ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜೋ ರೂಟ್‌ 18000 ರನ್‌ ಗಳಿಸಿ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿಯಲಿದ್ದಾರೆಂದ ಮಾಂಟಿ ಪನೇಸರ್‌!

Monty Panesar on Joe Root: ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಟೆಸ್ಟ್‌ ರನ್‌ಗಳ ದಾಖಲೆಯನ್ನು ಇಂಗ್ಲೆಂಡ್‌ ಮಾಜಿ ನಾಯಕ ಜೋ ರೂಟ್‌ ಮುರಿಯಲಿದ್ದಾರೆಂದು ಆಂಗ್ಲರ ಸ್ಪಿನ್‌ ದಿಗ್ಗಜ ಮಾಂಟಿ ಪನೇಸರ್‌ ಭವಿಷ್ಯ ನುಡಿದಿದ್ದಾರೆ. ಜೋ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 18000 ರನ್‌ಗಳನ್ನು ದಾಖಲಿಸಿದ್ದಾರೆಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಚಿನ್‌ ದಾಖಲೆಯನ್ನು ಜೋ ರೂಟ್‌ ಮುರಿಯಲಿದ್ದಾರೆ: ಪನೇಸರ್‌!

ಸಚಿನ್‌ ದಾಖಲೆಯನ್ನು ಜೋ ರೂಟ್‌ ಮುರಿಯಲಿದ್ದಾರೆಂದ ಮಾಂಟಿ ಪನೇಸರ್‌.

Profile Ramesh Kote Aug 7, 2025 4:38 PM

ನವದೆಹಲಿ: ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಜೋ ರೂಟ್‌ (Joe Root) ಅವರ ಬಗ್ಗೆ ಆಂಗ್ಲರ ಸ್ಪಿನ್‌ ದಿಗ್ಗಜ ಮಾಂಟಿ ಪನೇಸರ್‌ (Monty Panesar) ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ. ಜೋ ರೂಟ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 18000 ರನ್‌ಗಳನ್ನು ಕಲೆ ಹಾಕಲಿದ್ದಾರೆ ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಟೆಸ್ಟ್‌ ರನ್‌ಗಳ ದಾಖಲೆಯನ್ನು ರೂಟ್‌ ಮುರಿಯಲಿದ್ದಾರೆಂದು ಪನೇಶರ್‌ ಭವಿಷ್ಯ ನುಡಿದಿದ್ದಾರೆ. ಜೋ ರೂಟ್‌ ಭಾರತ ವಿರುದ್ಧದ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದ ವೇಳೆ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ (13,378) ಅವರ ದಾಖಲೆಯನ್ನು ಮುರಿದಿದ್ದರು.

ಜೋ ರೂಟ್‌ ಅವರು ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 13543 ರನ್‌ಗಳನ್ನು ಕಲೆ ಹಾಕಿದ್ದಾರೆ. ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಸದ್ಯ 15921 ರನ್‌ಗಳನ್ನು ಕಲೆ ಅಗ್ರ ಸ್ಥಾನದಲ್ಲಿದ್ದಾರೆ. ಜೋ ರೂಟ್‌ 2,378 ರನ್‌ಗಳನ್ನು ಗಳಿಸಿದರೆ, ಸಚಿನ್‌ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಹಾಗಾಗಿ ಮುಂದಿನ ಮೂರು ವರ್ಷಗಳಲ್ಲಿ ಜೋ ರೂಟ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೆ, ಖಂಡಿತವಾಗಿಯೂ ಭಾರತದ ದಿಗ್ಗಜನನ್ನು ಹಿಂದಿಕ್ಕಲಿದ್ದಾರೆ.

ಶುಭಮನ್‌ ಗಿಲ್‌ ಔಟ್‌! IND vs ENG ಸಂಯೋಜನೆಯ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌

ಹಿಂದೂಸ್ಥಾನ್‌ ಟೈಮ್ಸ್‌ ಜೊತೆ ಮಾತನಾಡಿದ ಮಾಂಟಿ ಪನೇಸರ್‌, "ಅವರು ಆ ದಾಖಲೆಯನ್ನು ಮುರಿಯುತ್ತಾರೆ ಮತ್ತು ಅವರು ದಿಗ್ಗಜನನ್ನು (ಸಚಿನ್‌ ತೆಂಡೂಲ್ಕರ್‌) ಹಿಂದಿಕ್ಕಲಿದ್ದಾರೆ. ಅವರು 18,000 ಟೆಸ್ಟ್ ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರಿಗೆ ಕೇವಲ 34 ವರ್ಷ ಸರಿ ಇದೆಯಾ? ಅವರಿಗೆ 34 ವರ್ಷ, ಅವರಿಗೆ ಇನ್ನೂ 6 ವರ್ಷಗಳು ಬಾಕಿ ಇವೆ. 6 ವರ್ಷಗಳಲ್ಲಿ ಅವರು ಬಹುಶಃ ಇನ್ನೂ 4,000-5,000 ಟೆಸ್ಟ್ ರನ್ ಗಳಿಸುತ್ತಾರೆ. ಆದ್ದರಿಂದ, ತೆಂಡೂಲ್ಕರ್ 40 ರವರೆಗೆ ಆಡಿದ್ದರು. ಹಾಗಾಗಿ ಜೋ ರೂಟ್‌ ಕೂಡ ಬಹುಶಃ 40ರ ವಯಸ್ಸಿನವರೆಗೂ ಆಡುತ್ತಾರೆ. ಹಾಗಾಗಿ ಸಚಿನ್‌ ಅವರ ಟೆಸ್ಟ್‌ ದಾಖಲೆಯನ್ನು ಮುರಿಯುತ್ತಾರೆ ಮತ್ತು ಅವರು ಅದನ್ನು ದಾಟುತ್ತಾರೆ. ಅವರು 18,000 ಟೆಸ್ಟ್ ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಭವಿಷ್ಯ ನುಡಿದಿದ್ದಾರೆ.

ಶುಭಮನ್‌ ಗಿಲ್‌ ಔಟ್‌! IND vs ENG ಸಂಯೋಜನೆಯ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌

ಜೋ ರೂಟ್ 2021 ರಿಂದ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ 61 ಪಂದ್ಯಗಳಿಂದ (111 ಇನಿಂಗ್ಸ್) 56.63ರ ಸರಾಸರಿಯಲ್ಲಿ 5720 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 22 ಶತಕಗಳು ಮತ್ತು 17 ಅರ್ಧಶತಕಗಳಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಇತಿಹಾಸದಲ್ಲಿ 69 ಪಂದ್ಯಗಳಿಂದ (126 ಇನಿಂಗ್ಸ್) 6080 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 21 ಶತಕಗಳು ಮತ್ತು 22 ಅರ್ಧಶತಕಗಳೊಂದಿಗೆ 52.86ರ ಸರಾಸರಿಯಲ್ಲಿ 69 ಪಂದ್ಯಗಳಿಂದ (126 ಇನಿಂಗ್ಸ್‌) 6080 ರನ್ ಗಳಿಸಿದ್ದಾರೆ.