ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Keshava Prasad B Column: ಅಮೆರಿಕದಲ್ಲಿ ಅಂಬಾನಿ ರಿಫೈನರಿ ಬಗ್ಗೆ ಟ್ರಂಪ್‌ ಹೇಳಿದ್ದೇನು ?

ರಿಲಯನ್ಸ್ ಪಾಲುದಾರಿಕೆ ಇರುವ ರಿಫೈನರಿಯಲ್ಲಿ ಪರ್ಮಿಯನ್ ಬೇಸಿನ್ ಮೂಲದ ಲೈಟ್ ಶೇಲ್ ಆಯಿಲ್ ಅನ್ನು ವಿಶೇಷವಾಗಿ ಸಂಸ್ಕರಿಸಲಾಗುತ್ತದೆ. 20 ವರ್ಷಗಳಲ್ಲಿ 102 ಕೋಟಿ ಬ್ಯಾರೆಲ್ ಕಚ್ಚಾತೈಲ ಸಂಸ್ಕರಣೆಯಾಗುತ್ತದೆ. ಇದರ ಪರಿಣಾಮ ಅಮೆರಿಕಕ್ಕೆ ವಿದೇಶಿ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಅಮೆರಿಕದಲ್ಲಿ ಅಂಬಾನಿ ರಿಫೈನರಿ ಬಗ್ಗೆ ಟ್ರಂಪ್‌ ಹೇಳಿದ್ದೇನು ?

-

ಮನಿ ಮೈಂಡೆಡ್

ಮುಕೇಶ್ ಅಂಬಾನಿಯವರನ್ನು ಗೌತಮ್ ಅದಾನಿಯವರೊಂದಿಗೆ ಕ್ರೋನಿ ಕ್ಯಾಪಿಟಲಿಸ್ಟ್‌ ಗಳೆಂದು ಭಾರತದ್ದೇ ಕೆಲ ರಾಜಕಾರಣಿಗಳು ಟೀಕಿಸುತ್ತಿದ್ದರು. ಅದಾನಿ ಯವರನ್ನು ಕೆಡವಿ ಹಾಕಲು ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಪಿತೂರಿ ನಡೆಸಿತ್ತು. ಆದರೆ ಸ್ವತಃ ಹೇಳಹೆಸರಿಲ್ಲದೆ ನಾಮಾವಶೇಷವಾಯಿತು.

ಅಂಬಾನಿ ಜಾಗತಿಕ ಮಟ್ಟದಲ್ಲಿ ಪ್ರಖರ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಭಾರತದ ಆರ್ಥಿಕ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಈ ಸಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಯುದ್ಧದ ಮಧ್ಯೆ ಮಹತ್ವದ ಘೋಷಣೆ ಮಾಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕದಲ್ಲಿ ತೈಲ ಸಂಸ್ಕರಣೆ ಕೇಂದ್ರ ಸ್ಥಾಪನೆಗೆ 300‌ ಶತ ಕೋಟಿ ಡಾಲರ್ ಹೂಡಿಕೆ ಮಾಡಲಿದೆ (ಅಂದಾಜು 27.50 ಲಕ್ಷ ಕೋಟಿ ರುಪಾಯಿ), ಅಮೆರಿಕದ ಇತಿಹಾಸದಲ್ಲಿಯೇ ಇದು ಭಾರಿ ಡೀಲ್ ಆಗಿದೆ ಎಂದಿದ್ದಾರೆ. ಏನಿದು? ಇದರಿಂದ ಅಂಬಾನಿಯವರಿಗೆ, ಅಮೆರಿಕಕ್ಕೆ, ಭಾರತಕ್ಕೆ ಏನೆಲ್ಲ ಲಾಭವಾಗಲಿದೆ? ಈಗಾ ಗಲೇ ಪ್ರಪಂಚದಲ್ಲಿಯೇ ಅತಿ ದೊಡ್ಡ ಕಚ್ಚಾ ತೈಲ ಸಂಸ್ಕರಣೆ ಕೇಂದ್ರವನ್ನು ಗುಜರಾತ್‌ನ ಜಾಮ್ ನಗರದಲ್ಲಿ ಮುಕೇಶ್ ಅಂಬಾನಿಯವರು ನಿರ್ಮಿಸಿದ್ದಾರೆ.

