ಬಂಡೀಪುರ ಸಫಾರಿಗೆ ಇನ್ಮುಂದೆ ದುಬಾರಿ; ಪ್ರವೇಶ ಶುಲ್ಕದಲ್ಲಿ ಭಾರಿ ಏರಿಕೆ
Bandipur Safari: ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಪ್ರವೇಶ ಶುಲ್ಕ ಹೆಚ್ಚಿಸಿ ಕರ್ನಾಟಕ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಸಫಾರಿ ಶುಲ್ಕ, ಖಾಸಗಿ ವಾಹನ, ಕ್ಯಾಮರಾ ಬಳಕೆ ಸೇರಿ ಹಲವು ಸೇವೆಗಳ ಶುಲ್ಕ ಬಹುತೇಕ ದ್ವಿಗುಣಗೊಂಡಿದ್ದು, ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ.