ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಮೇಲೆ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ; ಗೃಹ ಬಳಕೆಯ ಸಿಲಿಂಡರ್ ಬೆಲೆ ಎಷ್ಟಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾದ ಬಳಿಕ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 192 ರೂ. ಇಳಿಕೆಯಾಗಿದೆ. ಇದರಿಂದ ವಾಣಿಜ್ಯ ಸಿಲಿಂಡರ್ ದರ 2,930 ರೂ.ಗಳಿಂದ 2,738 ರೂ. ಗೆ ಇಳಿಕೆಯಾಗಿದೆ. ಇದರೊಂದಿಗೆ ವಾಯುಯಾನ ಟರ್ಬೈನ್ ಇಂಧನ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆ

ಸಂಗ್ರಹ ಚಿತ್ರ -

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ (Iran war) ಪ್ರಾರಂಭವಾದ ಮೇಲೆ ದಾಖಲೆ ಮಟ್ಟಕ್ಕೆ ತಲುಪಿದ್ದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG cylinder prices) ಬೆಲೆಯಲ್ಲಿ ಇದೀಗ ಎರಡನೇ ಬಾರಿಗೆ ಕೊಂಚ ಇಳಿಕೆಯಾಗಿದೆ. ಇದರೊಂದಿಗೆ ವಾಯುಯಾನ ಟರ್ಬೈನ್ ಇಂಧನ ಬೆಲೆ (aviation turbine fuel Prices) ಏರಿಕೆಯಾಗಿದೆ. ವಾಣಿಜ್ಯ ಎಲ್‌ಪಿಜಿ (LPG) ಬೆಲೆಗಳು ಸಿಲಿಂಡರ್‌ಗೆ 192 ರೂ. ಇಳಿಕೆಯಾಗಿದ್ದರೆ ವಾಯುಯಾನ ಟರ್ಬೈನ್ ಇಂಧನ ಬೆಲೆ ಲೀಟರ್‌ಗೆ 5 ರೂ. ಹೆಚ್ಚಳವಾಗಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಬಳಸುವ ವಾಣಿಜ್ಯ ಎಲ್‌ಪಿಜಿ 19 ಕೆಜಿ ಸಿಲಿಂಡರ್‌ ಬೆಲೆ ಶನಿವಾರ 192 ರೂ. ಇಳಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,930 ರೂ. ಗಳಿಂದ 2,738 ರೂ. ಗಳಿಗೆ ಇಳಿಕೆಯಾಗಿದೆ. ವಾಯುಯಾನ ಟರ್ಬೈನ್ ಇಂಧನ ಬೆಲೆಗಳು ಲೀಟರ್‌ಗೆ 5 ರೂ. ಹೆಚ್ಚಳವಾಗಿದ್ದು, ಇದರಿಂದ ಎಟಿಎಫ್ ದರಗಳು ಲೀಟರ್‌ಗೆ 110 ರೂ. ಗಳಿಂದ 115 ರೂ. ಗಳಿಗೆ ಏರಿಕೆಯಾಗಿದೆ.

Gold Price Today On 1st August 2026: ವೀಕೆಂಡ್‌ ಶಾಪಿಂಗ್‌ ಪ್ರಿಯರಿಗೆ ಸುದಿನ; ಚಿನ್ನದ ದರದಲ್ಲಿ ಭಾರಿ ಇಳಿಕೆ

ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ನಿಗದಿ ಪಡಿಸುವ ಪ್ರತಿ ತಿಂಗಳ ಮೊದಲ ದಿನ ಹೊಸ ದರ ನಿಗದಿಯಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ಮೇಲೆ ಇದೀಗ ಎರಡನೇ ಬಾರಿಗೆ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಕಳೆದ ಜುಲೈ 1ರಂದು 183.5 ರೂ. ಇಳಿಕೆಯಾಗಿದ್ದ ವಾಣಿಜ್ಯ ಎಲ್‌ಪಿಜಿ ದರಗಳಲ್ಲಿ ಇಂದು ಎರಡನೇ ಬಾರಿಗೆ ಕಡಿತವಾಗಿದೆ. ವಾಯುಯಾನ ಟರ್ಬೈನ್ ಇಂಧನ ಬೆಲೆಗಳು ಜುಲೈ 1ರಂದು ಕಡಿತವಾಗಿದ್ದು, ಇದೀಗ ಮತ್ತೆ ಏರಿಕೆಯಾಗಿದೆ.