ಇದನ್ನೂ ಓದಿ: Keshava Prasad B Column: ಹರ್ಮುಜ್‌ ಬಿಕ್ಕಟ್ಟಿನಿಂದ ಕಲಿಯಬೇಕಿರುವ ಪಾಠ

ಕಳೆದ 50 ವರ್ಷಗಳಲ್ಲಿ ಅಮೆರಿಕದಲ್ಲಿ ಬೃಹತ್ ತೈಲ ಸಂಸ್ಕರಣೆ ಕೇಂದ್ರವೇ ಸ್ಥಾಪನೆ ಯಾಗಿಲ್ಲ! ಅಂದರೆ ಅಂಬಾನಿಯವರ ತಾಕತ್ತು, ಉದ್ಯಮಶೀಲತೆ, ದೂರದೃಷ್ಟಿ, ಮಹತ್ತ್ವಾ ಕಾಂಕ್ಷೆ, ಏಕಾಗ್ರತೆ ಎಷ್ಟು ದೊಡ್ಡದು ಎಂಬುದನ್ನು ಗಮನಿಸಿ!

ಅಮೆರಿಕದಲ್ಲಿ 2024 ಜನವರಿಯ ವೇಳೆಗೆ 132 ಪೆಟ್ರೋಲಿಯಂ ರಿಫೈನರಿಗಳು ಇವೆ. ವರದಿಗಳ ಪ್ರಕಾರ, ಇವೆಲ್ಲವನ್ನೂ ಮೀರಿಸುವ ರಿಫೈನರಿಯನ್ನು ಅಂಬಾನಿ ನಿರ್ಮಿಸ ಲಿದ್ದಾರೆ. ಟ್ರಂಪ್ ಘೋಷಣೆಗೆ ಸಂಬಂಧಿಸಿ ರಿಲಯನ್ಸ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಪರ್ಮಿಯನ್ ಬೇಸಿನ್‌ನಲ್ಲಿ ದೊರೆಯುವ ಕಚ್ಚಾ ತೈಲವನ್ನು ರಿಫೈನರಿ ಸಂಸ್ಕರಿಸಲಿದೆ.

ಸೌತ್ ಟೆಕ್ಸಾಸ್‌ನ ಬ್ರೌನ್ಸ್‌ವಿಲ್‌ನಲ್ಲಿ ಈ ಘಟಕ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಧ್ಯಮ ಗಳಲ್ಲಿ ವರದಿಯಾಗಿದೆ. ರಿಲಯನ್ಸ್ ಇಂಡಸ್ಟ್ರಿಯ ಜಾಮ್ ನಗರದ ರಿಫೈನರಿಯಲ್ಲಿ ಕಚ್ಚಾ ತೈಲವನ್ನು ಸಂಸ್ಕರಿಸಿ ನಾನಾ ಪೆಟ್ರೋಲಿಯಂ ಉತ್ನನ್ನಗಳನ್ನು ತಯಾರಿಸಲಾಗುತ್ತದೆ. ಡೀಸೆಲ್, ಪೆಟ್ರೋಲ್, ವೈಮಾನಿಕ ಇಂಧನ ಎಟಿಎಫ್, ಎಲ್‌ಪಿಜಿ, ಸುಪೀರಿಯರ್ ಕೆರೋಸಿನ್ ಆಯಿಲ್, ಸಲ್ಫರ್, ಪೆಟ್ರೋಲಿಯಂ ಕೋಕ್, ಪ್ರೊಪಿಲಿನ್... ಹೀಗೆ ಪಟ್ಟಿ ಬೆಳೆಯುತ್ತದೆ.

