Former MLA N Sampangi: ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಶಾಸಕ ಎನ್ ಸಂಪಂಗಿ
ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಎಲ್ಲಾ ಜವಾಬ್ದಾರಿ ಗಳನ್ನು ಸಮರ್ಪಕವಾಗಿ ನಿಷ್ಠೆಯಿಂದ ನಿರ್ವಹಿಸಿರುವ ಕಾರಣ ಒಳ್ಳೇಯ ಸ್ಥಾನಮಾನ ದೊರೆತಿದೆ. ನನ್ನ ಅವಧಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇವೆ. ನನ್ನ ಸೇವೆ ಗುರುತಿಸಿ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು.ಅದನ್ನು ಕೂಡ ನಿಷ್ಟೆಯಿಂದ ನಿಭಾಯಿಸಿದ್ದು ಇಂದು ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.

-

ಬಾಗೇಪಲ್ಲಿ : ಕಾಂಗ್ರೆಸ್ ಪಕ್ಷದಲ್ಲಿ ಸತತವಾಗಿ ೩ ದಶಕಗಳಿಂದ, ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ, ೧೦ ವರ್ಷಗಳು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ತಮ್ಮ ಅಮೂಲ್ಯ ವಾದ ಕೊಡುಗೆಯನ್ನು ನೀಡಿ, ಜನ ಮೆಚ್ಚಿದ ನಾಯಕರಾಗಿರುವಂತಹ ಎನ್.ಸಂಪಂಗಿ( Former MLA N Sampangi) ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಬೆಂಗಳೂರಿನ ರಾಜ್ಯ ಉಗ್ರಾಣ ನಿಗಮ ಕೇಂದ್ರ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ನೂರಾರು ಎನ್ ಸಂಪಂಗಿ ಅಭಿಮಾನಿಗಳು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿ ಶುಭ ಕೋರಿದರು.
ಇದನ್ನೂ ಓದಿ: Bagepally News: ಮಿಟ್ಟೇಮರಿ ಪುವಾಡಮ್ಮ ಕೆರೆ ಕೋಡಿ:ಗ್ರಾಮ ಪಂಚಾಯತಿ ವತಿಯಿಂದ ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ
ಈ ಸಂದರ್ಭದಲ್ಲಿ ಮಾತನಾಡಿದ ಸಂಪಂಗಿ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಎಲ್ಲಾ ಜವಾಬ್ದಾರಿ ಗಳನ್ನು ಸಮರ್ಪಕವಾಗಿ ನಿಷ್ಠೆಯಿಂದ ನಿರ್ವಹಿಸಿರುವ ಕಾರಣ ಒಳ್ಳೇಯ ಸ್ಥಾನಮಾನ ದೊರೆತಿದೆ. ನನ್ನ ಅವಧಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇವೆ. ನನ್ನ ಸೇವೆ ಗುರುತಿಸಿ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು.ಅದನ್ನು ಕೂಡ ನಿಷ್ಟೆಯಿಂದ ನಿಭಾಯಿಸಿದ್ದು ಇಂದು ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.
ಸರ್ಕಾರ ನನ್ನನ್ನು ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡಿದನ್ನು ನಾನು ಎಂದಿಗೂ ಮರೆಯುವು ದಿಲ್ಲ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಇಡೀ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಈ ನಿಗಮವನ್ನು ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡು ಹೋಗುವಂತ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಶಂಕರರೆಡ್ಡಿ, ಮನಸಪಲ್ಲಿ ನಾರಾಯಣಸ್ವಾಮಿ,ಎಸ್ಟಿಡಿ ಮೂರ್ತಿ, ನರಸಿಂಹ ನಾಯ್ಡು, ವಕೀಲರಾದ ಎ.ನಂಜುAಡ,ಗAಗಿರೆಡ್ಡಿ ಮತ್ತಿತರ ಅಭಿಮಾನಿಗಳು, ಕಾರ್ಯಕರ್ತರು ಹಾಜರಿದ್ದರು.