ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ramesh B

rameshballamule@gmail.com

Articles
Actor Yash: ʼರಾಮಾಯಣʼ ಶೂಟಿಂಗ್‌ಗಾಗಿ ಮುಂಬೈಗೆ ಬಂದಿಳಿದ ಯಶ್‌; ಸ್ಟೈಲಿಶ್‌ ಎಂಟ್ರಿಗೆ ಫ್ಯಾನ್ಸ್‌ ಫಿದಾ

ʼರಾಮಾಯಣʼ ಶೂಟಿಂಗ್‌ಗಾಗಿ ಮುಂಬೈಗೆ ಬಂದಿಳಿದ ಯಶ್‌

Ramayana Movie: ಘೋಷಣೆಯಾದಾಗಿನಿಂದ ಸದಾ ಸುದ್ದಿಯಲ್ಲಿರುವ ಚಿತ್ರ ಬಾಲಿವುಡ್‌ನ ರಾಮಾಯಣ. ನಿತೇಶ್‌ ತಿವಾರಿ ನಿರ್ದೇಶನದ ಈ ಚಿತ್ರದ ಮೂಲಕ ಯಶ್‌ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಚಿತ್ರದಲ್ಲಿ ರಾವಣನಾಗಿ ಅವರು ಕಾಣಿಸಿಕೊಂಡಿದ್ದು, ಶೂಟಿಂಗ್‌ಗಾಗಿ ಮುಂಬೈಗೆ ಬಂದಿಳಿದಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

Idly Kadai Movie: ಧನುಷ್‌ ನಟನೆಯ ʼಇಡ್ಲಿ ಕಡೈʼ ಚಿತ್ರದ ಸೆಟ್‌ನಲ್ಲಿ ಬೆಂಕಿ ದುರಂತ

ಧನುಷ್‌ ನಟನೆಯ 'ಇಡ್ಲಿ ಕಡೈ' ಚಿತ್ರದ ಸೆಟ್‌ನಲ್ಲಿ ಬೆಂಕಿ ದುರಂತ

Actor Dhanush: ಕಾಲಿವುಡ್‌ನ ಪ್ರತಿಭಾವಂತ ನಟ, ನಿರ್ದೇಶಕ ಧನುಷ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ 4ನೇ ಚಿತ್ರ 'ಇಡ್ಲಿ ಕಡೈ'. ಇದರಲ್ಲಿ ಅವರು ನಿತ್ಯಾ ಮೆನನ್‌ ಜತೆಗೆ 2ನೇ ಬಾರಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ ಈಗಾಗಲೇ ಆರಂಭವಾಗಿದ್ದು, ಇದೀಗ ಸೆಟ್‌ನಲ್ಲಿ ಬೆಂಕಿ ಅನಾಹುತ ಕಾನಿಸಿಕೊಂಡಿದೆ.

Pope Francis: ಪೋಪ್ ಫ್ರಾನ್ಸಿಸ್ ವಿಧಿವಶ; ಮುಂದಿನ ಪೋಪ್‌ ಆಯ್ಕೆ ಹೇಗೆ? ಇಲ್ಲಿದೆ ವಿವರ

ಪೋಪ್ ಫ್ರಾನ್ಸಿಸ್ ವಿಧಿವಶ; ಮುಂದಿನ ಪೋಪ್‌ ಆಯ್ಕೆ ಹೇಗೆ?

ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ಸಿಟಿಯಲ್ಲಿ ನಿಧನರಾದರು. ಫ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಮುಂದಿನ ಪೋಪ್‌ ಆಯ್ಕೆ ಹಲವು ಹಂತಗಳಲ್ಲಿ ನಡೆಯಲಿದೆ. ಅದಕ್ಕೆ ಯಾವ ವಿಧಾನವನ್ನು ಅನುಸರಿಸಲಾಗುತ್ತದೆ ಎನ್ನುವ ವಿವರ ಇಲ್ಲಿದೆ.