Screenshot_2 R

ಇವುಗಳು ದೇಶ-ವಿದೇಶಗಳಲ್ಲಿ ಮಾರಾಟವಾಗುತ್ತದೆ. ಇಲ್ಲಿ ದಿನಕ್ಕೆ 14 ಲಕ್ಷ ಬ್ಯಾರಲ್ ತೈಲ ಸಂಸ್ಕರಣೆ ಮಾಡಬಹುದು. ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಬಂಡವಾಳ ಷೇರು ಗಳ ಒಟ್ಟು ಮಾರುಕಟ್ಟೆ ಮೌಲ್ಯ) 204 ಶತಕೋಟಿ ಡಾಲರ್. ಅಂದ್ರೆ 18.82 ಲಕ್ಷ ಕೋಟಿ ರುಪಾಯಿ. ಹಾಗಿರುವಾಗ 27.50 ಲಕ್ಷ ಕೋಟಿ ರುಪಾಯಿಗಳನ್ನು ರಿಲಯನ್ಸ್ ಹೇಗೆ ಹೂಡಿಕೆ ಮಾಡುತ್ತದೆ ಎಂಬುದು ಕೆಲವರ ಪ್ರಶ್ನೆ. ಆದರೆ ಇದು ಒಂದೇ ವರ್ಷದಲ್ಲಿ ಆಗುವಂಥದ್ದಲ್ಲ. 20 ವರ್ಷಗಳ ಡೀಲ್. ಹಂತಹಂತಗಳಲ್ಲಿ ಹೂಡಿಕೆ ನಡೆಯುತ್ತಿರುತ್ತದೆ. ‌

2000ರ ಮಧ್ಯಭಾಗದಲ್ಲಿ ಅಮೆರಿಕದಲ್ಲಿ ಶೇಲ್ ಎಂಬ ಕಚ್ಚಾ ತೈಲದ ಉತ್ಪಾದನೆ ವೇಗ ಪಡೆದುಕೊಂಡಿತು. 2014-24ರಲ್ಲಿ ಅಮೆರಿಕ 10 ಶತಕೋಟಿ ಬ್ಯಾರೆಲ್ ತೈಲ ರಫ್ತು ಮಾಡಿ ತ್ತು.

ಹೀಗಿದ್ದರೂ, ಅಮೆರಿಕದ ಶೇಲ್ ತೈಲವನ್ನು ವ್ಯಾಪಕವಾಗಿ ಸಂಸ್ಕರಿಸಲು ಅಷ್ಟೇ ಸಾಮರ್ಥ್ಯದ ಸಂಸ್ಕರಣ ಘಟಕ ಬೇಕಿತ್ತು. ಅದಕ್ಕೆ ಭಾರೀ ಬಂಡವಾಳದ ಅಗತ್ಯವೂ ಇತ್ತು. ರಿಲಯನ್ಸ್ ಇಂಡಸ್ಟ್ರೀಸ್ ಎಂಟ್ರಿಯೊಂದಿಗೆ ಅಮೆರಿಕದಲ್ಲಿ ಶೇಲ್ ತೈಲದ ಸಂಸ್ಕರಣೆ ಗಣನೀಯ ಹೆಚ್ಚಳವಾಗಲಿದೆ. ಇದು ಅಮೆರಿಕಕ್ಕೆ ತೈಲ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ನೆರವಾಗಲಿದೆ. ರಿಲಯನ್ಸ್ ಇಂಡಸ್ಟ್ರೀಸ್‌ಗೆ ಮುಂದಿನ 20 ವರ್ಷಗಳ ಕಾಲ ಕಾಯಂ ಗ್ರಾಹಕ ಸಿಗಲಿದೆ.

ಪೆಟ್ರೋಲ್-ಡೀಸೆಲ್, ಎಲ್‌ಪಿಜಿ, ಎಟಿಎಫ್ ಉತ್ಪಾದಿಸಲಿದೆ. ಭಾರತಕ್ಕೂ ಪೆಟ್ರೋಲಿಯಂ ಉತ್ಪನ್ನಗಳು, ಎಲ್‌ಪಿಜಿ ತರಿಸಿಕೊಳ್ಳಲು ಅನುಕೂಲವಾಗಲಿದೆ. ಹೊಸ ರಿಫೈನರಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 50.39 ಪರ್ಸೆಂಟ್ ಪಾಲು ಸಿಗುವ ನಿರೀಕ್ಷೆ ಇದೆ. ಈ ನಡುವೆ ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಕೃತಿಯ ಲೇಖಕ, ಹಣಕಾಸು ತಜ್ಞ ರಾಬರ್ಟ್ ಕಿಯೊಸಾಕಿ ಅವರದ್ದು ಎನ್ನಲಾದ ಪೋಸ್ಟ್ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ವಾರಸ್ಯಕರವಾಗಿದೆ.

