ಬರಲಿದೆ ಸೌರ ಶಕ್ತಿ ಚಾಲಿತ ಡ್ರೋನ್
ಬೆಂಗಳೂರಿನ ಎಐ ಸಮರಾಸಗಳ ಕಂಪನಿ ಎನಿಸಿದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋ ಸ್ಪೇಸ್ ಇದೀಗ ಭಾರತದ ಮೊದಲ ಸ್ವಂತ ನಿರ್ಮಾಣದ ಮಧ್ಯಮ ಎತ್ತರದ ದೀರ್ಘ ಬಾಳಿಕೆಯ ಯುದ್ಧ ವಿಮಾನವನ್ನು ತಯಾರಿಸಿದೆ. MALE ಕಾಂಬ್ಯಾಟ್ ಏರ್‌ಕ್ರಾಫ್ಟ್ ವರ್ಗಕ್ಕೆ ಸೇರಿದ ಕಾಲ ಭೈರವ ಯುದ್ಧ ವಿಮಾನವು ಪೂರ್ಣವಾಗಿ ತಯಾರಾಗಿದ್ದು ರಫ್ತಿಗೂ ಸಿದ್ಧವಾಗಿದೆ ಎಂದು ಎಫ್ ಬ್ಲ್ಯುಡಿಎ ಸಂಸ್ಥೆ ಹೇಳಿದೆ.

-

ಕರಿಯಪ್ಪ, ಹೆಗ್ಗಡದಿನ್ನಿ
ಇದು ಡ್ರೋನ್‌ಗಳ ಯುಗ. ಟನ್‌ಗಟ್ಟಲೆ ತೂಕದ ಟ್ಯಾಂಕರ್‌ಗಳು, ಫಿರಂಗಿಗಳು, ನೂರಾರು ಕೋಟಿ ರು. ಮೊತ್ತದ ಸಮರ ವಿಮಾನಗಳಿಗಿಂತಲೂ ಆಧುನಿಕ ಸಮರಾಂಗಣದಲ್ಲಿ ಕೆಲವೇ ಕೋಟಿ.ರು ವೆಚ್ಚದ ಡ್ರೋನ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇತ್ತೀಚೆಗೆ ಆಪರೇಷನ್ ಸಿಂದೂರ ಕಾರ‍್ಯಾ ಚರಣೆಯಲ್ಲಿ ಭಾರತ ಡ್ರೋನ್‌ಗಳನ್ನು ಬಳಸಿ, ಪಾಕಿಸ್ತಾನದ ನೆಲೆಗಳ ಮೇಲೆ ಕರಾರುವಕ್ಕಾಗಿ ದಾಳಿ ನಡೆಸಿತ್ತು. ಇಸ್ರೇಲ್ ಕೂಡ ಹಮಾಸ್ ಹುಟ್ಟಡಗಿಸುವಲ್ಲಿ ಡ್ರೋನ್ ಪ್ರಮುಖ ಪಾತ್ರ ವಹಿಸಿದೆ. ರಷ್ಯಾ ಇದೀಗ ಡ್ರೋನ್ ಮೂಲಕವೇ ಉಕ್ರೇನ್‌ನ ಅತಿದೊಡ್ಡ ನೌಕಾ ಹಡಗನ್ನು ಧ್ವಂಸಗೊಳಿಸಿದೆ. ಈ ಪೀಠಿಕೆ ಏಕೆ ಅಂದರೆ ದೆಹಲಿ ಮೂಲದ ಖಾಸಗಿ ಕಂಪನಿ ಇತ್ತೀಚೆಗೆ ಸೌರಶಕ್ತಿ ಚಾಲಿತ ಡ್ರೋನ್ ಅಭಿವೃದ್ಧಿಪಡಿಸಿದೆ.
