ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akshaya Tritiya 2025: ಜಿಯೋ ಗೋಲ್ಡ್ 24ಕೆ ಡೇಸ್; ಶೇ.2ರವರೆಗೆ ಉಚಿತ ಡಿಜಿಟಲ್ ಚಿನ್ನ ಪಡೆಯುವ ಅವಕಾಶ

Akshaya Tritiya 2025: ಅಕ್ಷಯ ತೃತೀಯವನ್ನು ಇನ್ನಷ್ಟು ವಿಶೇಷ ಆಗಿಸುವುದಕ್ಕೆ ಗ್ರಾಹಕರು ಜಿಯೋ ಗೋಲ್ಡ್ 24ಕೆ ಡೇಸ್‌ನಲ್ಲಿ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು ಮತ್ತು ಹೆಚ್ಚುವರಿಯಾಗಿ ಉಚಿತ ಚಿನ್ನವನ್ನು ಪಡೆಯಬಹುದು. ಜಿಯೋ ಗೋಲ್ಡ್ 24ಕೆ ಡೇಸ್ ಎಂಬುದು ವಿಶೇಷ ಸಂದರ್ಭಗಳಲ್ಲಿ ಬರುವಂಥದ್ದಾಗಿದ್ದು, ಈ ಸಮಯದಲ್ಲಿ ಜಿಯೋ ಫೈನಾನ್ಸ್ ಮತ್ತು ಮೈ ಜಿಯೋ ಅಪ್ಲಿಕೇಷನ್‌ಗಳ ಬಳಕೆದಾರರು ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ವಿಶೇಷ ಕೊಡುಗೆಗಳಿಂದ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದೆ. ಈ ಕುರಿತ ವಿವರ ಇಲ್ಲಿದೆ.

ಅಕ್ಷಯ ತೃತೀಯ: ʼಜಿಯೋ ಗೋಲ್ಡ್ 24ಕೆ ಡೇಸ್ʼ ನಲ್ಲಿ ವಿಶೇಷ ಕೊಡುಗೆ!

Profile Siddalinga Swamy Apr 28, 2025 10:24 PM

ಮುಂಬೈ: ಇದೇ ಏಪ್ರಿಲ್ 30ನೇ ತಾರೀಖಿನಂದು ಅಕ್ಷಯ ತೃತೀಯ (Akshaya Trutiya) ಇದೆ. ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದು, ಇದು ಶಾಶ್ವತ ಸಮೃದ್ಧಿ ಮತ್ತು ಸಂಪತ್ತನ್ನು ಸಂಕೇತಿಸುತ್ತದೆ. ಈ ಸಂದರ್ಭವನ್ನು ಇನ್ನಷ್ಟು ವಿಶೇಷ ಆಗಿಸುವುದಕ್ಕೆ ಗ್ರಾಹಕರು ಜಿಯೋ ಗೋಲ್ಡ್ 24ಕೆ ಡೇಸ್‌ನಲ್ಲಿ (Jio Gold 24K Days) ಡಿಜಿಟಲ್ ಚಿನ್ನವನ್ನು ಖರೀದಿಸಬಹುದು ಮತ್ತು ಹೆಚ್ಚುವರಿಯಾಗಿ ಉಚಿತ ಚಿನ್ನವನ್ನು ಪಡೆಯಬಹುದು. ಜಿಯೋ ಗೋಲ್ಡ್ 24ಕೆ ಡೇಸ್ ಎಂಬುದು ವಿಶೇಷ ಸಂದರ್ಭಗಳಲ್ಲಿ ಬರುವಂಥದ್ದಾಗಿದೆ. ಈ ಸಮಯದಲ್ಲಿ ಜಿಯೋ ಫೈನಾನ್ಸ್ ಮತ್ತು ಮೈ ಜಿಯೋ ಅಪ್ಲಿಕೇಷನ್‌ಗಳ ಬಳಕೆದಾರರು ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ವಿಶೇಷ ಕೊಡುಗೆಗಳಿಂದ ಪ್ರಯೋಜನ ಪಡೆಯಬಹುದಾಗಿದೆ.

