ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada New Movie: ಹೊಸಕಥೆ ಆಧಾರಿತ ʼದಿʼ ಚಿತ್ರ ಮೇ 16ರಂದು ತೆರೆಗೆ

Kannada New Movie: ವಿನಯ್ ವಾಸುದೇವ್ ನಿರ್ದೇಶನದ ಜತೆಗೆ ನಾಯಕನಾಗೂ ನಟಿಸಿರುವ ಹೊಸತಂಡದ ಹೊಸಪ್ರಯತ್ನ ʼದಿʼ ಚಿತ್ರದ ಬಿಡುಗಡೆ ದಿನಾಂಕವನ್ನು ಕನ್ನಡ ಚಿತರಂಗದ ಜನಪ್ರಿಯ ಸಂಭಾಷಣೆಗಾರ ಮಾಸ್ತಿ ಬಿಡುಗಡೆ ಮಾಡಿದ್ದಾರೆ. ಹೊಸಕಥೆ ಆಧರಿಸಿರುವ ಈ ಚಿತ್ರ ಮೇ 16 ರಂದು ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ಹೊಸಕಥೆ ಆಧಾರಿತ ʼದಿʼ ಚಿತ್ರ ಮೇ 16ರಂದು ತೆರೆಗೆ

Profile Siddalinga Swamy May 1, 2025 1:52 PM

ಬೆಂಗಳೂರು: ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವಿನಯ್ ವಾಸುದೇವ್ ನಿರ್ದೇಶನದ ಜತೆಗೆ ನಾಯಕನಾಗೂ ನಟಿಸಿರುವ ಹೊಸತಂಡದ ಹೊಸಪ್ರಯತ್ನ ʼದಿʼ ಚಿತ್ರದ (Kannada New Movie) ಬಿಡುಗಡೆ ದಿನಾಂಕವನ್ನು ಕನ್ನಡ ಚಿತರಂಗದ ಜನಪ್ರಿಯ ಸಂಭಾಷಣೆಗಾರ ಮಾಸ್ತಿ ಅವರು ಅನೌನ್ಸ್ ಮಾಡಿದ್ದಾರೆ. ಹೊಸಕಥೆ ಆಧರಿಸಿರುವ ಈ ಚಿತ್ರ ಮೇ 16 ರಂದು ಬಿಡುಗಡೆಯಾಗಲಿದೆ. ವಿಜಯ್ ಸಿನಿಮಾಸ್ ಅವರು ವಿಶಾಲ ಕರ್ನಾಟಕಕ್ಕೆ ಈ ಸಿನಿಮಾವನ್ನು ಹಂಚಿಕೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ವಿನಯ್ ವಾಸುದೇವ್, ಕಾರ್ಯಕಾರಿ ನಿರ್ಮಾಪಕ ಸತೀಶ್ ಕುಮಾರ್ ಟಿ.ಎಲ್. ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿ ಮಾತನಾಡಿದ ಮಾಸ್ತಿ ಅವರು, ಹೊಸ ರೀತಿಯ ಪ್ರಯತ್ನದೊಂದಿಗೆ ಹೊಸಬರು ಚಿತ್ರರಂಗ ಪ್ರವೇಶಿಸಬೇಕು. ಚಿತ್ರದ ತುಣುಕು ನೋಡಿದಾಗ ಈ ಚಿತ್ರ ಸಹ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ ಅನಿಸಿತು. ಕನ್ನಡ ಜನತೆ ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಈ ವೇಳೆ ನಿರ್ದೇಶಕ ವಿನಯ್ ವಾಸುದೇವ್, ಕಾರ್ಯಕಾರಿ ನಿರ್ಮಾಪಕ ಸತೀಶ್ ಕುಮಾರ್ ಟಿಎಲ್ ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.‌

ಈ ಸುದ್ದಿಯನ್ನೂ ಓದಿ | Oxidised Jewel Fashion: ಡಿಫರೆಂಟ್‌ ಲುಕ್‌ ನೀಡುವ ಆಕ್ಸಿಡೈಸ್ಡ್‌ ಜ್ಯುವೆಲರಿಗಳಿವು

ಅಲೆನ್ ಭರತ್ ಛಾಯಾಗ್ರಹಣ, ಯು.ಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ ಹಾಗೂ ಸಿದ್ದಾರ್ಥ್ ಆರ್ ನಾಯಕ್ ಅವರ ಸಂಕಲನವಿರುವ 'ದಿʼ ಚಿತ್ರದ ತಾರಾಬಳಗದಲ್ಲಿ ವಿನಯ್ ವಾಸುದೇವ್, ದಿಶಾ ರಮೇಶ್, ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಬಲಾ ರಾಜವಾಡಿ, ಕಾಮಿಡಿ ಕಿಲಾಡಿ ಚಂದ್ರು, ಡಾಲಾ ಶರಣ್, ಕಲಾರತಿ ಮಹಾದೇವ ಮುಂತಾದವರಿದ್ದಾರೆ.