ಕಾಲಭೈರವ ಡ್ರೋನ್ ಸಮರ ವಿಮಾನ
ಬೆಂಗಳೂರಿನ ಎಐ ಸಮರಾಸಗಳ ಕಂಪನಿ ಎನಿಸಿದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋ ಸ್ಪೇಸ್ ಇದೀಗ ಭಾರತದ ಮೊದಲ ಸ್ವಂತ ನಿರ್ಮಾಣದ ಮಧ್ಯಮ ಎತ್ತರದ ದೀರ್ಘ ಬಾಳಿಕೆಯ ಯುದ್ಧ ವಿಮಾನವನ್ನು ತಯಾರಿಸಿದೆ. MALE ಕಾಂಬ್ಯಾಟ್ ಏರ್‌ಕ್ರಾಫ್ಟ್ ವರ್ಗಕ್ಕೆ ಸೇರಿದ ಕಾಲ ಭೈರವ ಯುದ್ಧವಿಮಾನವು ಪೂರ್ಣವಾಗಿ ತಯಾರಾಗಿದ್ದು ರಫ್ತಿಗೂ ಸಿದ್ಧವಾಗಿದೆ ಎಂದು ಎಫ್ ಬ್ಲ್ಯುಡಿಎ ಸಂಸ್ಥೆ ಹೇಳಿದೆ. ಕಾಲಭೈರವ ಸ್ಪೂರ್ತಿಯಲ್ಲಿ ಈ ಸ್ವಯಂಚಾಲಿತ ಕಾಂಬ್ಯಾಟ್ ಏರ್ ಕ್ರಾಫ್ಟ್ ನ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ ಮಾಡಲಾಗಿದೆ. ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ತೇಜಸ್‌ಕಂಡ ಅವರ ಪ್ರಕಾರ ಫ್ಲೈಯಿಂಗ್ ವೆಡ್ಜ್ ನಿರ್ಮಿಸಿರುವ ಈ ಪುಟ್ಟ ಕಾಲ ಭೈರವ ಡ್ರೋನ್ ಯುದ್ಧವಿಮಾನವು ನಿರಂತರ 30 ಗಂಟೆಗಳ ಕಾಲ ಕಾರ‍್ಯಾಚರಣೆ ಸಾಮರ್ಥ್ಯ ಹೊಂದಿದ್ದು ಹಾಗೂ 3000 ಕಿಮೀ ದೂರ ಒಂದೇ ಸಮನೆ ಹಾರಬಲ್ಲುದು. ಅಮೆರಿಕದ ಜನರಲ್ ಅಟಾಮಿಕ್ಸ್ ಸಂಸ್ಥೆಯ ಎಂಕ್ಯೂ-1 ಪ್ರಿಡೇಟರ್ ಮತ್ತು ಇಸ್ರೇಲನ ಸರ್ಚರ್ ಡ್ರೋನ್ ವಿಮಾನಗಳಿಗೆ ಹೋಲಿಸಿದರೆ ಕಾಲಭೈರವ ಡ್ರೋನ್ ವಿಮಾನಗಳು ಬಹಳ ಅಗ್ಗದ ಬೆಲೆ ಹೊಂದಿವೆ. ಈಗಾಗಲೇ ಈ ಸಮರ ಡ್ರೋನ್‌ಗೆ ದಕ್ಷಿಣ ಏಷ್ಯಾದ ರಾಷ್ಟ್ರವೊಂದರಿಂದ ಬೇಡಿಕೆ ಬಂದಿದೆ.
