Stock Market: 2025 ಆಗಸ್ಟ್‌ನಲ್ಲಿ 5 ಡಿವಿಡೆಂಡ್ ಸ್ಟಾಕ್ಸ್ ಡಿಟೇಲ್ಸ್
ಡಿವಿಡೆಂಡ್‌ಗಳು ಎಂದರೆ ಹೂಡಿಕೆದಾರರಿಗೆ ನೇರವಾಗಿ (Stock Market) ಕಂಪನಿಯಿಂದ ಸಿಗುವ ಲಾಭ. ಕಂಪನಿಯು ತನ್ನ ಲಾಭದಲ್ಲಿ ಒಂದು ಅಂಶವನ್ನು ತನ್ನ ಷೇರುದಾರರಿಗೆ ನೀಡುತ್ತದೆ. ಈಗ ಆಗಸ್ಟ್‌ನಲ್ಲಿ ಡಿವಿಡೆಂಡ್ ನೀಡಲಿರುವ ಐದು ಕಂಪನಿಗಳ ಬಗ್ಗೆ ತಿಳಿದುಕೊಳ್ಳೋಣ.


ಕೇಶವಪ್ರಸಾದ. ಬಿ
ಮುಂಬೈ: ಡಿವಿಡೆಂಡ್‌ಗಳು ಎಂದರೆ ಹೂಡಿಕೆದಾರರಿಗೆ ನೇರವಾಗಿ (Stock Market) ಕಂಪನಿಯಿಂದ ಸಿಗುವ ಲಾಭ. ಕಂಪನಿಯು ತನ್ನ ಲಾಭದಲ್ಲಿ ಒಂದು ಅಂಶವನ್ನು ತನ್ನ ಷೇರುದಾರರಿಗೆ ನೀಡುತ್ತದೆ. ವ್ಯವಸ್ಥಿತವಾಗಿ ಒಂದು ಯೋಜನೆಯನ್ನು ರೂಪಿಸಿದರೆ, ಪ್ರತಿ ತಿಂಗಳು ಡಿವಿಡೆಂಡ್ ಮೂಲಕ ನೀವು ಕೂಡ ಸಾಕಷ್ಟು ಆದಾಯವನ್ನು ಪಡೆಯಬಹುದು. ಮತ್ತೊಂದು ಆದಾಯದ ಮೂಲವಾಗುತ್ತದೆ. ನಿವೃತ್ತರಿಗೂ ಇಳಿ ವಯಸ್ಸಿನಲ್ಲಿ ಡಿವಿಡೆಂಡ್ ಕೊಡುವ ಸ್ಟಾಕ್ಸ್ ಎಂದರೆ ಲಾಭದಾಯಕವಾಗಬಲ್ಲುದು.
ಈಗ ಆಗಸ್ಟ್‌ನಲ್ಲಿ ಡಿವಿಡೆಂಡ್ ನೀಡಲಿರುವ ಐದು ಕಂಪನಿಗಳ ಬಗ್ಗೆ ತಿಳಿದುಕೊಳ್ಳೋಣ.
- ಹಿಂದುಸ್ಥಾನ್ ಏರೊನಾಟಿಕ್ಸ್ ( HAL)
ಷೇರಿನ ದರ: 4,481/-
ಡಿವಿಡೆಂಡ್: 15/-
ರೆಕಾರ್ಡ್ ಡೇಟ್: ಆಗಸ್ಟ್ 21, 2025
ಹಿಂದೂಸ್ಥಾನ್ ಏರೊನಾಟಿಕ್ಸ್ ಬೆಂಗಳೂರು ಮೂಲದ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಯಾಗಿದೆ. 2024-25ರ ಸಾಲಿಗೆ ಪ್ರತಿ ಷೇರಿಗೆ 15 ರುಪಾಯಗಳ ಡಿವಿಡೆಂಡ್ ಅನ್ನು ಘೋಷಿಸಿದೆ. ಇದರ ರೆಕಾರ್ಡ್ ಡೇಟ್ 2025 ಆಗಸ್ಟ್ 21 ಆಗಿದೆ. ಈ ಹಿಂದೆ 2025 ಫೆಬ್ರವರಿಯಲ್ಲಿ ಕಂಪನಿಯು ಪ್ರತಿ ಷೇರಿಗೆ 25 ರುಪಾಯಿಗಳ ಮಧ್ಯಂತರ ಡಿವಿಡೆಂಡ್ ನೀಡಿತ್ತು.
ಎಚ್‌ಎಎಲ್ ತನ್ನ ಷೇರುದಾರರಿಗೆ ನಿರಂತರವಾಗಿ, ಪ್ರತಿ ವರ್ಷವೂ ಡಿವಿಡೆಂಡ್ ನೀಡುತ್ತಿದೆ. ಕಂಪನಿಯ ಆರ್ಥಿಕ ಆರೋಗ್ಯವೂ ಚೆನ್ನಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿಯು ಪ್ರತಿ ವರ್ಷ ಮಧ್ಯಂತರ ಮತ್ತು ಅಂತಿಮ ಡಿವಿಡೆಂಡ್‌ಗಳನ್ನು ನೀಡಿದೆ. ರೆಕಾರ್ಡ್ ಡೇಟ್ ಒಳಗಾಗಿ ಷೇರು ಖರೀದಿಸಿದವರಿಗೆ ಡಿವಿಡೆಂಡ್ ಸಿಗುತ್ತದೆ.
ಅಪೊಲೊ ಹಾಸ್ಪಿಟಲ್ಸ್
Apollo Hospitals
ಷೇರಿನ ದರ: 7,369/-
ಡಿವಿಡೆಂಡ್: 10/-
ರೆಕಾರ್ಡ್ ಡೇಟ್: 19 ಆಗಸ್ಟ್ 2025
ಅಪೊಲೊ ಹಾಸ್ಪಿಟಲ್ಸ್ ಪ್ರತಿ ಷೇರಿಗೆ 10 ರುಪಾಯಿಗಳ ಡಿವಿಡೆಂಡ್ ಅನ್ನು ಘೋಷಿಸಿದೆ. ಆಗಸ್ಟ್ 19ರಂದು ಇದರ ರೆಕಾರ್ಡ್ ಡೇಟ್ ಆಗಿದೆ. ಕಂಪನಿಯು ಫೆಬ್ರವರಿಯಲ್ಲಿ ಪ್ರತಿ ಷೇರಿಗೆ 9 ರುಪಾಯಿಗಳ ಮಧ್ಯಂತರ ಡಿವಿಡೆಂಡ್ ನೀಡಿತ್ತು.
ಅಪೊಲೊ ಹಾಸ್ಪಿಟಲ್ಸ್ 2003ರಿಂದ 27 ಸಲ ಡಿವಿಡೆಂಡ್ ನೀಡಿದೆ. ವರ್ಷಕ್ಕೆ ಸಾಮಾನ್ಯವಾಗಿ ಎರಡು ಸಲ ಡಿವಿಡೆಂಡ್ ನೀಡುತ್ತದೆ. ಫೆಬ್ರವರಿ ಮತ್ತು ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಕೊಡುತ್ತದೆ.
3.ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL)
ಷೇರಿನ ದರ: 422/-
ಡಿವಿಡೆಂಡ್: 10.50/-
ರೆಕಾರ್ಡ್ ಡೇಟ್: 14 ಆಗಸ್ಟ್ 2025
ಎಚ್‌ಪಿಸಿಎಲ್ ಪ್ರತಿ ಷೇರಿಗೆ 10.50/- ಡಿವಿಡೆಂಡ್ ಅನ್ನು ಘೋಷಿಸಿದೆ. ಚಾರಿತ್ರಿಕವಾಗಿ ಎಚ್‌ಪಿಸಿಎಲ್ ತನ್ನ ಷೇರುದಾರರಿಗೆ ಡಿವಿಡೆಂಡ್ ಅನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ.