ಜಿಯೋ ಗೋಲ್ಡ್ 24K ಡೇಸ್ ಮೊದಲ ಎಡಿಷನ್ ಏಪ್ರಿಲ್ 29, 2025ರಿಂದ ಮೇ 5, 2025 ರವರೆಗೆ ಇರಲಿದ್ದು, 1,000 ರೂ.ಗಳಿಂದ 9,999 ರೂ. ಮೌಲ್ಯದ ಡಿಜಿಟಲ್ ಚಿನ್ನವನ್ನು ಖರೀದಿಸುವ ಗ್ರಾಹಕರು JIOGOLD1 ಎಂಬ ಆಫರ್ ಕೋಡ್ ಬಳಸಿ ಶೇಕಡಾ 1ರಷ್ಟು ಉಚಿತ ಚಿನ್ನವನ್ನು ಪಡೆಯುತ್ತಾರೆ.

10,000 ರೂಪಾಯಿಗಿಂತ ಹೆಚ್ಚಿನ ಖರೀದಿಗಳಿಗೆ ಗ್ರಾಹಕರು ಚೆಕ್ಔಟ್ ಸಮಯದಲ್ಲಿ ಪ್ರೋಮೋ ಕೋಡ್ JIOGOLDAT100 ಅನ್ನು ಬಳಸಿಕೊಂಡು ಶೇಕಡಾ 2ರಷ್ಟು ಉಚಿತ ಚಿನ್ನವನ್ನು ಪಡೆಯುತ್ತಾರೆ. ಈ ಕೊಡುಗೆಯು ಆಫರ್ ಅವಧಿಯಲ್ಲಿ ಪ್ರತಿ ಬಳಕೆದಾರರಿಗೆ 10 ವಹಿವಾಟುಗಳಿಗೆ ಮಾತ್ರ ಅನ್ವಯ ಆಗುತ್ತದೆ.

ಖರೀದಿಯ ಸಮಯದಿಂದ 72 ಗಂಟೆಗಳ ಒಳಗೆ ಗ್ರಾಹಕರು ಹೆಚ್ಚುವರಿ ಡಿಜಿಟಲ್ ಚಿನ್ನವನ್ನು ಪಡೆಯುತ್ತಾರೆ. ಒಬ್ಬ ಗ್ರಾಹಕರು ಪಡೆಯಬಹುದಾದ ಉಚಿತ ಚಿನ್ನದ ಗರಿಷ್ಠ ಮೌಲ್ಯ ರೂ. 21,000 ಮಾತ್ರ. ಈ ಕೊಡುಗೆಯು ಚಿನ್ನದ ಒಟ್ಟು ಖರೀದಿಗೆ ಮಾತ್ರ ಮಾನ್ಯ ಆಗಿರುತ್ತದೆ ಮತ್ತು ಚಿನ್ನದ ಎಸ್ಐಪಿ (SIP) ಗಳಲ್ಲಿ ಅಲ್ಲ. (ಆಫರ್ ನಿಯಮಗಳು ಮತ್ತು ಷರತ್ತುಗಳು: https://tinyurl.com/5cd7mm62)

ಈ ಸುದ್ದಿಯನ್ನೂ ಓದಿ : Star Summer Fashion: ನಟಿ ಕೃತಿ ಸನೋನ್‌ ಸಮ್ಮರ್‌ ಫ್ಯಾಷನ್‌ ಲವ್‌

ಡಿಜಿಟಲ್ ಚಿನ್ನವನ್ನು ಖರೀದಿಸಲು ಮತ್ತು ಅಂತಹ ಹೂಡಿಕೆಗಳನ್ನು ನಗದು, ಚಿನ್ನದ ನಾಣ್ಯಗಳು ಅಥವಾ ಚಿನ್ನದ ಆಭರಣಗಳ ರೂಪದಲ್ಲಿ ಪಡೆದುಕೊಳ್ಳಲು ಜಿಯೋ ಗೋಲ್ಡ್ ಸಂಪೂರ್ಣ ಡಿಜಿಟಲ್, ಸುರಕ್ಷಿತ ಮತ್ತು ತಡೆರಹಿತ ಅನುಭವವನ್ನು ಒದಗಿಸುತ್ತದೆ. ₹10 ರಿಂದ ಪ್ರಾರಂಭವಾಗುವ ಹೂಡಿಕೆಗಳೊಂದಿಗೆ ಗ್ರಾಹಕರು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಜಿಯೋ ಗೋಲ್ಡ್‌ನೊಂದಿಗೆ ಈ ಅಕ್ಷಯ ತೃತೀಯವನ್ನು ಇನ್ನಷ್ಟು ಸಮೃದ್ಧವಾಗಿ ಆಚರಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.