ಸ್ಟಾರ್ಟ್‌ಅಪ್ ಕಂಪನಿಯೊಂದು ದೇಶದ ಮೊದಲ ‘ಸೌರಶಕ್ತಿ ಚಾಲಿತ ಡ್ರೋನ್’ ಅಭಿವೃದ್ಧಿ ಪಡಿಸಿದೆ. ನವೋದ್ಯಮಿ ವಿಜಯ್ ಶಂಕರ್ ದ್ವಿವೇದಿ ಎಂಬವರು ಇಂಥದ್ದೊಂದು ಡ್ರೋನ್‌ಅನ್ನು ಅಭಿವೃದ್ಧಿಪಡಿಸಿದ್ದಾರೆ. ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿಯಾಗಿರುವ ವಿಜಯ್ ಶಂಕರ್ ದ್ವಿವೇದಿ ಸ್ಟಾರ್ಟ್‌ಅಪ್ ಕಂಪನಿ ಹೊಂದಿದ್ದು, ಸಹಸಂಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಕಂಪನಿಯಿಂದ ಅಭಿವೃದ್ಧಿಪಡಿಸಿರುವ ‘ಸೌರಶಕ್ತಿ ಚಾಲಿತ ಡ್ರೋನ್’ ಅನ್ನು ಇತ್ತೀಚೆಗೆ ದೆಹಲಿಯ ವಸಂತ್ ಕುಂಜ್‌ನಲ್ಲಿ ನಡೆದ ಸ್ಟಾರ್ಟ್‌ಅಪ್ ಮೇಳದಲ್ಲಿ ಪ್ರಾಯೋಗಿಕವಾಗಿ ಪ್ರದರ್ಶಿಸ ಲಾಯಿತು. ಈ ಡ್ರೋನ್‌ಗೆ ‘ತೇಜಸ್ವಾನ್’ ಎಂದು ಹೆಸರಿಸಲಾಗಿದೆ.
‘ತೇಜಸ್ವಾನ್’ ವೈಶಿಷ್ಟ್ಯತೆ 150 ಕಿ.ಮೀ ದೂರ ಪ್ರಯಾಣ: ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ್ದ ರಿಂದ ಡ್ರೋನ್ ಒಂದೇ ಬಾರಿಗೆ 150 ಕಿ.ಮೀ ದೂರ ಕ್ರಮಿಸುವುದರ ಜತೆಗೆ 12 ಗಂಟೆ ನಿರಂತರವಾಗಿ ಹಾರಬಲ್ಲದು. 3 ಕೆ.ಜಿವರೆಗೆ ಭಾರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಬ್ಯಾಟರಿ ಅಳವಡಿಸ ಲಾಗಿದ್ದು, ಸೌರಶಕ್ತಿಯಿಂದ ಚಾರ್ಜ್ ಆಗಲು ಸಮಸ್ಯೆಯಾದಲ್ಲಿ ಈ ಬ್ಯಾಟರಿಯೊಂದಿಗೆ 50 ಕಿ.ಮೀ ಕ್ರಮಿಸಬಲ್ಲದು.
ಇದನ್ನೂ ಓದಿ: Roopa Gururaj Column: ಪರಸ್ಪರರಿಗೆ ಕೇಡು ಬಗೆದು, ನಗೆಪಾಟಲಾದ ನಾರದ, ತುಂಬೂರರು
ಕಾರ್ಯ ವಿಧಾನ ಹೇಗೆ?
ಇದನ್ನು ಒಮ್ಮೆ ಸೌರಶಕ್ತಿಯಿಂದ ಚಾರ್ಜ್ ಮಾಡಿದ್ದಲ್ಲಿ 150 ಕಿಲೋಮೀಟರ್ ದೂರ ಕ್ರಮಿಸ ಬಲ್ಲದು. ಸಮುದ್ರ ಮಟ್ಟದಿಂದ ೫ ಕಿಲೋಮೀಟರ್ ಎತ್ತರಕ್ಕೆ ಹಾರುವ ಶಕ್ತಿ ಹೊಂದಿದೆ. ಸೌರ ಫಲಕಗಳನ್ನು ರೆಕ್ಕೆಗಳನ್ನಾಗಿ ಮಾರ್ಪಡಿಸಲಾಗಿದೆ. ಅದು ಸೂರ್ಯನ ಬೆಳಕಿನಿಂದ ಚಾರ್ಜ್ ಆಗುತ್ತದೆ. ಸೌರಶಕ್ತಿಯಿಂದ ಚಾರ್ಜ್ ಆಗಲು ಸಮಸ್ಯೆಯಾದಲ್ಲಿ ಅಥವಾ ಮೋಡ ಕವಿದ ವಾತಾ ವರಣದಲ್ಲಿ ಇಲ್ಲವೇ, ಸೂರ್ಯನ ಬೆಳಕು ಇಲ್ಲದಿದ್ದಾಗಲೂ ಈ ಡ್ರೋನ್ ಬ್ಯಾಟರಿಯಲ್ಲಿ 50 ಕಿ.ಮೀ ದೂರ ಕ್ರಮಿಸಬಲ್ಲದು. ಸದ್ಯ ಈ ಡ್ರೋನ್‌ನ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದೆ. ಈಗ ಮುಂದಿನ ಸಿದ್ಧತೆಗಳು ನಡೆಯುತ್ತಿವೆ.
