ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌SIR: ನೈಜ ಮತದಾರರಿಗೆ ಜರಡಿ ಹಿಡಿಯಲಿದೆ ಎಸ್‌ʼಐಆರ್

ಪ್ರತಿಯೊಬ್ಬ ಅರ್ಹ ನಾಗರಿಕನು ಕೂಡ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಮುಂಬರುವ ಚುನಾವಣೆ ಗಳಿಗೆ ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆಯನ್ನು ಸುಧಾರಿಸುವುದು. ನೋಂದಣಿಯನ್ನು ಸುಲಭ ಪ್ರಕ್ರಿಯೆಯಲ್ಲಿ ಮಾಡುವ ಮೂಲಕ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಎಸ್‌ಐಆರ್, ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲ ಉದ್ದೇಶ.

ನೈಜ ಮತದಾರರಿಗೆ ಜರಡಿ ಹಿಡಿಯಲಿದೆ ಎಸ್‌ʼಐಆರ್

-

Profile
Ashok Nayak Jun 9, 2026 9:36 AM

ಕರಿಯಪ್ಪ ಹೆಗ್ಗಡದಿನಿ

ರಾಜ್ಯಸರಕಾರದ ವಿರೋಧದ ನಡುವೆ 5.50 ಕೋಟಿ ಮತದಾರರ ಎಸ್‌ಐಆರ್‌ಗೆ ಸಿದ್ಧತೆ

ಎಸ್‌ಐಆರ್‌ನಿಂದ ಮಮತಾ ಯುಗಾಂತ್ಯ?

ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮೊದಲ ಮತ್ತು 2ನೇ ಹಂತದ ಎಸ್‌ಐಆರ್ ಮುಗಿದು, ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ 3ನೇ ಹಂತದ ಎಸ್‌ಐಆರ್ ನಡೆದಿದೆ. ರಾಜ್ಯದ 5.50 ಕೋಟಿ ಮತದಾರರ ಎಸ್‌ಐಆರ್ ಆಗಲಿದ್ದು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ರಾಜ್ಯ ಕಾಂಗ್ರೆಸ್ ಸರಕಾರ ವಿರೋಧ ವ್ಯಕ್ತಪಡಿಸಿದೆ. ಇದರ ನಡುವೆಯೂ ಚುನಾವಣಾ ಆಯೋಗ ಎಸ್‌ಐಆರ್ ಆರಂಭಿಸಿದೆ. ಏನಿದು ಎಸ್‌ಐಆರ್? ಬಿಹಾರ, ಪಶ್ಚಿಮ ಬಂಗಾಳ ದಂತೆ ರಾಜ್ಯದಲ್ಲೂ ಎಸ್‌ಐಅರ್‌ಗೆ ಯಾಕೆ ವಿರೋಧ? ಎನ್ನುವುದನ್ನು ಇಲ್ಲಿ ನೋಡೋಣ.

ಪ್ರತಿಯೊಬ್ಬ ಅರ್ಹ ನಾಗರಿಕನು ಕೂಡ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಮುಂಬರುವ ಚುನಾವಣೆಗಳಿಗೆ ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆಯನ್ನು ಸುಧಾರಿಸುವುದು. ನೋಂದಣಿಯನ್ನು ಸುಲಭ ಪ್ರಕ್ರಿಯೆಯಲ್ಲಿ ಮಾಡುವ ಮೂಲಕ ಮತದಾರರ ಭಾಗವಹಿಸುವಿಕೆ ಯನ್ನು ಉತ್ತೇಜಿಸುವುದು ಎಸ್‌ಐಆರ್, ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲ ಉದ್ದೇಶ.

ಹೊಸದೇನೂ ಅಲ್ಲ

ಎಸ್‌ಐಆರ್ ಪ್ರಕ್ರಿಯೆ ಹೊಸದೇನೂ ಅಲ್ಲ. 1947ರಿಂದ 2024ರವರೆಗೆ ಒಟ್ಟು 12 ಬಾರಿ ದೇಶದಲ್ಲಿ ಎಸ್‌ಐಆರ್ ನಡೆಸಲಾಗಿದೆ. ಅದರಲ್ಲು 12 ರಿಂದ 11 ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಇರುವಾಗಲೇ ಎಸ್‌ಐಆರ್ ನಡೆದಿದೆ. 1952, 1957, 1961ರ ಅವಧಿಯಲ್ಲಿ ಜವಹರಲಾಲ್ ನೆಹರೂ ಪ್ರಧಾನಿ ವೇಳೆ. 1965 ಲಾಲ್ ಬಹಾದ್ದೂರ್ ಶಾಸ್ತ್ರಿ, 1966, 1983 ಇಂದಿರಾಗಾಂಧಿ, 1987, 1989 ರಾಜೀವ್ ಗಾಂಧಿ, 1993, 1995 ಪಿ.ವಿ.ನರಸಿಂಹರಾವ್, 2002 ಅಟಲ್ ಬಿಹಾರಿ ವಾಜಪೇಯಿ, (ಕಾಂಗ್ರೆಸ್ಸೇತರ ಕೇಂದ್ರ ಸರಕಾರ) 2004 ಡಾ.ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದ ಅವಧಿಯಲ್ಲಿ ಎಸ್‌ಐಅರ್ ಆಗಿದೆ.

