ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಜೆಪಿ ಪ್ರತಿಭಟನೆ ವೇಳೆ ಹಲ್ಲೆ: ತಲೆ ಬುರುಡೆ ಮುರಿದು ಗಾಯಗೊಂಡಿದ್ದ ಬಿಹಾರದ ಬಿಡಿಒ ಸ್ಥಿತಿ ಗಂಭೀರ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಬಿಹಾರದ ಛಪ್ರಾದಲ್ಲಿ ಬಿಹಾರ ಬ್ಲಾಕ್ ಅಭಿವೃದ್ಧಿ ಅಧಿಕಾರಿ ತಲೆಗೆ ಭಾರಿ ತೂಕದ ಬ್ಯಾಟ್ ನಿಂದ ಹೊಡೆತ ಬಿದ್ದಿದ್ದು, ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಪಾಟ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಲೆ ಬುರುಡೆ ಒಡೆಯುವಂತೆ ಬಿಡಿಒ ಮೇಲೆ ಹಲ್ಲೆ , ಗಂಭೀರ ಗಾಯ

ಸಂಗ್ರಹ ಚಿತ್ರ -

ಬಿಹಾರ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET paper leak protest) ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಜುಲೈ 25ರಂದು ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಬಿಹಾರ ಬ್ಲಾಕ್ ಅಭಿವೃದ್ಧಿ ಅಧಿಕಾರಿ (Bihar Block Development Officer) ರಿತೇಶ್ ಕುಮಾರ್ ಸಿಂಗ್ ತಲೆಗೆ ಕಬ್ಬಿಣದ ಬ್ಲಾಕ್ ತೂಕದ ಬ್ಯಾಟ್ ನಿಂದ ಏಟು ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡಿರುವ ಅವರನ್ನು ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ ಬುರುಡೆ ಮುರಿದಿದ್ದು, ಅನೇಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರದ ಛಪ್ರಾದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಛಪ್ರಾದ ಬ್ಲಾಕ್ ಅಭಿವೃದ್ಧಿ ಅಧಿಕಾರಿ ರಿತೇಶ್ ಕುಮಾರ್ ಅವರ ತಲೆಗೆ ಕಬ್ಬಿಣದ ಬ್ಲಾಕ್ ತೂಕದ ಬ್ಯಾಟ್ ನಿಂದ ಹೊಡೆಯಲಾಗಿದೆ. ತಕ್ಷಣವೇ ತೀವ್ರವಾಗಿ ರಕ್ತ ಹರಿದಿದ್ದು, ರಸ್ತೆಗೆ ಕುಸಿದು ಬಿದ್ದಿದ್ದಾರೆ. ಘರ್ಷಣೆ ಮುಂದುವರಿದಿದ್ದರಿಂದ ಅವರನ್ನು ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.

ಸಿಜೆಪಿ ಪ್ರತಿಭಟನಾಕಾರರ ವಿರುದ್ಧ ಕ್ರಮವಿಲ್ಲ: ಬಿಹಾರದ ಬಳಿಕ ಅಸ್ಸಾಂನಲ್ಲೂ ಘೋಷಣೆ

ಛಾಪ್ರಾ ನಗರದಲ್ಲಿ ಜುಲೈ 25ರಂದು ಸಾವಿರಾರು ಪ್ರತಿಭಟನಾಕಾರರು ಸೇರಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಸರ್ಕಾರಿ ವಾಹನಗಳು, ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರಿ ಪ್ರಮಾಣದಲ್ಲಿ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸೇರಿದ್ದು, ಅವರ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಹಿಂಸಾಚಾರ ತೀವ್ರಗೊಂಡಿದ್ದು, ರಿತೇಶ್ ಸಿಂಗ್ ಅವರು ಬಿಹಾರ ಪೊಲೀಸ್ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಗುಂಪೊಂದು ಕಲ್ಲು ತೂರಾಟವನ್ನು ಪ್ರಾರಂಭಿಸಿದ್ದು, ಇದರಿಂದ ಪೊಲೀಸರು ಮತ್ತು ಐಟಿಬಿಪಿ ಸಿಬ್ಬಂದಿ ಹಿಮ್ಮೆಟ್ಟಬೇಕಾಯಿತು. ಆಗ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ರಿತೇಶ್ ಸಿಂಗ್ ಮೇಲೆ ಭಾರಿ ಪ್ರಮಾಣ ಕಬ್ಬಿಣದ ಬ್ಲಾಕ್ ತೂಕದ ಬ್ಯಾಟ್ ನಿಂದ ಹೊಡೆಯಲಾಗಿದೆ. ಅವರು ಯಾವುದೇ ರೀತಿಯ ಹೆಲ್ಮೆಟ್ ಅಥವಾ ರಕ್ಷಾಕವಚವನ್ನು ಧರಿಸದೇ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಪೊಲೀಸರು ಅವರು ಬಿದ್ದಿದ್ದ ಸ್ಥಳದಲ್ಲಿದ್ದ ಎರಕಹೊಯ್ದ ಕಬ್ಬಿಣದ ಬ್ಲಾಕ್ ತೂಕದ ಬ್ಯಾಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರದ ಸಮಯದಲ್ಲಿ ಇದರಿಂದ ಅವರ ಮೇಲೆ ದಾಳಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ರಿತೇಶ್ ಸಿಂಗ್ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಸ್ಕ್ಯಾನ್‌ಗಳಲ್ಲಿ ಅವರ ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಅವರನ್ನು ಹಲವು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಬರ್ತಿಯಾ? ನಿನ್ನ ರೇಟ್‌ ಎಷ್ಟು?" ಬೆಂಗಳೂರಿನಲ್ಲಿ ಯುವತಿ ಬಳಿ ವ್ಯಕ್ತಿಯ ಅಸಭ್ಯ ವರ್ತನೆ

ಜುಲೈ 25ರಂದು ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಛಪ್ರಾದಲ್ಲಿ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪರಾಧಿಗಳನ್ನು ಗುರುತಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.