ಇದರ ಉಪಯೋಗವೇನು?
ಭಾರತದ ಭದ್ರತಾ ತಂತ್ರಜ್ಞಾನದ ಒಂದು ಹೊಸ ಆಯಾಮವಾಗಿ ‘ಸೌರಶಕ್ತಿ ಚಾಲಿತ ಡ್ರೋನ್’ ಕಾರ್ಯನಿರ್ವಹಿಸಬಲ್ಲದು. ಸೇನಾಪಡೆ, ವಾಯುಪಡೆ ಮತ್ತು ನೌಕಾಪಡೆ ಈ ಡ್ರೋನ್ ಅನ್ನು ಬಳಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿವೆ. ಡ್ರೋನ್ ಎರಡು ರೀತಿಯ ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳ ಮೂಲಕ ತಲುಪಬೇಕಾದ ಗುರಿ ತಲುಪಿ ಸೂಕ್ಷ್ಮವಾಗಿ ವೀಕ್ಷಿಸುವ ಕೆಲಸ ಮಾಡುತ್ತದೆ. ‘ಸೌರಶಕ್ತಿ ಚಾಲಿತ ಡ್ರೋನ್’ ಭವಿಷ್ಯದ ತಂತ್ರಜ್ಞಾನಕ್ಕೆ ಹೊಸ ಸೇರ್ಪಡೆ ಎಂಬು ದನ್ನು ಮನಗೊಂಡಿರುವ ಮೂರು ಸೇನೆಗಳ ಅಧಿಕಾರಿಗಳು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮುಂದಿನ ಮಾತುಕತೆಗಳು ನಡೆಸಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಅನಿಲ್ ಚೌಹಾನ್ ನಮ್ಮ ಉತ್ಪಾದನಾ ತಂತ್ರಜ್ಞಾನ ಮತ್ತು ಪ್ರಯೋಗಾಲಯವನ್ನು ಪರಿಶೀಲನೆ ಕೂಡ ಮಾಡಿದ್ದಾರೆ ಎನ್ನಲಾಗಿದೆ.

12 ಗಂಟೆಗಳ ಕಾಲ ಕಾರ್ಯಾಚರಣೆ
ಪ್ರಸ್ತುತ ದೇಶದಲ್ಲಿ ಬಳಸುತ್ತಿರುವ ಡ್ರೋನ್‌ಗಳು 10 ರಿಂದ 20 ಕಿಲೋಮೀಟರ್ ವ್ಯಾಪ್ತಿಯನ್ನು ಮಾತ್ರ ಹೊಂದಿವೆ. ಅಲ್ಲದೇ ಅವುಗಳು ಎರಡರಿಂದ ಮೂರು ಗಂಟೆಗಳ ಕಾಲ ಮಾತ್ರ ಹಾರುತ್ತವೆ. ಆದರೆ, ತೇಜಸ್ವಾನ್ ಡ್ರೋನ್ 12 ಗಂಟೆಗಳ ಕಾಲ ಹಾರುವ ಮತ್ತು 150 ಕಿಲೋಮೀಟರ್ ದೂರ ವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಪ್ರಯೋಗಾತ್ಮಕವಾಗಿ ಸದಕ್ಕೆ ನಮ್ಮ ಸ್ಟಾರ್ಟ್‌ಅಪ್ ಕಂಪನಿಯಿಂದ ಕೆಲವು ‘ಸೌರಶಕ್ತಿ ಚಾಲಿತ ಡ್ರೋನ್’ ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಪ್ರಯೋಗ ಯಶಸ್ವಿ ಆಗಿದೆ. ಭಾರತೀಯ ಸೇನೆಯಿಂದ ಬಂದ ಆದೇಶದ ಪ್ರಕಾರ ನಾವು ಅವುಗಳನ್ನು ಸಿದ್ಧಪಡಿಸಿದ್ದೇವೆ. ಗಡಿಯಲ್ಲಿ ಕಣ್ಗಾವಲು, ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿಯ ಮೇಲ್ವಿಚಾರಣೆ ಮಾಡುವುದು, ವಿಪತ್ತು ಹಾಗೂ ನೈಸರ್ಗಿಕ ವಿಕೋಪದ ಸಮಯದಲ್ಲಿ ಸಂತ್ರಸ್ತರನ್ನು ಪತ್ತೆ ಹಚ್ಚುವುದು ಮತ್ತು ಅವರ ಸುಲಭ ರಕ್ಷಣೆಗೆ ಸಹಾಯ ಮಾಡಲು ಈ ಡ್ರೋನ್ ಪರಿಣಾಮಕಾರಿ. ಅಲ್ಲದೇ ಡ್ರೋನ್ ಮೂಲಕ ಗಡಿ ಪ್ರದೇಶಗಳಲ್ಲಿ ಭದ್ರತಾ ಗುಪ್ತಚರ ಮತ್ತು ಶತ್ರು ಚಟುವಟಿಕೆಗಳನ್ನು ಸಹ ಮೇಲ್ವಿಚಾರಣೆ ಮಾಡಬಹುದು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವು ಟರ್ಕಿ ಒದಗಿಸಿದ ಡ್ರೋನ್‌ಗಳನ್ನು ವ್ಯಾಪಕ ವಾಗಿ ಬಳಸಿಕೊಂಡಂತೆಯೇ, ನಮ್ಮ ಡ್ರೋನ್‌ಗಳನ್ನು ಭಾರತೀಯ ಸೈನ್ಯವು ಯಾವುದೇ ಕಾರ್ಯಾ ಚರಣೆ ಮತ್ತು ಶೋಧ ಕಾರ್ಯಾಚರಣೆಗೆ ಬಳಸಬಹುದು. ಬೇಡಿಕೆಗನುಗುಣವಾಗಿ ಮತ್ತಷ್ಟು ಉತ್ಪಾದನೆ ಮಾಡಲಾಗುವುದು. ಸದ್ಯಕ್ಕೆ ಇದರ ಬೆಲೆ ಇನ್ನು ನಿಗದಿ ಪಡಿಸಿಲ್ಲ.
ಗೂಗಲ್ ಪಿಕ್ಸೆಲ್ 10: ನೆಟ್‌ವರ್ಕ್ ಬೇಕಿಲ್ಲ ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲ ಎಂದರೆ ಯಾವುದೇ ಸಂಪರ್ಕ ಸಾಧಿಸಲು ಆಗುವು ದಿಲ್ಲ. ಇಂಟರ್ನೆಟ್ ಇಲ್ಲದೆ ಅಂತರ್ಜಾಲ ಪ್ರವೇಶಿಸಲು ಆಗುವುದಿಲ್ಲ. ಸದ್ಯ ನೂತನ ಮೊಬೈಲ್ ಮಾರುಕಟ್ಟೆಗೆ ಬಂದಿದ್ದು, ಸಿಗ್ನಲ್‌ಗಳಿಲ್ಲದೆಯೂ ಕರೆಗಳನ್ನು ಮಾಡಬ ಹುದು. ಇಂತಹ ಒಂದು ಫಿಚರ್ ಅನ್ನು ಗೂಗಲ್ ಇತ್ತೀಚೆಗೆ ಗೂಗಲ್ ಪಿಕ್ಸೆಲ್ 10 ಸರಣಿಯನ್ನು ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ತಂದಿದೆ.
