ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Buying Gold In Dubai: ದುಬೈನಿಂದ ಚಿನ್ನ ಖರೀದಿಸೋ ಪ್ಲ್ಯಾನ್‌ ಇದ್ಯಾ? ಈ ವಿಷಯ ನಿಮಗೆ ಗೊತ್ತೇ?

Know Rules For Buying Gold In Dubai: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಎಲ್ಲರೂ ಬಂಗಾರ ಪ್ರಿಯರೇ.. ಆದ್ರೆ ದಿನದಿಂದ ದಿನಕ್ಕೆ ಬಂಗಾರದ ದರ ಏರುತ್ತಿದ್ದು, ಆಭರಣ ಪ್ರಿಯರು ಚಿಂತೆಗೀಡಾಗಿದ್ದರೆ. ಸ್ವದೇಶದಲ್ಲಿ ಬಂಗಾರ ದರ ಹೆಚ್ಚಿರುವ ಕಾರಣ, ಅತ್ಯಂತ ಕಡಿಮೆ ದರಕ್ಕೆ ಬಂಗಾರ ಸಿಗುವ ಸ್ಥಳಗಳಿಂದ ಬಂಗಾರ ಖರೀದಿಗೆ ಮುಂದಾಗಿದ್ದಾರೆ. ಆದ್ರೆ ವಿದೇಶಗಳಿಂದ ಬಂಗಾರ ಖರೀದಿಸಿ ತರುವುದು ಸುಲಭದ ಕೆಲಸವಲ್ಲ. ಅದರಲ್ಲೂ ಬಂಗಾರ ಖರೀದಿಗೆ ಹೆಸರುವಾಸಿಯಾಗಿರುವ ದುಬೈಯಿಂದ ಬಂಗಾರ ತರುವುದು ಹರಸಾಹಸವೇ ಸರಿ.

ದುಬೈನಿಂದ ಚಿನ್ನ ಖರೀದಿಸೋ ಮುನ್ನ ಈ ವಿಷಯ ನಿಮಗೆ ಗೊತ್ತೇ?

-

Profile Sushmitha Jain Oct 25, 2025 9:32 AM

ಬೆಂಗಳೂರು: ಚಿನ್ನ(Gold) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಘನತೆಯ ಸಂಕೇತ ಎಂದೇ ಬಿಂಬಿತವಾಗಿರುವ ಚಿನ್ನವು ಕಷ್ಟ ಕಾಲದಲ್ಲಿಯೂ ನೆರವಾಗುತ್ತದೆ ಎಂದು ಸಾಕಷ್ಟು ಜನರು ಖರೀದಿಸುತ್ತಾರೆ. ಕಳೆದ ಕೆಲ ವರ್ಷಗಳಿಂದ ಚಿನ್ನದ ಬೆಲೆ ಗಗನಕ್ಕೇರಿದ್ದು, ಅಕ್ಟೋಬರ್ 2025ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,33,780ಕ್ಕೆ ತಲುಪಿ ಹೊಸ ದಾಖಲೆ ಬರೆದಿದೆ.
ಭಾರತ(India)ಕ್ಕೆ ಹೋಲಿಸಿದರೆ ಜನರು ದುಬೈನಲ್ಲಿ ಚಿನ್ನ ಖರೀದಿಸಲು ಹೆಚ್ಚು ಆದ್ಯತೆ ಕೊಡುತ್ತಾರೆ. ಕಾರಣ ಈ ದೇಶದಲ್ಲಿ ಚಿನ್ನದ ಮೇಲಿರುವ ಸುಂಕ ವಿನಾಯಿತಿ. ನೀವೂ ದುಬೈನಿಂದ ಚಿನ್ನ ಖರೀದಿಸಿ ಭಾರತಕ್ಕೆ ತರಬೇಕೆಂದುಕೊಂಡಿದ್ದರೆ ಈ ವಿಷಯಗಳನ್ನು ಖಂಡಿತ ತಿಳಿದುಕೊಳ್ಳಿ.

