ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಅಲ್ಜೀರಿಯಾ ಸಿಂಡ್ರೋಮ್ ಅಂದರೇನು ?

‘ಅಲ್ಜೀರಿಯಾ ಸಿಂಡ್ರೋಮ್’ ಎಂಬುದು ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ಪದವಲ್ಲ, ಬದಲಿಗೆ ಇದು ರಾಜತಾಂತ್ರಿಕ ಮತ್ತು ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿದ್ಯಮಾನವಾಗಿದೆ. ಒಂದು ದೇಶವು ತನ್ನ ಅತಿಯಾದ ಆತ್ಮವಿಶ್ವಾಸದಿಂದ ಯುದ್ಧಕ್ಕೆ ಇಳಿದು, ಅಲ್ಲಿನ ಸ್ಥಳೀಯ ಪ್ರತಿರೋಧದ ಮುಂದೆ ಮಂಡಿಯೂರಿ, ತನ್ನ ಸ್ವಂತ ದೇಶದ ಒಳಗೇ ರಾಜಕೀಯ ಅಸ್ಥಿರತೆಯನ್ನು ಅನುಭವಿಸಿದರೆ ಅದನ್ನು ‘ಸಿಂಡ್ರೋಮ್’ ಎಂದು ಕರೆಯಲಾಗು ತ್ತದೆ. ‌

Vishweshwar Bhat Column: ಅಲ್ಜೀರಿಯಾ ಸಿಂಡ್ರೋಮ್ ಅಂದರೇನು ?

-

ಸಂಪಾದಕರ ಸದ್ಯಶೋಧನೆ

ಮೊನ್ನೆ ಲೋಕಸಭೆಯಲ್ಲಿ ಮಾತಾಡುವಾಗ ಬಿಜೆಪಿಯ ನಿಶಿಕಾಂತ್ ದುಬೆ ಅವರು ಕಾಂಗ್ರೆಸ್ ‘ಅಲ್ಜೀರಿಯಾ ಸಿಂಡ್ರೋಮ್’ (Algeria Syndrome) ನಿಂದ ಬಳಲುತ್ತಿದೆ ಎಂದು ಹೇಳಿದರು. ಆದರೆ ಆ ಸಿಂಡ್ರೋಮ್ ಅಂದ್ರೆ ಏನು ಎಂಬುದನ್ನು ಅವರು ವಿವರಿಸಲಿಲ್ಲ. ‌

‘ಅಲ್ಜೀರಿಯಾ ಸಿಂಡ್ರೋಮ್’ ಎಂಬುದು ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ಪದವಲ್ಲ, ಬದಲಿಗೆ ಇದು ರಾಜತಾಂತ್ರಿಕ ಮತ್ತು ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿದ್ಯಮಾನವಾಗಿದೆ. ಒಂದು ದೇಶವು ತನ್ನ ಅತಿಯಾದ ಆತ್ಮವಿಶ್ವಾಸದಿಂದ ಯುದ್ಧಕ್ಕೆ ಇಳಿದು, ಅಲ್ಲಿನ ಸ್ಥಳೀಯ ಪ್ರತಿರೋಧದ ಮುಂದೆ ಮಂಡಿಯೂರಿ, ತನ್ನ ಸ್ವಂತ ದೇಶದ ಒಳಗೇ ರಾಜಕೀಯ ಅಸ್ಥಿರತೆಯನ್ನು ಅನುಭವಿಸಿದರೆ ಅದನ್ನು ‘ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ‌

ಅಮೆರಿಕಕ್ಕೆ ‘ವಿಯೆಟ್ನಾಂ ಸಿಂಡ್ರೋಮ್’ ಹೇಗೋ, ಫ್ರಾನ್ಸ್‌ಗೆ ‘ಅಲ್ಜೀರಿಯಾ ಸಿಂಡ್ರೋಮ್’ ಹಾಗೆ. ಇದು ಕೇವಲ ಒಂದು ಯುದ್ಧದ ಸೋಲಲ್ಲ, ಇದು ಒಂದು ಸಿದ್ಧಾಂತದ ಪತನ. 1830ರಿಂದಲೂ ಅಲ್ಜೀರಿಯಾ ಫ್ರಾನ್ಸ್‌ನ ವಸಾಹತಾಗಿತ್ತು.

- ಇದನ್ನು ಕೇವಲ ಒಂದು ಕಾಲೊನಿ ಎಂದು ನೋಡದೇ, ತನ್ನ ದೇಶದ ಒಂದು ಅವಿಭಾಜ್ಯ ಅಂಗ ಎಂದೇ ಪರಿಗಣಿಸಿತ್ತು. ಲಕ್ಷಾಂತರ ಫ್ರೆಂಚ್ ಜನರು ಅಲ್ಜೀರಿಯಾದಲ್ಲಿ ನೆಲೆಸಿದ್ದರು. ಆದರೆ, ಎರಡನೇ ಮಹಾಯುದ್ಧದ ನಂತರ ಜಗತ್ತಿನಾದ್ಯಂತ ವಸಾಹತುಶಾಹಿ ವಿರುದ್ಧ ಅಲೆ ಎದ್ದಾಗ, ಅಲ್ಜೀರಿಯನ್ನರು ಕೂಡ ತಮ್ಮ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದರು.

