Tamannaah Bhatia: ಮೊಡವೆಗೆ ಎಂಜಲೇ ರಾಮಬಾಣವಂತೆ! ತಮನ್ನಾ ಬ್ಯೂಟಿ ಸಿಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಿ
ನಟಿ ತಮನ್ನಾ ಅವರು ಕ್ಯೂಟ್ ಆಗಿದ್ದು ವಿಥೌಟ್ ಮೇಕಪ್‌ನಲ್ಲಿಯೂ ಬಹಳ ಸುಂದರವಾಗಿಯೇ ಕಾಣುತ್ತಾರೆ. ಹಾಗಾದರೆ ಅವರ ಗ್ಲೋಯಿಂಗ್ ಸ್ಕಿನ್‌ಗೆ ಕಾರಣ ಏನು? ನಟಿ ತಮನ್ನಾ ಕ್ಲಿಯರ್ ಸ್ಕಿನ್ ಹೊಂದಲು ಏನು ಮಾಡುತ್ತಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಏರ್ಪಡುತ್ತಿದೆ. ಈ ಒಂದು ಸೀಕ್ರೇಟ್ ಅನ್ನು ಅವರು ಇತ್ತೀಚೆಗಷ್ಟೇ ರಿವೀಲ್ ಮಾಡಿದ್ದಾರೆ. ಅವರ ಬ್ಯುಟಿ ಸೀಕ್ರೆಟ್ ವಿಚಾರ ಕೇಳಿ ಅಭಿಮಾನಿಗಳೇ ಶಾಕ್ ಆಗಿದ್ದಾರೆ.


ನವದೆಹಲಿ: ಮಿಲ್ಕಿ ಬ್ಯೂಟಿ ಎಂದಾಕ್ಷಣ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿ ಪಡೆದ ನಟಿ ತಮನ್ನಾ ಭಾಟಿಯ (Tamannaah Bhatia) ನೆನಪಾಗುತ್ತಾರೆ. 'ಬಾಹುಬಲಿ', 'ಸಿಕಂದರ್', 'ಒಡೆಲಾ2', 'ಬಬ್ಲಿ ಬೌನ್ಸರ್' ಸಿನಿಮಾ ಮೂಲಕ ಎಲ್ಲ ಪಾತ್ರಕ್ಕೂ ಜೀವತುಂಬಿ ಅದ್ಭುತವಾಗಿ ನಟಿಸಿ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ನಟಿ ತಮನ್ನಾ ಅವರು ಕ್ಯೂಟ್ ಆಗಿದ್ದು ವಿಥೌಟ್ ಮೇಕಪ್ ನಲ್ಲಿ ಯೂ ಬಹಳ ಸುಂದರವಾಗೇ ಕಾಣುತ್ತಾರೆ. ಹಾಗಾದರೆ ಅವರ ಗ್ಲೋವಿಂಗ್ ಸ್ಕಿನ್ ಗೆ ಕಾರಣ ಏನು?, ನಟಿ ತಮನ್ನಾ ಕ್ಲಿಯರ್ ಸ್ಕಿನ್ ಹೊಂದಲು ಏನು ಮಾಡುತ್ತಾರೆ ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆಗಳು ಏರ್ಪಡುತ್ತಿದೆ. ಈ ಒಂದು ಸೀಕ್ರೇಟ್ ಅನ್ನು ಅವರು ಇತ್ತೀಚೆಗಷ್ಟೇ ರಿವಿಲ್ ಮಾಡಿದ್ದಾರೆ. ಅವರ ಬ್ಯುಟಿ ಸೀಕ್ರೆಟ್ ವಿಚಾರ ಕೇಳಿ ಅಭಿಮಾನಿಗಳೇ ಶಾಖ್ ಆಗಿದ್ದಾರೆ.
