ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bagalkot Byelection: ಬಾಗಲಕೋಟೆಯಲ್ಲಿ ಕಾಂಗ್ರೆಸ್‌ʼಗೆ ಒಳೇಟಿನ ಭೀತಿ

ಎಚ್.ವೈ ಮೇಟಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಪುತ್ರ ಉಮೇಶ್ ಮೇಟಿ ಸ್ಪರ್ಧಿಸಿದ್ದಾರೆ. ಆದರೆ ಕೇವಲ ಅನುಕಂಪದ ಅಲೆಯನ್ನೇ ಮೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರ ರನ್ನು ಸೆಳೆಯುವುದೇ ಸವಾಲಿನ ಕೆಲಸವಾಗಿದೆ. ಇಡೀ ಸರಕಾರವೇ ಮೇಟಿ ಪರ ಪ್ರಚಾರದಲ್ಲಿ ತೊಡಗಿದರು ಸಮನ್ವಯ ಕೊರತೆ ಎದ್ದು ಕಾಣುತ್ತಿದೆ

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ʼಗೆ ಒಳೇಟಿನ ಭೀತಿ

-

Profile
Ashok Nayak Apr 3, 2026 1:07 PM

ವಿನಾಯಕ ಮಠಪತಿ ಬಾಗಲಕೋಟೆ

ಉಮೇಶ್ ಮೇಟಿ ಗೆಲುವಿಗೆ ಕಾಂಗ್ರೆಸ್ ಪಣ

ಸ್ಥಳೀಯ ನಾಯಕರಲ್ಲಿನ ಒಡಕು ಬಿಜೆಪಿಗೆ ಲಾಭ ಆಗುವ ಸಾಧ್ಯತೆ

ರಾಜ್ಯ ಕಾಂಗ್ರೆಸ್‌ಗೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಬೈ ಎಲೆಕ್ಷನ್ ಗೆಲುವು ಪ್ರತಿಷ್ಠೆ ಆಗಿದೆ. ಬಾಗಲಕೋಟೆ ಶತಾಯಗತಾಯ ಗೆಲುವಿಗೆ ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಟೊಂಕ ಕಟ್ಟಿ ನಿಂತಿದ್ದಾರೆ. ಎಂಟಕ್ಕೂ ಅಧಿಕ ಸಚಿವರು ಹಾಗೂ ಶಾಸಕರು ಪ್ರಚಾರದಲ್ಲಿ ನಿರತರಾಗಿದ್ದಾರೆ.

ಇನ್ನೊಂದು ಕಡೆ ಕಾಂಗ್ರೆಸ್‌ಗೆ ಒಳೇಟಿನ ಭೀತಿ ಶುರುವಾಗಿದ್ದು, ಅಸಮಾಧಾನಿತ ಮುಖಂಡ ರನ್ನು ಮನ ವೊಲಿಸಲು ನಾಯಕರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಬಿಜೆಪಿ ಝಳಪ ಜೋರಾಗಿದ್ದು, ಒಳ ಹೊಡೆತ ನೀಡುವಲ್ಲಿ ರಣತಂತ್ರ ಹೆಣೆದಿದ್ದು ಕ್ಷೇತ್ರದಲ್ಲಿ ತಮ್ಮ ಪರವಾಗಿ ಅಲೆ ಹೆಚ್ಚಿಸಲು ಸರ್ವ ಪ್ರಯತ್ನ ಮಾಡುತ್ತಿದೆ.

ಎಚ್.ವೈ ಮೇಟಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಪುತ್ರ ಉಮೇಶ್ ಮೇಟಿ ಸ್ಪರ್ಧಿಸಿ ದ್ದಾರೆ. ಆದರೆ ಕೇವಲ ಅನುಕಂಪದ ಅಲೆಯನ್ನೇ ಮೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರನ್ನು ಸೆಳೆಯುವುದೇ ಸವಾಲಿನ ಕೆಲಸವಾಗಿದೆ. ಇಡೀ ಸರಕಾರವೇ ಮೇಟಿ ಪರ ಪ್ರಚಾರದಲ್ಲಿ ತೊಡಗಿದರು ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ಅಹಿಂದ ಮತ ಸೆಳೆಯಲು ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಆರ್.ಬಿ ತಿಮ್ಮಾಪುರ ಬಣ ಒಂದು ಗೂಡಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸ್ಥಳೀಯ ಮುಖಂಡರಲ್ಲಿದೆ.