ಇದನ್ನೂ ಓದಿ:SIR in Karnataka: ಎಸ್‌ಐಆರ್ ಮೂಲಕ ಬಡವರ ಮತಗಳನ್ನು ತೆಗೆಯಲು ಸಂಚು: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

ಉದ್ದೇಶಗಳು

ಮತದಾರರ ಪಟ್ಟಿಯನ್ನು ನಿಖರ, ಸಂಪೂರ್ಣ ಮತ್ತು ನವೀಕೃತಗೊಳಿಸುವ ಸಲುವಾಗಿ ಭಾರತೀಯ ಚುನಾವಣಾ ಆಯೋಗ ಕೈಗೊಳ್ಳುವ ವಿಶೇಷ ಅಭಿಯಾನ. ಇದರಲ್ಲಿ ಚುನಾವಣಾ ಆಯೋಗದ ಮೂಲಕ ನಿಯೋಜಿಸುವ ಸಿಬ್ಬಂದಿಗಳು ಮನೆಮನೆಗೆ ತೆರಳಿ ಮತದಾರ ಪಟ್ಟಿಯನ್ನು ಪರಿಶೀಲನೆ ಮಾಡುತ್ತಾರೆ. ಮತದಾರ ಪಟ್ಟಿಯ ಪರಿಷ್ಕರಣೆ ನಡೆಸುವ ಸಿಬ್ಬಂದಿ, ಸಂಶಯಾಸ್ಪದ ಮತದಾರರ ಅರ್ಹ ದಾಖಲೆ ಕೇಳುವ ಅಧಿಕಾರ ಹೊಂದಿರುತ್ತಾರೆ. ಅರ್ಹ ಮತದಾರರನ್ನು ಪರಿಶೀಲಿಸಿ, ಹೊಸ ಮತದಾರರ ಪಟ್ಟಿಗೆ ಸೇರಿಸುತ್ತಾರೆ. ಮೃತರಾದ ಅಥವಾ ಸ್ಥಳಾಂತರಗೊಂಡ, ವಲಸೆ ಹೋದ ವ್ಯಕ್ತಿಗಳ ಹೆಸರನ್ನು ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕುತ್ತಾರೆ. 18 ವಯಸ್ಸು ಪೂರೈಸಿದವರನ್ನು ಮತದಾರರ ಪಟ್ಟಿಗೆ ಸೇರಿಸಿ, ಪರಿಷ್ಕರಣೆ ವೇಳೆ ಕಂಡು ಬಂದ ನಕಲಿ ಮತದಾರ ರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ.

ಹೇಗೆ ನಡೆಯಲಿದೆ?

ಎಸ್‌ಐಆರ್‌ನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಎಂದರೆ ಬಿಎಲ್‌ಒಗಳು ಮತದಾರರ ವಿವರ ಗಳನ್ನು ದೃಢೀಕರಿಸಲು ಮನೆಮನೆಗೆ ತೆರಳಿ ಮತದಾರರನ್ನು ಪರಿಶೀಲನೆ ನಡೆಸುತ್ತಾರೆ. ಮತದಾರರ ಮಾಹಿತಿಗಳನ್ನ ಸೇರಿಸಲು, ಅಳಿಸಲು ಅಥವಾ ಸರಿಪಡಿಸಲು ನಾಗರಿಕರಿಗೆ ಅರ್ಜಿ ಗಳನ್ನು ನೀಡಿ ಅಗತ್ಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ವೇಳೆ ಅಸಲಿ ಹಾಗೂ ನಕಲಿ ಮತದಾರ ರನ್ನು ಪತ್ತೆ ಮಾಡಿ, ಅಸಲಿ ಮತದಾರರನ್ನು ಮಾತ್ರ ಹೊಸ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗುತ್ತದೆ. ಪರಿಷ್ಕರಣೆಯಲ್ಲಿ ಏನಾದರೂ ಲೋಪ ದೋಷಗಳು ಕಂಡುಬಂದರೆ ಬಿಎಲ್‌ಒ ಅಧಿಕಾರಿಗಳೇ ಆಕ್ಷೇಪಣೆಯನ್ನು ಸಲ್ಲಿಸುವ ಅಧಿಕಾರವನ್ನು ಕೂಡ ಹೊಂದಿರುತ್ತಾರೆ. ಇದೆಲ್ಲವೂ ಅತ್ಯಂತ ಪಾರದರ್ಶಕವಾಗಿ ನಡೆಯುತ್ತದೆ ಮತ್ತು ಇದರಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಇರುವುದಿಲ್ಲ.

