ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಈರುಳ್ಳಿ ಇದೆ, ಆದರೆ ಶ್ರೀಲಂಕಾ, ಬಾಂಗ್ಲಾಗೆ ರಫ್ತು ಬೇಡಿಕೆ ಇಲ್ಲ

ಬಾಂಗ್ಲಾದೇಶವು ಕರ್ನಾಟಕದ ಸಣ್ಣ ಗಾತ್ರದ ಈರುಳ್ಳಿಯನ್ನು ಇಷ್ಟಪಡುತ್ತಿತ್ತು. ಹೀಗಾಗಿ, ಭಾರತದ ಈರುಳ್ಳಿಯನ್ನೇ ನೆಚ್ಚಿಕೊಂಡಿದ್ದ ರಾಷ್ಟ್ರಗಳು ತಾವೇ ಬೆಳೆಯಲು ಶುರು ಮಾಡಿದವು. ತಮ್ಮ ರೈತರಿಗೆ ಬೆಲೆ ಸಿಗಲೆಂದು ಅಲ್ಲಿ ಆಮದು ಡ್ಯೂಟಿ ಹೆಚ್ಚಿದವು ಭಾರತ ರಫ್ತುದಾರಿಗೆ ವರ್ಕೊಟ್ ಆಗದಿರುವು ದರಿಂದ ಬೇರೆ ದೇಶಗಳಿಗೆ ಬಾರತದ ಈರುಳ್ಳಿ ಹೆಚ್ಚು ರಫ್ತುಗುತ್ತಿಲ್ಲ

ಈರುಳ್ಳಿ ಇದೆ, ಆದರೆ ಶ್ರೀಲಂಕಾ, ಬಾಂಗ್ಲಾಗೆ ರಫ್ತು ಬೇಡಿಕೆ ಇಲ್ಲ

-

Ashok Nayak Ashok Nayak Oct 12, 2025 1:40 AM

ಹೂವಪ್ಪ ಐ ಹೆಚ್.

ಆಂಧ್ರ, ರಾಜಸ್ತಾನ್, ಎಂಪಿ ಹೀಗೆ ಎಲ್ಲಾ ರಾಜ್ಯಲ್ಲಿ ಈರುಳ್ಳಿ ಬೆಳೆಯಲಾಗಿದೆ.

ನೆರೆಯ ರಾಜ್ಯಗಳಲ್ಲಿ ಬೇಡಿಕೆ ಇಲ್ಲ.

ಈರುಳ್ಳಿ ರಫ್ತು ಕುಸಿತ

ಬೆಲೆ ಇಳಿಕೆ

ಬೆಂಗಳೂರು: ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಕಳೆದ ವರ್ಷಗಳ ಉತ್ತಮ ಲಾಭದ ನಿರೀಕ್ಷೆಯಲ್ಲಿ ರೈತರು ಯಥೇಚ್ಛವಾಗಿ ಈ ಬಾರಿ ಈರುಳ್ಳಿ ಬೆಳೆದಿದ್ದು, ಹಳೆಯ ದಾಸ್ತಾನು ಸಹ ಮಾರುಕಟ್ಟೆಗೆ ಬಂದಿದೆ. ರಫ್ತು ನಿಷೇಧ ಮತ್ತು ಹೊರ ರಾಜ್ಯಗಳ ವರ್ತಕರ ಕೊರತೆಯಿಂದ ದರ ಪಾತಾಳಕ್ಕಿಳಿದಿದ್ದು, ಇದರಿಂದ ರೈತರು ಸಂಕಷ್ಟ ದಲ್ಲಿದ್ದಾರೆ. ಆದರೆ ಗ್ರಾಹಕರು ಮಾತ್ರ ಸಂತಸಗೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈರುಳ್ಳಿ ಬೆಳೆದ ರೈತರಿಗೆ ಉತ್ತಮ ಲಾಭ ದೊರೆತಿತ್ತು.

ರಫ್ತು ಬೇಡಿಕೆ ಕುಸಿತ: ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಇತರೆ ರಾಷ್ಟ್ರಗಳಿಗೆ ಈರುಳ್ಳಿ ರಫ್ತು ಕುಸಿದಿದೆ. ಅಂದಾಜು ಪ್ರಕಾರ. 2023‑24 ಆರ್ಥಿಕ ವರ್ಷದಲ್ಲಿ ಭಾರತವು ಸುಮಾರು 17.17 ಲಕ್ಷ ಟನ್ (1.717 ಮಿಲಿಯನ್ ಟನ್) ಇರುಳ್ಳಿ ರಫ್ತು ಆಗಿದೆ.

