RBI Repo Rate: ರೆಪೋ ದರದಲ್ಲಿ ನೋ ಚೇಂಜ್; ಬಡ್ಡಿದರದಲ್ಲಿ ಯಥಾಸ್ಥಿತಿ ಘೋಷಿಸಿದ RBI
RBI Monetary Policy: ಆರ್‌ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವು ಶೇಕಡಾ 5.5 ರಷ್ಟೇ ಇದ್ದು ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದೆ. ಹಣಕಾಸು ನೀತಿ ಸಭೆ ಬಳಿಕ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ರೆಪೋದರದಲ್ಲಿ 'ತಟಸ್ಥ' ನೀತಿ ನಿಲುವು ಮುಂದುವರೆದಿದೆ ಎಂದು ಹೇಳಿದರು.


ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಾರೀ ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಘೋಷಿಸಿದೆ. ಆರ್‌ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC) ರೆಪೊ ದರವು ಶೇಕಡಾ 5.5 ರಷ್ಟೇ ಇದ್ದು ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಬುಧವಾರ, ಸುಂಕದ ಪರಿಸ್ಥಿತಿ ವಿಕಸನಗೊಳ್ಳುತ್ತಿದ್ದರೂ 'ತಟಸ್ಥ' ನೀತಿ ನಿಲುವು ಮುಂದುವರೆದಿದೆ ಎಂದು ಹೇಳಿದರು.
RBI ಗವರ್ನರ್ ಸಂಜಯ್ ಮಲ್ಹೋತ್ರಾ(Sanjay Malhotra) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ಆಗಸ್ಟ್ 4 ರಿಂದ 6 ರವರೆಗೆ ರೆಪೋ ದರದ ಬಗ್ಗೆ ಚರ್ಚೆಗಳನ್ನು ನಡೆಸಿದ್ದು, ಇಂದು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಜೂನ್‌ನಲ್ಲಿ, ಎಂಪಿಸಿ ನಿರೀಕ್ಷೆಗಿಂತ ಹೆಚ್ಚಿನ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಘೋಷಿಸಿತ್ತು.
ಜಿಡಿಪಿ ಬೆಳವಣಿಗೆಯ ಮುನ್ಸೂಚನೆ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚೋದಿಸಿದ ವ್ಯಾಪಾರ ಸುಂಕಗಳ ಸುತ್ತ ಹೆಚ್ಚುತ್ತಿರುವ ಅನಿಶ್ಚಿತತೆಗಳು ಮತ್ತು ಹಣದುಬ್ಬರ ಸಮಸ್ಯೆ ನಡುವೆ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ನಡೆಸಲಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು, ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.5 ರಲ್ಲಿಯೇ ಉಳಿಸಿಕೊಂಡಿದೆ. ಸದ್ಯದ ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿದೆ ಎಂದು ಮಲ್ಹೋತ್ರಾ ಹೇಳಿದರು.
ಈ ಸುದ್ದಿಯನ್ನೂ ಓದಿ: Repo Rate: ಆರ್‌ಬಿಐ ರೆಪೋ ದರ ಕಡಿತ: ಗೃಹ ಸಾಲಗಾರರಿಗೆ EMIನಲ್ಲಿ ಉಳಿತಾಯ ಎಷ್ಟು? ಇಲ್ಲಿದೆ ಲೆಕ್ಕಚಾರ
ರೆಪೋ ರೇಟ್ ಎಂದರೆ ಏನು?
ರೆಪೋ ದರ ಅಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವಾಗಿದೆ. ಒಂದೊಮ್ಮೆ ರೆಪೋ ದರ ಇಳಿಕೆಯಾದಲ್ಲಿ ಬ್ಯಾಂಕ್‌ಗಳಿಗೆ ಕಡಿಮೆ ದರದಲ್ಲಿ ಸಾಲ ಸಿಗಲಿದ್ದು, ಇವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಲಿವೆ. ಇದರಿಂದ ಸಾಲದ ಮೇಲಿನ ಬಡ್ಡಿಗಳು ಕಡಿಮೆಯಾಗಲಿವೆ.
2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರೆಪೋ ದರವನ್ನು ಶೇ. 0.40ರಷ್ಟು ಇಳಿಸಿದ್ದ ರಿಸರ್ವ್ ಬ್ಯಾಂಕ್ ಕಳೆದ ಸುಮಾರು 5 ವರ್ಷದಿಂದ ಬಡ್ಡಿ ದರವನ್ನು ಇಳಿಸಿಲ್ಲ. ಬದಲಿಗೆ 2022ರಿಂದ 2023ರ ಮೇವರೆಗೆ ಸತತವಾಗಿ ಬಡ್ಡಿ ದರ ಏರಿಸಲಾಗಿತ್ತು. ಸರಿ ಸುಮಾರು ಎರಡು ವರ್ಷಗಳಿಂದ ರೆಪೋ ದರ ಶೇ. 6.5ರಲ್ಲೇ ಇತ್ತು. ಇನ್ನು ಕಳೆದ ತಿಂಗಳು ರೆಪೋ ದರ(Repo Rate)ವನ್ನು ಶೇ 6 ರಿಂದ ಶೇ. 5.5 ಇಳಿಕೆ ಆಗಿದ್ದು, ಬೆಲೆ ಏರಿಕೆ ಬಿಸಿಗೆ ಬೆಳಲಿ ಬೆಂಡಾಗಿರುವ ಜನ ಸಾಮಾನ್ಯರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿತ್ತು.