ಇದನ್ನೂ ಓದಿ: Bagalkot Bypoll 2026: ಎಲ್ಲರ ಅಭಿಪ್ರಾಯ ಪಡೆದು ಉಮೇಶ್ ಮೇಟಿಗೆ ಕಾಂಗ್ರೆಸ್‌ ಟಿಕೆಟ್: ಡಿ.ಕೆ. ಶಿವಕುಮಾರ್

ಅಷ್ಟೇ ಅಲ್ಲದೆ ಎಚ್.ವೈ ಮೇಟಿ ಜತೆಗಿದ್ದ ಸ್ಥಳೀಯ ಮುಖಂಡರನ್ನು ಹೊರಭಾಗದಿಂದ ಬಂದ ಕಾಂಗ್ರೆಸ್ ನಾಯಕರು ಮೂಲೆಗುಂಪು ಮಾಡಿದ್ದಾರೆ ಎಂಬ ಆರೋಪ ಕ್ಷೇತ್ರದಲ್ಲಿ ಬಲವಾಗಿದ್ದು, ಇದರಿಂದ ಮೇಟಿ ಜತೆಗಿದ್ದ ಹಲವು ಮುಖಂಡರು ಪ್ರಚಾರದಿಂದ ದೂರ ಉಳಿದಿದ್ದಾರೆ. ಇನ್ನೂ ಬಿಜೆಪಿ ಪಕ್ಷದಿಂದ ದೂರ ಹೋಗಿದ್ದ ಸ್ಥಳೀಯ ಮುಖಂಡರು ಮರಳಿ ಪಕ್ಷಕ್ಕೆ ಸೇರಿಸುವುದರ ಜತೆಗೆ ಅವರಿಗೆ ಜವಾಬ್ದಾರಿ ನೀಡಿದ್ದರ ಪರಿಣಾಮ ಬಿಜೆಪಿ ಪಾಳೆಯ ದಲ್ಲಿ ಉತ್ಸಾಹ ಹೆಚ್ಚಿಸಿದ್ದು, ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.

ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಲಿಂಗಾಯತ ಮತಗಳ ಜತೆಗೆ, ಬಂಜಾರ, ನೇಕಾರ, ಎಸ್ಟಿ ಮತಗಳನ್ನು ಸೆಳೆಯಲು ಸರ್ವಪ್ರಯತ್ನ ನಡೆಸಿದೆ.

ಮುಖಂಡರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಶ್ರೀರಾಮಲು, ಪಿ. ರಾಜೀವ್, ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ತಮ್ಮದೇ ತಂಡ ಕಟ್ಟಿಕೊಂಡು ಕ್ಷೇತ್ರದ ತುಂಬಾ ಓಡಾಟ ನಡೆಸಿದ್ದು ಬಿಜೆಪಿ ಸಂಘಟಿತ ಪ್ರಯತ್ನ ಯಶಸ್ಸು ನೀಡುತ್ತದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.

ಕೈ ನಾಯಕರ ವಿರುದ್ಧ ಸ್ಥಳೀಯ ಮುಖಂಡರ ಅಸಮಾಧಾನ: ಬಾಗಲಕೋಟೆ ಉಪ ಚುನಾವಣಾ ಪ್ರಚಾರ ಹಾಗೂ ಮುಂದಾಳತ್ವದ ವಿಚಾರವಾಗಿ ಹೊರಗಿನಿಂದ ಆಗಮಿಸಿ ರುವ ಕೈ ನಾಯಕರ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎಚ್.ವೈ ಮೇಟಿ ಜತೆಗೆ ಸುದೀರ್ಘ ಅವಧಿಗೆ ರಾಜಕಾರಣ ಮಾಡಿರುವ ಮುಖಂಡರನ್ನು ಕೈ ನಾಯಕರು ಜತೆಗೂಡಿಸಿಕೊಂಡು ಹೋಗುವಲ್ಲಿ ವಿಧಿಲರಾದ ಕಾರಣಕ್ಕೆ ಉಂಟಾದ ಅಸಮಾಧಾನ ಚುನಾವಣೆಯಲ್ಲಿ ಹೊಡೆತ ಬೀಳುವ ಸಾಧ್ಯತೆ ಹೆಚ್ಚು ಎಂಬ ವಾತಾವರಣ ನಿರ್ಮಾಣವಾಗಿದೆ.