JD Vance's First India Visit: ಕುರ್ತಾ ಪೈಜಾಮ, ಅನಾರ್ಕಲಿ; ಭಾರತೀಯ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಕ್ಕಳು

ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಕ್ಕಳು

JD Vance: ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜೆ.ಡಿ. ವ್ಯಾನ್ಸ್ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದಾರೆ. 4 ದಿನಗಳ ಭೇಟಿಗಾಗಿ ಸೋಮವಾರ (ಏ. 21) ದಿಲ್ಲಿಗೆ ಬಂದಿಳಿದ ಅವರ ಜತೆಗೆ ಪತ್ನಿ, ಭಾರತೀಯ ಮೂಲದ ಉಷಾ ವ್ಯಾನ್ಸ್, ಮೂವರು ಮಕ್ಕಳಿದ್ದಾರೆ. ಈ ವೇಳೆ ಮೂವರು ಮಕ್ಕಳು ಸಾಂಪ್ರದಾಯಿಕ ಕುರ್ತಾ ಪೈಜಾಮ, ಅನಾರ್ಕಲಿ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

Gold ATM: ವಿಶ್ವದ ಮೊದಲ ಚಿನ್ನದ ಎಟಿಎಂ ಚೀನಾದಲ್ಲಿ ಸ್ಥಾಪನೆ; ಭಾರತಕ್ಕೂ ಬರಲಿ ಎಂದ ನೆಟ್ಟಿಗರು

ವಿಶ್ವದ ಮೊದಲ ಚಿನ್ನದ ಎಟಿಎಂ ಚೀನಾದಲ್ಲಿ ಸ್ಥಾಪನೆ

ವಿಶ್ವದ ಮೊದಲ ಗೋಲ್ಡ್‌ ಎಟಿಎಂ ಚೀನಾದಲ್ಲಿ ಸ್ಥಾಪನೆಯಾಗಿದೆ. ಅರೇ ಎಟಿಎಂ ಗೊತ್ತು. ಇದೇನಿದು ಚಿನ್ನದ ಎಟಿಎಂ ಎಂದಿಕೊಂಡಿರಾ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ನೀವು ಚಿನ್ನವನ್ನು ಈ ಯಂತ್ರದಲ್ಲಿ ಹಾಕಿದರೆ ಅದರ ಮೌಲ್ಯಕ್ಕೆ ಅನುಗುನವಾಗಿ ತಕ್ಷಣ ನಗದು ಲಭಿಸುತ್ತದೆ. ಸದ್ಯ ಈ ಯಂತ್ರದ ವಿಡಿಯೊ ವೈರಲ್‌ ಆಗಿದೆ.

JD Vance India Visit: ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಬಂದಿಳಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್

ಭಾರತೀಯ ಮೂಲದ ಪತ್ನಿಯೊಂದಿಗೆ ದಿಲ್ಲಿಗೆ ಆಗಮಿಸಿದ ಅಮೆರಿಕ ಉಪಾಧ್ಯಕ್ಷ

JD Vance: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ 4 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಸೋಮವಾರ (ಏ. 21) ಬೆಳಗ್ಗೆ ಪತ್ನಿ ಉಷಾ ವ್ಯಾನ್ಸ್ ಜತೆಗೆ ದಿಲ್ಲಿಗೆ ಬಂದಿಳಿದರು. ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ವ್ಯಾನ್ಸ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಸ್ವಾಗತಿಸಿದರು.

DK Shivakumar: ಧರ್ಮಸ್ಥಳ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧ: ಡಿಕೆಶಿ

ಧರ್ಮಸ್ಥಳದಲ್ಲಿ ನೂತನ ಕಲ್ಯಾಣ ಮಂಟಪಗಳ ಸಮುಚ್ಛಯಕ್ಕೆ ಡಿಕೆಶಿ ಚಾಲನೆ

Dharmasthala: ''ಧರ್ಮಸ್ಥಳದ ಬಹುಮುಖಿ ಸೇವೆ, ಸಾಧನೆ ಶ್ಲಾಘನೀಯʼʼ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಅವರು ಭಾನುವಾರ (ಏ. 20) ಧರ್ಮಸ್ಥಳದಲ್ಲಿ ಉಮಾಮಹೇಶ್ವರ, ಶಿವಪಾರ್ವತಿ ಮತ್ತು ಗೌರೀಶಂಕರ ಎಂಬ 3 ನೂತನ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು.