ಹೌದು, ಸಿಗ್ನಲ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ವಾಟ್ಸ್‌ಪ್ ಮೂಲಕ ಧ್ವನಿ ಮತ್ತು ವಿಡಿಯೋ ಕರೆಗಳನ್ನು ಮಾಡಲು ಪಿಕ್ಸೆಲ್ ೧೦ ಈ ವೈಶಿಷ್ಟ್ಯದೊಂದಿಗೆ ಬರುವ ಮೊದಲ ಫೋನ್ ಆಗಿರುತ್ತದೆ ಎಂದು ಗೂಗಲ್ ಹೇಳಿದೆ. ಈ ತಿಂಗಳ ೨೦ ರಂದು ನಡೆದ ಮೇಡ್ ಬೈ ಗೂಗಲ್ ಕಾರ್ಯಕ್ರಮದಲ್ಲಿ ಪಿಕ್ಸೆಲ್ ೧೦ ಸರಣಿಯನ್ನು ಅನಾವರಣಗೊಳಿಸಿದ ಗೂಗಲ್, ಇತ್ತೀಚೆಗೆ ಈ ಫೋನ್‌ಗೆ ಈ ಹೊಸ ವೈಶಿಷ್ಟ್ಯವನ್ನು ಸೇರಿಸುತ್ತಿರುವುದಾಗಿ ಘೋಷಿಸಿದೆ.
ಗೂಗಲ್ ಪಿಕ್ಸೆಲ್ 10 ಆರಂಭಿಕ ಬೆಲೆ
ರು 79,999. ಈ ಫೋನ್ ಕೇವಲ ಒಂದು ಸ್ಟೋರೇಜ್ ರೂಪಾಂತರದಲ್ಲಿ ಮಾತ್ರ ಪ್ರಿ-ಆರ್ಡರ್‌ಗೆ ಲಭ್ಯವಿದೆ. ಗೂಗಲ್ ಪಿಕ್ಸೆಲ್ 10 ಪ್ರೊ ಮತ್ತು ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್ ಅನ್ನು ಕೂಡ ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ 6 ತಿಂಗಳು ಎಐ ತರಗತಿ
ಸಾಮ್ ಆಲ್ಟ್‌ಮನ್ ನೇತೃತ್ವದ ಓಪನ್‌ಎಐ, ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟುಕೊಂಡಿದ್ದು, ಸರಕಾರಿ ಶಾಲಾ ವಿದ್ಯಾರ್ಥಿಗಳು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ 6 ತಿಂಗಳ ಕಾಲ ಉಚಿತ ವಾಗಿ 5 ಲಕ್ಷ ಚಾಟ್ ಜಿಪಿಟಿ ಪರವಾನಗಿಗಳನ್ನು ನೀಡುವುದಾಗಿ ಹೇಳಿದೆ. ಎಐ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲದು.
ಇದು ವಿದ್ಯಾರ್ಥಿಗಳಿಗೆ ಆಜೀವಿಕ ಗುರು ಹಾಗೂ ಅಧ್ಯಯನ ಸಹಾಯಕರಾಗಿ ಮಾರ್ಪಡಬಹುದು. ಶಿಕ್ಷಕರಿಗೆ ಇದು ಪಾಠ ಯೋಜನೆಗಳಲ್ಲಿ ಹೆಚ್ಚು ಸಮಯ ಉಳಿಸಿ, ಬೋಧನೆಯ ತತ್ವಬದ್ಧ ಭಾಗಕ್ಕೆ ಗಮನಹರಿಸಲು ಅವಕಾಶ ನೀಡುತ್ತದೆ. ಈ ಯೋಜನೆ ಓಪನ್‌ಎಐ ಲರ್ನಿಂಗ್ ಅಕ್ಸಿಲರೇಟರ್ ಎಂಬ ಹೆಸರಿನಲ್ಲಿ ಭಾರತದಲ್ಲಿ ಪ್ರಥಮ ಕಾರ್ಯಕ್ರಮವಾಗಿ ನಡೆಯಲಿದೆ. ಸರಕಾರಿ ಶಾಲೆಗಳಲ್ಲಿ ಎಐ ಚಾಟ್‌ಜಿಪಿಟಿ ಪಾಠ ಯೋಜನೆ, ವಿದ್ಯಾರ್ಥಿಗಳ ತೊಡಗಿಸಿಕೊಂಡು ಓದುವಿಕೆ ಮತ್ತು ಫಲಿತಾಂಶ ಗಳನ್ನು ಉತ್ತಮಗೊಳಿಸಲು ನೆರವಾಗಲಿದೆ. ಎಐ ಸಂಸ್ಥೆಗಳು ಸ್ಟಡಿ ಮೋಡ್‌ನಂತಹ ಸಾಧನಗಳನ್ನು ಶಾಲಾ ಮಟ್ಟಕ್ಕೆ ತಲುಪಿಸಲು ಸಹಕರಿಸಲಿವೆ.
