ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಹಾರದಲ್ಲಿ ಮತ್ತೊಂದು ಘಟನೆ: ಬೈಕಲ್ಲಿ ತೆರಳುತ್ತಿದ್ದ ಯುವ ಜೋಡಿಯನ್ನು ನಿಂದಿಸಿ ಕಿರುಕುಳ

ಜಮುಯಿ, ಸಮಸ್ತಿಪುರ, ಬಂಕಾ, ಕಿಶನ್‌ಗಂಜ್ ಬಳಿಕ ಇದೀಗ ಯುವ ಜೋಡಿಗೆ ಕಿರುಕುಳ ನೀಡಿರುವ ಮತ್ತೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಬೈಕ್‌ನಲ್ಲಿದ್ದ ಜೋಡಿಯನ್ನು ಗುಂಪೊಂದು ತಡೆದು ಪ್ರಶ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ಗಯಾದ ಗುರುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೈಕ್‌ನಲ್ಲಿದ್ದ ಯುವ ಜೋಡಿಗೆ ಕಿರುಕುಳ

ಸಂಗ್ರಹ ಚಿತ್ರ -

ಬಿಹಾರ: ಕೆಲವು ದಿನಗಳಿಂದೀಚೆಗೆ ಯುವ ಜೋಡಿಗಳಿಗೆ ಕಿರುಕುಳ (assault) ನೀಡುತ್ತಿರುವ ಪ್ರಕರಣಗಳು ಬಿಹಾರದಲ್ಲಿ (Bihar) ಸರಣಿಯಾಗಿ ವರದಿಯಾಗುತ್ತಿವೆ. ಇದೀಗ ಇಂತಹ ಇನ್ನೊಂದು ಘಟನೆ ನಡೆದಿದೆ. ಜಮುಯಿ, ಸಮಸ್ತಿಪುರ, ಬಂಕಾ, ಕಿಶನ್‌ಗಂಜ್ (Jamui, Samastipur, Banka, Kishanganj) ಬಳಿಕ ಗಯಾದಲ್ಲಿ (Gaya) ಬೈಕ್‌ನಲ್ಲಿದ್ದ ಸಾಗುತ್ತಿದ್ದ ಯುವ ಜೋಡಿಯನ್ನು ನಿಂದಿಸಿ ಕಿರುಕುಳ ನೀಡಲಾಗಿದೆ. ಗಯಾದ ಗುರುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು (Viral Video) ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ಗಯಾದಲ್ಲಿ, ಮೋಟಾರ್‌ಸೈಕಲ್‌ನಲ್ಲಿ ಸಾಗುತ್ತಿದ್ದ ಯುವ ಜೋಡಿಯನ್ನು ತಡೆದ ಗುಂಪೊಂದು ಸುತ್ತುವರಿದು ಆಕ್ಷೇಪಾರ್ಹವಾಗಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರ ಆತಂಕಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಬೈಕ್ ನಲ್ಲಿದ್ದ ಕೀ ಯನ್ನು ಕಿತ್ತುಕೊಂಡು ಅವರನ್ನು ನಿಂದಿಸುವುದನ್ನು ಕಾಣಬಹುದು.

ಮೊಮ್ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನ: 75 ವರ್ಷದ ಅಜ್ಜನ ವಿರುದ್ಧ ಪೋಕ್ಸೋ ಕೇಸ್

ಗುರುವಾ ಪೊಲೀಸ್ ಠಾಣಾ ವ್ಯಾಪ್ತಿಯ ಈ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ಶೆರ್‌ಘಾಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಹುವಾಡಿಹ್ ಸಮೀಪದ ಬೆಟ್ಟವೊಂದಕ್ಕೆ ಭೇಟಿ ನೀಡಲು ತೆರಳಿದ್ದ ವೇಳೆ ಕೆಲವರು ಅವರನ್ನು ತಡೆದು ನಿಂದಿಸಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ. ಸಾಕಷ್ಟು ಸಮಯದವರೆಗೆ ಅವರನ್ನು ತಡೆಯಲಾಗಿತ್ತು ಎನ್ನಲಾಗಿದೆ.

ಯುವಕ ಆರ್ಯನ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಗುಂಪುಗಳನ್ನು ನಿರ್ವಹಿಸುತ್ತಿದ್ದನು. ವೈರಲ್ ಆಗಿರುವ ವಿಡಿಯೋ ಕೂಡ ಈ ಹೆಸರಿಗೆ ಸಂಬಂಧಿಸಿದ ಗುಂಪಿನಿಂದಲೇ ಬಂದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಯಾರನ್ನೂ ಕೂಡ ಬಂಧಿಸಲಾಗಿಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲ ವ್ಯಕ್ತಿಗಳ ಗುರುತನ್ನು ಕೂಡ ಬಹಿರಂಗಪಡಿಸಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಶೆರ್‌ಘಾಟಿ ಠಾಣಾಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ಯುವಕರ ಗುಂಪೊಂದು ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿರುವ ಘಟನೆ ಬಿಹಾರದ ಬಂಕಾದ ಪ್ರಮುಖ ಪ್ರವಾಸಿ ತಾಣ ಮಂದರ್ ಬೆಟ್ಟದಲ್ಲಿ ನಡೆದಿತ್ತು. ಸೆಪ್ಟೆಂಬರ್ 3ರಂದು ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ವಿರುದ್ಧ ಸಂಬಂಧ ಬೌನ್ಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಕೇತನ್ ಅಗರ್ವಾಲ್ ಹತ್ಯೆಗೂ ಮುನ್ನ ಬೆಂಗಳೂರಿನಲ್ಲಿ ಕೈ-ಕಾಲು ಮುರಿಯುವ ಯೋಜನೆ ರೂಪಿಸಿದ್ದ ಹಂತಕರು; ತನಿಖೆ ವೇಳೆ ಬಯಲಾಗ್ತಿದೆ ಆಘಾತಕಾರಿ ಅಂಶ

ಇದಕ್ಕೂ ಮೊದಲು ಜಮುಯಿಯಲ್ಲಿ 10ನೇ ತರಗತಿಯ ಬಾಲಕ, ಬಾಲಕಿಗೆ ಕಿರುಕುಳ ನೀಡಲಾಗಿತ್ತು. ಈ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿತ್ತು. ಇದರ ಬಳಿಕ ಸಮಸ್ತಿಪುರದ ಜಗತ್‌ಸಿಂಗ್‌ಪುರ ಎಂಬ ಗ್ರಾಮದಲ್ಲಿ ಯುವಕರ ಗುಂಪೊಂದು ದಾರಿಯಲ್ಲಿ ಸಾಗುತ್ತಿದ್ದ ಹದಿ ಹರೆಯದ ಯುವತಿಗೆ ಕಿರುಕುಳ ನೀಡಿದ್ದರು. ಈ ಎರಡು ಘಟನೆಗಳ ವಿಡಿಯೊ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.