Cooking oil prices rise: ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ
ಮಾರುಕಟ್ಟೆ ಮೂಲಗಳ ಪ್ರಕಾರ, ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ. ಸಗಟು ದರ 10 ರಿಂದ 12 ರು.ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ರು.15 ಏರಿಕೆಯಾಗಿತ್ತು. ಹಾಗಾಗಿ ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆ ಯಾದಂತಾಯಿತು.
-
ಹೂವಪ್ಪ ಐ ಹೆಚ್ ಬೆಂಗಳೂರು
ಸೂರ್ಯಕಾಂತಿ ಎಣ್ಣೆಗೆ ಈ ವಾರ ಒಂದು ಲೀಟರ್‌ಗೆ ರು.10 ಏರಿಕೆ
ಯುಗಾದಿ ಹಬ್ಬದ ಗ್ರಾಹಕರಿಗೆ ಇನ್ನೂ ಹೆಚ್ಚಿನ ಹೊರೆ ಸಾಧ್ಯತೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದ ಪರಿಣಾಮವು ಇದೀಗ ಸಾಮಾನ್ಯ ಜನರ ಅಡುಗೆಮನೆಗಳವರೆಗೂ ತಲುಪಿದೆ. ಕಳೆದ ಒಂದು ವಾರದಿಂದ ಯಾವುದೇ ಪ್ರಕಟಣೆ ಇಲ್ಲದೆಯೇ ಅಡುಗೆ ಎಣ್ಣೆಯ ಬೆಲೆ ದಿಢೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಮುಂದಿನ ವಾರ ಪ್ರಮುಖ ಹಬ್ಬವಾದ ಯುಗಾದಿ ಹಾಗೂ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯು ಮನೆಮಂದಿ ಯ ಖರ್ಚಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಾರುಕಟ್ಟೆ ಮೂಲಗಳ ಪ್ರಕಾರ, ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ. ಸಗಟು ದರ 10 ರಿಂದ 12 ರು.ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ರು.15 ಏರಿಕೆಯಾಗಿತ್ತು. ಹಾಗಾಗಿ ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆಯಾದಂತಾಯಿತು.
ಇದನ್ನೂ ಓದಿ: Commercial Tax: ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ನಿಗದಿತ ಗುರಿ ಸಾಧಿಸಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮಾರುಕಟ್ಟೆಯಲ್ಲಿ ಸದ್ಯ ಕಂಡುಬರುತ್ತಿರುವ ಏರಿಕೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಅಡುಗೆ ಎಣ್ಣೆ ವ್ಯಾಪಾರಿಗಳು. ಮಾರುಕಟ್ಟೆ ಯಲ್ಲಿ ಹೆಚ್ಚು ಬಳಕೆಯಾಗುವ ಜನಪ್ರಿಯ ಬ್ರ್ಯಾಂಡುಗಳ ಸೂರ್ಯಕಾಂತಿ ಎಣ್ಣೆಯ ಬೆಲೆ ಯು ಕಳೆದ ವಾರ ಒಂದು ಲೀಟರ್‌ಗೆ ಸಗಟು ದರ ರು. 160-165 ಇದ್ದು, ಈಗ ಅದು 170-175 ರು.ಗೆ ಏರಿಕೆಯಾಗಿದೆ. ಇನ್ನು ಚಿಲ್ಲರೆ 175-180 ರು.ಗೆ ಮಾರಾಟವಾಗುತ್ತಿದೆ.
ಇನ್ನೊಂದೆಡೆ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ದೊರೆಯುತ್ತಿದ್ದ ಪಾಮ್ ಆಯಿಲ್ ಬ್ರ್ಯಾಂಡ್‌ನಲ್ಲೂ ಬೆಲೆ ಏರಿಕೆ ದಾಖಲಾಗಿದೆ. ಕಳೆದ ವಾರ ರು.125 ಇದ್ದ ಒಂದು ಲೀಟರ್ ಬೆಲೆ ಈಗ 130 ರು.ಗೆ ಏರಿಕೆಯಾಗಿದೆ. ಚಿಲ್ಲರೆ ದರ 136 ರು.ಗೆ ಮಾರಾಟವಾಗುತ್ತಿದೆ. ಹೋಟೆಲ್ ಉದ್ಯಮದವರು ಬಳಸುವ 15 ಕೆ.ಜಿ ತುಂಬಿದ ಒಂದು ಟಿನ್ ಸನ್ ಫ್ಲವರ್ ಆಯಿಲ್ 2600-2650 ರು. ಇದ್ದ ಬೆಲೆ ಈಗ 2750-2800 ರು. ಆಗಿದೆ.
ಹಬ್ಬಗಳ ಸಮಯದ ಆತಂಕ: ಮದುವೆ ಗಳು, ಯುಗಾದಿ, ಮತ್ತು ಊರು ಜಾತ್ರೆಗಳು ಸಮೀಪಿಸುತ್ತಿರುವುದರಿಂದ ಮನೆಗಳಲ್ಲಿ ವಿಶೇಷ ಅಡುಗೆಗಳ ಸಿದ್ಧತೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರಲ್ಲಿ ಆತಂಕ ಮೂಡಿಸಿದೆ ಎನ್ನುತ್ತಾರೆ ಗ್ರಾಹಕರು.