ಇದನ್ನೂ ಓದಿ: Vishweshwar Bhat Column: ಎಐ ಯುಗದಲ್ಲಿ ಮನುಷ್ಯ

1954ರಲ್ಲಿ ‘ನ್ಯಾಷನಲ್ ಲಿಬರೇಷನ್ ಫ್ರಂಟ್’ ಎಂಬ ಸಂಘಟನೆ - ವಿರುದ್ಧ ಸಶಸ್ತ್ರ ಬಂಡಾಯ ಸಾರಿತು. ಇಲ್ಲಿಂದ ‘ಅಲ್ಜೀರಿಯಾ ಸಿಂಡ್ರೋಮ್’ ಎಂಬ ಕರಾಳ ಅಧ್ಯಾಯ ಆರಂಭವಾಯಿತು. ‌

- ಅಂದು ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಗಳಲ್ಲಿ ಒಂದಾಗಿತ್ತು. ಅಲ್ಜೀರಿಯಾದ ಗೆರಿಲ್ಲಾ ಹೋರಾಟಗಾರರನ್ನು ಹತ್ತಿಕ್ಕಲು - ಲಕ್ಷಾಂತರ ಸೈನಿಕರನ್ನು ಕಳುಹಿಸಿತು. ಆದರೆ, ಈ ಯುದ್ಧವು ಸಾಂಪ್ರದಾಯಿಕ ಯುದ್ಧವಾಗಿರಲಿಲ್ಲ. ಅದು ‘ಅಸಿಮ್ಮೆಟ್ರಿಕ್ ವಾರ್ ಫೇರ್’ ಆಗಿತ್ತು. ಅಲ್ಜೀರಿಯಾದ ಬೆಟ್ಟಗುಡ್ಡಗಳಲ್ಲಿ ಅಡಗಿದ್ದ ಹೋರಾಟಗಾರರು ಫ್ರೆಂಚ್ ಸೈನಿಕರ ಮೇಲೆ ಹಠಾತ್ ದಾಳಿ ನಡೆಸಿ ಮಾಯವಾಗುತ್ತಿದ್ದರು. ಈ ಬಂಡಾಯವನ್ನು ಹತ್ತಿಕ್ಕಲು ಫ್ರೆಂಚ್ ಸೇನೆಯು ಚಿತ್ರಹಿಂಸೆ, ಸಾಮೂಹಿಕ ಹತ್ಯೆ ಮತ್ತು ಹಳ್ಳಿಗಳನ್ನು ಸುಡುವಂಥ ಕ್ರೂರ ಮಾರ್ಗಗಳನ್ನು ಅನುಸರಿಸಿತು.

ಈ ಕ್ರೌರ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ರಾನ್ಸ್‌ನ ಘನತೆಗೆ ದೊಡ್ಡ ಪೆಟ್ಟು ನೀಡಿತು. ಅಷ್ಟಕ್ಕೂ ‘ಅಲ್ಜೀರಿಯಾ ಸಿಂಡ್ರೋಮ್’ ಅಂದರೇನು? ಈ ಪದವು ಪ್ರಮುಖವಾಗಿ ಮೂರು ಆಯಾಮಗಳನ್ನು ಒಳಗೊಂಡಿದೆ. ಮೊದಲನೆಯದು, ಮಿಲಿಟರಿ ಹತಾಶೆ. ಅತ್ಯಾ ಧುನಿಕ ಶಸ್ತ್ರಾಸ್ತ್ರಗಳಿದ್ದರೂ, ಜನರ ಬೆಂಬಲವಿರುವ ಸಣ್ಣ ಗುಂಪನ್ನು ಸೋಲಿಸಲು ಸಾಧ್ಯವಾಗದ ಸ್ಥಿತಿ.

ಅಲ್ಜೀರಿಯಾದಲ್ಲಿ - ಮಿಲಿಟರಿ ದೃಷ್ಟಿಯಿಂದ ಗೆದ್ದಂತೆ ಕಂಡರೂ, ರಾಜಕೀಯವಾಗಿ ಸೋಲುತ್ತಾ ಹೋಯಿತು. ಎರಡನೆಯದು, ಆಂತರಿಕ ವಿಭಜನೆ. ಈ ಯುದ್ಧವು - ದೇಶವನ್ನು ಎರಡಾಗಿ ಸೀಳಿತು. ಒಂದು ವರ್ಗ ಅಲ್ಜೀರಿಯಾವನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿ ಕೊಳ್ಳಬೇಕು ಎಂದರೆ, ಮತ್ತೊಂದು ವರ್ಗ ‘ನಮ್ಮ ಯುವಕರು ಪರಕೀಯ ಭೂಮಿ ಯಲ್ಲಿ ಏಕಾಗಿ ಸಾಯಬೇಕು?’ ಎಂದು ಪ್ರಶ್ನಿಸತೊಡಗಿತು.