ರಿಲಯನ್ಸ್ ಪಾಲುದಾರಿಕೆ ಇರುವ ರಿಫೈನರಿಯಲ್ಲಿ ಪರ್ಮಿಯನ್ ಬೇಸಿನ್ ಮೂಲದ ಲೈಟ್ ಶೇಲ್ ಆಯಿಲ್ ಅನ್ನು ವಿಶೇಷವಾಗಿ ಸಂಸ್ಕರಿಸಲಾಗುತ್ತದೆ. 20 ವರ್ಷಗಳಲ್ಲಿ 102 ಕೋಟಿ ಬ್ಯಾರೆಲ್ ಕಚ್ಚಾತೈಲ ಸಂಸ್ಕರಣೆಯಾಗುತ್ತದೆ. ಇದರ ಪರಿಣಾಮ ಅಮೆರಿಕಕ್ಕೆ ವಿದೇಶಿ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಇದರಿಂದ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇಂಧನ ಸಿಗಲಿದೆ. ರಿಲಯನ್ಸ್‌ಗೆ ಏನು ಸಿಗಲಿದೆ? 20 ವರ್ಷಗಳ ಅವಧಿಗೆ ಕಾಯಂ ಗ್ರಾಹಕ ಸಿಕ್ಕಂತಾಗಿದೆ. ಅಮೆರಿಕದ ಇಂಧನ ಮಾರುಕಟ್ಟೆಗೆ ಪ್ರವೇಶ ಸಿಗಲಿದೆ.

ಎರಡನೆಯದಾಗಿ ಎಲ್ಲರೂ ಇರಾನ್ ಯುದ್ಧದ ಸಂಗತಿಯಲ್ಲಿ ಮೈಮರೆತಿರುವಾಗ ಟ್ರಂಪ್ ವೆನೆಜುವೆಲಾದ ತೈಲ ಸೆಕ್ಟರ್ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಅಲ್ಲಿ 303 ಶತಕೋಟಿ ಬ್ಯಾರೆಲ್ ತೈಲ ಸಂಗ್ರಹ ಇದೆ. ಇಡೀ ಭೂಮಿಯ ದೊಡ್ಡ ತೈಲ ನಿಕ್ಷೇಪವಿದು. ಆದರೆ ವೆನಿಜುವೆಲಾದ ತೈಲ ಹೆಚ್ಚು ಭಾರ ಮತ್ತು ದಪ್ಪ ಇದೆ. ಅಧಿಕ ಸಲ್ಫರ್ ಅಂಶವನ್ನು ಒಳಗೊಂಡಿದೆ. ಇದನ್ನು ಸಂಸ್ಕರಿಸಲು ಅಷ್ಟೇ ವಿಶೇಷ ತಂತ್ರಜ್ಞಾನ ಮತ್ತು ಸಾಧನಗಳು ಅಗತ್ಯ. ಅಮೆರಿಕದ ಬಹುತೇಕ ರಿಫೈನರಿಗಳಲ್ಲಿ ಈ ಸಾಮರ್ಥ್ಯ ಮತ್ತು ಟೆಕ್ನಾಲಜಿ ಇಲ್ಲ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಬಳಿ ಇದಕ್ಕೆ ಬೇಕಾದ ತಂತ್ರಜ್ಞಾನ, ಸಲಕರಣೆಗಳು ಇವೆ.

