ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mango Pachcha Movie: ಸಂಚಿತ್ ಸಂಜೀವ್ ಅಭಿನಯದ ʼಮ್ಯಾಂಗೋ ಪಚ್ಚʼ ಸಿನಿಮಾದ ಟೀಸರ್ ರಿಲೀಸ್

Mango Pachcha Movie: ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ಬಹುನಿರೀಕ್ಷೆಯ ಚೊಚ್ಚಲ ʼಮ್ಯಾಂಗೋ ಪಚ್ಚʼ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದ ಟೀಸರ್ ಅನ್ನು ಕಿಚ್ಚ ಸುದೀಪ್ ಅವರೇ ರಿಲೀಸ್ ಮಾಡಿದ್ದಾರೆ. ʼಮ್ಯಾಂಗೋ ಪಚ್ಚʼ ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್ ಸಿನಿಮಾ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ಸಂಚಿತ್ ಸಂಜೀವ್ ಅಭಿನಯದ ʼಮ್ಯಾಂಗೋ ಪಚ್ಚʼ ಸಿನಿಮಾದ ಟೀಸರ್ ರಿಲೀಸ್

-

Profile Siddalinga Swamy Sep 30, 2025 2:51 PM

ಬೆಂಗಳೂರು: ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ (Sanchith Sanjeev) ಅಭಿನಯದ ಬಹುನಿರೀಕ್ಷೆಯ ಚೊಚ್ಚಲ ʼಮ್ಯಾಂಗೋ ಪಚ್ಚʼ ಸಿನಿಮಾದ (Mango Pachcha Movie) ಟೀಸರ್ ರಿಲೀಸ್ ಆಗಿದೆ. ಅಕ್ಕನ ಮಗ ಸಂಚಿತ್ ಚೊಚ್ಚಲ ಸಿನಿಮಾದ ಟೀಸರ್ ಅನ್ನು ಕಿಚ್ಚ ಸುದೀಪ್ ಅವರೇ ರಿಲೀಸ್ ಮಾಡಿದ್ದಾರೆ. ಆಯುಧ ಪೂಜೆಯ ದಿನವೇ ಸಂಚಿತ್ ಮೊದಲ ಸಿನಿಮಾದ ಟೀಸರ್ ರಿಲೀಸ್ ಆಗಿರುವುದು ಚಿತ್ರರಂಗಕ್ಕೆ ಹೊಸ ಆಯುಧ ಸಿಕ್ಕಂತೆ ಆಗಿದೆ. ʼಮ್ಯಾಂಗೋ ಪಚ್ಚʼ ಮೈಸೂರು ಭಾಗದ ಕಥೆ. ಈ ದಸರಾ ಸಂಭ್ರಮದಲ್ಲೇ ಮೈಸೂರು ಭಾಗದ ಕಥೆಯ ಝಲಕ್ ತೋರಿಸಿರುವುದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಇಂಟ್ರಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದ್ದು ಸಂಚಿತ್ ರೆಟ್ರೋ ಲುಕ್‌ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಭರ್ಜರಿ ಟೀಸರ್ ಅಭಿಮಾನಿಗಳ ನಿದ್ದೆಗೆಡಿಸುವಂತಿದೆ.



ʼಮ್ಯಾಂಗೋ ಪಚ್ಚʼ ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್ ಸಿನಿಮಾ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ಪಕ್ಕ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಇದಾಗಿದ್ದು ಸಂಚಿತ್ ಮೊದಲ ಪುಟ್ಟ ಟೀಸರ್‌‌ನಲ್ಲೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ. ಮಾವನ ಹಾಗೆ ಸಂಚಿತ್ ಕೂಡ ಚಿತ್ರರಂಗದಲ್ಲಿ ಆರಡಿ ಕಟೌಟ್ ಆಗಿ ಮೆರೆಯುವ ಎಲ್ಲಾ ಲಕ್ಷಣಗಳು ಈ ಟೀಸರ್‌ನಲ್ಲಿ ಗೋಚರಿಸುತ್ತಿದೆ.

ಅಂದಹಾಗೆ ʼಮ್ಯಾಂಗೋ ಪಚ್ಚʼ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ʼಮ್ಯಾಗೋ ಪಚ್ಚʼ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ.

ಸಂಚಿ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ಈ ಸಿನಿಮಾದಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ನಟಿ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಾಹಣ, ವಿಶ್ವಾಸ್ ಆರ್ಟ್ ವರ್ಕ್ ಚಿತ್ರಕ್ಕಿದೆ.

ಈ ಸುದ್ದಿಯನ್ನೂ ಓದಿ | Navaratri Nailart 2025: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಯ್ತು ನವರಾತ್ರಿ ನೇಲ್ ಆರ್ಟ್