ಗೋದಾಮುಗಳಲ್ಲಿ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಎಣ್ಣೆಯ ದಾಸ್ತಾನು ಲಭ್ಯವಿದೆ. ಹೀಗೆ ಸಾಕಷ್ಟು ಪ್ರಮಾಣದ ಎಣ್ಣೆ ದಾಸ್ತಾನು ಇದ್ದರೂ ಸಹ, ಕೆಲವು ದಸ್ತಾನು ದಾರರು ಯುದ್ಧದ ಪರಿಸ್ಥಿತಿ ಯನ್ನು ದುರುಪಯೋಗಪಡಿಸಿಕೊಂಡು ಕೃತಕವಾಗಿ ಬೆಲೆ ಏರಿಸುತ್ತಿದ್ದಾರೆ. ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನುವ ಮಾತು ಸುಳ್ಳು ಎಂದು ಹೇಳುತ್ತಾರೆ ಮಂಡಿಪೇಟೆ ವರ್ತಕರು.
ಗ್ರಾಹಕರು ಹೆಚ್ಚಾಗಿ ಬಳಸುವ ಸೂರ್ಯ ಕಾಂತಿ ಎಣ್ಣೆ ಸಗಟು 10 ಲೀ.ಬಾಕ್ಸ್ ಒಂದಕ್ಕೆ ಈ ಹಿಂದೆ 1580-1600 ರು. ಇದ್ದದ್ದು ಈಗ 1660-1670 ರು., ಪಾಮ್ ಎಣ್ಣೆ 1240 ರು. ಇದ್ದದ್ದು, 1260 ರು. ಏರಿಕೆಯಾಗಿದೆ,
ಅಂದರೆ ಈ ಹಿಂದಿನ ಬೆಲೆಗೆ ಹೋಲಿಸಿದರೆ ಸೂರ್ಯಕಾಂತಿ ಎಣ್ಣೆ ಲೀ.ಗೆ 21 ರು. ಏರಿಕೆ ಯಾಗಿದೆ. ಇನ್ನು ಸೋಯಾ, ಕಡಲೆಕಾಯಿ, ರೈಸ್ ಬ್ರಾನ್ ಆಯಿಲ್, ಸಾಸಿವೆ ಎಣ್ಣೆ ತಲಾ 8-9 ರು. ಏರಿಕೆಯಾಗಿದೆ. ಚಿಲ್ಲರೆ ದರದಲ್ಲಿ 10-12 ರು.ನಷ್ಟು ಏರಿಕೆಯಾಗಿದೆ.
ಮುಂದಿನ ವಾರದಲ್ಲಿ ಇನ್ನಷ್ಟು ಏರಿಕೆ ಸಾಧ್ಯತೆ
ವ್ಯಾಪಾರ ವಲಯಗಳ ಮಾಹಿತಿಯ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಣ್ಣೆ ಬೀಜಗಳ ಬೆಲೆ ಹಾಗೂ ಸಾಗಣೆ ವೆಚ್ಚಗಳು ಯುದ್ಧದ ಪರಿಣಾಮದಿಂದ ಅಸ್ಥಿರವಾಗಿವೆ. ಈ ಪರಿಸ್ಥಿತಿ ಮುಂದುವರಿದರೆ ಮುಂದಿನ ವಾರದಲ್ಲಿ ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ ರು. 10 ರಿಂದ 12ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಇನ್ನಷ್ಟು ಹೊರೆ ಬೀಳುವ ಸಾಧ್ಯತೆ ಇದೆ.
![]()
ಕಡ್ಲೆಬೇಳೆ ಮುಂತಾದವುಗಳ ದರ ಈಗಾಗಲೇ ಏರಿಕೆಯಾಗಿವೆ. ಈಗ ಸನ್ ಫ್ಲವರ್ ಎಣ್ಣೆ ಲೀ.ಗೆ 175 ಹೇಳುತ್ತಾರೆ. ದಿನನಿತ್ಯ ಅಡುಗೆಗೆ ಎಣ್ಣೆ ಬಳಸುವುದು ಹೇಗಪ್ಪಾ ಎಂಬ ಚಿಂತೆ ಯಾಗಿದೆ.
-ಅರ್ಪಿತಾ ಎಸ್, ಗ್ರಾಹಕಿ, ಬೆಂಗಳೂರು
![]()
ಇರಾನ್ ಇರಾಕ್ ಯುದ್ಧ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಹಾಗೂ ಖಾದ್ಯತೈಲ ಪೂರೈಕೆ ಕಡಿಮೆಯಾಗಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ.
-ಜಿಆರ್‌ಎನ್ ನಾಗರಾಜು, ಅಡುಗೆ ಎಣ್ಣೆ ವ್ಯಾಪಾರಿ, ಹೊಸ ತರಗುಪೇಟೆ, ಬೆಂಗಳೂರು