ಇದು ಫ್ರೆಂಚ್ ಸಮಾಜದಲ್ಲಿ ದೊಡ್ಡ ಕಂದಕವನ್ನು ಸೃಷ್ಟಿಸಿತು. ಮೂರನೆಯದು, ರಾಜಕೀಯ ಅಸ್ಥಿರತೆ. ಯುದ್ಧದ ವೆಚ್ಚ ಮತ್ತು ಸೈನಿಕರ ಸಾವು ಫ್ರಾನ್ಸ್‌ನ ಆರ್ಥಿಕತೆಯನ್ನು ಹೈರಾಣಾಗಿಸಿತು. - ಪತನದ ಅಂಚಿಗೆ ತಲುಪಿತು. ಅಲ್ಲಿನ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕಿತು. ಸೈನ್ಯವು ಸರಕಾರದ ವಿರುದ್ಧವೇ ಬಂಡಾಯ ಏಳುವ ಸೂಚನೆ ನೀಡಿತು.

ಪರಿಸ್ಥಿತಿ ಕೈಮೀರಿದಾಗ, ಫ್ರಾನ್ಸ್‌ನ ಮಹಾನ್ ನಾಯಕ ಚಾರ್ಲ್ಸ್ ಡಿ ಗಾಲ್ ಅಧಿಕಾರಕ್ಕೆ ಬಂದರು. ಅಲ್ಜೀರಿಯಾವನ್ನು ಉಳಿಸಿಕೊಳ್ಳುತ್ತಾರೆಂಬ ನಂಬಿಕೆಯಿಂದ ಅವರನ್ನು ಕರೆತರ ಲಾಗಿತ್ತು. ಆದರೆ, ಅಲ್ಜೀರಿಯಾವನ್ನು ಗೆಲ್ಲುವುದು ಅಸಾಧ್ಯ ಮತ್ತು ಅದು ಫ್ರಾನ್ಸ್‌ನ ವಿನಾಶಕ್ಕೆ ದಾರಿ ಎಂದು ಅರಿತ ಡಿ ಗಾಲ್, 1962ರಲ್ಲಿ ‘ಎವಿಯನ್ ಒಪ್ಪಂದ’ದ ಮೂಲಕ ಅಲ್ಜೀರಿಯಾಕ್ಕೆ ಸ್ವಾತಂತ್ರ್ಯ ಘೋಷಿಸಿದರು.

ಇದು ಫ್ರಾನ್ಸ್‌ನ ಬಲಪಂಥೀಯರಿಗೆ ಮತ್ತು ಸೈನ್ಯಕ್ಕೆ ಮಾಡಿದ ದೊಡ್ಡ ದ್ರೋಹದಂತೆ ಕಂಡಿತು. ಯುದ್ಧ ಮುಗಿದ ನಂತರವೂ ‘ಅಲ್ಜೀರಿಯಾ ಸಿಂಡ್ರೋಮ್’ - ಅನ್ನು ಕಾಡುತ್ತಲೇ ಇತ್ತು. ಯುದ್ಧದಿಂದ ಮರಳಿದ ಸೈನಿಕರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾದರು. ತಾವು ಮಾಡಿದ ಕ್ರೌರ್ಯ ಮತ್ತು ಅನುಭವಿಸಿದ ಸೋಲು ಅವರನ್ನು ಕಾಡಿತು. ‌

ಅಲ್ಜೀರಿಯಾದಲ್ಲಿದ್ದ ಲಕ್ಷಾಂತರ ಫ್ರೆಂಚ್ ನಾಗರಿಕರು (Pieds Noirs) ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಕಳೆದುಕೊಂಡು ಫ್ರಾನ್ಸ್‌ಗೆ ಓಡಿಬರಬೇಕಾಯಿತು. ಅವರನ್ನು ಫ್ರಾನ್ಸ್‌ನ ಸ್ವಂತ ಜನರೇ ಅನ್ಯರಂತೆ ನೋಡಿದರು.

ಡಿ ಗಾಲ್ ಮೇಲೆ ಹಲವಾರು ಬಾರಿ ಹತ್ಯೆಯ ಪ್ರಯತ್ನಗಳು ನಡೆದವು. ಸೈನ್ಯದ ಒಂದು ಭಾಗ ಸರಕಾರವನ್ನೇ ಉರುಳಿಸಲು ಸಂಚು ರೂಪಿಸಿತು. ಇಂದು ‘ಅಲ್ಜೀರಿಯಾ ಸಿಂಡ್ರೋಮ್’ ಎಂಬುದು ಕೇವಲ ಫ್ರಾನ್ಸ್‌ಗೆ ಸೀಮಿತವಾಗಿಲ್ಲ.