ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Road Rage: ಬೆಂಗಳೂರಿನಲ್ಲಿ ರೋಡ್‌ ರೇಜ್‌, ಡೆಲಿವರಿ ಬಾಯ್‌ ಮೇಲೆ ಅಮಾನುಷ ಹಲ್ಲೆ, ವಿಡಿಯೋ ವೈರಲ್

ಡೆಲಿವರಿ ಬಾಯ್ ಅಚಾನಕ್‌ ಆಗಿರುವ ಡಿಕ್ಕಿಗೆ ಕ್ಷಮೆ ಯಾಚಿಸಿದ್ದಾನೆ. ಆದರೆ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮಾತ್ರ ಡೆಲಿವರಿ ಬಾಯ್‌ಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಡೆಲಿವರಿ ಬಾಯ್ ಬೈಕ್‌ನಿಂದ ಕೆಳಗೆ ಬಿದ್ದರೂ ಬಿಡದೆ ಇಬ್ಬರು ದುಷ್ಕರ್ಮಿಗಳು ಹೆಲ್ಮೆಟ್‌ನಿಂದ ಥಳಿಸಿ, ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.

ರೋಡ್‌ ರೇಜ್‌, ಡೆಲಿವರಿ ಬಾಯ್‌ ಮೇಲೆ ಅಮಾನುಷ ಹಲ್ಲೆ‌, ವಿಡಿಯೋ ವೈರಲ್

ಮಹದೇವಪುರ ರೋಡ್‌ ರೇಜ್ -

ಹರೀಶ್‌ ಕೇರ
ಹರೀಶ್‌ ಕೇರ Jan 10, 2026 10:17 AM

ಬೆಂಗಳೂರು, ಜ.10: ರಾಜಧಾನಿ (‌Bengaluru news) ನಗರದ ಮಹದೇವಪುರ ಪ್ರದೇಶದಲ್ಲಿ ರೋಡ್‌ ರೇಜ್‌ (Road Rage) ಪ್ರಕರಣವೊಂದು ನಡೆದಿದೆ. ಇದಕ್ಕೂ ಮುನ್ನ ಸಣ್ಣದೊಂದು ಅಪಘಾತವಾಗಿದ್ದು, ಅದು ಹಲ್ಲೆಗೆ ತಿರುಗಿದೆ. ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಜೆಪ್ಟೊದಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಎಕ್ಸಿಕ್ಯೂಟಿವ್ (Delivery Boy) ಮೇಲೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral video) ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಹೆಲ್ಮೆಟ್ ಧರಿಸಿದ್ದ ಡೆಲಿವರಿ ಬಾಯ್ ಮೇಲೆ ಇಬ್ಬರು ವ್ಯಕ್ತಿಗಳು ಹಿಂಸಾತ್ಮಕವಾಗಿ ಹಲ್ಲೆ ನಡೆಸಿರುವುದನ್ನು ಕಾಣಬಹುದಾಗಿದೆ. ರಸ್ತೆಯ ಒಂದು ಬದಿಯಿಂದ ಮುಖ್ಯ ರಸ್ತೆಗೆ ಬೈಕ್‌ನಲ್ಲಿ ಡೆಲಿವರಿ ಬಾಯ್ ಬಂದಾಗ, ದಿಢೀರ್ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಡೆಲಿವರಿ ಬಾಯ್ ಅಚಾನಕ್‌ ಆಗಿರುವ ಡಿಕ್ಕಿಗೆ ಕ್ಷಮೆ ಯಾಚಿಸಿದ್ದಾನೆ. ಆದರೆ ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮಾತ್ರ ಡೆಲಿವರಿ ಬಾಯ್‌ಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಡೆಲಿವರಿ ಬಾಯ್ ಬೈಕ್‌ನಿಂದ ಕೆಳಗೆ ಬಿದ್ದರೂ ಬಿಡದೆ ಇಬ್ಬರು ದುಷ್ಕರ್ಮಿಗಳು ಹೆಲ್ಮೆಟ್‌ನಿಂದ ಥಳಿಸಿ, ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.



ಈ ಎಲ್ಲವೂ ಸಮೀಪದಲ್ಲಿರುವ ಸಿಸಿಟಿವಿಯೊಂದರಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ನಾಗರಿಕರೊಬ್ಬರು ಡೆಲಿವರಿ ಬಾಯ್‌ ಸಹಾಯಕ್ಕೆ ಬಂದಿದ್ದು, ಸ್ಥಳೀಯರು ಕೂಡ ಸಹಾಯಕ್ಕೆ ಧಾವಿಸಿದ್ದಾರೆ. ಆಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ಮಹದೇವಪುರ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ; ಕಮಿಷನರ್‌ ಸ್ಪಷ್ಟನೆ ಏನು?