Ramayana Movie: ರಾವಣನಾಗಿ ಅಬ್ಬರಿಸಲು ರಾಕಿ ಭಾಯ್‌ ರೆಡಿ; 'ರಾಮಾಯಣ' ಶೂಟಿಂಗ್‌ ಆರಂಭಕ್ಕೂ ಮುನ್ನ ಯಶ್‌ ಉಜ್ಜೈನಿ ದೇವಸ್ಥಾನಕ್ಕೆ ಭೇಟಿ

'ರಾಮಾಯಣ' ಶೂಟಿಂಗ್‌ ಆರಂಭಕ್ಕೂ ಮುನ್ನ ಯಶ್‌ ಉಜ್ಜೈನಿ ದೇವಸ್ಥಾನಕ್ಕೆ ಭೇಟಿ

Actor Yash: ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ಗ್ಲೋಬಲ್‌ ಸ್ಟಾರ್‌ ಆಗಿ ಬದಲಾದ ಯಶ್‌ ಸದ್ಯ ಬಹು ನಿರೀಕ್ಷಿತ ʼಟಾಕ್ಸಿಕ್‌ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಇದರ ಚಿತ್ರೀಕರಣ ಪೂರ್ಣವಾಗಲಿದ್ದು, ಮುಂದಿನ ವಾರ ಅವರು ʼರಾಮಾಯಣʼ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Crime News: ಗುರುಗ್ರಾಮ ಮೇದಾಂತ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಮಹಿಳೆ ಮೇಲೆ ಡಿಜಿಟಲ್‌ ರೇಪ್‌; ಹಾಗೆಂದರೇನು? ಇಲ್ಲಿದೆ ವಿವರ

ಗುರುಗ್ರಾಮ ಮೇದಾಂತ ಆಸ್ಪತ್ರೆಯಲ್ಲಿ ಮಹಿಳೆ ಮೇಲೆ ಡಿಜಿಟಲ್‌ ರೇಪ್‌

Digital Rape: ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿದ್ದ ವಿಮಾನ ಸಿಬ್ಬಂದಿರೋರ್ವರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದು ಇಡೀ ದೇಶವೇ ಬೆಚ್ಚಿಬಿದ್ದಿದೆ. ಕೃತ್ಯ ಎಸಗಿದ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿಯನ್ನು ಇದೀಗ ಬಂಧಿಸಲಾಗಿದ್ದು, ಈ ಕೃತ್ಯವನ್ನು 'ಡಿಜಿಟಲ್ ಅತ್ಯಾಚಾರ' ಎಂದು ಕರೆಯಲಾಗಿದೆ. ಹಾಗಾದರೆ 'ಡಿಜಿಟಲ್ ಅತ್ಯಾಚಾರʼ ಎಂದರೇನು? ಇಲ್ಲಿದೆ ವಿವರ.

Kaliyugam Movie: ʼಕಲಿಯುಗಂʼ ತಮಿಳು ಚಿತ್ರದಲ್ಲಿ ಕನ್ನಡಿಗರದ್ದೇ ಹವಾ; ಕಿಶೋರ್‌-ಶ್ರದ್ಧಾ ಶ್ರೀನಾಥ್‌ ನಟನೆಯ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌

ಕಿಶೋರ್‌-ಶ್ರದ್ಧಾ ಶ್ರೀನಾಥ್‌ ನಟನೆಯ ಕಲಿಯುಗಂ ರಿಲೀಸ್‌ ಡೇಟ್‌ ಅನೌನ್ಸ್‌

Shraddha Srinath: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದರಾದ ಕಿಶೋರ್‌ ಮತ್ತು ಶ್ರದ್ಧಾ ಶ್ರೀನಾಥ್‌ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿರುವ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾದ ʼಕಲಿಯುಗಂʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಮೇ 9ರಂದು ಈ ಬಹುನಿರೀಕ್ಷಿತ ಸಿನಿಮಾ ತೆರೆ ಕಾಣಲಿದೆ.

