5 ವರ್ಷಗಳಲ್ಲಿ ಹೆಚ್ಚು ಲಾಭ ನೀಡಿದ ಮಲ್ಟಿ ಬ್ಯಾಗರ್ಸ್; ಮೋತಿಲಾಲ್ ಓಸ್ವಾಲ್ ವರದಿಯಲ್ಲಿ ಏನಿದೆ?
Multibagger: ಮೋತಿಲಾಲ್ ಓಸ್ವಾಲ್ 2020-2025ರ ಅವಧಿಯಲ್ಲಿ ಷೇರು ಹೂಡಿಕೆದಾರರಿಗೆ ಹೆಚ್ಚು ರಿಟರ್ನ್ ನೀಡಿರುವ ಸ್ಟಾಕ್ಸ್‌ಗಳ ಲಿಸ್ಟ್ ಮಾಡಿದ್ದಾರೆ. ಕೋವಿಡ್ ಸಂದರ್ಭದ ಸ್ಟಾಕ್ ಮಾರ್ಕೆಟ್ ಕುಸಿತದ ನಂತರದ ಕಾಲ ಘಟ್ಟದಲ್ಲಿ ಷೇರುಗಳು ತೀವ್ರ ಗತಿಯಲ್ಲಿ ಚೇತರಿಕೆಯನ್ನೂ ದಾಖಲಿಸಿದವು. ಷೇರುದಾರರ ರಿಟರ್ನ್, ಪ್ರಾಫಿಟ್ ಗ್ರೋತ್ ಮತ್ತು ಮಾರ್ಕೆಟ್ ಕ್ಯಾಪಿಟಲೈಸೇಶನ್ ಅನ್ನು ಅಧ್ಯಯನ ಮಾಡಿ, ಕಳೆದ 5 ವರ್ಷಗಳಲ್ಲಿ ಹೆಚ್ಚು ಲಾಭದಾಯಕವಾಗಿದ್ದ ಷೇರುಗಳನ್ನು ಗುರುತಿಸಲಾಗಿದ್ದು ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಮುಂಬೈ, ಡಿ. 13: ಮೋತಿಲಾಲ್ ಓಸ್ವಾಲ್ (Motilal Oswal) 2020-2025ರ ಅವಧಿಯಲ್ಲಿ ಷೇರು ಹೂಡಿಕೆದಾರರಿಗೆ ಹೆಚ್ಚು ರಿಟರ್ನ್ ನೀಡಿರುವ ಸ್ಟಾಕ್ಸ್‌ಗಳ ಲಿಸ್ಟ್ ಮಾಡಿದ್ದು, ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ. ಕೋವಿಡ್ ಸಂದರ್ಭದ ಸ್ಟಾಕ್ ಮಾರ್ಕೆಟ್ ಕುಸಿತದ ನಂತರದ ಕಾಲ ಘಟ್ಟದಲ್ಲಿ ಷೇರುಗಳು ತೀವ್ರ ಗತಿಯಲ್ಲಿ ಚೇತರಿಕೆಯನ್ನೂ ದಾಖಲಿಸಿತ್ತು. ಮೋತಿಲಾಲ್ ಓಸ್ವಾಲ್ ವರದಿಯು ಷೇರುದಾರರ ರಿಟರ್ನ್, ಪ್ರಾಫಿಟ್ ಗ್ರೋತ್ ಮತ್ತು ಮಾರ್ಕೆಟ್ ಕ್ಯಾಪಿಟಲೈಸೇಶನ್ ಅನ್ನು ಅಧ್ಯಯನ ಮಾಡಿ, ಕಳೆದ 5 ವರ್ಷಗಳಲ್ಲಿ ಹೆಚ್ಚು ಲಾಭದಾಯಕವಾಗಿದ್ದ ಷೇರುಗಳನ್ನು ಗುರುತಿಸಿದೆ (Multibagger). ಕೇವಲ ಮಾಹಿತಿಯ ಉದ್ದೇಶಕ್ಕಾಗಿ ನಾವು ಮೋತಿಲಾಲ್ ಓಸ್ವಾಲ್ ವರದಿಯ ಹೈಲೈಟ್ಸ್ ಅನ್ನು ಹೇಳುತ್ತಿದ್ದೇವೆ. ಇದು ಯಾವುದೇ ವಿಧದ ರೆಕಂಂಡೇಶನ್ ಅಥವಾ ಶಿಫಾರಸು ಆಗಿರುವುದಿಲ್ಲ.
