ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಪೆನ್‌ಡ್ರೈವ್‌ ಹಂಚಿದವರಿಗೆ ಸಂಕಷ್ಟ; 8 ಆರೋಪಿಗಳಿಗೆ ಕೋರ್ಟ್ ಸಮನ್ಸ್

Prajwal Revanna case: 2024ರ ಚುನಾವಣೆ ಸಂದರ್ಭದ ವೇಳೆ ಹಾಸನದಲ್ಲಿ ಅಶ್ಲೀಲ ಪೆನ್​​ಡ್ರೈವ್​ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಎಸ್‌ಐಟಿ ಕಳೆದ ಮಾರ್ಚ್​ನಲ್ಲಿ ಹಾಸನ ಸಿವಿಲ್ ಕೋರ್ಟ್‌ಗೆ ಬರೋಬ್ಬರಿ 13,712 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿತ್ತು. ಇದೀಗ ಪೆನ್​ ಡ್ರೈವ್ ಹಂಚಿದವರಿಗೆ​ ಸಂಕಷ್ಟ ಎದುರಾಗಿದೆ.

ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಪೆನ್‌ಡ್ರೈವ್‌ ಹಂಚಿದವರಿಗೆ ಸಂಕಷ್ಟ

-

Prabhakara R
Prabhakara R Jul 25, 2026 10:31 PM

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ವೈರಲ್ ಕೇಸ್​​ನಲ್ಲಿ ಪೆನ್​​ಡ್ರೈವ್​ ಹಂಚಿಕೆ ಮಾಡಿದವರಿಗೆ ಇದೀಗ ಸಂಕಷ್ಟ ಎದುರಾಗಿದೆ. 8 ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

2024ರ ಚುನಾವಣೆ ಸಂದರ್ಭದ ವೇಳೆ ಹಾಸನದಲ್ಲಿ ಅಶ್ಲೀಲ ಪೆನ್​​ಡ್ರೈವ್​ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರದಿಂದ ಎಸ್​ಐಟಿ ರಚಿಸಲಾಗಿತ್ತು. ಪ್ರಕರಣ ಸಂಬಂಧ ಎಸ್‌ಐಟಿ ಕಳೆದ ಮಾರ್ಚ್​ನಲ್ಲಿ ಹಾಸನ ಸಿವಿಲ್ ಕೋರ್ಟ್‌ಗೆ ಬರೋಬ್ಬರಿ 13,712 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿತ್ತು. ಇದೀಗ ಈ ಪೆನ್​ ಡ್ರೈವ್​​ ಮೂಲಕ ಫೋಟೋ ಮತ್ತು ವಿಡಿಯೋ ಹಂಚಿದವರಿಗೂ ಸಂಕಷ್ಟ ಎದುರಾಗಿದೆ.

ಪೆನ್​​ ಡ್ರೈವ್​ ಹಂಚಿದ್ದು ಯಾರು?

ಹೆಚ್ಚುವರಿ ಆರೋಪಪಟ್ಟಿ ಪರಿಶೀಲನೆ ನಡೆಸಿ ಕಾಗ್ನಿಜೆನ್ಸ್ ಸ್ವೀಕರಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯ, ಆರೋಪಿಗಳ ವಿರುದ್ಧ ತನಿಖೆ ಒಳಪಡಿಸಲು ಸಾಕಷ್ಟು ಆಧಾರಗಳಿವೆ ಎಂದು‌ ಅಭಿಪ್ರಾಯಪಟ್ಟಿದೆ. ಎ-2 ನವೀನ್ ಕುಮಾರ್, ಎ-3 ಲಿಖೀತ್, ಎ-4 ನಿಶಾಂತ್, ಎ5- ಕಿರಣ್, ಎ-6 ಶರತ್, ಎ-7 ತೇಜಸ್, ಎ-8 ಗಗನ್ ಕುಮಾರ್, ಎ-9 ರೇವಂತ್ ಪೆನ್​ಡ್ರೈವ್​ ಹಂಚಿಕೆ ಕೇಸ್​ನ ಆರೋಪಿಗಳಾಗಿದ್ದು, ಆರೋಪಿಗಳ ವಿರುದ್ಧ ಸಮನ್ಸ್ ಜಾರಿ ಮಾಡಿರುವ ಕೋರ್ಟ್​ ಮುಂದಿನ ವಿಚಾರಣೆ ಆಗಸ್ಟ್ 10ಕ್ಕೆ ಮುಂದೂಡಿಕೆ ಮಾಡಿದೆ.

ಉದ್ದೇಶಪೂರ್ವಕವಾಗಿ ವೈರಲ್ ಮಾಡಲು ಪೆನ್ ಡ್ರೈವ್‌ ಖರೀದಿ!

ಪ್ರಜ್ವಲ್‌ ರೇವಣ್ಣ ಪ್ರಕರಣದ ತನಿಖೆಯಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಅಶ್ಲೀಲ ವಿಡಿಯೋಗಳನ್ನು ಉದ್ದೇಶಪೂರ್ವಕವಾಗಿ ವೈರಲ್ ಮಾಡಲು 70 ಪೆನ್ ಡ್ರೈವ್‌ಗಳನ್ನು ಖರೀದಿಸಿ ಬಳಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ತನಿಖೆ ವೇಳೆ ಒಟ್ಟು 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ತಾಂತ್ರಿಕ ವರದಿ, ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬ್) ವರದಿ, ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಚಾರ್ಜ್‌ಶೀಟ್ ತಯಾರಿಸಲಾಗಿದೆ.

ಚಿಂತಾಮಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೆಜಿಗೂ ಹೆಚ್ಚು ಗಾಂಜಾ ಸಹಿತ ಇಬ್ಬರು ಆರೋಪಿಗಳು ವಶಕ್ಕೆ

ಇನ್ನು, ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜೆ ಬಂಧಿ ಕೈದಿ ಪ್ರಜ್ವಲ್ ರೇವಣ್ಣಗೆ ಒಳ ಸಂದರ್ಶನಕ್ಕೆ ಕೋರ್ಟ್​ ಅವಕಾಶ ಕಲ್ಪಿಸಿದೆ. ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಒಳಸಂದರ್ಶನಕ್ಕೆ ಅನುಮತಿ ನೀಡಿದೆ. ಅಪರಾಧಿ ಪ್ರಜ್ವಲ್ ರೇವಣ್ಣ ಒಳ ಸಂದರ್ಶನಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ಕೋರ್ಟ್. ಕಳೆದ ಸೋಮವಾರ ಅನುಮತಿ ನೀಡಿ ಆದೇಶಿಸಿದೆ. ಜೈಲು ಮುಖ್ಯ ಅಧೀಕ್ಷಕರು ನಿಯಮಾನುಸಾರ ಅಪರಾಧಿ ಭೇಟಿಗೆ ಅವಕಾಶ ನೀಡಲು ಸೂಚನೆ ನೀಡಲಾಗಿದೆ.