Kheal Das Kohistani: ಪಾಕಿಸ್ತಾನದಲ್ಲಿ ಹಿಂದೂ ಸಚಿವ ಖೇಲ್ ದಾಸ್ ಕೊಹಿಸ್ತಾನಿ ಮೇಲೆ ದಾಳಿ

ಪಾಕಿಸ್ತಾನದಲ್ಲಿ ಹಿಂದೂ ಸಚಿವ ಖೇಲ್ ದಾಸ್ ಕೊಹಿಸ್ತಾನಿ ಮೇಲೆ ದಾಳಿ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರದ ನೀರಾವರಿ ಕಾಲುವೆ ಯೋಜನೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರು ಹಿಂದೂ ಸಚಿವ ಖೇಲ್ ದಾಸ್ ಕೊಹಿಸ್ತಾನಿ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಶೆಹಬಾಜ್ ಶರೀಫ್ ಈ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

Rahul Gandhi: ಇಂಗ್ಲೆಂಡ್‌ನಲ್ಲಿ ಗಾಂಧೀಜಿಯನ್ನು ರೈಲಿನಿಂದ ಹೊರ ದಬ್ಬಲಾಯಿತು ಎಂದ ರಾಹುಲ್‌ ಗಾಂಧಿ; ಇತಿಹಾಸ ಮರೆತ ಕಾಂಗ್ರೆಸ್‌ ನಾಯಕ

ರಾಹುಲ್‌ ಗಾಂಧಿ ಅವರಿಂದ ಇತಿಹಾಸ ಕಲಿಯಬೇಡಿ ಎಂದ ಬಿಜೆಪಿ ನಾಯಕ

ಇತಿಹಾಸವನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಮತ್ತೊಮ್ಮೆ ಟ್ರೋಲಿಗೆ ಗುರಿಯಾಗಿದ್ದಾರೆ. ಮಹಾತ್ಮಾ ಗಾಂಧೀಜಿ ಅವರನ್ನು ಇಂಗ್ಲೆಂಡ್‌ನಲ್ಲಿ ರೈಲಿನಿಂದ ಹೊರದಬ್ಬಲಾಯಿತು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದು, ಇದನ್ನು ಬಿಜೆಪಿ ನಾಯಕ ಲಹರ್‌ ಸಿಂಗ್‌ ಸಿರೋಯಾ ಟೀಕಿಸಿದ್ದಾರೆ.

AFMS Recruitment 2025: ಆರ್ಮಿ ಆಸ್ಪತ್ರೆಯಲ್ಲಿದೆ  400 ಮೆಡಿಕಲ್‌ ಆಫೀಸರ್‌ ಹುದ್ದೆ; ಇಂದೇ ಅರ್ಜಿ ಸಲ್ಲಿಸಿ

ಆರ್ಮಿ ಆಸ್ಪತ್ರೆಯಲ್ಲಿದೆ 400 ಮೆಡಿಕಲ್‌ ಆಫೀಸರ್‌ ಹುದ್ದೆ

Job Guide: ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 400 ಮೆಡಿಕಲ್‌ ಆಫೀಸರ್‌ ಹುದ್ದೆಗಳಿವೆ. ಉದ್ಯೋಗದ ಸ್ಥಳ: ದಿಲ್ಲಿಯ ಆರ್ಮಿ ಆಸ್ಪತ್ರೆ. ಎಂಬಿಬಿಎಸ್‌ ಓದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 12.