BSE: ಬಿಎಸ್‌ಇ
ಮೋತಿಲಾಲ್ ಓಸ್ವಾಲ್ ವರದಿಯ ಪ್ರಕಾರ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಷೇರು ಕಳೆದ 5 ವರ್ಷಗಳಲ್ಲಿ ವೇಗವಾಗಿ ವೆಲ್ತ್ ಕ್ರಿಯೇಟ್ ಮಾಡಿರುವ ಷೇರಾಗಿ ಹೊರಹೊಮ್ಮಿದೆ. ಇದರ ಲಾಭ 124% ಸಿಎಜಿಆರ್ (Compound annual growth rate) ಹೊಂದಿದೆ. ಅಂದರೆ ಹೂಡಿಕೆದಾರರಿಗೆ 56 ಪಟ್ಟು ರಿಟರ್ನ್ ಕೊಟ್ಟಿದೆ ಎಂದು ವರದಿ ತಿಳಿಸಿದೆ.
ವಿಡಿಯೊ ಇಲ್ಲಿದೆ:
Rail Vikas Nigam: ರೈಲ್ ವಿಕಾಸ್ ನಿಗಮ್
ರೈಲ್ ವಿಕಾಸ್ ನಿಗಮ್ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ರೈಲ್ವೆಯ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೊಳಿಸುತ್ತದೆ. ರೈಲ್ವೆ ಸಚಿವಾಲಯದ ವ್ಯಾಪ್ತಿಗೆ ಬರುವ ಕಂಪನಿ ಇದಾಗಿದೆ. ಈ ಕಂಪನಿಯ ಷೇರು ಕಳೆದ 5 ವರ್ಷಗಳಲ್ಲಿ ಹೂಡಿಕೆದಾರರಿಗೆ 28 ಪಟ್ಟು ರಿಟರ್ನ್ ಕೊಟ್ಟಿದೆ. ಮಾರುಕಟ್ಟೆ ಮೌಲ್ಯವನ್ನು 10 ಪಟ್ಟು ಹೆಚ್ಚಿಸಿದೆ.
Jindal Stainless: ಜಿಂದಾಲ್ ಸ್ಟೈನ್‌ಲೆಸ್
ಜಿಂದಾಲ್ ಸ್ಟೈನ್‌ಲೆಸ್ ಸ್ಟೀಲ್ ಕಂಪನಿಯ ಷೇರು, ಹೂಡಿಕೆದಾರರಿಗೆ 25 ಪಟ್ಟು ರಿಟರ್ನ್ ನೀಡಿದೆ. ಲಾಭದಲ್ಲಿ 90% CAGR ದಾಖಲಿಸಿದೆ.
GE Vernova T&D: ಜಿಇ ವೆರ್ನೋವಾ ಟಿ&ಡಿ:
ಜಿಇ ವೆರ್ನೋವಾ ಟಿ&ಡಿ ಕಂಪನಿಯು 2020-25ರ ಅವಧಿಯಲ್ಲಿ ಹೂಡಿಕೆದಾರರಿಗೆ 21 ಪಟ್ಟು ರಿಟರ್ನ್ ನೀಡಿದೆ. ಭಾರತದ ಪವರ್ ಟ್ರಾನ್ಸ್‌ಮಿಶನ್ ಮತ್ತು ರಿನೆವಬಲ್ ಇಂಟಿಗ್ರೇಶನ್ ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ.
ಮೈಕ್ರೊಸಾಫ್ಟ್ ಮಾರುಕಟ್ಟೆ ಮೌಲ್ಯವನ್ನು ಹಿಂದಿಕ್ಕಿದ ಬೆಳ್ಳಿ!
Persistent Systems: ಪರ್ಸಿಸ್ಟೆಂಟ್ ಸಿಸ್ಟಮ್ಸ್
ಪರ್ಸಿಸ್ಟೆಂಟ್ ಸಿಸ್ಟಮ್ಸ್ ಷೇರು ಹೂಡಿಕೆದಾರರಿಗೆ ಕಳೆದ 5 ವರ್ಷಗಳಲ್ಲಿ 20 ಪಟ್ಟು ರಿಟರ್ನ್ ನೀಡಿದೆ. 83% CAGR ನೊಂದಿಗೆ ಪ್ರಾಫಿಟ್ ಗ್ರೋತ್ ದಾಖಲಿಸಿದೆ.