ಅಮೆರಿಕವು ವೆನೆಜುವೆಲಾದ ತೈಲ ಸಂಪತ್ತನ್ನು ತನ್ನ ಕೈವಶಪಡಿಸಿಕೊಂಡಿದೆ. ಆದರೆ ಅದನ್ನು ತಾನೇ ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಮುಕೇಶ್ ಅಂಬಾನಿಯವರ ರಿಲಯನ್ಸ್ ಅಮೆರಿಕದ ನಿರ್ಬಂಧಕ್ಕೂ ಮುನ್ನ ವೆನೆಜುವೆಲಾ ತೈಲ ವನ್ನು ಆಮದು ಮಾಡಿಕೊಳ್ಳುತ್ತಿತ್ತು ಮತ್ತು ಅದನ್ನು ಚೆನ್ನಾಗಿ ಸಂಸ್ಕರಿಸಿ ಬಳಸುತ್ತಿತ್ತು. ಅದು ಹೇಗೆ ಎಂಬುದು ಅದಕ್ಕೆ ಗೊತ್ತಿದೆ.

ಚೀನಾವು ವೆನೆಜುವೆಲಾದಿಂದ ಭಾರಿ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿತ್ತು. ಪ್ರತಿಯಾಗಿ ಸಾಲ ಕೊಡುತ್ತಿತ್ತು. ಆದರೆ ಈಗ ಅದು ನಿಂತಿದೆ. ಭಾರತ ಮತ್ತು ರಿಲಯನ್ಸ್ ಎಂಟ್ರಿಯಾಗಿದೆ. ಮುಂದಿನ 20 ವರ್ಷಗಳ ಕಾಲ ಅಮೆರಿಕಕ್ಕೆ ತೈಲ ಸಂಸ್ಕರಣೆಗೆ ಡೀಲ್ ಆಗಿದೆ. ಇದು ಕೇವಲ ಡೀಲ್ ಮಾತ್ರವಲ್ಲ, ಜಾಗತಿಕ ಇಂಧನ ವಲಯದಲ್ಲಿಯೇ ಡೈನಾ ಮಿಕ್ ಶಿಫ್ಟ್ ಎಂದು ಫೋರ್ಬ್ಸ್ ನಿಯತಕಾಲಿಕೆ ಬಣ್ಣಿಸಿದೆ.

ಮಧ್ಯಪ್ರಾಚ್ಯದಲ್ಲಿ ಭವಿಷ್ಯದ ದಿನಗಳಲ್ಲಿ ತೈಲ ಬಿಕ್ಕಟ್ಟು ಸಂಭವಿಸಿದಾಗ ಕಚ್ಚಾ ತೈಲ ದರ ಏರಿಕೆಯನ್ನು ತಡೆಗಟ್ಟಲು ಅಮೆರಿಕಕ್ಕೆ ಇದು ನೆರವಾಗಲಿದೆ. ಭಾರತಕ್ಕೆ ಇದರಿಂದ ಏನು ಪ್ರಯೋಜನವಾಗಲಿದೆ? ಮಧ್ಯಪ್ರಾಚ್ಯ ಹೊರತುಪಡಿಸಿ, ಮತ್ತೊಂದು ಮೂಲದಿಂದ ತೈಲ ಖರೀದಿಸಬಹುದು.‌ ರಷ್ಯಾದ ತೈಲ ಆಮದು, ಮಾಡಿಕೊಳ್ಳುವ ಒತ್ತಡ ಕಡಿಮೆಯಾಗಲಿದೆ. ದೀರ್ಘಾವಧಿಗೆ ಅಮೆರಿಕದ ಶೇಲ್ ತೈಲವನ್ನು ಭಾರತ ಆಮದು ಮಾಡಿಕೊಳ್ಳಲು ಹಾದಿ ಸುಗಮವಾಗಲಿದೆ. ರಷ್ಯಾ ತೈಲ ಖರೀದಿಗೆ ಅಮೆರಿಕದ ನಿರ್ಬಂಧವನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರಿಯಾಗಲಿದೆ. ಭಾರತ- ಅಮೆರಿಕ ಸಂಬಂಧ ವೃದ್ಧಿಗೆ ಉಪಕಾರಿ ಯಾಗಲಿದೆ.

