Mansi Joshi: ಕೃಷ್ಣ ಜನ್ಮಾಷ್ಟನಿಯಂದು ರಾಧೆಯ ಅವತಾರ ತಾಳಿದ ಮಾನಸಿ ಜೋಶಿ
ಕನ್ನಡ ಸೇರಿದಂತೆ ತೆಲುಗು ತಮಿಳು ಹಾಗೂ ಮಲಿಯಾಳಂ ಭಾಷೆಯ ಕಿರುತೆರೆಯಲ್ಲಿ ಚಿರಪರಿಚಿತರಾದ ಮಾನಸಿ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಇವರು ರಾಧೆಯ ಗೆಟಪ್ನಲ್ಲಿ ವಿಡಿಯೋ ಶೂಟ್ ಮಾಡಿಸಿ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Manasi Joshi

ಇಂದು ಕೃಷ್ಣ ಹುಟ್ಟಿದ ದಿನ.. ಹೀಗಾಗಿ ಈ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಆಚರಣೆ ಮಾಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ವಿಶೇಷವಾಗಿ ಮುದ್ದಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಹೀಗಿರುವಾಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರವನ್ನ ನಿರ್ವಹಿಸಿದವರು ಮಾನಸಿ ಜೋಶಿ (Manasa Joshi) ಈ ಕೃಷ್ಣ ಜನ್ಮಾಷ್ಟನಿಯಂದು ರಾಧೆಯ ಅವತಾರ ತಾಳಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಸೇರಿದಂತೆ ತೆಲುಗು ತಮಿಳು ಹಾಗೂ ಮಲಿಯಾಳಂ ಭಾಷೆಯ ಕಿರುತೆರೆಯಲ್ಲಿ ಚಿರಪರಿಚಿತರಾದ ಮಾನಸಿ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಇವರು ರಾಧೆಯ ಗೆಟಪ್ನಲ್ಲಿ ವಿಡಿಯೋ ಶೂಟ್ ಮಾಡಿಸಿ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಜೊತೆಗೆ ರಾಧೆಯಿಲ್ಲದೆ ಕೃಷ್ಣನು ಅಪೂರ್ಣ, ಕೃಷ್ಣನಿಲ್ಲದೆ ರಾಧೆಯು ಅಪೂರ್ಣ. ರಾಧೇ ರಾಧೇ ಎಂದು ಬರೆದುಕೊಂಡಿದ್ದಾರೆ.
ಇದೇ ವರ್ಷದ ಫೆಬ್ರವರಿ 16 ರಂದು ಮಾನಸಿ ಅವರು ರಾಘವ್ ಜೊತೆ ಅದ್ಧೂರಿ ವಿವಾಹ ಆಗಿದ್ದರು. ಇವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಈ ಜೋಡಿಯ ಮದುವೆಗೆ ಮಾನ್ಸಿ ಕುಟುಂಬ ಒಪ್ಪಿತ್ತು. ಆದ್ರೆ ಕೆಲ ಕಾರಣಗಳಿಂದ ರಾಘವ್ ಅವರ ಕುಟುಂಬ ಮದುವೆ ನಿರಾಕರಿಸಿತ್ತಂತೆ. ಆದಾಗಲೇ ಪ್ರೀತಿಯಿಲ್ಲಿ ಬಿದ್ದಿದ್ದ ಈ ಜೋಡಿ ಇದೀಗ ಹಿರಿಯರನ್ನ ಒಪ್ಪಿಸಿ ಮದುವೆಯಾಯಿತು.
ಮಾನಸಿ ಜೋಶಿ ಬಿಳಿ ಹೆಂಡ್ತಿ ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ಸ್ಟಾರ್ ಸುವರ್ಣ ವಾಹಿನಿಯ ಈ ಧಾರಾವಾಹಿಯಲ್ಲಿ ಮಾನಸಿ, ರಮ್ಯ ಪಾತ್ರಧಾರಿಯಾಗಿ ನಟಿಸಿದ್ದರು. ನಂತರ ಕಲರ್ಸ್ ಕನ್ನಡದ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣ್ ತಂಗಿ ಅನ್ವಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಉದಯ ವಾಹಿನಿಯ ನಾಯಕಿ ಧಾರಾವಾಹಿಯಲ್ಲಿ ವಿಲನ್ ಸೌಜನ್ಯ ಆಗಿ ನಟಿಸಿದ್ದರು.
Bhagya Lakshmi Serial: ಬಿಗ್ ಟ್ವಿಸ್ಟ್: ಒಂದು ವಾರ ಭಾಗ್ಯ ರೀತಿ ಜೀವನ ಮಾಡಲು ಹೊರಟ ಆದೀಶ್ವರ್