2024‑25 ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳು (ಎಪ್ರಿಲ್–ಜುಲೈ) ರಫ್ತು ಸುಮಾರು 2.6 ಲಕ್ಷ ಟನ್ ಇರುಳ್ಳಿ ರಫ್ತುಗಿದೆ.

ಬಾಂಗ್ಲಾದೇಶವು ಕರ್ನಾಟಕದ ಸಣ್ಣ ಗಾತ್ರದ ಈರುಳ್ಳಿಯನ್ನು ಇಷ್ಟಪಡುತ್ತಿತ್ತು. ಹೀಗಾಗಿ, ಭಾರತದ ಈರುಳ್ಳಿಯನ್ನೇ ನೆಚ್ಚಿಕೊಂಡಿದ್ದ ರಾಷ್ಟ್ರಗಳು ತಾವೇ ಬೆಳೆಯಲು ಶುರು ಮಾಡಿದವು. ತಮ್ಮ ರೈತರಿಗೆ ಬೆಲೆ ಸಿಗಲೆಂದು ಅಲ್ಲಿ ಆಮದು ಡ್ಯೂಟಿ ಹೆಚ್ಚಿದವು ಭಾರತ ರಫ್ತುದಾರಿಗೆ ವರ್ಕೊಟ್ ಆಗದಿರುವು ದರಿಂದ ಬೇರೆ ದೇಶಗಳಿಗೆ ಬಾರತದ ಈರುಳ್ಳಿ ಹೆಚ್ಚು ರಫ್ತುಗುತ್ತಿಲ್ಲ. ಇದು ಇದು ರಫ್ತು ಬೇಡಿಕೆ ಕುಸಿಯಲು ಹಾಗೂ ಬೆಲೆ ಇಳಿಕೆಗೆ ಕಾರಣವಾಗಿದೆ. ಜತೆಗೆ ಆಂಧ್ರಪ್ರದೇಶ, ತಮಿಳುನಾಡು, ರಾಜ ಸ್ತಾನ್, ಗುಜರಾತ್ ರಾಜ್ಯಗಳು ಕೂಡ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಈಗ ಅಲ್ಲಿಯೂ ಈರುಳ್ಳಿ ಬೆಳೆಯುತ್ತಿವೇ ಗಣನೀಯವಾಗಿ ಬೆಲೆ ಕುಸಿಯಲು ಇದು ಕೂಡಾ ಕಾರಣವಾಗಿಡ ಎನ್ನುತ್ತಾರೆ ಬೆಂಗಳೂರಿನ ಈರುಳ್ಳಿ ರಫ್ತುದಾರ ಆನಂದ.

ಇದನ್ನೂ ಓದಿ: Benefits of Spring Onions: ಈರುಳ್ಳಿ ಸೊಪ್ಪು: ರುಚಿ, ಘಮ, ಸತ್ವಗಳ ಸಂಗಮ

ಸತತವಾಗಿ ಸುರಿಯುತ್ತಿರುವ ಮಳೆಗೆ ಸ್ಥಳೀಯ ಈರುಳ್ಳಿ ಗುಣಮಟ್ಟ ಕಳೆದುಕೊಂಡಿದ್ದು,, ಯಶವಂತಪುರ ಎಪಿಎಂಸಿಯಲ್ಲಿ ಕಡಿಮೆ ಗುಣಮಟ್ಟದ ಹೊಸ ಈರುಳ್ಳಿ ಕೆ.ಜಿಗೆ 2-5 ರೂ.ಗೆ ಇಳಿಕೆಯಾಗಿದೆ. ದೊಡ್ಡ ಗಾತ್ರದ ಈರುಳ್ಳಿಗೆ 10-17 ರೂ. ಇದೆ. ಮಹಾರಾಷ್ಟ್ರದ ಹಳೇ ಈರುಳ್ಳಿ ಕೆಜಿಗೆ 17-18 ರು. ಇದೆ. ಚಿಲ್ಲರೆ ದರ ಸಣ್ಣ ಈರುಳ್ಳಿ 10-15 ದಪ್ಪ 20-30 ರು ಇದೆ. ಕಳೆದ ವರ್ಷ ಇದೆ ಅವಧಿಯಲ್ಲಿ ಕೆಜಿಗೆ ಸಗಟು 30-35 ಚಿಲ್ಲರೆ ದರ 40-55 ರು ಇತ್ತು.

