ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಮಾರಕಾಸ್ತ್ರ ಹಿಡಿದು ಸಾರ್ವಜನಿಕ ರಸ್ತೆಯಲ್ಲಿ ಓಡಾಟ; ಬ್ಯಾಂಕಾಕ್‌ನಲ್ಲಿ ಭಾರತೀಯ ವ್ಯಕ್ತಿಯ ಬಂಧನ

ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ನಡೆಸುವುದು ಕಾನೂನು ಬಾಹಿರ. ಭಾರತೀಯ ಪ್ರಜೆಯೋರ್ವ ಬ್ಯಾಂಕಾಕ್‌ನಲ್ಲಿ ಪಿಸ್ತೂಲ್ ಹೋಲುವ ಮಾರಕಾಸ್ತ್ರವನ್ನು ಪಬ್ಲಿಕ್ ಸ್ಥಳದಲ್ಲಿ ತೋರಿಸಿದ್ದ ಕಾರಣ ಆತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿಯ ಕಂಪ್ಲೀಟ್ ವಿವರ ಇಲ್ಲಿದೆ.

ಬ್ಯಾಂಕಾಕ್‌ನಲ್ಲಿ ಭಾರತೀಯ ಪ್ರಜೆ ಅರೆಸ್ಟ್

ಬಂಧಿತ ಆರೋಪಿ ಸಾಹಿಲ್ ರಾಮ್ ಥಡಾನಿ -

Profile Sushmitha Jain Oct 19, 2025 10:06 PM

ಬ್ಯಾಂಕಾಕ್‌: ಬ್ಯಾಂಕಾಕ್‌(Bangkok)ನ ಸಿಯಾಮ್ ಸ್ಕ್ವೇರ್(Siam Square)ನಲ್ಲಿ ಪಿಸ್ತೂಲ್ ಆಕಾರದ ವಸ್ತು ತೋರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಆರೋಪಿದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು 41 ವರ್ಷದ ಸಾಹಿಲ್ ರಾಮ್ ಥಡಾನಿ( Sahil Ram Thadani) ಎಂದು ಗುರುತಿಸಲಾಗಿದೆ.

ಪಾಥುಮ್ ವಾನ್(Pathum Wan) ಜಿಲ್ಲೆಯ ಸಿಯಾಮ್ ಸ್ಕ್ವೇರ್ ಸೋಯಿ-6ನಲ್ಲಿರುವ ನೊವೊಟೆಲ್ ಬ್ಯಾಂಕಾಕ್ (Novotel Bangkok) ಹೋಟೆಲ್ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಪಿಸ್ತೂಲ್ ಆಕಾರದ ವಸ್ತುವನ್ನು ತೋರಿಸುತ್ತಾ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬ ಮಾಹಿತಿ ಬಂದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.



ಈ ಸುದ್ದಿಯನ್ನು ಓದಿ: Viral News: 1.5 ಕೋಟಿ ರೂ. ಖರ್ಚು ಮಾಡಿ ಅದ್ದೂರಿ ವಿವಾಹವಾದ ಜೋಡಿ- ಆದರೆ ಫೋಟೋಗ್ರಾಫರ್‌ಗೆ ಹಣ ನೀಡದೇ ಎಸ್ಕೇಪ್‌!

ಆರೋಪಿಯು ಜನಸಂದಣಿ ಇರುವ ಸ್ಥಳಗಳಲ್ಲಿ, ಸಾರ್ವಜನಿಕರತ್ತ ಪಿಸ್ತೂಲ್ ಆಕಾರದ ವಸ್ತುವನ್ನು ತೋರಿಸಿ ಕಿರುಚಾಡಿದ್ದು, ಅದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆರೋಪಿಯ ವರ್ತನೆಯಿಂದ ಹಲವು ಜನರು ಭಯಭೀತರಾಗಿ ಓಡಾಡುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಪೊಲೀಸರು ಬರುವವರೆಗೂ ಪರಿಸ್ಥಿತಿಯನ್ನು ನಿಭಾಯಿಸಲು ಯತ್ನಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದ ಮೇಲೂ ಆತ ಶಾಂತವಾಗದೇ ತನ್ನ ವರ್ತನೆಯನ್ನು ಮುಂದುವರಿಸಿದ್ದು, ಸಾರ್ವಜನಿಕರೊಂದಿಗೆ ಪೊಲೀಸರಿಗೂ ಬೆದರಿಕೆ ಹಾಕಲು ಮುಂದಾಗಿದ್ದಾನೆ. ಬಳಿಕ ಪೊಲೀಸರು ಅತನನ್ನು ಬಂಧಿಸಿ ಪರಿಶೀಲಿಸಿದಾಗ, ಬಂದೂಕಿನ ಆಕಾರದಲ್ಲಿದ್ದ ಆ ವಸ್ತು, ಸಿಗರೇಟ್‌ಗೆ ಬೆಂಕಿ ಹಚ್ಚುವ ಲೈಟರ್ ಎಂದು ತಿಳಿದುಬಂದಿದೆ.

ಇನ್ನು ಸಾರ್ವಜನಿಕ ಅಶಾಂತಿ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಸಾಹಿಲ್ ರಾಮ್ ಥಡಾನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಾಂಜಾ ಸೇವನೆಯಿಂದಾಗಿ ಆರೋಪಿ ಈ ರೀತಿಯ ವರ್ತನೆ ತೋರಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿ ಸಾಹಿಲ್ ರಾಮ್ ಥಡಾನಿ ಈ ಹಿಂದೆ ಭಾರತದ ಮೂರು ಕಂಪನಿಗಳಲ್ಲಿ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾನೆ. ಆ ಕಂಪನಿಗಳು ಈಗ ಮುಚ್ಚಲ್ಪಟ್ಟಿವೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತನಿಖೆ ಮುಂದುವರಿದ್ದು, ಸಾಹಿಲ್ ರಾಮ್ ಥಡಾನಿ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.