ಜೂನ್‌ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ್ದ ವಾಣಿಜ್ಯ ಎಲ್‌ಪಿಜಿ ದರಗಳಲ್ಲಿ ಜುಲೈ 1 ಮತ್ತು ಆಗಸ್ಟ್ 1ರಂದು ಕಡಿತವಾಗಿದೆ. ಫೆಬ್ರವರಿ ಅಂತ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ದರಗಳು 19 ಕೆಜಿ ಸಿಲಿಂಡರ್‌ಗೆ 1,373 ರೂ. ಹೆಚ್ಚಳವಾಗಿದ್ದು, ಫೆಬ್ರವರಿಯಲ್ಲಿ 1,740.50 ರೂ. ಗಳಿಂದ ಜೂನ್‌ನಲ್ಲಿ 3,113.50 ರೂ. ಗಳಿಗೆ ತಲುಪಿತ್ತು. ಇದರೊಂದಿಗೆ 5 ಕೆಜಿಯ ಮಾರುಕಟ್ಟೆ ಬೆಲೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಗಳನ್ನು 808.50 ರೂ. ಗಳಿಂದ 762 ರೂ. ಗಳಿಗೆ ಇಳಿಸಲಾಗಿದೆ.

ಗೃಹ ಬಳಕೆಯ ಎಲ್‌ಪಿಜಿ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‌ ದರ 942 ರೂ. ಗಳಾಗಿವೆ. ಜೂನ್ 7 ರಂದು ದೇಶೀಯ ಎಲ್‌ಪಿಜಿಯ ಬೆಲೆಗಳನ್ನು ಕೊನೆಯದಾಗಿ 14.2 ಕೆಜಿ ಸಿಲಿಂಡರ್‌ಗೆ 29 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಳಿಕ ಮಾರ್ಚ್‌ನಲ್ಲಿ ಗರಿಷ್ಠ ದರ 60 ರೂ.ಗಳಷ್ಟು ಏರಿಕೆಯಾಗಿದ್ದವು.

ಕಾಮನ್ವೆಲ್ತ್ ಜಾವೆಲಿನ್ ಎಸೆತದಲ್ಲಿ ಅಚ್ಚರಿಯ ಕಂಚಿನ ಪದಕ ಗೆದ್ದ ಯಶ್ ವೀರ್ ಸಿಂಗ್ ಯಾರು?

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಅಧ್ಯಕ್ಷ ಎ.ಎಸ್. ಸಾಹ್ನಿ ಅವರು ಎಲ್ ಪಿಜಿ ದರದ ಕುರಿತು ಶುಕ್ರವಾರ ಮಾಹಿತಿ ನೀಡಿ, ದೇಶಿಯ ಸಿಲಿಂಡರ್ ದರಗಳು ತೀರಾ ಕಡಿಮೆ ಇರುವುದರಿಂದ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ತಲಾ 503 ರೂ. ನಷ್ಟವಾಗಿದೆ. ಕಳೆದ ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳವಾಗಿತ್ತು. ಲೀಟರ್‌ಗೆ ಸುಮಾರು ತಲಾ 7.50 ರೂ. ಗಳಷ್ಟು ಹೆಚ್ಚಳವಾದ ಬಳಿಕ ಜೂನ್, ಜುಲೈ ತಿಂಗಳಲ್ಲಿ ಬೆಲೆ ಸ್ಥಿರವಾಗಿತ್ತು ಎಂದು ಹೇಳಿದರು.