ಸೆನ್ಸೆಕ್ಸ್ 206 ಅಂಕ ಇಳಿಕೆ; ಬ್ಯಾಂಕ್, ಹೆಲ್ತ್‌ಕೇರ್ ಸ್ಟಾಕ್ಸ್ ಕುಸಿತ ಕಾರಣವೇನು?
ಬಿಎಸ್‌ಇನಲ್ಲಿ ಇವತ್ತು 4,285 ಷೇರುಗಳು ಟ್ರೇಡ್ ಆಗಿದ್ದು, 2,540 ಷೇರುಗಳು ಲಾಭ ಗಳಿಸಿದ್ದರೆ, 1,609 ಷೇರುಗಳು ನಷ್ಟಕ್ಕೀಡಾಯಿತು. 124 ಷೇರುಗಳು 52 week high ದಾಖಲಿಸಿದರೆ 64 ಷೇರುಗಳು 52 week low ದಾಖಲಿಸಿತು.

-

ಕೇಶವಪ್ರಸಾದ.ಬಿ
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಇವತ್ತು 206 ಅಂಕ ಕಳೆದುಕೊಂಡು (Stock Market) 80,157ಕ್ಕೆ ಸ್ಥಿರವಾಯಿತು. ನಿಫ್ಟಿ 45 ಅಂಕ ಕಳೆದುಕೊಂಡು 24,579 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಮಹೀಂದ್ರಾ & ಮಹೀಂದ್ರಾ ಮತ್ತು ಡಿಆರ್‌ಎಲ್ ಷೇರು ದರ ತಲಾ 2% ಇಳಿಕೆ ದಾಖಲಿಸಿತು. ಡಾಲರ್ ಎದುರು ರುಪಾಯಿ 88.19 ರುಪಾಯಿಯಷ್ಟಿತ್ತು. ಬಿಎಸ್‌ಇನಲ್ಲಿ ಇವತ್ತು 4,285 ಷೇರುಗಳು ಟ್ರೇಡ್ ಆಗಿದ್ದು, 2,540 ಷೇರುಗಳು ಲಾಭ ಗಳಿಸಿದ್ದರೆ, 1,609 ಷೇರುಗಳು ನಷ್ಟಕ್ಕೀಡಾಯಿತು. 124 ಷೇರುಗಳು 52 week high ದಾಖಲಿಸಿದರೆ 64 ಷೇರುಗಳು 52 week low ದಾಖಲಿಸಿತು.
ಇಂದಿನ Top Gainers
ವನ್ ಮೊಬಿಕ್ವಿಕ್ ಸಿಸ್ಟಮ್ಸ್: 280/ ( 18.24%)
ಸಮ್ಮಾನ್ ಕ್ಯಾಪಿಟಲ್ : 139/- (11%)
ಗ್ರೇವ್ಸ್ ಕಾಟನ್ : 226/- ( 10%)
ಅವಂತಿ ಫೀಡ್ಸ್ : 681/- ( 8%)
ಎಂಆರ್‌ಎಫ್ : 1,53,885/- ( 6.25%)
ಪವರ್ ಗ್ರಿಡ್ : 286/- ( 6.85%)
ಟಾಟಾ ಕನ್ ಸ್ಯೂಮರ್: 1,101/-
ನೆಸ್ಲೆ ಇಂಡಿಯಾ : 1,201/-
ಟಾಟಾ ಸ್ಟೀಲ್ : 158/-
ಇಂದಿನ Top Losers:
ಎ ಆರ್‌ಸಿ ಇನ್ಸಲ್ಟೇಶನ್ & ಇನ್ಸುಲೇಟರ್ಸ್: 126 ( 5%)
ಗಾಡ್ ಫ್ರೆ ಫಿಲಿಪ್ಸ್ ಇಂಡಿಯಾ: 10,060/- (5%)
ಹೂಡಿಕೆದಾರರು ಜಾಗತಿಕ ಅನಿಶ್ಚಿತತೆ ಎದುರಿಸುತ್ತಿರುವುದು ಒಂದು ಕಡೆಯಾದರೆ, ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯ ಫಲಶ್ರುತಿಯನ್ನು ಎದುರು ನೋಡುತ್ತಿದ್ದಾರೆ.ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳು ಇಳಿಕೆ ದಾಖಲಿಸಿತು. ಹೆಲ್ತ್ ಕೇರ್ ಕೂಡ ಸ್ವಲ್ಪ ಇಳಿಕೆ ಕಂಡಿತು. ಇದಕ್ಕೆ ವಿರುದ್ಧವಾಗಿ ಪಿಎಸ್‌ಯು ಬ್ಯಾಂಕ್, ಮೀಡಿಯಾ, ಮೆಟಲ್, ರಿಯಾಲ್ಟಿ ಷೇರುಗಳು ಚೇತರಿಸಿತು.
ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್ 442 ಅಂಕ ಜಿಗಿತ, ಬೆಮೆಲ್ 1:2 ಷೇರು ವಿಭಜನೆ, ಜೊಮ್ಯಾಟೊ ಆದಾಯ ಏರಿಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸದಿಲ್ಲಿಯಲ್ಲಿ ಎರಡು ದಿನಗಳ ಜಿಎಸ್‌ಟಿ ಕೌನ್ಸಿಲ್ ಸಭೆಯನ್ನು ಸೆಪ್ಟೆಂಬರ್ 3ರಿಂದ ನಡೆಸಲಿದ್ದಾರೆ. ಜಿಎಸ್‌ಟಿ ದರಗಳ ಶ್ರೇಣಿಯಲ್ಲಿ ಸುಧಾರಣೆಯನ್ನು ನಿರೀಕ್ಷಿಸಲಾಗಿದೆ. ಜಾಗತಿಕ ಅನಿಶ್ಚಿತತೆ, ಪ್ರಾಫಿಟ್ ಬುಕಿಂಗ್ ಮತ್ತು ಜಿಎಸ್ ಟಿ ಕೌನ್ಸಿಲ್ ಸಭೆಯ ನಿರೀಕ್ಷೆ ಸಾಕಷ್ಟು ಪ್ರಭಾವ ಬೀರಿತು.