Pranitha Subhash: ಮುಖ್ಯಮಂತ್ರಿಯನ್ನು ಭೇಟಿಯಾದ ನಟಿ ಪ್ರಣಿತಾ ಸುಭಾಷ್‌

ಮುಖ್ಯಮಂತ್ರಿಯನ್ನು ಭೇಟಿಯಾದ ನಟಿ ಪ್ರಣಿತಾ ಸುಭಾಷ್‌

Pranitha Meets Siddaramaiah: ದರ್ಶನ್‌ ಅಭಿನಯದ 'ಪೊರ್ಕಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿ ಸದ್ಯ ಪಂಚಭಾಷಾ ತಾರೆ ಎನಿಸಿಕೊಂಡಿರುವ ಪ್ರಣಿತಾ ಸುಭಾಷ್‌ ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಅವರು ಸದ್ಯ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡುವ ಸಿದ್ಧತೆಯಲ್ಲಿದ್ದಾರೆ. ಈ ಮಧ್ಯೆ ತಮ್ಮ ಮಗನ ನಾಮಕರಣ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ʼಮದರಾಸಿʼ ಚಿತ್ರಕ್ಕೂ ಮೊದಲೇ ತೆರೆ ಕಾಣಲಿದೆ ರುಕ್ಮಿಣಿ ವಸಂತ್‌ ನಟನೆಯ ಮತ್ತೊಂದು ತಮಿಳು ಸಿನಿಮಾ; ವಿಜಯ್‌ ಸೇತುಪತಿ ಜತೆಗಿನ ʼಏಸ್‌ʼ ರಿಲೀಸ್‌ ಡೇಟ್‌ ಅನೌನ್ಸ್‌

ವಿಜಯ್‌ ಸೇತುಪತಿ-ರುಕ್ಮಿಣಿ ಜೋಡಿಯ ʼಏಸ್‌ʼ ರಿಲೀಸ್‌ ಡೇಟ್‌ ಅನೌನ್ಸ್‌

Rukmini Vasanth: ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್‌ ಇದೀಗ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ಈ ವರ್ಷವೇ ಅವರು ನಟಿಸುತ್ತಿರುವ 2 ತಮಿಳು ಸಿನಿಮಾಗಳು ತೆರೆಗೆ ಬರಲಿವೆ. ಮುಂದಿನ ತಿಂಗಳು ವಿಜಯ್‌ ಸೇತುಪತಿ ಜತೆಗಿನ ʼಏಸ್‌ʼ ರಿಲೀಸ್‌ ಆದರೆ ಸೆ. 5ರಂದು ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಕಾಣಿಸಿಕೊಂಡ ʼಮದರಾಸಿʼ ಬಿಡುಗಡೆಯಾಗಲಿದೆ.

NCW: ಮುರ್ಷಿದಾಬಾದ್ ಗಲಭೆ ಪೀಡಿತ ಪ್ರದೇಶಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ; ಭದ್ರತೆ ಒದಗಿಸಿ ಎಂದ ಸಂತ್ರಸ್ತರು

ಮುರ್ಷಿದಾಬಾದ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ

Vijaya Rahatkar: ಬಹು ಚರ್ಚಿತ ವಕ್ಫ್‌ ತಿದ್ದುಪಡಿ ಕಾಯ್ದೆ ದೇಶದಲ್ಲಿ ಜಾರಿಯಾದ ಬಳಿಕ ಹಿಂಸಾಚಾರ ಭುಗಿಲೆದ್ದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ನೇತೃತ್ವದ ನಿಯೋಗವು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿತು.

Spark Movie: ʼಸ್ಪಾರ್ಕ್‌ʼ ಪೋಸ್ಟರ್‌ ವಿವಾದಕ್ಕೆ ತೆರೆ; ರಮೇಶ್‌ ಇಂದಿರಾ ಬಳಿ ಕ್ಷಮೆ ಕೋರಿದ ನಿರ್ದೇಶಕ

