Gold Price Today On 31th January 2026: ಆಭರಣ ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್; ಚಿನ್ನದ ಬೆಲೆ ಗ್ರಾಂಗೆ ಬರೋಬ್ಬರಿ 790 ರುಪಾಯಿ ಇಳಿಕೆ
Gold Silver Rate Today: ಕಳೆದೊಂದು ತಿಂಗಳಿಂದ ಭಾರಿ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇಂದು (ಜನವರಿ 31) ಭರ್ಜರಿ ಕುಸಿತ ಕಂಡು ಬಂದಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 790 ರುಪಾಯಿ ಇಳಿಕೆ ಕಂಡು ಬಂದು, 14,720 ರುಪಾಯಿ ಆಗಿದೆ. ಇನ್ನು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 862 ರೂ. ಕಡಿಮೆಯಾಗಿ 16,058 ರುಪಾಯಿಗೆ ತಲುಪಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಜ. 31: ಕಳೆದೊಂದು ತಿಂಗಳಿಂದ ಭಾರಿ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇಂದು (ಜನವರಿ 31) ಭರ್ಜರಿ ಕುಸಿತ ಕಂಡು ಬಂದಿದ್ದು, ಗ್ರಾಹಕನ ಮೊಗದಲ್ಲಿ ನಗು ಮೂಡಿಸಿದೆ (Gold Price Today On 31th January 2026). ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 790 ರುಪಾಯಿ ಇಳಿಕೆ ಕಂಡು ಬಂದು, 14,720 ರುಪಾಯಿ ಆಗಿದೆ. ಇನ್ನು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 862 ರೂ. ಕಡಿಮೆಯಾಗಿ 16,058 ರುಪಾಯಿಗೆ ತಲುಪಿದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,17,760 ರುಪಾಯಿ ಆಗಿದ್ದರೆ 10 ಗ್ರಾಂಗೆ 1,47,200 ರುಪಾಯಿ ಹಾಗೂ 100 ಗ್ರಾಂಗೆ ನೀವು 14,72,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,28,464 ರುಪಾಯಿ ಹಾಗೂ 10 ಗ್ರಾಂಗೆ ನೀವು 1,60,580 ರುಪಾಯಿ ಹಾಗೂ 100 ಗ್ರಾಂಗೆ ನೀವು 16,05,800 ರುಪಾಯಿ ನೀಡಬೇಕಾಗುತ್ತದೆ.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,900 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,255 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,720 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,058 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,735 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,073 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,720 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,058 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,720 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,058 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,900 ರುಪಾಯಿ | 16,255 ರುಪಾಯಿ |
| ಮುಂಬೈ | 14,720 ರುಪಾಯಿ | 16,058 ರುಪಾಯಿ |
| ದೆಹಲಿ | 14,735 ರುಪಾಯಿ | 16,073 ರುಪಾಯಿ |
| ಕೋಲ್ಕತ್ತಾ | 14,720 ರುಪಾಯಿ | 16,058 ರುಪಾಯಿ |
| ಹೈದರಾಬಾದ್ | 14,720 ರುಪಾಯಿ | 16,058 ರುಪಾಯಿ |
ಬೆಳ್ಳಿ ಬೆಲೆ 4 ಲಕ್ಷ ರುಪಾಯಿಗೆ ಏರಿಕೆ; ಸಿಲ್ವರ್ ಪ್ರೈಸ್ ಹೆಚ್ಚಾಗಲು ಕಾರಣ ಇದೆ
ಬೆಳ್ಳಿ ದರ
ಬೆಳ್ಳಿ ದರದಲ್ಲಿಯೂ ಇಂದು ಭಾರಿ ಕುಸಿತ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂಗೆ 45 ರುಪಾಯಿ ಕುಸಿತವಾಗಿ 350 ರುಪಾಯಿಗೆ ತಲುಪಿದೆ. 10 ಗ್ರಾಂ ಬೆಳ್ಳಿಗೆ 3,500 ರುಪಾಯಿ ಹಾಗೂ 1 ಕೆಜಿ ಬೆಳ್ಳಿಗೆ ನೀವು 3,50,000 ರುಪಾಯಿ ಪಾವತಿಸಬೇಕು.