ಎಲ್ಲೆಲ್ಲಿ ಎಸ್‌ಐಆರ್?

3ನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾ ರಾಷ್ಟ್ರ, ಹರಿಯಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಚಂಡೀಗಢ, ದಾದರ್ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುನಲ್ಲಿ ನಡೆಯಲಿದೆ.

mamata with court

ಸುಪ್ರೀಂನಲ್ಲಿ ಮಮತಾ ವಾದ

ಪಶ್ಚಿಮ ಬಂಗಾಳದಲ್ಲಿ ನಡೆದ 2ನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸುಪ್ರೀಂ ಮೊರೆ ಹೋಗಿದ್ದರು. ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳವನ್ನು ಕೇಂದ್ರ ಸರಕಾರ ಟಾರ್ಗೆಟ್ ಮಾಡುತ್ತಿದೆ. 2 ವರ್ಷ ಹಿಡಿಯುವ ಪ್ರಕ್ರಿಯೆಯನ್ನು ಎರಡೇ ತಿಂಗಳಲ್ಲಿ ಮಾಡುವುದು ಹೇಗೆ? ಹಬ್ಬಹರಿದಿನಗಳ ಕಾಲದಲ್ಲೂ ಮನೆ ಮನೆಗೆ ತೆರಳಿ ಬಿಎಲ್‌ಒಗಳು ಜನಸಾಮಾನ್ಯರಿಗೆ ಕಿರುಕುಳ ಕೊಡುತ್ತಿದ್ದಾರೆ. 24 ವರ್ಷಗಳ ಕಾಲ ಮಾಡದೆ ಹೋದ ಎಸ್‌ಐಆರ್ ಅನ್ನು ಮೂರು ತಿಂಗಳಲ್ಲಿ ಮಾಡಲು ಕೇಂದ್ರ ಹೊರಟ್ಟಿದ್ದು ಯಾಕೆ ಎಂದು ಸ್ವತಃ ತಾವೇ ವಾದ ಮಾಡಿದ ಮಮತಾ ಅವರು ಕೇಂದ್ರ ಹಾಗೂ ಚುನಾವಣಾ ಆಯೋಗವನ್ನು ಸುಪ್ರೀಂ ನಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಸದ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 207 ಸ್ಥಾನ ಗೆದ್ದು, ಮಮತಾ ಅವರ 15 ವರ್ಷದ ಆಡಳಿತ ಕೊನೆಗಾಣಿಸಿದೆ ಬಿಜೆಪಿಯ ಸುವೇಂದು ಅಧಿಕಾರಿ ಸಿಎಂ ಆಗಿದ್ದಾರೆ. ಇಲ್ಲಿ ತೃಣಮೂಲ ಕಾಂಗ್ರೆಸ್ ಪರಾಭವಕ ಎಸ್ಐಅರ್ ಪ್ರಮುಖ ಕಾರಣ ಎನ್ನಲಾಗು ತ್ತಿದೆ.

ಕಾನೂನು ಏನು ಹೇಳುತ್ತದೆ?

ಚುನಾವಣಾ ಆಯೋಗಕ್ಕೆ ಎಸ್‌ಐಆರ್ ಮಾಡುವ ಅಧಿಕಾರವನ್ನು 1950ರ ಪ್ರಜಾಪ್ರತಿ ನಿಧಿ ಕಾಯ್ದೆಯ ಸೆಕ್ಷನ್ 21-ಸೆಕ್ಷನ್ 21ಕ್ಲಾಸ್ ಮೂರರಲ್ಲಿ ಉಲ್ಲೇಖಿಸಲಾಗಿದೆ. ನಿಖರತೆ ಮತ್ತು ನ್ಯಾಯ ಸಮ್ಮತೆಯನ್ನ ಕಾಪಾಡಿಕೊಳ್ಳಲು ಅಗತ್ಯವೆಂದರೆ, ಯಾವುದೇ ಕ್ಷೇತ್ರದಲ್ಲಿ ಯಾವುದೇ ಸಮಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ಸಂವಿಧಾನ ಬದ್ಧ ಸಂಸ್ಥೆ ಭಾರತೀಯ ಚುನಾವಣಾ ಆಯೋಗಕ್ಕೆ ಈ ಅಧಿಕಾರ ಇದೆ.

