Vishweshwar Bhat Column: ಪ್ಯಾನ್-ಪ್ಯಾನ್ ಎಂದರೇನು ?
ವಿಮಾನಯಾನದಲ್ಲಿ ಈ ಅಲರ್ಟ್ ಅನ್ನು ಎರಡು ಪ್ರಮುಖ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ವಿಮಾನದ ಯಾಂತ್ರಿಕ ಭಾಗಗಳಲ್ಲಿ ಸಮಸ್ಯೆ ಕಂಡುಬಂದಾಗ. ಉದಾಹರಣೆಗೆ, ಕಾಕ್‌ಪಿಟ್‌ನ ಕಿಟಕಿ ಬಿರುಕು ಬಿಟ್ಟರೆ ಅಥವಾ ಎರಡು ಎಂಜಿನ್‌ಗಳ ಪೈಕಿ ಒಂದು ಎಂಜಿನ್ ನಿಂತುಹೋದರೆ ಇದನ್ನು ಬಳಸುತ್ತಾರೆ.
-
ಸಂಪಾದಕೀಯ ಸದ್ಯಶೋಧನೆ
ಮೊನ್ನೆ ಬೆಂಗಳೂರಿನಿಂದ ಭುವನೇಶ್ವರಕ್ಕೆ ಹೊರಟ ಆಕಾಶ ಏರ್ ವಿಮಾನ ಹವಾಮಾನ ವೈಪರೀತ್ಯದಿಂದಾಗಿ, ಅಲ್ಲಿ ಇಳಿಯಲಾಗದಿದ್ದಾಗ, ಪೈಲಟ್ ಲಖನೌದ ಚೌಧುರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಇಳಿಯಲು ನಿರ್ಧರಿಸಿದ. ಆಗ ಪೈಲಟ್ ‘ಪ್ಯಾನ್-ಪ್ಯಾನ್’ ಅಲರ್ಟ್ ಘೋಷಿಸಿದ ಪರಿಣಾಮವಾಗಿ ಲಖನೌ ವಿಮಾನ ನಿಲ್ದಾಣದಲ್ಲಿ ತುರ್ತುಸ್ಥಿತಿ ಘೋಷಿಸಲಾಯಿತು.
ಅಂದು ಯಾವ ಅವಘಡ ಸಂಭವಿಸದೇ, ಎಲ್ಲವೂ ಸುಖಾಂತ್ಯವಾಗಿದ್ದು ಬೇರೆ ಮಾತು. ಹಾಗಾದರೆ ಪ್ಯಾನ್ ಪ್ಯಾನ್ ಅಲರ್ಟ್ ಎಂದರೇನು? ‘ಪ್ಯಾನ್-ಪ್ಯಾನ್’ ಎಂಬ ಪದವು ಫ್ರೆಂಚ್ ಭಾಷೆಯ ’Panne’ ಎಂಬ ಪದದಿಂದ ಬಂದಿದೆ, ಇದರರ್ಥ ‘ಬ್ರೇಕ್‌ಡೌನ್’ ಅಥವಾ ‘ಯಾಂತ್ರಿಕ ವೈಫಲ್ಯ’. ರೇಡಿಯೋ ಸಂವಹನದಲ್ಲಿ ಇದನ್ನು ಸತತವಾಗಿ ಮೂರು ಬಾರಿ (Pan-Pan, Pan-Pan, Pan-Pan) ಉಚ್ಚರಿಸ ಲಾಗುತ್ತದೆ.
ಇದು ವಿಮಾನದಲ್ಲಿ ತುರ್ತು ಪರಿಸ್ಥಿತಿ ಇದೆ, ಆದರೆ ಅದು ತಕ್ಷಣದ ಜೀವಾಪಾಯಕ್ಕೆ ಕಾರಣವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಅಂದರೆ, ವಿಮಾನವು ನಿಯಂತ್ರಣದಲ್ಲಿದೆ ಮತ್ತು ತಕ್ಷಣವೇ ಪತನ ವಾಗುವ ಸ್ಥಿತಿಯಲ್ಲಿಲ್ಲ, ಆದರೆ ಪರಿಸ್ಥಿತಿಯು ಗಂಭೀರವಾಗಿದೆ ಎಂದು ಇದರ ಅರ್ಥ.