ಒಳ ಮೀಸಲಾತಿ ಗೊಂದಲ ಎತ್ತಿ ತೋರಿಸುತ್ತಿರುವ ಬಿಜೆಪಿ: ಪರಿಶಿಷ್ಟ ಜಾತಿಗೆ ಸೇರಿರುವ ಮೀಸಲಾತಿ ಹಂಚಿಕೆ ವಿಚಾರವಾಗಿ ಎದ್ದಿರುವ ಗೊಂದಲಕ್ಕೆ ಸಂಬಂಽಸಿದಂತೆ ಸರಕಾರದ ವೈ-ಲ್ಯತೆ ಜನರ ಮುಂದಿಡಲು ಉಪ ಚುನಾವಣೆಯನ್ನು ವೇದಿಕೆಯಾಗಿ ಮಾಡಿ ಕೊಂಡಿರುವ ಬಿಜೆಪಿ ನಾಯಕರು ಪ್ರಚಾರದಲ್ಲಿ ಉಲ್ಲೇಖ ಮಾಡುತ್ತಿದ್ದಾರೆ. ಸಂಸದ ಗೋವಿಂದ ಕಾರಜೋಳ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ತಂಡ ಒಳ ಮೀಸಲಾತಿ ಗೊಂದಲವನ್ನು ಜನರ ಮುಂದಿಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅಹಿಂದ ಮತದಾರರನ್ನು ಬಿಜೆಪಿಯತ್ತ ಸೆಳೆಯುವ ಕೆಲಸ ಭರ್ಜರಿಯಾಗಿ ಸಾಗಿದೆ. ಇನ್ನೂ ಮೂಲತಃ ಬಾಗಲಕೋಟೆ ಜಿಲ್ಲೆ ಯವರಾದ ಅರವಿಂದ ಲಿಂಬಾವಳಿ ಹಾಗೂ ಅವರ ಸಹೋದರ ಅಶೋಕ್ ಲಿಂಬಾವಳಿ ಅವರು ಪ್ರಚಾರದ ಮುಖ್ಯ ವೇದಿಕೆಯಲ್ಲಿ ಗುರುತಿಸಿ ಕೊಂಡಿದ್ದು ಸಂಘಟನೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

ಕಲ್ಲು ತೂರಾಟದ ಲಾಭ ಸಿಗಲಿದೆಯೇ ಬಿಜೆಪಿಗೆ?

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದ ಯುವಕರು ನಡೆಸಿದ್ದ ಕಲ್ಲು ತೂರಾಟ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಯಾಗಿತ್ತು. ಅಷ್ಟೇ ಅಲ್ಲದೆ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಘಟನೆ ನಂತರದಲ್ಲಿ ಪೊಲೀಸ್ ಇಲಾಖೆ ನಡೆದುಕೊಂಡ ರೀತಿಯ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಒಟ್ಟು ಘಟನೆ ಲಾಭ ಪಡೆಯಲು ಬಿಜೆಪಿ ಚುನಾವಣಾ ಪ್ರಚಾರದ ವೇದಿಕೆ ಬಳಸಿಕೊಳ್ಳಲು ತಯಾರಿ ನಡೆಸಿದೆ. ಆದರೆ ಈ ಘಟನೆಯನ್ನು ಜನ ಹೇಗೆ ತಗೆದುಕೊಂಡು ಮತ ನೀಡುತ್ತಾರೆ ಎಂಬುದನ್ನು ಕಾಲವೇ ನಿರ್ಧರಿಸಬೇಕು.