2026ರ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಆಪರೇಷನ್ ಎಪಿಕ್ ಫ್ಯೂರಿ ಹೆಸರಿ ನಲ್ಲಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದವು. ಇದರ ಬೆನ್ನ ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತು. ಯುದ್ಧದ ಬಿಸಿ ತಟ್ಟಿತು. ಏಕೆಂದರೆ ಭಾರತಕ್ಕೆ 40 ಪರ್ಸೆಂಟ್‌ನಷ್ಟು ಕಚ್ಚಾ ತೈಲ ಆಮದು ಮತ್ತು ಅರ್ಧದಷ್ಟು ಎಲ್ಎನ್‌ಜಿ ಪೂರೈಕೆಯು ಇದೇ ಜಲಸಂಧಿಯ ಮೂಲಕ ಹಡಗುಗಳಲ್ಲಿ ಸಾಗಣೆಯಾಗುತ್ತದೆ.

ಅನಿಲ ಪೂರೈಕೆ ವ್ಯತ್ಯಯವಾಗುವುದರಿಂದ ಪೆಟ್ರೋಕೆಮಿಕಲ್ಸ್, ಫರ್ಟಿಲೈಸರ್ಸ್ ಮತ್ತು ಸಿಟಿ ಗ್ಯಾಸ್ ವಿತರಣೆ ನೆಟ್‌ವರ್ಕ್‌ಗಳ ಮೇಲೆ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿತ್ತು. ಈಗ 90 ಡಾಲರ್ ಆಸುಪಾಸಿ ನಲ್ಲಿದ್ದರೂ, ದುಬಾರಿಯೇ ಆಗಿದೆ. ಕತಾರ್‌ನಿಂದ ಎಲ್ಎನ್‌ಜಿ ಬರುತ್ತಿಲ್ಲ. ‌

ಇಷ್ಟೆಲ್ಲ ಆಗಿದ್ದರೂ, ಭಾರತದ ಬಳಿ 74 ದಿನಗಳಿಗೆ ಆಗುವಷ್ಟು ತೈಲ ದಾಸ್ತಾನು ಇರುವು ದರಿಂದ ಇರಾನ್ ವಾರ್‌ನ ಶಾಕ್ ಅನ್ನು ಎದುರಿಸಲು ಸಾಧ್ಯವಾಗಿದೆ. ಆದರೆ ಇಷ್ಟಕ್ಕೇ ಸುಮ್ಮನಿರಲೂ ಸಾಧ್ಯವಿಲ್ಲ. ತೈಲ ಮತ್ತು ಅನಿಲಕ್ಕೆ ಪರ್ಯಾಯದ ಅಭಿವೃದ್ಧಿ ಮತ್ತು ಹೊಸ ಮೂಲಗಳ ಶೋಧ ಅನಿವಾರ್ಯ. ಈ ನಿಟ್ಟಿನಲ್ಲಿ ಮುಕೇಶ್ ಅಂಬಾನಿ ಯವರ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕದ ತೈಲ ಸಂಸ್ಕರಣೆ ವಲಯದಲ್ಲಿ ಬಲವಾಗಿ ಪದಾರ್ಪಣೆ ಮಾಡುತ್ತಿರುವುದು ಗಮನಾರ್ಹ.

ಇರಾನಿನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಎಇ) ಕೊಲ್ಲಿ ವಲಯದಲ್ಲಿ ಯುದ್ಧವನ್ನು ತೀವ್ರಗೊಳಿಸಿದೆ. ತೈಲ ಮತ್ತು ಅನಿಲ ಹಡಗುಗಳ ಮಾರ್ಗಗಳನ್ನು ಬಂದ್ ಮಾಡುವುದಾಗಿ ಎಚ್ಚರಿಸಿದೆ. ಕೆಲವು ವರದಿಗಳ ಪ್ರಕಾರ ಇರಾನ್, ಹೊರ್ಮುಜ್ ಜಲಸಂಧಿ ಯಲ್ಲಿ ಭಾರತದ ಹಡಗಿನ ಸಂಚಾರಕ್ಕೆ ಅನುಮತಿ ಕೊಟ್ಟಿದೆ.

