Actor Darshan: ದರ್ಶನ್ ಜೈಲಿಗೆ, ಪತ್ನಿ ವಿಜಯಲಕ್ಷ್ಮಿಯಿಂದ ಒಡೆದ ಹೃದಯದ ಪೋಸ್ಟ್
Social Media: ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪ್ರಾಣಿಗಳನ್ನು ನೋಡುತ್ತ ನಿಂತ ದರ್ಶನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು, ಹೃದಯ ಒಡೆದಿದೆ ಎಂದು ಅರ್ಥ ಕೊಡುವ ಇಮೋಜಿಯನ್ನು ಜೊತೆಗೆ ಹಂಚಿಕೊಂಡಿದ್ದಾರೆ. ಫ್ಯಾನ್‌ಗಳು ಧೈರ್ಯ ತುಂಬಿಂದ್ದಾರೆ.


ಬೆಂಗಳೂರು: ನಟ ದರ್ಶನ್ (Actor Darshan) ಜೈಲಿಗೆ ತೆರಳಿರುವ ಹಿನ್ನೆಲೆಯಲ್ಲಿ, ದುಃಖಿತರಾಗಿರುವ ಅವರ ಪತ್ನಿ ವಿಜಯಲಕ್ಷ್ಮಿ (Vijayalkshmi) ಅವರು ಒಡೆದ ಹೃದಯದ ಎಮೋಜಿಯನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ತಮ್ಮ ಫಾರಂ ಹೌಸ್‌ನಲ್ಲಿ ದರ್ಶನ್ ತಾವು ಸಾಕಿದ ಪ್ರಾಣಿಗಳ ನಡುವೆ ವಾಕಿಂಗ್ ಮಾಡುತ್ತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಫ್ಯಾನ್‌ಗಳು ʼಸ್ಟೇ ಸ್ಟ್ರಾಂಗ್ʼ ಎಂದು ವಿಜಯಲಕ್ಷ್ಮಿ ಅವರಿಗೆ ಧೈರ್ಯ ತುಂಬಿದ್ದಾರೆ.
ಕಳೆದ ಡಿಸೆಂಬರ್‌ನಿಂದ ಮೊನ್ನೆಯವರೆಗೂ ಪತಿ ದರ್ಶನ್ ತೂಗುದೀಪ ಜೊತೆ ವಿಜಯಲಕ್ಷ್ಮೀ ಅವರು ಹೆಚ್ಚಿನ ಸಮಯ ಕಳೆದಿದ್ದರು. ರಾಜಸ್ಥಾನ ಹಾಗೂ ವಿದೇಶದಲ್ಲಿ 'ಡೆವಿಲ್' ಸಿನಿಮಾ ಶೂಟಿಂಗ್ ಇದ್ದಾಗಲೂ ಕೂಡ ಅಲ್ಲಿ ವಿಜಯಲಕ್ಷ್ಮೀ ಅವರು ಹೋಗಿದ್ದರು. ಕಾಮಖ್ಯ ದೇವಾಲಯಕ್ಕೂ ಜೊತೆಯಾಗಿ ಭೇಟಿ ನೀಡಿದ್ದರು. ಹೊಸಕೆರೆಹಳ್ಳಿಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮೀ ಮನೆ ಇದ್ದರೆ, ಆರ್ ಆರ್ ನಗರದಲ್ಲಿ ದರ್ಶನ್ ಮನೆಯಿದೆ. ಜೈಲಿಗೆ ಹೋಗಿ ಬಂದಾಗಿನಿಂದ ದರ್ಶನ್ ಅವರು ಪತ್ನಿ ಜೊತೆಗೆ ಇದ್ದಿದ್ದೇ ಜಾಸ್ತಿ. ಈಗ ಮತ್ತೆ ದರ್ಶನ್ ಜೈಲಿಗೆ ಹೋಗಿದ್ದು, ವಿಜಯಲಕ್ಷ್ಮೀ ಮನಸ್ಸು ಕದಲಿಸಿದೆ.
ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪ್ರಾಣಿಗಳನ್ನು ನೋಡುತ್ತ ನಿಂತ ದರ್ಶನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು, ಹೃದಯ ಒಡೆದಿದೆ ಎಂದು ಅರ್ಥ ಕೊಡುವ ಇಮೋಜಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಅವರು ಜೈಲಿಗೆ ಹೋಗಿರೋದು ಬೇಸರ ತಂದಿದೆ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿದ್ದಾಗಲೂ ಅವರು ವಾರಕ್ಕೊಮ್ಮೆ ಜೈಲಿಗೆ ಹೋಗಿ ಗಂಡನನ್ನು ನೋಡಿಕೊಂಡು ಬರುತ್ತಿದ್ದರು.
ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದ ಜೈಲಿನಲ್ಲಿ ದರ್ಶನ್; ನಟನ ವಿಚಾರಣಾಧೀನ ಕೈದಿ ನಂಬರ್ 73....ಎಷ್ಟು ಗೊತ್ತಾ?