ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 31st March: ಮತ್ತೆ ಏರಿದ ಬಂಗಾರ; ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟು?

ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ ಇಂದು 95 ರೂ. ಏರಿಕೆಯಾಗಿ 13,685 ರೂ. ಇದ್ದರೆ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ103 ರೂ. ಏರಿಕೆ ಕಂಡಿದೆ.

ಮತ್ತೆ ಏರಿದ ಬಂಗಾರ; ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 31, 2026 1:21 PM

ಬೆಂಗಳೂರು: ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 (Gold Price Today On 31st March) ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ ಇಂದು 95 ರೂ. ಏರಿಕೆಯಾಗಿ 13,685 ರೂ. ಇದ್ದರೆ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ103 ರೂ. ಏರಿಕೆ ಕಂಡಿದ್ದು, 14,929 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,480 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ ನೀವು 1,36,850 ರೂ. ಮತ್ತು 100 ಗ್ರಾಂಗೆ ನೀವು 13,68,500 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,19,432 ರೂ. ಮತ್ತು 10 ಗ್ರಾಂಗೆ ನೀವು 1,49,290 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ ನೀವು 14,92,900 ರೂ. ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,685 ರೂ. 14,929 ರೂ.
ಮುಂಬೈ 13,685 ರೂ. 14,929 ರೂ.
ಹೈದರಾಬಾದ್‌ 13,685 ರೂ. 14,929 ರೂ.
ಕೋಲ್ಕತ್ತಾ 13,685 ರೂ. 14,929 ರೂ.

ಬೆಳ್ಳಿ ದರದಲ್ಲಿಯೂ ಇಂದು ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ ನೀವು ಬೆಲೆ 250 ರೂ. ಇದೆ. 10 ಗ್ರಾಂ ಬೆಳ್ಳಿಗೆ 2450 ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 250,000 ರೂಪಾಯಿ ಪಾವತಿಸಬೇಕು.