  • ದುಬೈಯಿಂದ ಭಾರತಕ್ಕೆ ಹಿಂದಿರುಗುವ ಭಾರತೀಯ ಪ್ರಯಾಣಿಕರು ಕಸ್ಟಮ್ಸ್ ಶುಲ್ಕ(customs duty) ಇಲ್ಲದೇ ಚಿನ್ನವನ್ನು ತರಬಹುದು. ಆದರೆ, ಅದು ಸರ್ಕಾರ ನಿಗದಿಪಡಿಸಿರುವ ನಿರ್ದಿಷ್ಟ ಮಿತಿಯೊಳಗಿರಬೇಕು.
  • ಪುರುಷ ಪ್ರಯಾಣಿಕರಿಗೆ, ₹50,000 ಮೌಲ್ಯ ಮೀರದ ಅಥವಾ 20 ಗ್ರಾಂವರೆಗೆ ಚಿನ್ನಾಭರಣ ಖರೀದಿಗೆ ಯಾವುದೇ ಸುಂಕ ಇಲ್ಲ.
  • ಮಹಿಳಾ ಪ್ರಯಾಣಿಕರಿಗೆ ಖರೀದಿ ಪ್ರಮಾಣ ಹೆಚ್ಚಾಗಿದ್ದು, 40 ಗ್ರಾಂ ಅಥವಾ ಗರಿಷ್ಠ ₹1,00,000 ಮೌಲ್ಯದ ಚಿನ್ನಾಭರಣ ಸುಂಕವಿಲ್ಲದೇ ಖರೀದಿಸಬಹುದು.
  • ಈ ವಿನಾಯಿತಿಗಳು ಕೇವಲ ಚಿನ್ನಾಭರಣಗಳಿಗೆ ಮಾತ್ರ; ಚಿನ್ನದ ನಾಣ್ಯಗಳು, ಬಾರ್‌ಗಳು ಅಥವಾ ಬಿಸ್ಕತ್ತುಗಳಿಗೆ ಅನ್ವಯಿಸುವುದಿಲ್ಲ.

ಈ ಸುದ್ದಿಯನ್ನೂ ಓದಿ: Viral News: ಕಾರ್ ಪಾರ್ಕಿಂಗ್ ವಿಚಾರಕ್ಕೆ ನಡೀತು ಮಾರಾಮಾರಿ; ಓರ್ವನ ಸ್ಥಿತಿ ಗಂಭೀರ

  • ಜೊತೆಗೆ, ಪ್ರಯಾಣಿಕರು ಕನಿಷ್ಠ ಒಂದು ವರ್ಷ ವಿದೇಶದಲ್ಲಿ ನೆಲೆಸಿದ್ದರೆ ಮಾತ್ರ ಈ ಸುಂಕ-ರಹಿತ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಪ್ರಸ್ತುತ ಕಸ್ಟಮ್ಸ್ ನಿಯಮಗಳ ಪ್ರಕಾರ, ಮಕ್ಕಳು ಯಾವುದೇ ಚಿನ್ನದ ಡ್ಯೂಟಿ-ಫ್ರೀ ಮಿತಿಗೆ ಅರ್ಹರಾಗುವುದಿಲ್ಲ.
  • ಪ್ರಯಾಣಿಕರು ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಚಿನ್ನವನ್ನು ದುಬೈನಿಂದ ತಂದರೆ, ಅವರು ಭಾರತ ತಲುಪುವಾಗ ಅದನ್ನು ಕಸ್ಟಮ್ಸ್ ವಿಭಾಗಕ್ಕೆ ಘೋಷಿಸಿ ಸುಮಾರು 15.75% (ಸೆಸ್ ಮತ್ತು ಸರ್‌ಚಾರ್ಜ್ ಸೇರಿ) ತೆರಿಗೆ ಪಾವತಿಸಬೇಕು. ಘೋಷಣೆ ಮಾಡದಿದ್ದರೆ ಕಸ್ಟಮ್ಸ್ ಅಧಿಕಾರಿಗಳು ದಂಡ, ವಶಪಡಿಸಿಕೊಳ್ಳುವಿಕೆ ಅಥವಾ ಕಾನೂನು ಕ್ರಮ ಕೈಗೊಳ್ಳಬಹುದು.
  • ಸಮಸ್ಯೆಗಳನ್ನು ತಪ್ಪಿಸಲು, ಪ್ರಯಾಣಿಕರು ತಮ್ಮ ಖರೀದಿ ಬಿಲ್‌ಗಳು, ಚಿನ್ನಾಭರಣದ ತೂಕದ ದಾಖಲೆಗಳು ಇತ್ಯಾದಿಗಳೊಂದಿಗೆ ಪ್ರಯಾಣಿಸಲು ಹಾಗೂ ಅಭರಣವಲ್ಲದ ಚಿನ್ನದ ವಸ್ತುಗಳೊಂದಿಗೆ ಪ್ರಯಾಣ ಮಾಡದಂತೆ ಸಲಹೆ ನೀಡಲಾಗಿದೆ.
  • ಕಡಿಮೆ ಬೆಲೆ ಮತ್ತು ಕಡಿಮೆ ಸ್ಥಳೀಯ ತೆರಿಗೆಗಲಿಂದಾಗಿ ದುಬೈ ಚಿನ್ನದ ಖರೀದಿಗೆ ಜನಪ್ರಿಯ ತಾಣವಾಗಿದೆ. ಆದರೂ, ಚಿನ್ನ ಖರೀದಿಸಲು ಬಯಸುವವರು ಭಾರತದ ಆಮದು ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.