ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡದಂತೆ ಹೇಳಿದ್ದೇ ತಪ್ಪಾಯ್ತಾ? ಕೆನಾಡದಲ್ಲಿ ಭಾರತೀಯ ಮೂಲದ ಉದ್ಯಮಿಯ ಹತ್ಯೆ

Indian-origin businessman killed in Canada: ತನ್ನ ಕಾರಿನ ಮೇಲೆ ಮೂತ್ರ ವಿಸರ್ಜಿಸುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ತಡೆದಿದ್ದಕ್ಕೆ ಕೋಪಗೊಂಡ ಆ ವ್ಯಕ್ತಿ ತೀವ್ರ ಹಲ್ಲೆ ನಡೆಸಿದ್ದಾನೆ. ಪರಿಣಾಮ ಭಾರತೀಯ ಮೂಲದ ಉದ್ಯಮಿ ಮೃತಪಟ್ಟಿದ್ದಾರೆ. ಕೆನಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. 55 ವರ್ಷದ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ, ಮಾರಣಾಂತಿಕ ಗಾಯಗಳಿಂದ ಬಿದ್ದಿರುವುದನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡದಂತೆ ಹೇಳಿದ್ದೇ ತಪ್ಪಾಯ್ತಾ?

-

Priyanka P Priyanka P Oct 30, 2025 5:02 PM

ಒಟ್ಟಾವಾ: ತನ್ನ ಕಾರಿನ ಮೇಲೆ ಮೂತ್ರ ವಿಸರ್ಜಿಸುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ತಡೆದ ಭಾರತೀಯ ಮೂಲದ ಉದ್ಯಮಿಯನ್ನು ಹತ್ಯೆ ಮಾಡಲಾದ ಆಘಾತಕಾರಿ ಘಟನೆ ಕೆನಡಾದ (Canada) ಸೆಂಟ್ರಲ್ ಎಡ್ಮಂಟನ್‌ನಲ್ಲಿ ನಡೆದಿದೆ. ಎಡ್ಮಂಟನ್ ಪೊಲೀಸ್ ಸೇವೆ (ಇಪಿಎಸ್) ಪ್ರಕಾರ, 109 ಸ್ಟ್ರೀಟ್ ಮತ್ತು 100 ಅವೆನ್ಯೂ ಬಳಿ ದಾಳಿ ನಡೆದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. 55 ವರ್ಷದ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ, ಮಾರಣಾಂತಿಕ ಗಾಯಗಳಿಂದ ಬಳಲುತ್ತಿದ್ದುದನ್ನು ಅವರು ಗಮನಿಸಿದರು (Crime News).

ಮೃತ ದುರ್ದೈವಿಯನ್ನು ಅರ್ವಿ ಸಿಂಗ್‍ ಎಂದು ಗುರುತಿಸಲಾಯಿತು. ತೀರ ಹಲ್ಲೆಗೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಐದು ದಿನಗಳ ನಂತರ ಅವರು ಮೃತಪಟ್ಟರು. ಈ ಘಟನೆ ಅಕ್ಟೋಬರ್ 19 ರಂದು ನಡೆದಿತ್ತು. ಆರೋಪಿ ಕೈಲ್ ಪಾಪಿನ್ (40) ಎಂಬಾತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ತೀವ್ರ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಕುಡುಕ ಶಿಕ್ಷಕನ ಹುಚ್ಚಾಟ! ಬೈಕ್‌ ಸಮೇತ ಸವಾರರನ್ನು ರಸ್ತೆಯಲ್ಲಿ ಎಳೆದೊಯ್ದ ಕಾರು- ಭಯಾನಕ ವಿಡಿಯೊ ವೈರಲ್‌

