ಮಧ್ಯ ಆಫ್ರಿಕಾದಲ್ಲಿ ಚಿನ್ನದ ಗಣಿ ಕುಸಿದು 30 ಮಂದಿ ಸಾವು, ಅಪಾಯದಲ್ಲಿ ಹಲವರು
ಚಿನ್ನದ ಗಣಿ ಕುಸಿದು 30 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯ ಆಫ್ರಿಕಾ ಗಣರಾಜ್ಯದ ಪಶ್ಚಿಮ ಭಾಗದಲ್ಲಿ ಸಂಭವಿಸಿದೆ. ಅನೇಕರು ಒಳಗಡೆ ಸಿಲುಕಿರುವ ಸಾಧ್ಯತೆ ಇದೆ. ನನ-ಮಾಂಬೆರೆ ಪ್ರಾಂತ್ಯದ ಅಬ್ಬಾ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಸಂಗ್ರಹ ಚಿತ್ರ -
ಆಫ್ರಿಕಾ: ಚಿನ್ನದ ಗಣಿ (Gold mine) ಕುಸಿದು (gold mining site collaps) 30 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯ ಆಫ್ರಿಕಾ ಗಣರಾಜ್ಯದ (Central African Republic) ಪಶ್ಚಿಮ ಭಾಗದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಚಿನ್ನದ ಗಣಿಗಾರಿಕೆಯೊಳಗೆ ಅನೇಕರು ಸಿಕ್ಕಿಬಿದ್ದಿದ್ದು, ಅವರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನನ-ಮಾಂಬೆರೆ ಪ್ರಾಂತ್ಯದ ಅಬ್ಬಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಕಡಿಮೆ ತಂತ್ರಜ್ಞಾನ ಬಳಕೆ ಮಾಡುವ ಈ ಗಣಿ ಪ್ರದೇಶದಲ್ಲಿ ಹೆಚ್ಚಿನ ಕುಶಲಕರ್ಮಿಗಳು ಕೆಲಸ ಮಾಡುತಿದ್ದರು ಎನ್ನಲಾಗಿದೆ.
ಬದುಕುಳಿದ ಗಣಿಗಾರರಲ್ಲಿ ಒಬ್ಬರಾದ ಫ್ಲೋರಿಯನ್ ಗಗುಯೆಂಡೆ ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದು, ನನ-ಮಾಂಬೆರೆ ಪ್ರಾಂತ್ಯದ ಅಬ್ಬಾ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಿನ್ನದ ಗಣಿ ಪ್ರದೇಶದಲ್ಲಿ ಕುಸಿತ ಉಂಟಾಗಿದೆ. ಅನೇಕರು ಸಿಕ್ಕಿಬಿದ್ದಿದ್ದು, ರಕ್ಷಣಾ ತಂಡ ಅವರನ್ನು ಜೀವಂತವಾಗಿ ಹುಡುಕುವ ಕಾರ್ಯ ಮಾಡುತ್ತಿದೆ. ಆದರೆ ಅದರೊಳಗೆ ಸಿಲುಕಿರುವವರು ಜೀವಂತವಾಗಿ ಹೊರಬರುವ ಸಾಧ್ಯತೆ ಕಡಿಮೆ ಎಂದು ಹೇಳಿದರು.
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್; 3ನೇ ಮಗು ಆದ್ರೆ 1 ವರ್ಷ ಮಾತೃತ್ವ ರಜೆ
ಸಬ್-ಪ್ರಿಫೆಕ್ಚರ್‌ನ ಉಪ ಮೇಯರ್ ಸೌಲೆಮನೆ ಬಿ. ಅವರು ಮಾತನಾಡಿ, ಚಿನ್ನದ ಗಣಿ ಕುಸಿತದ ಸ್ಥಳದಲ್ಲಿ 30 ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ. ಇದಕ್ಕಾಗಿ ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಹಲವಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
#BREAKING A central African Republic gold mine collapsed in Nana-Mambéré, killing at least 30 miners and trapping others. Rescuers and residents are desperately searching for survivors#CAR #MineCollapse #Abba #NanaMambere #RescueEfforts@GovernmentZA @UN_CAR @evariste_gasana pic.twitter.com/T0m6Q4hdJJ
— jarvis ☠️ (@Vishii14) August 19, 2026
ಇದೊಂದು ಭಯಾನಕ ದುರಂತ. ಹಲವು ಸಂಸ್ಥೆಗಳು ಮತ್ತು ಜನರು ಒಟ್ಟುಗೂಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಒಳಗಿರುವ ಅನೇಕರು ಸಹಾಯಕ್ಕಾಗಿ ಕೂಗುತ್ತಿದ್ದಾರೆ. ಆದರೆ ಮಣ್ಣಿನಿಂದ ತುಂಬಿರುವ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಈ ಗಣಿಗಾರಿಕಾ ಪ್ರದೇಶದಲ್ಲಿ ಹೆಚ್ಚಾಗಿ ಯುವಕರು ಮತ್ತು ಮಹಿಳೆಯರೇ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಘಟನೆ ಕುರಿತು ಮಾಹಿತಿ ನೀಡಿದ ಸರ್ಕಾರಿ ವಕ್ತಾರ ಎವರಿಸ್ಟ್ ನ್ಗಮಾನಾ ಅವರು ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿ ಅಧಿಕಾರಿಗಳು ಪರಿಹಾರ ಮತ್ತು ಸಹಾಯ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.
ದೆಹಲಿ ಜಲ ಮಂಡಳಿ ಟೆಂಡರ್ ಅಕ್ರಮ ಆರೋಪ; ಆಮ್ ಆದ್ಮಿ ನಾಯಕ ಸತ್ಯೇಂದ್ರ ಜೈನ್ ಮತ್ತೆ ಬಂಧನ
ಮಧ್ಯ ಆಫ್ರಿಕಾದಲ್ಲಿ ಗಣಿ ಕುಸಿತಗಳು ಸಾಮಾನ್ಯವಾಗಿದೆ. ಸಾವಿರ ಮಂದಿ ಸಣ್ಣ ಪ್ರಮಾಣದ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ಸಾಕಷ್ಟು ರಕ್ಷಣೆ ಇಲ್ಲದಿರುವುದರಿಂದ ಮತ್ತು ಗಣಿ ಪ್ರದೇಶದಲ್ಲಿ ತಂತ್ರಜ್ಞಾನದ ಬಳಕೆ ಕಡಿಮೆ ಇರುವುದರಿಂದ ಸಾವಿನ ಪ್ರಮಾಣ ಹೆಚ್ಚಳವಾಗಿರುತ್ತದೆ ಎಂದು ಹೇಳಿದರು.