ಏನೇ ಆಗಲಿ, ಕಚ್ಚಾ ತೈಲ ದರ ಏರುಗತಿಯಲ್ಲಿ ಇರುವುದು ವಾಸ್ತವ. ಭಾರತ ಎಲ್ಲಿಂದ ಲಾದರೂ, ಕಚ್ಚಾ ತೈಲವನ್ನೇನೋ ಖರೀದಿಸಬಹುದು. ಆದರೆ ದರ ಏರಿಕೆಯೇ ಸವಾಲು. ಇರಾನಂತೂ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 200 ಡಾಲರ್‌ಗೆ ಏರಿಕೆಯಾಗಲಿದೆ ಎಂದು ಎಚ್ಚರಿಸಿದೆ.

ಇದರಿಂದ ಭಾರತೀಯ ಕುಟುಂಬಗಳಿಗೆ, ಜನ ಜೀವನದ ಮೇಲೆ ಪರಿಣಾಮ ಬೀರುವುದನ್ನು ನಾವು ಕಾಣುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ರಿಲಯನ್ಸ್ ಅಮೆರಿಕದಲ್ಲಿ ಮೆಗಾ ಡೀಲ್ ಮಾಡುತ್ತಿರುವುದು ಕೇವಲ ಕಂಪನಿಗಳ ನಡುವಣ ಒಪ್ಪಂದವಲ್ಲ, ಇದರಿಂದ ಭಾರತಕ್ಕೂ ಹಲವು ವಿಧಗಳಲ್ಲಿ ಅನುಕೂಲ ಆಗುತ್ತಿರುವುದು ಸ್ವಾಗತಾರ್ಹ. ಜಿಯೋ ಮೂಲಕ ಟೆಲಿಕಾಂ ಕ್ರಾಂತಿ, ಜಾಮ್ ನಗರದಲ್ಲಿ ತೈಲ ಸಂಸ್ಕರಣೆಯ ಕ್ರಾಂತಿ, ರಿಟೇಲ್ ವಹಿವಾಟಿ ನಲ್ಲಿ ರಿಲಯನ್ಸ್ ರಿಟೇಲ್ ಮೂಲಕ ಗಣನೀಯ ಮನ್ನಡೆ, ಸೌರ ಮತ್ತು ಹೈಡ್ರೋಜನ್ ಇಂಧನ ಕ್ಷೇತ್ರಕ್ಕೆ ಭಾರೀ ಹೂಡಿಕೆ, ಹೀಗೆ ಅಂಬಾನಿಯವರ ಕೊಡುಗೆಯ ಲಿಸ್ಟ್ ಬೆಳೆಯು ತ್ತದೆ.

ರಿಲಯನ್ಸ್ ಗ್ರೂಪ್ 3 ಲಕ್ಷ ಮಂದಿಗೆ ಉದ್ಯೋಗ ಕೊಟ್ಟಿದೆ. ಲಕ್ಷಾಂತರ ಮಂದಿಗೆ ಪರೋಕ್ಷ ಉದ್ಯೋಗ ನೀಡಿದೆ. ಟೆಕ್ ದಿಗ್ಗಜಗಳಾದ ಗೂಗಲ್, ಮೆಟಾ ಜತೆಗೆ ಒಪ್ಪಂದ ಮಾಡಿದೆ. ಇಂಥ ದೈತ್ಯ ಸಂಸ್ಥೆಯನ್ನು ಬೆಳೆಸಿರುವುದು ಹೆಮ್ಮೆಯ ಸಂಗತಿಯಲ್ಲವೇ?ಹಾಗಿರುವಾಗ ಕ್ರೋನಿ ಕ್ಯಾಪಿಟಲಿಸ್ಟ್ ಅನ್ನೋದು ಸರಿಯೇ? ಭಾರತದಲ್ಲಿ ಲೈಸೆನ್ಸ್ ರಾಜ್ ತಾರಕಕ್ಕೇರಿದ್ದಾಗ ಉದ್ಯಮಿಗಳನ್ನು ಖಳನಾಯಕರಂತೆ ಚಿತ್ರಿಸಲಾಗುತ್ತಿತ್ತು. ಅದರ ಈಗ ಕಾಲ ಬದಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ನಿರ್ಣಾಯಕವಾಗಿದೆ. ಆದ್ದರಿಂದ ಉದ್ಯಮ ಶೀಲರಿಗೆ ಪ್ರೋತ್ಸಾಹ ಅಗತ್ಯ.