ರೇಡಿಯೋ ಸಂವಹನ ಆರಂಭವಾದ ಕಾಲದಲ್ಲಿ, ಶಬ್ದದ ಅಸ್ಪಷ್ಟತೆಯ ನಡುವೆಯೂ ತುರ್ತು ಸಂದೇಶಗಳು ಸ್ಪಷ್ಟವಾಗಿ ಕೇಳಿಸಲಿ ಎಂಬ ಕಾರಣಕ್ಕೆ ‘Mayday'(M'aider ನನಗೆ ಸಹಾಯ ಮಾಡಿ) ಮತ್ತು ’Pan-Pan’ ಎಂಬ ಫ್ರೆಂಚ್ ಮೂಲದ ಪದಗಳನ್ನು ಬಳಸಲು ನಿರ್ಧರಿಸಲಾಯಿತು.
ಇದನ್ನೂ ಓದಿ: Vishweshwar Bhat Column: ಬಣ್ಣ, ಭಾವನೆಗಳ ಮೆರವಣಿಗೆಗಳ 'ಬ್ರಹ್ಮಾನಂದ' !
ವಿಮಾನಯಾನದಲ್ಲಿ ಈ ಅಲರ್ಟ್ ಅನ್ನು ಎರಡು ಪ್ರಮುಖ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ವಿಮಾನದ ಯಾಂತ್ರಿಕ ಭಾಗಗಳಲ್ಲಿ ಸಮಸ್ಯೆ ಕಂಡುಬಂದಾಗ. ಉದಾಹರಣೆಗೆ, ಕಾಕ್‌ಪಿಟ್‌ನ ಕಿಟಕಿ ಬಿರುಕು ಬಿಟ್ಟರೆ ಅಥವಾ ಎರಡು ಎಂಜಿನ್‌ಗಳ ಪೈಕಿ ಒಂದು ಎಂಜಿನ್ ನಿಂತುಹೋದರೆ ಇದನ್ನು ಬಳಸುತ್ತಾರೆ.
ವಿಮಾನವು ಒಂದು ಎಂಜಿನ್‌ನಲ್ಲಿ ಹಾರಬಲ್ಲದಾದರೂ, ಅದು ತುರ್ತು ಸ್ಥಿತಿಯೇ ಆಗಿರುತ್ತದೆ. ವಿಮಾನದಲ್ಲಿರುವ ಯಾರಿಗಾದರೂ ತೀವ್ರ ಹೃದಯಾಘಾತ ಅಥವಾ ಪ್ರಾಣಾಪಾಯದ ಸ್ಥಿತಿ ಉಂಟಾ ದಾಗ ಈ ನಿರ್ದಿಷ್ಟ ಸಂಕೇತ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಎಟಿಸಿ, ವಿಮಾನಕ್ಕೆ ’ Priority Landing’ (ಆದ್ಯತೆಯ ಇಳಿಯುವಿಕೆ) ನೀಡುತ್ತದೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಸ್ಥೆ (ICAO) ಸಂವಹನವನ್ನು ಎರಡು ವರ್ಗಗಳಾಗಿ ವಿಂಗಡಿಸಿದೆ.
ಮೊದಲನೆಯದು, ಮೇ-ಡೇ. ಅಂದರೆ ತಕ್ಷಣದ ಮತ್ತು ಗಂಭೀರ ಅಪಾಯದ ಸ್ಥಿತಿ ಹಾಗೂ ಎರಡನೆ ಯದು, ಪ್ಯಾನ್-ಪ್ಯಾನ್. ಅಂದರೆ ವಿಮಾನ ಅಥವಾ ವ್ಯಕ್ತಿಯ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಸ್ಥಿತಿ, ಆದರೆ ತಕ್ಷಣದ ಅಪಾಯವಿಲ್ಲದ ಸಂದರ್ಭ. ಪೈಲಟ್ ‘ಪ್ಯಾನ್-ಪ್ಯಾನ್’ ಘೋಷಿಸಿದಾಗ ನಿರ್ದಿಷ್ಟ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಮೊದಲು ವಿಮಾನವನ್ನು ಸ್ಥಿರವಾಗಿ ಹಾರಿಸು ವುದು, ಸರಿಯಾದ ಹಾದಿಯಲ್ಲಿ ಸಾಗುವುದು ಮತ್ತು ನಂತರವಷ್ಟೇ ಸಂವಹನ ನಡೆಸುವುದು.
