ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Share Market: ಸೆನ್ಸೆಕ್ಸ್‌ 510 ಅಂಕ ಜಿಗಿತ: ಸತತ 4ನೇ ದಿನ ಚೇತರಿಕೆ; ಐಟಿ ಸ್ಟಾಕ್ಸ್‌ ಜೋಶ್

Stock Market Today: ಷೇರು ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಿದೆ. ಏಪ್ರಿಲ್‌ 7ಕ್ಕೆ ಸೆನ್ಸೆಕ್ಸ್‌ 510 ಅಂಕ ಚೇತರಿಸಿದ್ದು, 74,616ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 155 ಅಂಕ ಏರಿಕೆಯಾಗಿ 23,123ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ 2 ಪರ್ಸೆಂಟ್‌ ರಿಬೌಂಡ್‌ ಆಯಿತು. ಡಾಲರ್‌ ಎದುರು ರುಪಾಯಿ ಮೌಲ್ಯವು 0.1% ಏರಿಕೆಯಾಗಿದ್ದು, 92 ರುಪಾಯಿ 98 ಪೈಸೆಯಷ್ಟಿತ್ತು.

ಷೇರುಪೇಟೆಯಲ್ಲಿ ಮತ್ತೆ ಗೂಳಿ ಅಬ್ಬರ; ಸೆನ್ಸೆಕ್ಸ್‌ 510 ಅಂಕ ಜಿಗಿತ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Apr 7, 2026 5:28 PM

ಬೆಂಗಳೂರು, ಏ. 7: ಇರಾನ್‌ ಯುದ್ಧದ ಬಳಿಕ ಸೊರಿದ್ದ ಷೇರು ಮಾರುಕಟ್ಟೆ (Share Market) ಇದೀಗ ಮತ್ತೆ ಜಿಗಿತುಕೊಂಡಿದೆ. ಏಪ್ರಿಲ್‌ 7ಕ್ಕೆ ಸೆನ್ಸೆಕ್ಸ್‌ 510 ಅಂಕ ಚೇತರಿಸಿದ್ದು, 74,616ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 155 ಅಂಕ ಏರಿಕೆಯಾಗಿ 23,123ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ 2 ಪರ್ಸೆಂಟ್‌ ರಿಬೌಂಡ್‌ ಆಯಿತು. ಡಾಲರ್‌ ಎದುರು ರುಪಾಯಿ ಮೌಲ್ಯವು 0.1% ಏರಿಕೆಯಾಗಿದ್ದು, 92 ರುಪಾಯಿ 98 ಪೈಸೆಯಷ್ಟಿತ್ತು.

ಅಮೆರಿಕ- ಇರಾನ್‌ ಯುದ್ಧದ ನಡುವೆಯೂ ಸೆನ್ಸೆಕ್ಸ್‌ ಕಳೆದ 4 ವಹಿವಾಟು ದಿನಗಳಿಂದ ಚೇತರಿಕೆ ದಾಖಲಿಸಿರುವುದು ವಿಶೇಷ. ಕಚ್ಚಾ ತೈಲ ದರ ಏರಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೂಡಿಕೆಯ ಹಿಂತೆಗೆತದ ನಡುವೆಯೂ ದೇಶೀಯ ಹೂಡಿಕೆದಾರರು ಮಾರುಕಟ್ಟೆಯ ಜತೆಗೆ ಅಚಲವಾಗಿ ವಿಶ್ವಾಸದಿಂದ ನಿಂತಿದ್ದಾರೆ.

ಒಟ್ಟಾರೆಯಾಗಿ ಬಿಎಸ್‌ ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 427 ಲಕ್ಷ ಕೋಟಿ ರುಪಾಯಿಗಳಿಂದ 429 ಲಕ್ಷ ಕೋಟಿ ರುಪಾಯಿಗಳಿಗೆ ಏರಿಕೆಯಾಯಿತು. ಹೂಡಿಕೆದಾರಿಗೆ 1.5 ಲಕ್ಷ ಕೋಟಿ ರುಪಾಯಿ ನೋಶನಲ್‌ ಲಾಭ ದೊರೆಯಿತು.

ವಲಸೆ ಕಾರ್ಮಿಕರಿಗೆ ಬಿಗ್‌ ರಿಲೀಫ್‌; 5 ಕೆಜಿ ಸಿಲಿಂಡರ್ ಹಂಚಿಕೆ ದ್ವಿಗುಣಗೊಳಿಸಿದ ಕೇಂದ್ರ ಸರ್ಕಾರ

ಡೊಮೆಸ್ಟಿಕ್‌ ಮಾರ್ಕೆಟ್‌ ರಿಕವರಿ ಟ್ರೆಂಡ್‌ನಲ್ಲಿದೆ. ಐಟಿ, ಎಫ್‌ಎಂಸಿಜಿ ಮತ್ತು ಲೋಹ ವಲಯದಲ್ಲಿ ಚೇತರಿಕೆ ದಾಖಲಾಗಿದೆ. ಐಟಿ ಸ್ಟಾಕ್ಸ್‌ ಚೇತರಿಕೆ ಕಾರಣವೇನೆಂದರೆ ವಾಲ್ಯುಯೇಶನ್‌ ಕಂಫರ್ಟ್‌ ಆಗಿರುವುದು ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯ ಇಳಿಕೆಯಿಂದ ಉಂಟಾಗುವ ಲಾಭ. ಬ್ರೆಂಟ್‌ ಕ್ರೂಡ್‌ ಆಯಿಲ್‌ ದರ ಪ್ರತಿ ಬ್ಯಾರೆಲ್‌ಗೆ 110 ಡಾಲರ್‌ ಮಟ್ಟದಲ್ಲಿ ಇತ್ತು.

ನಿಫ್ಟಿ 50ಯಲ್ಲಿ ಐಟಿ ಸ್ಟಾಕ್ಸ್‌ ಹೆಚ್ಚು ಲಾಭ ಗಳಿಸಿತು. ಟಾಪ್‌ ಗೈನರ್ಸ್‌ ಲಿಸ್ಟ್‌ ಇಂತಿದೆ:

  • ವಿಪ್ರೊ: 204/-: 3.77%
  • ಹಿಂಡಾಲ್ಕೊ: 954/-: 2.92%
  • HCL Tech: 1,442/-: 2.73%
  • TCS: 2,654/-: 2.67%
  • ಇನ್ಫೋಸಿಸ್‌: 1,339/-: 2.55%
  • ಭಾರ್ತಿ ಏರ್‌ಟೆಲ್‌: 1,830/-: 2.10%
  • ONGC: 286/-: 1.71%

ನಷ್ಟಕ್ಕೀಡಾದ ಷೇರುಗಳು

ಡಾ ರೆಡ್ಡೀಸ್‌ ಲ್ಯಾಬೊರೇಟರೀಸ್‌, ಇಂಡರ್‌ ಗ್ಲೋಬ್‌ ಏವಿಯೇಶನ್‌, ಅದಾನಿ ಎಂಟರ್‌ ಪ್ರೈಸಸ್‌. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರ್ಚ್‌ನಲ್ಲಿ ಬ್ಯಾಂಕಿಂಗ್‌ ಸೆಕ್ಟರ್‌ನಿಂದ 60,655 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.