ʼಸ್ಪಾರ್ಕ್‌ʼ ವಿವಾದಕ್ಕೆ ತೆರೆ; ಕ್ಷಮೆ ಕೇಳಿದ ನಿರ್ದೇಶಕ

Ramesh Indira: ಇತ್ತೀಚೆಗೆ ಭಾರಿ ಸದ್ದು ಮಾಡಿರುವ ʼಸ್ಪಾರ್ಕ್‌ʼ ಸಿನಿಮಾ ಪೋಸ್ಟರ್‌ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ʼನೆನಪಿರಲಿʼ ಪ್ರೇಮ್‌ ಹುಟ್ಟುಹಬ್ಬದ ಪ್ರಯುಕ್ತ ʼಸ್ಪಾರ್ಕ್‌ʼ ಚಿತ್ರತಂಡ ಶುಕ್ರವಾರ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ರಮೇಶ್‌ ಇಂದಿರಾ ಅವರ ಫೋಟೊವನ್ನು ಅನುಮತಿ ಪಡೆಯದೆ ಬಳಸಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಕ್ಷಮೆ ಕೋರುವ ಮೂಲಕ ವಿವಾದ ತಣ್ಣಗಾಗಿದೆ.

Kesari Chapter 2: ಬಾಕ್ಸ್‌ ಆಫೀಸ್‌ನಲ್ಲಿ ಮತ್ತೆ ಅಕ್ಷಯ್‌ ಕುಮಾರ್‌ ಮ್ಯಾಜಿಕ್‌; ʼಕೇಸರಿ 2ʼ ಚಿತ್ರಕ್ಕೆ ಭರ್ಜರಿ ಓಪನಿಂಗ್‌

ಅಕ್ಷಯ್‌ ಕುಮಾರ್‌ ನಟನೆಯ ʼಕೇಸರಿ 2ʼ ಚಿತ್ರಕ್ಕೆ ಭರ್ಜರಿ ಓಪನಿಂಗ್‌

Kesari Chapter 2 Box Office Collection: ಬಹು ನಿರೀಕ್ಷಿತ ಬಾಲಿವುಡ್‌ನ ʼಕೇಸರಿ ಚಾಪ್ಟರ್‌ 2ʼ ಚಿತ್ರ ತೆರೆ ಕಂಡಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಆರ್‌.ಮಾಧವನ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ 1919ರ ಜಲಿಯಲ್‌ ವಾಲಾಭಾಗ್‌ ಹತ್ಯಾಕಾಂಡದ ಸುತ್ತ ಸುತ್ತುತ್ತದೆ.

Bobby Simha: 6 ವಾಹನಗಳಿಗೆ ಡಿಕ್ಕಿ ಹೊಡೆದ ʼ777 ಚಾರ್ಲಿʼ ಚಿತ್ರದ ನಟ ಬಾಬ್ಬಿ ಸಿಂಹಗೆ ಸೇರಿದ ಕಾರು; ಮೂವರಿಗೆ ಗಾಯ

6 ವಾಹನಗಳಿಗೆ ಡಿಕ್ಕಿ ಹೊಡೆದ ನಟ ಬಾಬ್ಬಿ ಸಿಂಹಗೆ ಸೇರಿದ ಕಾರು

ಬಹುಭಾಷಾ ಕಲಾವಿದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಬಾಬ್ಬಿ ಸಿಂಹ ಅವರಿಗೆ ಸೇರಿದ ಕಾರು ವಿವಿಧ ವಾಹನಗಳಿಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿರುವ ಘಟನೆ ಚೆನ್ನೈಯಲ್ಲಿ ನಡೆದಿದೆ. ಶುಕ್ರವಾರ (ಏ. 18) ಸಂಜೆ ಚೆನ್ನೈಯ ಅಲಂದೂರು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಕಾರು ಚಾಲಕ ಪುಷ್ಪರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

B.R. Naidu: ಟಿಟಿಡಿ ವಿರುದ್ಧ ಕೇಳಿ ಬಂದ ಆರೋಪ; ಎಸಿಬಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡುಗೆ ಮನವಿ

ಎಸಿಬಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ ಟಿಟಿಡಿ ಅಧ್ಯಕ್ಷ

N.Chandrababu Naidu: ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳೆದ 5 ವರ್ಷಗಳಲ್ಲಿ ನಡೆದಿದೆ ಎನ್ನಲಾದ ಎಲ್ಲ ಅಕ್ರಮಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಮನವಿ ಸಲ್ಲಿಸಿದ್ದಾರೆ.