00

ರಾಜ್ಯದಲ್ಲಿ ಎಸ್‌ಐಆರ್ ತಡೆಗೆ ಆಗ್ರಹ

ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನಡೆದ ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತದಾರರ ಪಟ್ಟಿಯ ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಸ್ಥಗಿತಗೊಳಿಸಲು ವಿವಿಧ ಸಂಘಟನೆಗಳ ಮುಖಂಡರು ಆಗ್ರಹ ಮಾಡಿದ್ದರು. ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲೇ ಎಸ್‌ಐಆರ್ ಬಗ್ಗೆ ಕೇಳಿ ಬರುತ್ತಿರುವ ಅಪಸ್ವರಗಳ ಕುರಿತು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎಸ್‌ಐಆರ್‌ನಿಂದ ಎದುರಾಗ ಬಹುದಾದ ಸಮಸ್ಯೆಗಳು, ನೆರೆ ರಾಜ್ಯಗಳಲ್ಲಾದ ವಿವಾದಗಳು ಹಾಗೂ ಅದರ ಪರಿಣಾಮಗಳ ಕುರಿತು ಚರ್ಚಿಸಲಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಾದ ಎಸ್‌ಐಆರ್ ಸಮಸ್ಯೆಗಳ ಗಂಭೀರತೆ ಕುರಿತು ಗಮನಸೆಳೆದು, ‘ಈ ಪ್ರಕ್ರಿಯೆಯಿಂದ ಪಶ್ಚಿಮ ಬಂಗಾಳದಲ್ಲೇ 120ಕ್ಕೂ ಹೆಚ್ಚು ಸೀಟುಗಳನ್ನು ಬಿಜೆಪಿ ಗೆದ್ದಿದೆ. ಜನ ತಮ್ಮ ಹಕ್ಕುಗಳನ್ನೇ ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ ಅಂತಹ ಅನಾಹುತಗಳು ಆಗುವ ಸಾಧ್ಯತೆ ಇದೆ. ಆಗಾಗಿ ಎಸ್‌ಐಆರ್ ನಿಲ್ಲಿಸಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಹಲವಾರು ಸಂಘಟನೆಗಳು ಅಹವಾಲು ಸಲ್ಲಿಸಿದ್ದವು.

ಅಲ್ಪಸಂಖ್ಯಾತರ ಮೇಲಿನ ಹುನ್ನಾರವೇ?

ಬಿಹಾರದಲ್ಲಿ ನಡೆದ ಮೊಲದ ಹಂತದ ಎಸ್‌ಐಆರ್‌ನಲ್ಲಿ ಸುಮಾರು 45ಲಕ್ಷ ಜನರ ಹೆಸರು ಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಬಿಎಲ್‌ಒಗಳು ಕೇಳಿದ ಅಧಿಕೃತ ದಾಖಲೆ ಕೊಟ್ಟಿಲ್ಲ. ವಿಳಾಸ ಅಥವಾ ಫೋಟೋ ಗುರುತಿನ ಚೀಟಿಗಳು ಮಾನ್ಯತೆ ಪಡೆದಿಲ್ಲ. ಇದರಿಂದ ಬಿಹಾರದಲ್ಲಿ ನಡೆದ ಎಸ್‌ಐಆರ್‌ನಲ್ಲಿ 45 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿತ್ತು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಸಿದ್ದರಾಮಯ್ಯ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿ ದ್ದರು. ಮತದಾರರ ಪಟ್ಟಿಯನ್ನು ವಿಶೇಷ ಪರಿಷ್ಕರಣೆ ಮಾಡಿರುವುದೇ ಹಿಂದುಳಿದವರನ್ನು, ಅಲ್ಪಸಂಖ್ಯಾತರ ಮತದಾರರ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶಕ್ಕೆ. ಆದರೆ, ವಿಪಕ್ಷದ ಆರೋಪ ಗಳಿಗೆ ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗ ಸಮರ್ಥಿಸಿಕೊಂಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮೂಲ ಉದ್ದೇಶ ಅಕ್ರಮ ವಲಸಿಗರು ಹಾಗೂ ನಕಲಿ ಮತದಾರರನ್ನು ಗುರುತಿಸುವು ದಾಗಿ ಎಂದು ಸ್ಪಷ್ಟನೆ ನೀಡಿದೆ.