ಇನ್ನೂ ಒಂದೆರಡು ತಿಂಗಳು ಈರುಳ್ಳಿ ದರ ಏರಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೆಲ ವರ್ಷಗಳ ಹಿಂದೆ ನಿತ್ಯ 1 ಸಾವಿರ ಲಾರಿ ಲೋಡ್‌ ಈರುಳ್ಳಿ ಬರುತ್ತಿತ್ತು. ಆದರೀಗ ಕರ್ನಾಟಕ, ಮಹಾರಾಷ್ಟ್ರ ದಿಂದ ಸುಮಾರು 400 ಕ್ಕೂ ಹೆಚ್ಚು ಲಾರಿ ಲೋಡ್‌ ಬರುತ್ತಿದೆ.

ಮಾರಾಷ್ಟ್ರ ಈರುಳ್ಳಿ ದಾಸ್ತನು:-

ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಈರುಳ್ಳಿಯನ್ನು ಯಥೇಚ್ಛವಾಗಿ ಬೆಳೆಯ ಲಾಗಿದೆ. ಅಷ್ಟೇ ಅಲ್ಲ, ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರದಲ್ಲಿಕ ಳೆದ ಏಪ್ರಿಲ್‌-ಮೇ ತಿಂಗಳಲ್ಲಿ ಬೆಳೆದಿದ್ದ ಈರುಳ್ಳಿಯನ್ನು ವರ್ಷಾಂತ್ಯದಲ್ಲಿ ಮಾರಾಟ ಮಾಡುವ ಉದ್ದೇಶದಿಂದಲೇ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು. ಈಗ ಸಂಗ್ರಹಿಸಿಟ್ಟಿರುವ ಹಳೆಯ ಈರುಳ್ಳಿಯನ್ನು ಮಾರಾಟ ಮಾಡದಿದ್ದರೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಹೊಸದಾಗಿ ಬೆಳೆದಿರುವ ಈರುಳ್ಳಿಯ ಜತೆಗೆ ದಾಸ್ತಾನು ಇಡಲಾಗಿದ್ದ ಈರುಳ್ಳಿಯನ್ನೂ ಮಾರಾಟ ಮಾಡಲಾಗುತ್ತಿದೆ.

ಮಹಾರಾಷ್ಟ್ರದ ಈರುಳ್ಳಿ ಬೇಡಿಕೆ: ಮಹಾರಾಷ್ಟ್ರದ ದಪ್ಪ ಈರುಳ್ಳಿಯೇ ದೇಶದಲ್ಲಿ ಅತೀ ಹೆಚ್ಚು ಬೇಡಿಕೆಯುಳ್ಳದ್ದು. ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ಮಹಾರಾಷ್ಟ್ರದ ಈರುಳ್ಳಿಯನ್ನೇ ಬಳಸಲಾಗುತ್ತದೆ. ಉಳಿದಂತೆ ಕರ್ನಾಟಕ, ಗುಜರಾತ್‌, ಆಂಧ್ರಪ್ರದೇಶ, ರಾಜಸ್ತಾನ, ಮಧ್ಯ ಪ್ರದೇಶದಲ್ಲಿ ಬೆಳೆಯುವ ಈರುಳ್ಳಿಯನ್ನು ಆಯಾ ಭಾಗಗಳಲ್ಲಿಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ. ಉಳಿದಂತೆ ಬಳ್ಳಾರಿ ರೆಡ್‌, ರೋಸ್‌ ಆನಿಯನ್‌, ಎನ್‌ಪಿ53, ಅರ್ಕಾ ನಿಕೇತನ್‌, ಕಲ್ಯಾಣ್‌, ಪ್ರಗತಿ ಇತ್ಯಾದಿ ತಳಿಗಳಿವೆ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಚಿತ್ರದುರ್ಗ, ದಾವಣಗೆರೆ, ಬಾಗಲ ಕೋಟ, ತಾಲ್ಲೂಕಿನಲ್ಲಿ ಬೆಳೆದಿರುವ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಕೊಚ್ಚಿ ಹೋಗುತ್ತಿದೆ. ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಉತ್ತಮ ಮಳೆ ಸುರಿದ ಕಾರಣ ಜಿಲ್ಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಈ ವರ್ಷ 22,000ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಕಳೆದ ವರ್ಷಕ್ಕಿಂತ ಶೇ 10ರಷ್ಟು ಭೂಮಿಯಲ್ಲಿ ಹೆಚ್ಚು ಬಿತ್ತನೆಯಾಗಿತ್ತು. ಎಲ್ಲಾ ಕಡೆ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದು, . ಆದರೆ, ಕಳೆದ 3 ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಶೀತ ವಾತಾವರಣ ತೀವ್ರಗೊಂಡಿದೆ. ಈರುಳ್ಳಿ ಹೊಲದಲ್ಲಿ ನೀರು ನಿಂತಿರುವ ಕಾರಣ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಬೆಳೆ ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಣೆ, ರಸಗೊಬ್ಬರ ಹಾಕಿದ್ದಾರೆ. ಆದರೂ ತೀವ್ರ ಶೀತದ ಕಾರಣಕ್ಕೆ ಬೆಳೆ ಹಾನಿಯಾಗಿದೆ. ಕೈಗೆ ಬರಬೇಕಾದ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋಗು ತ್ತಿರುವುದಕ್ಕೆ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ ವ್ಯಾಪ್ತಿಯಲ್ಲಿ ತೀವ್ರ ಹಾನಿಯಾಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ.