4.ಗ್ರಾಸಿಮ್ ಇಂಡಸ್ಟ್ರೀಸ್
Grasim Industries
ಷೇರಿನ ದರ: 2,734/-
ಡಿವಿಡೆಂಡ್: 10/-
ರೆಕಾರ್ಡ್ ಡೇಟ್: 12, ಆಗಸ್ಟ್ 2025.
ಗ್ರಾಸಿಮ್ ಇಂಡಸ್ಟ್ರೀಸ್ 2024-25ರ ಸಾಲಿ ಅಂತಿಮ ಡಿವಿಡೆಂಡ್ ಅನ್ನು ನೀಡುತ್ತಿದೆ. ಆಗಸ್ಟ್ 12 ಇದರ ರೆಕಾರ್ಡ್ ಡೇಟ್ ಆಗಿದೆ. ಗ್ರಾಸಿಮ್ ಇಂಡಸ್ಟ್ರೀಸ್ ಕೂಡ ತನ್ನ ಷೇರುದಾರಿಗೆ ನಿರಂತರವಾಗಿ ಡಿವಿಡೆಂಡ್ ಕೊಡುತ್ತಾ ಬಂದಿದೆ.
5.ಪಿಐ ಇಂಡಸ್ಟ್ರೀಸ್
PI Industries
ಷೇರಿನ ದರ: 4,130/-
ಡಿವಿಡೆಂಡ್: 10/-
ರೆಕಾರ್ಡ್ ಡೇಟ್: 7 ಆಗಸ್ಟ್ 2025
ಪಿಐ ಇಂಡಸ್ಟ್ರೀಸ್ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 10/- ಡಿವಿಡೆಂಡ್ ಘೋಷಿಸಿದೆ. ಆಗಸ್ಟ್ 7 ರೆಕಾರ್ಡ್ ಡೇಟ್ ಆಗಿದೆ. ಪಿಐ ಇಂಡಸ್ಟೀಸ್ 2011ರಿಂದ 27 ಸಲ ಡಿವಿಡೆಂಡ್ ನೀಡಿದೆ. ಕಾಲಾನುಸಾರ ಡಿವಿಡೆಂಡ್ ಮೊತ್ತ ಏರಿಸಿದೆ.
ಚಾರಿತ್ರಿಕವಾಗಿ ಡಿವಿಡೆಂಡ್‌ಗಳು ದೀರ್ಘಾವಧಿಯಲ್ಲಿ ಷೇರುಗಳ ರಿಟರ್ನ್‌ಗೆ ಕೊಡುಗೆ ನೀಡುತ್ತವೆ. ಹೀಗಿದ್ದರೂ, ಕಂಪನಿಯ ಆರ್ಥಿಕ ಆರೋಗ್ಯ, ಲಾಭ, ಆದಾಯ ಹೆಚ್ಚಳ, ಉತ್ತಮ ಮ್ಯಾನೇಜ್ ಮೆಂಟ್ ಇವೆಲ್ಲವನ್ನೂ ಹೂಡಿಕೆದಾರರು ಗಮನಿಸಬೇಕು.
ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್ 700 ಅಂಕ ಪತನ, ಸ್ಟಾಕ್ ಮಾರ್ಕೆಟ್ ಕುಸಿಯುತ್ತಿರುವುದೇಕೆ?
ಈಶರ್ ಮೋಟಾರ್ಸ್ ಪ್ರತಿ ಷೇರಿಗೆ 70/- ಡಿವಿಡೆಂಡ್ ನೀಡಲಿದೆ. ಆಗಸ್ಟ್ 1 ರೆಕಾರ್ಡ್ ಡೇಟ್ ಆಗಿದೆ.