ಅರ್ವಿ ಸಿಂಗ್ ಮತ್ತು ಅವನ ಗೆಳತಿ ಭೋಜನದಿಂದ ಹಿಂತಿರುಗಿ ತಮ್ಮ ವಾಹನದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಆ ವ್ಯಕ್ತಿ ತಮ್ಮ ಕಾರಿನ ಮೇಲೆ ಮೂತ್ರ ವಿಸರ್ಜಿಸುತ್ತಿರುವುದನ್ನು ಗಮನಿಸಿದರು. ಏನು ನಡೆಯುತ್ತಿದೆ ಎಂದು ಅರ್ವಿ ಕೇಳಿದ್ದಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಯಿತು ಎಂದು ತಿಳಿದುಬಂದಿದೆ. ಇಪಿಎಸ್ ನರಹತ್ಯೆ ಘಟಕವು ಪ್ರಕರಣದ ತನಿಖೆ ನಡೆಸುತ್ತಿದೆ. ದಾಳಿಕೋರ ಮತ್ತು ಮೃತ ವ್ಯಕ್ತಿಯು ಈ ಹಿಂದೆ ಪರಸ್ಪರ ಪರಿಚಿತರಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪ್ಯಾಪಿನ್‌ ಅನ್ನು ನವೆಂಬರ್ 4ಕ್ಕೆ ನ್ಯಾಯಾಲಕ್ಕೆ ಹಾಜರುಪಡಿಸಲಾಗುವುದು.

ನಿತೀಶ್‌ ಕಟಾರಾ ಕೊಲೆ ಅಪರಾಧಿ ಸಾವು

ನಿತೀಶ್ ಕಟಾರಾ ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಸುಖದೇವ್ ಪೆಹಲ್ವಾನ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಕೊಲೆ ಅಪರಾಧದಲ್ಲಿ 20 ವರ್ಷದ ಶಿಕ್ಷೆ ಮುಗಿಸಿ ಜೈಲಿನಿಂದ ಬಿಡುಗಡೆಯಾದ ತಿಂಗಳುಗಳ ನಂತರ ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ದ್ವಿಚಕ್ರ ವಾಹನಕ್ಕೆ ಮಹೀಂದ್ರಾ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಇದನ್ನೂ ಓದಿ: Viral News: ಗೆಸ್ಟ್‌ ಹೌಸ್‌ಗಳಲ್ಲಿ ತಂಗುವ ಮುನ್ನ ಎಚ್ಚರ... ಎಚ್ಚರ! ವಾಶ್‌ರೂಂನಲ್ಲಿತ್ತು ಹಿಡನ್‌ ಕ್ಯಾಮರಾ

ನಿತೀಶ್ ಕಟಾರಾ ಕೊಲೆ ಪ್ರಕರಣದಲ್ಲಿ ಪೆಹಲ್ವಾನ್ ಶಿಕ್ಷೆಗೊಳಗಾದ ಆರೋಪಿಗಳಲ್ಲಿ ಒಬ್ಬನಾಗಿದ್ದ. ಪ್ರೇಮ ಸಂಬಂಧ ಹೊಂದಿದ್ದ ವಿಚಾರವಾಗಿ ಕ್ರಿಮಿನಲ್‌ ರಾಜಕಾರಣಿ ಡಿಪಿ ಯಾದವ್‌ ಪುತ್ರ ನಿತೀಶ್‌ ಕಟಾರನನ್ನು ಅಪಹರಿಸಿ, 2002ರ ಫೆಬ್ರವರಿ 17ರಂದು ಕೊಲೆ ಮಾಡಲಾಗಿತ್ತು. ಪೆಹಲ್ವಾನ್ ಜೊತೆಗೆ, ಯಾದವ್ ಅವರ ಮಗ ವಿಕಾಸ್ ಯಾದವ್ ಮತ್ತು ಸೋದರಳಿಯ ವಿಶಾಲ್ ಯಾದವ್ ಕೂಡ ಈ ಪ್ರಕರಣದಲ್ಲಿ ದೋಷಿಗಳಾಗಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ವಿಕಾಸ್ ಮತ್ತು ವಿಶಾಲ್‍ಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅವರ ಸಹಚರನಾಗಿದ್ದ ಪೆಹಲ್ವಾನ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಮಾರ್ಚ್ 2024 ರಲ್ಲಿ ಈತ ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬಂದಿದ್ದ. ಇದೀಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.