ಬೆಳೆ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಪೈರು ಕೊಚ್ಚಿ ಹೋಗುತ್ತಿದೆ. ನಮ್ಮ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ನಾಶವಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಷ್ಟ ಪರಿಹಾರ ನೀಡಬೇಕು’ ಎಂದು ಚಿತ್ರದುರ್ಗ ತಾಲೂಕು ರೈತರು ಒತ್ತಾಯಿಸಿದರು.

*

ಪ್ರತಿ ವರ್ಷ ಈ ಸಮಯದಲ್ಲಿ ದೇಶದ ನಾನಾ ರಾಜ್ಯಗಳ ವರ್ತಕರು ಎಪಿಎಂಸಿಯಲ್ಲಿ ಖರೀದಿ ಮಾಡುತ್ತಿದ್ದರು ಆದರೆ ಈ ಬಾರೀ ಎಲ್ಲಾ ರಾಜ್ಯ್ದಲ್ಲಿ ಈರುಳ್ಳಿ ಬೆಳೆ ಇದೆ ಹೀಗಾಗಿ ವರ್ತಕರು ಖರೀದಿಗೆ ಬರ್ತ್ತಿಲ್ಲ ಗಣನಿಯವಾಗಿಬೆಲೆ ಖುಷಿಯಲು ಇದು ಪ್ರಮುಖ ಕಾರಣವಾಗಿದೆ.

ಬೆಂಗಳೂರು, ಎಪಿಎಂಸಿ ಈರುಳ್ಳಿ, ವರ್ತಕರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್‌

ಬಂಪರ್‌ ಲಾಭದ ಕನಸಿನೊಂದಿಗೆ ಈರುಳ್ಳಿ ಬಿತ್ತನೆ ಮಾಡಿದ್ದೆವು ಆದರೆ ಪ್ರತಿಕೂಲ ಹವಾಮಾನ ಹಾಗೂ ಕುಸಿದ ದರ ದಿಂದಾಗಿ ಕಂಗಾಲಾಗಿದ್ದೇವೆ. ಶೇ 60 ರಷ್ಟು ಕೊಳೆತು ಹೋಗಿದೆ. ದರ ಕುಸಿತದಿಂದಾಗಿ ಇರುವ ಅಲ್ಪಸ್ವಲ್ಪ ಈರುಳ್ಳಿಗೆ ಗುಣಮಟ್ಟ ಇಲ್ಲ, ಇದೇ ಕಾರಣಕ್ಕೆ ಬೆಲೆಯೂ ಇಲ್ಲವಾಗಿದೆ ಹೀಗಾದರೆ ನಮ್ಮ ಗತಿಯೇನು?

ಚಳ್ಳಿಕೆರೆ ತಾಲೂಕು ರೈತ. ತಿಪ್ಪೇಸ್ವಾಮಿ