ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Income Tax Bill 2025: 2025ರ ಆದಾಯ ತೆರಿಗೆ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ; ಹೊಸ ಮಸೂದೆ ಆಗಸ್ಟ್‌ 11ರಂದು ಮಂಡನೆ

ಕೇಂದ್ರ ಸರ್ಕಾರ ಈ ವರ್ಷದ ಫೆಬ್ರವರಿಯಲ್ಲಿ ಜಾರಿಗೆ ತಂದ ಆದಾಯ ತೆರಿಗೆ ಮಸೂದೆಯನ್ನು ಹಿಂಪಡೆದಿದೆ. ಬಿಜೆಪಿ ಸಂಸದ ಬೈಜಯಂತ್ ಜಯ್‌ ಪಾಂಡ ನೇತೃತ್ವದ ಸೆಲೆಕ್ಟ್ ಕಮಿಟಿ ಮಾಡಿದ ಕೆಲ ಶಿಫಾರಸುಗಳ ಪ್ರಕಾರ ಮಸೂದೆಯಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಇದನ್ನು ಆಗಸ್ಟ್ 11ರಂದು ಲೋಕಸಭೆಯಲ್ಲಿ ಮರು ಮಂಡನೆ ಮಾಡಲಾಗುತ್ತದೆ.

2025ರ ಆದಾಯ ತೆರಿಗೆ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ

Ramesh B Ramesh B Aug 8, 2025 6:01 PM

ದೆಹಲಿ: ತೆರಿಗೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಸರಳವಾಗಿಸಲು ಕೇಂದ್ರ ಸರ್ಕಾರ ಈ ವರ್ಷದ ಫೆಬ್ರವರಿಯಲ್ಲಿ ಜಾರಿಗೆ ತಂದ ಆದಾಯ ತೆರಿಗೆ ಮಸೂದೆ (Income Tax Bill 2025)ಯನ್ನು ಹಿಂಪಡೆದಿದೆ. 1961ರ ಆದಾಯ ತೆರಿಗೆ ಕಾಯ್ದೆಗೆ ಬದಲು ಹೊಸ ಬಿಲ್ ಮಂಡಿಸಲಾಗಿತ್ತು. ಆದರೆ ಇದೀಗ ಈ ಬಿಲ್ ಅನ್ನೂ ವಾಪಸ್ ಪಡೆಯಾಗಿದೆ. ಬಿಜೆಪಿ ಸಂಸದ ಬೈಜಯಂತ್ ಜಯ್‌ ಪಾಂಡ (Baijayant Jay Panda) ನೇತೃತ್ವದ ಸೆಲೆಕ್ಟ್ ಕಮಿಟಿ ಮಾಡಿದ ಕೆಲ ಶಿಫಾರಸುಗಳ ಪ್ರಕಾರ ಮಸೂದೆಯಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಇದನ್ನು ಆಗಸ್ಟ್ 11ರಂದು ಲೋಕಸಭೆಯಲ್ಲಿ ಮರು ಮಂಡನೆ ಮಾಡಲಾಗುತ್ತದೆ.

ಮಸೂದೆಯಲ್ಲಿ ಪದೇ ಪದೆ ಮಾಡಲಾದ ಬದಲಾವಣೆಗಳಿಂದ ಉಂಟಾಗುವ ಗೊಂದಲವಾಗುವುದನ್ನು ತಪ್ಪಿಸಲು ಹೊಸ ಪರಿಷ್ಕೃತ ಆದಾಯ ತೆರಿಗೆ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ಡ್ರಾಫ್ಟಿಂಗ್, ವಾಕ್ಯ ಜೋಡಣೆ ಶೈಲಿ, ಕ್ರಾಸ್ ರೆಫರೆನ್ಸಿಂಗ್ ಇತ್ಯಾದಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.



ಈ ಸುದ್ದಿಯನ್ನೂ ಓದಿ: Income Tax Bill 2025: ಪಾರ್ಲಿಮೆಂಟ್‌ನಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ: ಐಟಿ ಬಿಲ್‌ನಲ್ಲಿ ಏನಿದೆ?

ಹೊಸ ಮಸೂದೆ ಅಂಗೀಕರಿಸಲ್ಪಟ್ಟರೆ ಭಾರತದ ದಶಕಗಳಷ್ಟು ಹಳೆಯದಾದ ತೆರಿಗೆ ರಚನೆ ಸರಳಗೊಳ್ಳಲಿದೆ. ಈ ಮೂಲಕ ಗೊಂದಲ ನಿವಾರಣೆಯಾಗಲಿದೆ. "1961ರ ಆದಾಯ ತೆರಿಗೆ ಕಾಯ್ದೆಯು 4,000ಕ್ಕೂ ಹೆಚ್ಚು ತಿದ್ದುಪಡಿಗಳಿಗೆ ಒಳಗಾಗಿದೆ ಮತ್ತು 5 ಲಕ್ಷಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದೆ. ಇದು ತುಂಬಾ ಜಟಿಲವಾಗಿದೆ. ಹೊಸ ಮಸೂದೆಯು ಅದನ್ನು ಸುಮಾರು ಶೇ. 50ರಷ್ಟು ಸರಳಗೊಳಿಸುತ್ತದೆ. ಸಾಮಾನ್ಯ ತೆರಿಗೆದಾರರು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಇದು ನೆರವಾಗುತ್ತದೆ" ಎಂದು ಪಾಂಡ ತಿಳಿಸಿದ್ದಾರೆ. ಈ ಸರಳ ಮಸೂದೆಯು ಸಣ್ಣ ವ್ಯಾಪಾರಿಗಳು ಮತ್ತು ಎಂಎಸ್‌ಎಂಇಗಳಿಗೆ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲ ತೆರಿಗೆದಾರರಿಗೆ ಅನುಕೂಲವಾಗುವಂತೆ ಸ್ಲ್ಯಾಬ್‌ಗಳು ಮತ್ತು ದರಗಳನ್ನು ಬದಲಾಯಿಸಲಾಗಿದೆ. ಹೊಸ ಕಾಯ್ದೆಯು ಮಧ್ಯಮ ವರ್ಗದವರ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಜತೆಗೆ ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ತಿಳಿಸಿದೆ.

ಹೊಸ ಆದಾಯ ತೆರಿಗೆ ಮಸೂದೆಯ ವೈಶಿಷ್ಟ್ಯ

ಹೊಸ ಆದಾಯ ತೆರಿಗೆ ಮಸೂದೆಯು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದಾದ ನಿಯಮಗಳನ್ನು ಒಳಗೊಂಡಿದೆ. ಟ್ಯಾಕ್ಸ್‌ ಸ್ಲಾಬ್‌ ದರ ಸೇರಿದಂತೆ ವಿವಿಧ ಆದಾಯ ತೆರಿಗೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೊಸದಾಗಿ ತೆರಿಗೆಯನ್ನು ಪರಿಚಯಿಸುವುದಿಲ್ಲ. ಜತೆಗೆ 300ಕ್ಕೂ ಅಧಿಕ ನಿಯಮಗಳನ್ನು ತೆಗೆದುಹಾಕಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.