ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಚಿಕ್ಕಬಳ್ಳಾಪುರದಲ್ಲಿ ಕೃಷಿ ಇಲಾಖೆ ದಾಳಿ; 200 ಲೀಟರ್‌ಗೂ ಅಧಿಕ ರಾಸಾಯನಿಕ, ನಕಲಿ ಲೇಬಲ್‌ಗಳು ವಶ

ಅಧಿಕಾರಿಗಳ ಮಾಹಿತಿ ಪ್ರಕಾರ, ತಾನೇ ವಿವಿಧ ಕಂಪನಿಗಳ ಲೇಬಲ್‌ಗಳನ್ನು ಮುದ್ರಿಸಿ ಬಾಟಲಿಗಳಿಗೆ ಅಂಟಿಸಿ, ಪ್ಯಾಕಿಂಗ್ ಮಾಡಿ ನೇರವಾಗಿ ರೈತರ ಜಮೀನುಗಳಿಗೆ ತೆರಳಿ ಮಾರಾಟ ನಡೆಸುತ್ತಿದ್ದ. ದಾಳಿ ವೇಳೆ ವಶಪಡಿಸಿಕೊಂಡ ಲೇಬಲ್‌ಗಳಲ್ಲಿ ಜಿಎಸ್‌ಟಿ ಸಂಖ್ಯೆಯೂ ನಕಲಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ

ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ಜಾಲ ಭೇದ

-

Profile
Ashok Nayak Jul 24, 2026 8:54 PM

ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಕೀಟನಾಶಕಗಳನ್ನು ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಕೃಷಿ ಇಲಾಖೆಯ ಜಾಗೃತ ದಳ ಅಧಿಕಾರಿಗಳು ಭೇದಿಸಿದ್ದಾರೆ. ನಗರದ ಮನೆಯೊಂದರಲ್ಲಿ ನಡೆಸಿದ ದಾಳಿಯಲ್ಲಿ 200 ಲೀಟರ್‌ಗೂ ಅಧಿಕ ವಿವಿಧ ಕೃಷಿ ರಾಸಾಯ ನಿಕಗಳು, ಪ್ಯಾಕಿಂಗ್ ಸಾಮಗ್ರಿ ಹಾಗೂ 11ರಿಂದ 12 ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಆರೋಪಿ ಸೋಮಸುಂದರ್ ತಾನು 'ಬೆಳೆ ತಜ್ಞ' ಎಂದು ಪರಿಚಯಿಸಿಕೊಂಡು ರೈತರ ವಿಶ್ವಾಸ ಗಳಿಸುತ್ತಿದ್ದ. ಬಳಿಕ ದಾಳಿಂಬೆ, ದ್ರಾಕ್ಷಿ, ಮಾವು ಸೇರಿದಂತೆ ತೋಟಗಾರಿಕಾ ಬೆಳೆ ಬೆಳೆಯುವ ರೈತರನ್ನು ಗುರಿಯಾಗಿಸಿಕೊಂಡು ನಕಲಿ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾ ಗಿದೆ.

ಇದನ್ನೂ ಓದಿ: Chikkaballapur News: ಹೆಣ್ಣು ಮಗು ಎಂಬ ಕಾರಣಕ್ಕೆ 13 ದಿನಗಳ ಮಗುವನ್ನು ಸಂಪ್‌ಗೆ ಎಸೆದು ಕೊಂದ ತಂದೆ!

ಅಧಿಕಾರಿಗಳ ಮಾಹಿತಿ ಪ್ರಕಾರ, ತಾನೇ ವಿವಿಧ ಕಂಪನಿಗಳ ಲೇಬಲ್‌ಗಳನ್ನು ಮುದ್ರಿಸಿ ಬಾಟಲಿ ಗಳಿಗೆ ಅಂಟಿಸಿ, ಪ್ಯಾಕಿಂಗ್ ಮಾಡಿ ನೇರವಾಗಿ ರೈತರ ಜಮೀನುಗಳಿಗೆ ತೆರಳಿ ಮಾರಾಟ ನಡೆಸುತ್ತಿದ್ದ. ದಾಳಿ ವೇಳೆ ವಶಪಡಿಸಿಕೊಂಡ ಲೇಬಲ್‌ಗಳಲ್ಲಿ ಜಿಎಸ್‌ಟಿ ಸಂಖ್ಯೆಯೂ ನಕಲಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿಚಾರಣೆ ವೇಳೆ, ಆರೋಪಿ ನಕಲಿ ಕೀಟನಾಶಕ ತಯಾರಿಸುತ್ತಿದ್ದುದನ್ನು ಒಪ್ಪಿಕೊಂಡಿದ್ದು, "ಕಳೆದ ಮೂರು ದಿನಗಳಿಂದ ಮಾತ್ರ ಈ ಕೆಲಸ ಮಾಡುತ್ತಿದ್ದೇನೆ" ಎಂದು ಹೇಳಿದ್ದಾನೆ. 

776567 ok

ಆದರೆ ಈ ಜಾಲ ಎಷ್ಟು ದಿನಗಳಿಂದ ಕಾರ್ಯನಿರ್ವಹಿಸುತ್ತಿತ್ತು ಹಾಗೂ ಇನ್ನೂ ಎಷ್ಟು ರೈತರು ಮೋಸಕ್ಕೆ ಒಳಗಾಗಿದ್ದಾರೆ ಎಂಬ ಕುರಿತು ಕೃಷಿ ಇಲಾಖೆ ತನಿಖೆಯನ್ನು ಮುಂದುವರಿಸಿದೆ.

ಅಧಿಕಾರಿಗಳ ಪ್ರಕಾರ, ಅವಧಿ ಮೀರಿದ ಹಾಗೂ ವಿವಿಧ ರಾಸಾಯನಿಕಗಳನ್ನು ಮಿಶ್ರಣ ಮಾಡಿ ತಯಾರಿಸಿದ ನಕಲಿ ಕೀಟನಾಶಕಗಳು ಬೆಳೆಗಳ ಇಳುವರಿ ಕುಗ್ಗಿಸುವುದಷ್ಟೇ ಅಲ್ಲದೆ, ಮಣ್ಣು, ಪರಿಸರ ಮತ್ತು ಆಹಾರ ಸರಪಳಿಯ ಮೇಲೂ ಗಂಭೀರ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. 

ಆದ್ದರಿಂದ ರೈತರು ಅಧಿಕೃತ ಪರವಾನಗಿ ಹೊಂದಿರುವ ಮಾರಾಟ ಕೇಂದ್ರಗಳಿಂದ ಮಾತ್ರ ಕೀಟನಾಶಕಗಳನ್ನು ಖರೀದಿಸಬೇಕು ಹಾಗೂ ಅನುಮಾನಾಸ್ಪದ ಉತ್ಪನ್ನಗಳ ಬಗ್ಗೆ ತಕ್ಷಣ ಕೃಷಿ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.