ಹೈದರಾಬಾದ್‌ನಲ್ಲಿ ಚಾಲಕ ರಹಿತ ಬಸ್!
ಹೈದರಾಬಾದ್‌ನ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತನ್ನ ಕ್ಯಾಂಪಸ್‌ನಲ್ಲಿ ಚಾಲಕ ರಹಿತ ಬಸ್‌ಗಳನ್ನು ನಿರ್ವಹಿಸಲು ಹೊಸ ಎಐ-ಆಧಾರಿತ ಸಂಚರಣೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ. ಈ ಯೋಜನೆಯನ್ನು ಸಂಸ್ಥೆಯ ಟೆಕ್ನಾಲಜಿ ಇನ್ನೋವೇಶನ್ ಹಬ್ ಆನ್ ಅಟಾನಮಸ್ ನ್ಯಾವಿಗೇಷನ್ ಟಿಹಾನ್ ನಿರ್ವಹಿಸುತ್ತಿದೆ. ಚಾಲಕ ರಹಿತ ಬಸ್ ಸೇವೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕ್ಯಾಂಪಸ್‌ನ ವಿವಿಧ ಸ್ಥಳಗಳನ್ನು ತಲುಪಲು ಸಹಾಯ ಮಾಡುತ್ತಿದೆ.
ಪ್ರಸ್ತುತ ಈ ಚಾಲಕ ರಹಿತ ವಾಹನವನ್ನು ಐಐಟಿ ಹೈದರಾಬಾದ್ ಕ್ಯಾಂಪಸ್‌ನಲ್ಲಿ ಮಾತ್ರ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕ ರಸ್ತೆಗಳಲ್ಲಿ ಬಳಸಲಾಗುತ್ತಿಲ್ಲ. ಬಸ್ ಇಲ್ಲಿಯವರೆಗೆ 10000ಕ್ಕೂ ಹೆಚ್ಚು ಪ್ರಯಾಣಿಕರನ್ನು ಯಶಸ್ವಿಯಾಗಿ ಸಾಗಿಸಿದೆ. ಅವರಲ್ಲಿ ಶೇ.90ರಷ್ಟು ಜನರು ಅದರ ಕಾರ್ಯ ವನ್ನು ಮೆಚ್ಚಿದ್ದಾರೆ. ಐಐಟಿ ಹೈದರಾಬಾದ್‌ನ ಕ್ಯಾಂಪಸ್ ನಲ್ಲಿ ಈ ವಾಹನಗಳ ಯಶಸ್ವಿ ಕಾರ್ಯಾ ಚರಣೆಯು ಸ್ವಯಂಚಾಲಿತ ಸಾರ್ವಜನಿಕ ಸಾರಿಗೆಯತ್ತ ಭಾರತದ ಪ್ರಯಾಣಕ್ಕೆ ಒಂದು ಮೈಲಿ ಗಲ್ಲು. ಯೋಜನೆಯು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದರೆ, ಭವಿಷ್ಯ ದಲ್ಲಿ ಇತರ ಭಾರತೀಯ ನಗರಗಳಲ್ಲಿ ಚಾಲಕ ರಹಿತ ಸಾರಿಗೆ ಸೇವೆ ಆರಂಭಿಸಲು ಚಿಂತನೆ ನಡೆಸಲಾಗಿದೆ.