BIS Recruitment 2025: ಬಿಐಎಸ್‌ನಲ್ಲಿದೆ 160 ಹುದ್ದೆ; ಹೀಗೆ ಅಪ್ಲೈ ಮಾಡಿ

ಬಿಐಎಸ್‌ನಲ್ಲಿದೆ 160 ಹುದ್ದೆ; ಹೀಗೆ ಅಪ್ಲೈ ಮಾಡಿ

Job Guide: ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಆಶ್ರಯದಲ್ಲಿರುವ ಅಂಗಸಂಸ್ಥೆ ಬ್ಯುರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 160 ಕನ್ಸಲ್‌ಟೆಂಟ್‌ ಹುದ್ದೆ ಇದ್ದು, ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 9.

Thug Life Movie: ಕಮಲ್‌ ಹಾಸನ್‌-ಮಣಿರತ್ನಂ ಜೋಡಿಯ ʼಥಗ್ಸ್‌ ಲೈಫ್‌ʼ ಚಿತ್ರದ ಸಾಂಗ್‌ ರಿಲೀಸ್‌

ಕಮಲ್‌ ಹಾಸನ್‌-ಮಣಿರತ್ನಂ ಜೋಡಿಯ ʼಥಗ್ಸ್‌ ಲೈಫ್‌ʼ ಚಿತ್ರದ ಸಾಂಗ್‌ ರಿಲೀಸ್‌

Kamal Haasan: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಕಾಲಿವುಡ್‌ನ ಥಗ್‌ ಲೈಫ್‌ ಕೂಡ ಒಂದು. ಹೆಸರಾಂತ ನಿರ್ದೇಶಕ ಮಣಿರತ್ನಂ ಮತ್ತು ಕಮಲ್‌ ಹಾಸನ್‌ ಅನೇಕ ವರ್ಷಗಳ ನಂತರ ಒಂದಾಗುತ್ತಿರುವ ಈ ಚಿತ್ರದ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾದ ಮೊಲ ಹಾಡು ಬಿಡುಗಡೆಯಾಗಿದೆ.

Hit And Run Accident: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿನಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ಕಮರಿತು ಕನಸು

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿನಿ ಸಾವು

ಅಮೆರಿಕ್ಕೆ ಆಂಧ್ರ ಪ್ರದೇಶದ ಯುವತಿಯೊಬ್ಬರು ಹಿಟ್‌ ಆ್ಯಂಡ್‌ ರನ್‌ಗೆ ಬಲಿಯಾಗಿದ್ದಾರೆ. ಗುಂಟೂರಿನ 24 ವರ್ಷದ ವಿ.ದೀಪ್ತಿ ಮೃತರು. ಸ್ನಾತಕೋತ್ತರ ಪದವಿ ಓದಲು ತೆರಳಿದ್ದ ಅವರು ಟೆಕ್ಸಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿಕ್ಷಣ ಪೂರೈಸಲು ಕೆಲವೇ ದಿನಗಳು ಬಾಕಿ ಇದ್ದಾಗ ಈ ದುರಂತ ಸಂಭವಿಸಿದೆ.

ʼArrest Anurag Kashyapʼ: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದ ಅನುರಾಗ್‌ ಕಶ್ಯಪ್‌; ದೂರು ದಾಖಲು

ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದ ಅನುರಾಗ್‌ ಕಶ್ಯಪ್‌

Anurag Kashyap: ಬಾಲಿವುಡ್‌ ನಿರ್ದೇಶಕ, ನಟ ಅನುರಾಗ್‌ ಕಶ್ಯಪ್‌ ಇದೀಗ ಬ್ರಾಹ್ಮಣರನ್ನು ಅವಹೇಳನ ಮಾಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ''ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ?'' ಎಂದು ಅವರು ಸೋಶೀಯಲ್‌ ಮೀಡಿಯಾದಲ್ಲಿ ಪ್ರಶ್ನಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ.