ ಎಷ್ಟು ದೊಡ್ಡ ಪೆಟ್ಟು ನೀಡುತ್ತಿವೆ ಎಂಬುದನ್ನು ಅವರು ಕೊಹೆನ್ ಎಚ್ಚರಿಸಿದ್ದಾರೆ.

Vishweshwar Bhat Column: ಬ್ರೀಫ್‌ ಫೀ ಎಂದರೇನು ?

Vishweshwar Bhat Column: ಬ್ರೀಫ್‌ ಫೀ ಎಂದರೇನು ?

ಇದು ವಕೀಲರ ವೃತ್ತಿಪರ ಪರಿಣತಿ, ಸಮಯ ಮತ್ತು ಶ್ರಮಕ್ಕೆ ನೀಡುವ ಗೌರವಧನವಾಗಿದೆ. ಎಲ್ಲ ಪ್ರಕರಣಗಳಿಗೂ ಒಂದೇ ರೀತಿಯ ಶುಲ್ಕವಿರುವುದಿಲ್ಲ. ಹಿರಿಯ ವಕೀಲರು ತಮ್ಮ ದಶಕಗಳ ಅನುಭವ ಮತ್ತು ಪಾಂಡಿತ್ಯದ ಆಧಾರದ ಮೇಲೆ ಹೆಚ್ಚಿನ ಬ್ರೀಫ್ ಫೀ ಪಡೆಯುತ್ತಾರೆ. ಕೊಲೆ ಕೇಸುಗಳು, ದೊಡ್ಡ ಮೊತ್ತದ ಆಸ್ತಿ ವಿವಾದಗಳು ಅಥವಾ ಸಾಂವಿಧಾನಿಕ ವಿಚಾರಗಳು ಹೆಚ್ಚಿನ ಸಂಶೋಧನೆಯನ್ನು ಬಯಸುವುದರಿಂದ ಇಲ್ಲಿ ಶುಲ್ಕ ಹೆಚ್ಚಿರುತ್ತದೆ.

Vishweshwar Bhat Column: ಲಂಕೇಶ್‌ ಮತ್ತು ರವಿ ಬೆಳಗೆರೆ ಈಗ ಇರಬೇಕಿತ್ತು !

ಲಂಕೇಶ್‌ ಮತ್ತು ರವಿ ಬೆಳಗೆರೆ ಈಗ ಇರಬೇಕಿತ್ತು !

ಅಂದು ಇಂದಿರಾ ಗಾಂಧಿಯವರು, ತಮ್ಮ ಸುತ್ತ ಪತ್ರಕರ್ತರನ್ನು ಕುಳ್ಳಿರಿಸಿಕೊಂಡು ಸುಮಾರು ಒಂದೂವರೆ ಗಂಟೆ ಕಾಲ ಅವರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಅವರ ಜತೆ ಲೋಕಾಭಿರಾಮ ಚರ್ಚೆ ನಡೆಸಿದರು. ಪತ್ರಕರ್ತರ ಜತೆ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ‘ಆಫ್ ದಿ ರೆಕಾರ್ಡ್’ ಆಗಿ ಹಂಚಿಕೊಂಡರು. ‌ಈ ಪ್ರಸಂಗವನ್ನು ‘ದಿ ಹಿಂದು’ ಪತ್ರಿಕೆಯ ಹುಬ್ಬಳ್ಳಿ ಮತ್ತು ಗೋವಾ ವಿಶೇಷ ವರದಿಗಾರರಾಗಿದ್ದ ಮತ್ತಿಹಳ್ಳಿ ಮದನಗೋಪಾಲ ನೆನಪಿಸಿಕೊಂಡಿದ್ದರು.

Vishweshwar Bhat Column: ಡ್ರಗ್‌ ಡೀಲರ್‌ʼಗಳ ಆರ್ಥಿಕ ಸ್ಥಿತಿ

Vishweshwar Bhat Column: ಡ್ರಗ್‌ ಡೀಲರ್‌ʼಗಳ ಆರ್ಥಿಕ ಸ್ಥಿತಿ

ಸಮಾಜಶಾಸ್ತ್ರಜ್ಞ ಸುಧೀರ್ ವೆಂಕಟೇಶ್ ಅವರು ಚಿಕಾಗೋದ ಒಂದು ಗ್ಯಾಂಗ್ ಜತೆ ಸುದೀರ್ಘ ಕಾಲ ಕಳೆದರು. ಅನಿರೀಕ್ಷಿತವಾಗಿ ಅವರಿಗೆ ಆ ಗ್ಯಾಂಗ್‌ನ ಹಳೆಯ ಲೆಕ್ಕಪತ್ರದ ಪುಸ್ತಕಗಳು ಸಿಕ್ಕವು. ಆ ಅಂಕಿ-ಅಂಶಗಳನ್ನು ವಿಶ್ಲೇಷಿಸಿದಾಗ ಆಘಾತಕಾರಿ ಸತ್ಯಗಳು ತಿಳಿದವು. ಡ್ರಗ್ ಗ್ಯಾಂಗ್‌ಗಳು ಯಾವುದೋ ಒಂದು ದೊಡ್ಡ ಕಂಪನಿಯಂತೆ ಕೆಲಸ ಮಾಡುತ್ತವೆ.

Vishweshwar Bhat Column: ಫ್ರೀಕೋನೊಮಿಕ್ಸ್‌ ಕುರಿತು

Vishweshwar Bhat Column: ಫ್ರೀಕೋನೊಮಿಕ್ಸ್‌ ಕುರಿತು

ಅರ್ಥಶಾಸ್ತ್ರ ಎಂದರೆ ಕೇವಲ ಷೇರು ಮಾರುಕಟ್ಟೆ, ಜಿಡಿಪಿ ಅಥವಾ ಹಣದುಬ್ಬರ ಮಾತ್ರವಲ್ಲ, ಅದು ಮನುಷ್ಯನ ನಡೆವಳಿಕೆಗಳನ್ನು ನಿರ್ಧರಿಸುವ ‘ಪ್ರಚೋದನೆ’ಗಳ ಅಭ್ಯಾಸ. ಸ್ಟೀಫನ್ ಲೆವಿಟ್ ಮತ್ತು ಸ್ಟೀಫನ್ ಡಬ್ನರ್ ತಮ್ಮ ’Freakonomics’ ಪುಸ್ತಕದಲ್ಲಿ ಇಸ್ರೇಲ್‌ನ ಶಿಶುವಿಹಾರದ ಉದಾ ಹರಣೆಯು ಇದಕ್ಕೆ ಒಂದು ಉತ್ತಮ ನಿದರ್ಶನ.

Loading...