ನಟಿ ತಮನ್ನಾ ಭಾಟಿಯ ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು ತಮ್ಮ ತ್ವಚೆಯ ಆರೈಕೆ ಮಾಡುವ ಕೆಲ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೊಡವೆ, ಗುಳ್ಳೆ, ಅಲರ್ಜಿ ಇತ್ಯಾದಿ ಆಗದಂತೆ ತ್ವಚೆಯ ಆರೈಕೆಗಾಗಿ ನಟಿ ತಮನ್ನಾ ಭಾಟಿಯ ಅವರು ಎಂಜಲು ಹಾಕುತ್ತಾರೆ ಎಂಬುದನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮೊಡವೆ ಇತ್ಯಾದಿ ಸಮಸ್ಯೆ ಪರಿಹಾರಕ್ಕೆ ನಾನು ಎಂಜಲನ್ನು ಬಳಸುತ್ತೇನೆ. ಬೆಳಿಗ್ಗೆ ,ಅದು ಬ್ರಷ್ ಮಾಡುವ ಮೊದಲು ಎಂಜಲನ್ನು ಹಚ್ಚಿಕೊಳ್ಳಬೇಕು. ಇದು ವೈಜ್ಞಾನಿಕ ದೃಷ್ಟಿಯಿಂದ ಕೂಡ ಉತ್ತಮವೇ ಆಗಿದೆ. ನಾನು ವೈದ್ಯೆಯಲ್ಲ ಆದರೆ ಇದು ನನ್ನ ವೈಯಕ್ತಿಕ ನಿಲುವಾಗಿದ್ದು ಇದರ ಹಿಂದೆಯೂ ವಿಜ್ಞಾನವಿದೆ ಎನ್ನುವುದು ನನ್ನ ನಂಬಿಕೆ. ಬೆಳಿಗ್ಗೆ ಎದ್ದಾಗ ನಿಮ್ಮ ಬಾಯಿಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಕೂಡಿರಲಿದ್ದು ಅದು ದೇಹಕ್ಕೆ ಆರೋಗ್ಯ ಪ್ರಯೋಜನೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:Hikora Movie: ನೀನಾಸಂ ಕಿಟ್ಟಿ ನಿರ್ದೇಶಿಸಿ, ನಟಿಸಿರುವ ʼಹಿಕೋರಾʼ ಚಿತ್ರದ ಟ್ರೇಲರ್ ಔಟ್
ನಮ್ಮ ದೇಹವು ನೈಸರ್ಗಿಕವಾಗಿ ಬ್ಯಾಕ್ಟೀರಿಯಾದ ವಿರುದ್ಧ ರಕ್ಷಣಾತ್ಮಕ ವ್ಯವಸ್ಥೆ ಹೊಂದಿದೆ. ಅದಕ್ಕಾಗಿಯೇ ನಮ್ಮ ಕಣ್ಣುಗಳಲ್ಲಿ ಲೋಳೆ ಇದೆ, ಅಂತೆಯೇ ನಮ್ಮ ಬಾಯಿಯಲ್ಲಿ ಕೂಡ ಆ್ಯಂಟಿ ಬ್ಯಾಕ್ಟೀರಿಯಾ ಇವೆ. ನೀವು ಬಾಯಿಯ ಉಗುಳನ್ನು ಬಳಸಿದರೆ, ಮೊಡವೆ ಕಡಿಮೆಯಾಗುತ್ತದೆ. ನಾನು ಕೂಡ ಇದೇ ಕ್ರಮ ಅನುಸರಿಸುತ್ತಿರುವುದಾಗಿ ನಟಿ ತಮನ್ನ ಭಾಟಿಯ ಅವರು ಸಂದರ್ಶ ನದಲ್ಲಿ ಹೇಳಿದ್ದಾರೆ.
ನಟಿ ತಮನ್ನಾ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತರತರಹದ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಬಳಕೆದಾರರೊಬ್ಬರು ಈ ಬಗ್ಗೆ ಕಾಮೆಂಟ್ ಹಾಕಿದ್ದು, ನಟಿ ತಮನ್ನಾ ಹೇಳುತ್ತಿರುವುದು ನಿಜ, ನಮ್ಮ ಎಂಜಲಿನಲ್ಲಿಯೂ ಉತ್ತಮ ಗುಣಾಂಶಗಳಿವೆ ಇದು ತ್ವಚೆ ಆರೈಕೆ ಜೊತೆಗೆ ಕಣ್ಣಿನ ಸೋಂಕು ಆದ ಸಂದರ್ಭದಲ್ಲೂ ಹಚ್ಚಬಹುದು ಎಂದು ಕಾಮೆಂಟ್ ಹಾಕಿದ್ದಾರೆ. ಸದ್ಯ ನಟಿ ತಮನ್ನಾ ಅವರು ರೇಂಜರ್ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಆ ಬಳಿಕ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೂ ಸಿನಿಮಾ ಮಾಡಲಿದ್ದಾರೆ.