FACT: Fertiliser Turnaround Story: ಫ್ಯಾಕ್ಟ್
ರಸಗೊಬ್ಬರ ವಲಯದ ಫರ್ಟಿಲೈಸರ್ಸ್ ಆಂಡ್ ಕೆಮಿಕಲ್ಸ್ ಟ್ರಾವಾಂಕೂರ್ ಲಿಮಿಟೆಡ್ ಷೇರು, ಹೂಡಿಕೆದಾರರಿಗೆ 20 ಪಟ್ಟು ರಿಟರ್ನ್ ಕೊಟ್ಟಿದೆ.
Dixon Technologies: ಡಿಕ್ಸಾನ್ ಟೆಕ್ನಾಲಜೀಸ್:
ಡಿಕ್ಸಾನ್ ಟೆಕ್ನಾಲಜೀಸ್ ಕಳೆದ 5 ವರ್ಷಗಳಲ್ಲಿ 18 ಪಟ್ಟು ರಿಟರ್ನ್ ಕೊಟ್ಟಿದೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹೆಚ್ಚುತ್ತಿರುವುದನ್ನು ಬಿಂಬಿಸಿದೆ. ವಾರ್ಷಿಕ 79% CAGR ಲೆಕ್ಕದಲ್ಲಿ ಪ್ರಾಫಿಟ್ ನೀಡಿದೆ. ಪಿಎಲ್‌ಐ ಸ್ಕೀಮ್‌ಗಳ ಪ್ರಯೋಜನವನ್ನು ಡಿಕ್ಸಾನ್ ಟೆಕ್ನಾಲಜೀಸ್ ಪಡೆದಿದೆ.
Adani Power and Adani Enterprises: ಅದಾನಿ ಪವರ್ ಮತ್ತು ಅದಾನಿ ಎಂಟರ್‌ಪ್ರೈಸಸ್
ಅದಾನಿ ಪವರ್ ಕಳೆದ 5 ವರ್ಷಗಳಲ್ಲಿ ಷೇರುದಾರರಿಗೆ 18 ಪಟ್ಟು ರಿಟರ್ನ್ ಕೊಟ್ಟಿದೆ. ನಷ್ಟದಿಂದ ಲಾಭದ ಹಳಿಗೆ ಮರಳಿದೆ. ವಿದ್ಯುತ್ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಳವಾಗಿರುವುದು ಇದಕ್ಕೆ ಕಾರಣ. ಅದಾನಿ ಎಂಟರ್ ಪ್ರೈಸಸ್ 2020-25ರ ಅವಧಿಯಲ್ಲಿ ಷೇರು ಹೂಡಿಕೆದಾರರಿಗೆ 17 ಪಟ್ಟು ರಿಟರ್ನ್ ಕೊಟ್ಟಿದೆ. ಏರ್ ಪೋರ್ಟ್, ಗ್ರೀನ್ ಎನರ್ಜಿ, ಮೂಲಸೌಕರ್ಯ ವಲಯದಲ್ಲಿ ಅದಾನಿ ಎಂಟರ್ ಪ್ರೈಸಸ್ ಅಗ್ರೆಸ್ಸಿವ್ ಆಗಿ ವಿಸ್ತರಿಸುತ್ತಿದೆ.
ಗ್ಲೋಬಲ್ ಮಾರ್ಕೆಟ್ ಸೈಕಲ್ ಹೇಗಿರುತ್ತೆ? ಪ್ರಯೋಜನ ಪಡೆಯುವುದು ಹೇಗೆ?
Hitachi Energy: ಹಿಟಾಚಿ ಎನರ್ಜಿ
ಗ್ಲೋಬಲ್ ಟೆಕ್ ಮತ್ತು ಎನರ್ಜಿ ವಲಯದ ಕಂಪನಿಯಾಗಿರುವ ಹಿಟಾಚಿ ಎನರ್ಜಿ ಕಳೆದ 5 ವರ್ಷಗಳಲ್ಲಿ ಷೇರು ಹೂಡಿಕೆದಾರರಿಗೆ 17 ಪಟ್ಟು ರಿಟರ್ನ್ ನೀಡಿದೆ. 76% CAGR ಲೆಕ್ಕದಲ್ಲಿ ಪ್ರಾಫಿಟ್ ಗ್ರೋತ್ ದಾಖಲಿಸಿದೆ.