ಪ್ಯಾನ್-ಪ್ಯಾನ್ ಸಂದೇಶ ಸಿಕ್ಕ ತಕ್ಷಣ, ಎಟಿಸಿ ಕಂಟ್ರೋಲರ್ ಆ ವಿಮಾನಕ್ಕೆ ಇತರ ಎಲ್ಲಾ ವಿಮಾನ ಗಳಿಗಿಂತ ಆದ್ಯತೆ ನೀಡುತ್ತಾರೆ. ಆ ವಿಮಾನಕ್ಕೆ ಹತ್ತಿರದ ವಿಮಾನ ನಿಲ್ದಾಣಕ್ಕೆ ಹೋಗಲು ‘Direct Route’ ನೀಡಲಾಗುತ್ತದೆ. ಒಂದು ವೇಳೆ ಪ್ಯಾನ್-ಪ್ಯಾನ್ ಘೋಷಿಸಿದ ನಂತರ ಪರಿಸ್ಥಿತಿ ಕೈಮೀರಿ ಹೋದರೆ, ಪೈಲಟ್ ಅದನ್ನು ತಕ್ಷಣವೇ ಮೇ-ಡೇ (Mayday) ಆಗಿ ಬದಲಾಯಿಸಬಹುದು.
ಉದಾಹರಣೆಗೆ, ಇಂಧನ ಕಡಿಮೆಯಿದೆ ಎಂದು ಪ್ಯಾನ್-ಪ್ಯಾನ್ ನೀಡಿದ ನಂತರ, ಎಂಜಿನ್ ಆಫ್ ಆಗುವ ಹಂತಕ್ಕೆ ಬಂದರೆ ಹಾಗೂ ಹವಾಮಾನ ವೈಪರೀತ್ಯದಿಂದ ವಿಮಾನದ ಮೇಲೆ ಹತೋಟಿ ಕಳೆದುಕೊಂಡರೆ ಯಾವುದೇ ಪೈಲಟ್ ಪ್ಯಾನ್-ಪ್ಯಾನ್ ಘೋಷಿಸಲು ಹಿಂಜರಿಯುವುದಿಲ್ಲ.
ಏಕೆಂದರೆ, ಸಣ್ಣ ಸಮಸ್ಯೆಯನ್ನು ಮೊದಲೇ ತಿಳಿಸುವುದರಿಂದ ದೊಡ್ಡ ದುರಂತವನ್ನು ತಪ್ಪಿಸ ಬಹುದು. ವಿಮಾನ ನಿಲ್ದಾಣದ ರನ್‌ವೇ ಬಳಿ ಅಗ್ನಿಶಾಮಕ ವಾಹನಗಳು (Fire Tenders) ಸಿದ್ಧವಾಗಿ ನಿಂತಿರುವುದನ್ನು ನಾವು ಗಮನಿಸಿದರೆ, ಅಲ್ಲಿ ಪ್ಯಾನ್-ಪ್ಯಾನ್ ಅಥವಾ ಮೇ-ಡೇ ಘೋಷಣೆಯಾಗಿದೆ ಎಂದರ್ಥ. ಪ್ಯಾನ್-ಪ್ಯಾನ್ ಎಂಬುದು ಆಕಾಶದಲ್ಲಿ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಇದು ಆತಂಕದ ಕರೆಗಿಂತ ಹೆಚ್ಚಾಗಿ, ‘ಮುನ್ನೆಚ್ಚರಿಕೆಯ ಕರೆ’ ಎಂದು ಪರಿಗಣಿಸ ಲಾಗುತ್ತದೆ. ಪ್ಯಾನ್-ಪ್ಯಾನ್ ಎಂಬುದು ವಿಮಾನಯಾನದಲ್ಲಿ ನಮಗೆ ಸಹಾಯ ಬೇಕು, ಆದರೆ ನಾವು ಇನ್ನೂ ಸುರಕ್ಷಿತ ವಾಗಿದ್ದೇವೆ ಎಂದು ಹೇಳುವ ಒಂದು ವೃತ್ತಿಪರ ಮಾರ್ಗವಾಗಿದೆ.