ಸ್ವಪಕ್ಷದ ಮುಖಂಡರ ವಿರುದ ಹರಿಹಾಯ್ದ ಡಿಕೆಶಿ

ಬಾಗಲಕೋಟೆ ಉಪ ಚುನಾವಣಾ ಅಖಾಡಕ್ಕೆ ಇಳಿದಿರುವ ಡಿ.ಕೆ ಶಿವಕುಮಾರ ಬುಧವಾರ ಜಿಲ್ಲಾ ಕಾಂಗ್ರೆಸ್ ಮುಖಂಡರು, ಚುನಾವಣಾ ಪ್ರಚಾರ ಹೊಣೆ ಹೊತ್ತ ನಾಯಕರ ಸಭೆಯನ್ನು ನವನಗರ ದ ಹೊರವಲಯದ ರೆಸಾರ್ಟ್‌ನಲ್ಲಿ ನಡೆಸಿದರು. ಈ ವೇಳೆ, ಪಕ್ಷದ ಮುಖಂಡರು ಕೇವಲ ಬಾಗಲಕೋಟೆ ಗ್ರಾಮೀಣದಲ್ಲಿ ಪ್ರಚಾರದ ಒತ್ತು ನೀಡಿದ್ದು ನಗರ ಭಾಗದಲ್ಲಿ ಮತದಾರರನ್ನು ಸೆಳೆಯಲು ಈವರೆಗೂ ಪ್ರಯತ್ನ ನಡೆಸದಿದ್ದಕ್ಕೆ ಆಕ್ರೋಶ ಹೊರಹಾಕಿದರು. ಪ್ರಚಾರ ಹೊಣೆ ಹೊತ್ತ ಉಸ್ತುವಾರಿಗಳ ಕಾರ್ಯವೈಖರಿ ಬದಲಿಸಿ ಕೊಳ್ಳುವಂತೆ ಖಡಕ್ ಎಚ್ಚರಿಕೆಯನ್ನು ಸಭೆಯಲ್ಲಿ ತಿಳಿಸಿzರೆ. ಗುಪ್ತಚರ ಮಾಹಿತಿ ಪ್ರಕಾರ ಈ ಕ್ಷಣದವರೆಗೂ ಬಾಗಲಕೋಟೆ ನಗರ ಪ್ರದೇಶದಲ್ಲಿ ಬಿಜೆಪಿ ಮುಂದೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ನಿzಗೆಡಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿಗೆ ಬಸನಗೌಡ ಯತ್ನಾಳ್ ಪ್ರಚಾರದ ಬಲ

ಬಿಜೆಪಿಯಿಂದ ಉಚ್ಚಾಟನೆಗೊಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಪ್ತ ಸ್ನೇಹಿತ ವೀರಣ್ಣ ಚರಂತಿ ಮಠ ಪರ ಪ್ರಚಾರಕ್ಕೆ ಧುಮುಕಿದ್ದು ಕಾರ್ಯ ಕರ್ತರಲ್ಲಿ ಸಾಕಷ್ಟು ಹುಮ್ಮಸ್ಸು ಮೂಡಿಸಿದೆ. ಹಿಂದೂ ಮತಗಳನ್ನು ಕೇಂದ್ರೀಕರಿಸುವತ್ತ ಗಮನ ಹರಿಸಿದ್ದಾರೆ. ಯತ್ನಾಳ್ ಆಗಮನದಿಂದ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದು ಬಿಜೆಪಿ ಕಟ್ಟಿಹಾಕಲು ನಿರಂತರ ಪ್ರಯತ್ನ ನಡೆಸಿದೆ. ಈಗಾಗಲೇ ಮೊದಲ ಸುತ್ತಿ ನಲ್ಲಿ ಪಂಚಮಸಾಲಿ ಸಮುದಾಯದ ಸಭೆ ನಡೆಸಿ ರುವ ಯತ್ನಾಳ್ ಅವರು ಬಾಗಲ ಕೋಟೆ ಗ್ರಾಮೀ ಣ ಪ್ರದೇಶದಲ್ಲಿ ಪ್ರಚಾರ ಕೈಗೊಂಡಿದ್ದಾರೆ.